🍃🍃🍃🍃🍃🍃🍃🍃🍃🍃🍃🍃 *ಉರೂಸ್ ಆಚರಣೆ ಇಸ್ಲಾಮಿನಲ್ಲಿ*🍃🍃🍃🍃🍃🍃🍃🍃🍃🍃🍃🍃
*ಭಾಗ-1⃣7⃣*
*﷽*
*📝 ಟಿ.ಎಂ ಮುಹ್ಯಿದ್ದೀನ್ ಖಾಮಿಲ್ ಸಖಾಫಿ, ತೋಕೆ.*
➖➖➖➖➖➖➖➖➖➖➖
ಬಹು ! ಅಹ್ಮದ್ ಬಿನ್ ಝೈನಿ ದಹ್ಲಾನ್ ರಲಿಯಲ್ಲಾಹು ಅನ್ಹು ಹೇಳುವುದನ್ನು ನೋಡಿ,
" ವಹ್ಹಾಬಿಗಳು ಸುನ್ನೀ ಮಸೀದಿಗಳನ್ನೂ, ಸಜ್ಜನರ ದರ್ಗಾಗಳನ್ನೂ ಕೆಡವಲು ಧಾವಿಸಿದರು. ಪ್ರಥಮವಾಗಿ ಜನ್ನತುಲ್ ಮುಅಲ್ಲಾದಲ್ಲಿದ್ದ ಖುಬ್ಬಗಳನ್ನು ಧ್ವಂಸಗೊಳಿಸಿದರು. ಅಲ್ಲಿ ಹಲವಾರು ಖುಬ್ಬಗಳಿತ್ತು. ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲರವರು ಜನಿಸಿದ ಸ್ಥಳದಲ್ಲಿದ್ದ ಖುಬ್ಬವನ್ನೂ, ಅಬೂಬಕರ್ ಸಿದ್ದೀಖ್ ರಲಿಯಲ್ಲಾಹು ಅನ್ಹು ಹಾಗೂ ಅಲೀ ರಲಿಯಲ್ಲಾಹು ಅನ್ಹು ರವರು ಜನಿಸಿದ ಸ್ಥಳದಲ್ಲಿದ್ದ ಖುಬ್ಬಗಳನ್ನೂ ನೆಲಸಮಗೊಳಿಸಿದರು. ಅದಾದ ಬಳಿಕ ಅಲ್ಲಿದ್ದ ಸರ್ವ ದರ್ಗಾಗಳನ್ನೂ ನಾಶಗೊಳಿಸಿದರು. ದರ್ಗಾಗಳನ್ನು ಕೆಡವುವಾಗ ಅವರು ಆಹ್ಲಾದದಿಂದ ಕೇಕೆ ಹಾಕುತ್ತಿದ್ದರಲ್ಲದೆ ಚೆಂಡೆ ಬಾರಿಸಿ ಹಾಡುತ್ತಿದ್ದರು. ಖಬರ್ ಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು."
(ಖುಲಾಸತುಲ್ ಕಲಾಂ ಫೀ ಬಯಾನಿ ಉಮರಾಯಿಲ್ ಬಲದಿಲ್ ಹರಾಮ್. ಪುಟ 278)
ವಹ್ಹಾಬಿಗಳು ನಡೆಸಿದ ಕರಸೇವೆ ಎಷ್ಟೊಂದು ಭೀಕರವಾಗಿತ್ತು ಎಂಬುದನ್ನು ನೀವು ಆಲೋಚಿಸಿ. ಸೌದಿ ಅರೇಬಿಯಾದ ಆಡಳಿತವನ್ನು ವಹ್ಹಾಬಿಗಳು ವಶಪಡಿಸಿದ್ದರಿಂದ ಅಲ್ಲಿದ್ದ ದರ್ಗಾಗಳು ನಾಶವಾಯಿತೆಂದೂ ಅದಕ್ಕಿಂತ ಮುಂಚೆ ಅಲ್ಲಿ ದರ್ಗಾಗಳೂ, ಝಿಯಾರತ್ ಗಳೂ ನಡೆಯುತ್ತಿತ್ತೆಂದೂ ಇದರಿಂದ ನಮಗೆ ತಿಳಿದು ಕೊಳ್ಳಬಹುದು. ಮಾತ್ರವಲ್ಲ ಅವರ ಅಧಿಕಾರವಿಲ್ಲದ ಈಜಿಪ್ಟ್, ಇರಾಖ್ ಮುಂತಾದ ಮುಸ್ಲಿಂ ರಾಷ್ಟ್ರದಲ್ಲಿ ಇಂದೂ ಕೂಡಾ ಹಲವಾರು ದರ್ಗಾಗಳನ್ನು ಕಾಣಬಹುದು.
ಬಹು! ಇಮಾಮ್ ಶಾಫಿಈ, ಸೆಯ್ಯಿದತ್ ನಫೀಸತುಲ್ ಮಿಸ್ರಿಯ, ಹಝ್ರತ್ ಹುಸೈನ್ ರಲಿಯಲ್ಲಾಹು ಅನ್ಹುರವರ ಸಹೋದರಿ ಝೈನಬಾ ಬೀವಿ, ಅಹ್ಮದುಲ್ ಬದವೀ, ರಲಿಯಲ್ಲಾಹು ಅನ್ಹುಮ್ ಮುಂತಾದವರ ದರ್ಗಾಗಳು ಇಂದೂ ಕೂಡಾ ಬಹಳ ಮನೋಹರವಾದ ಶೈಲಿಯಲ್ಲಿ ಈಜಿಪ್ತಿನಲ್ಲಿ ಕಾಣಬಹುದಾಗಿದೆ.
ಸಂಶಯಗಳು ಮತ್ತು ಉತ್ತರಗಳು
-------------------------------------
ಪ್ರಶ್ನೆ:1
--------
ಉರೂಸ್ ಆಚರಣೆ ಕೇರಳ ಹಾಗೂ ಕರ್ನಾಟಕದಲ್ಲಿ ಮಾತ್ರ ಕಂಡು ಬರುತ್ತಿದೆ. ಇಸ್ಲಾಮಿನ ಉಗಮಸ್ಥಳವಾದ ಮಕ್ಕಾ ಮದೀನಗಳಲ್ಲಿ ಇದು ಕಂಡು ಬರುವುದಿಲ್ಲ. ಆದ್ದರಿಂದ ಇದು ಅನಾಚಾರವಲ್ಲವೇ?
ಉ:
----
ಉರೂಸ್ ಆಚರಣೆ ಕೇರಳ ಹಾಗೂ ಕರ್ನಾಟಕದಲ್ಲಿ ಮಾತ್ರ ಕಂಡು ಬರುತ್ತಿದೆ ಎಂಬುವುದು ಶುದ್ಧ ತಪ್ಪಾಗಿದೆ. ಏಕೆಂದರೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಔಲಿಯಾಗಳ ಉರೂಸ್ ಕಾರ್ಯಕ್ರಮ ನಡೆಯುತ್ತಿದೆ. ರಾಜಸ್ಥಾನದ ಅಜ್ಮೀರ್, ದೆಹಲಿಯ ನಿಝಾಮುದ್ದೀನ್ ದರ್ಗಾ, ಉತ್ತರಪ್ರದೇಶದ ಬರೇಲ್ವಿ ಶರೀಫ್, ತಮಿಳುನಾಡಿನ ಏರ್ವಾಡಿ, ಮುತ್ತುಪ್ಪೇಟೆ, ನಾಗೂರು ಮುಂತಾದೆಡೆಯಲ್ಲಿ ಇಂದಿಗೂ ಬಹಳ ವಿಜ್ರಂಭಣೆಯಿಂದ ಉರೂಸ್ ಕಾರ್ಯಕ್ರಮ ನಡೆಯುತ್ತಿದೆ. ಅದೇ ರೀತಿ ಈಜಿಪ್ತಿನ ಬಹು! ಅಹ್ಮದುಲ್ ಬದವೀ ರಲಿಯಲ್ಲಾಹು ಅನ್ಹುರವರ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮವನ್ನು ಅಲ್ಲಿನ ಸರಕಾರದ ಉಸ್ತುವಾರಿಯಲ್ಲಿಯೇ ನಡೆಸಲಾಗುತ್ತದೆ. ಆದ್ದರಿಂದ ಉರೂಸ್ ಕಾರ್ಯಕ್ರಮವು ಕರ್ನಾಟಕ ಹಾಗೂ ಕೇರಳದಲ್ಲಿ ಮಾತ್ರವಿರುವ ಕಾರ್ಯವೆಂಬುವುದು ಸರಿಯಲ್ಲ.
ಇನ್ನು ಮಕ್ಕಾ ಮದೀನಾದಲ್ಲಿ ಉರೂಸ್ ಕಾರ್ಯಕ್ರಮವು ನಡೆಯುವುದಿಲ್ಲವಲ್ಲಾ ಎಂದು ಸಾಮಾನ್ಯವಾಗಿ ಕೆಲವರು ಸಂಶಯಿಸುತ್ತಾರೆ. ನಿಜವಾಗಿ ಇಂತಹವರು ಉರೂಸ್ ಎಂದರೇನು, ಸೌದಿ ಅರೇಬಿಯಾದ ಇಂದಿನ ಅವಸ್ಥೆಯೇನು ಎಂಬುವುದನ್ನು ತಿಳಿದಿರಲಿಕ್ಕಿಲ್ಲ. ಏಕೆಂದರೆ ಹಿ.12 ನೇ ಶತಮಾನದಿಂದ ಸೌದಿ ಅರೇಬಿಯಾದ ಆಡಳಿತವು ವಹ್ಹಾಬಿಗಳ ಕೈಗಳಲ್ಲಾಗಿದೆ. ಅದಕ್ಕಿಂತ ಮುಂಚೆ ಅಲ್ಲಿ ಎಷ್ಟೋ ದರ್ಗಾಗಳೂ, ಉರೂಸ್ ಗಳೂ ನಡೆಯುತ್ತಿತ್ತು. ಆದರೆ ವಹ್ಹಾಬಿಗಳು ಸೌದಿ ಅರೇಬಿಯಾದ ಆಡಳಿತವನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ದರ್ಗಾಗಳನ್ನು ಕೆಡವಿ ಧ್ವಂಸಗೊಳಿಸಿದರು. ಸಾಮೂಹಿಕ ಝಿಯಾರತನ್ನು ವಿರೋಧಿಸಿದರು. ಈ ಕಾರ್ಯವನ್ನು ವಹ್ಹಾಬಿಗಳೇ ಸಮ್ಮತಿಸಿದ್ದಾರೆ.
ಪಿ.ಮುಹಮ್ಮದ್ ಕುಟ್ಟಶ್ಶೇರಿ ಎಂಬ ವಹ್ಹಾಬೀ ಮೌಲವಿ ಬರೆದ ಹಾಗೂ ಕೇರಳ ನದ್ವತುಲ್ ಮುಜಾಹಿದೀನ್ ಕೋಝಿಕ್ಕೋಡ್ ಪ್ರಕಟಿಸಿದ
' ಇಸ್ಲಾಹೀ ಪ್ರಸ್ಥಾನ ಚರಿತ್ರತ್ತಿನೊರು ಆಮುಗಂ ' ಎಂಬ ಪುಸ್ತಕದಲ್ಲಿ ಬರೆಯುವುದನ್ನು ನೋಡಿ, ಅವರು
( ವಹ್ಹಾಬೀ ನೇತಾರ ಇಬ್ನ್ ಅಬ್ದುಲ್ ವಹ್ಹಾಬ್ ) ಮಖ್ ಬರಗಳನ್ನು ಧ್ವಂಸಗೂಳಿಸಿದರು ಹಾಗೂ ಜನರು ಪೂಜಿಸುತ್ತಿದ್ದ ವೃಕ್ಷಗಳನ್ನು ನಾಶಪಡಿಸಿದರು".(ಪುಟ 14)
ಇದರಿಂದ ಮಕ್ಕಾ ಮದೀನಾಗಳಲ್ಲಿ ದರ್ಗಾಗಳಿತ್ತೆಂದೂ ಅಲ್ಲಿ ಝಿಯಾರತ್ ನಡೆಯುತ್ತಿತ್ತೆಂದೂ ಹಗಲು ಸೂರ್ಯನಷ್ಟು ಸ್ಪಷ್ಟವಾಗುತ್ತದೆ.
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೂ ಸ್ವಹಾಬಿಗಳೂ ಉರೂಸ್ ನಡೆಸಿರುವಾಗ ಮಕ್ಕಾ ಮದೀನಾಗಳಲ್ಲಿ ಉರೂಸ್ ಇಲ್ಲ ಎಂದು ಹೇಳುವುದು ಮೂರ್ಖತನವಾಗಿದೆ.
*(ಮುಂದುವರಿಯುವುದು...*)
*✍🏻ಟಿ.ಎಂ ಮುಹ್ಯಿದ್ದೀನ್ ಖಾಮಿಲ್ ಸಖಾಫಿ, ತೋಕೆ.*
No comments:
Post a Comment