ಎಸ್ಸೆಸ್ಸೆಫ್ ಗೆ ನೇತ್ರತ್ವ ಕೊಡುವ ಉಸ್ತಾದರಿಗೆ ಅವರ ಗುರುಗಳ ಆಶೀರ್ವಾದ ಇಲ್ಲವಂತೆ ಹಾಗಾಗಿ ಎಸ್ಸೆಸ್ಸೆಫ್ ನಲ್ಲಿ ಕಾರ್ಯಚರಿಸಿದ ಕಾರ್ಯ ಕರ್ತನಿಗೆ ಯಾವುದೇ ಪ್ರತಿಫಲ ಇಲ್ಲವೆಂದು ಬೊಬ್ಬಿರಿಯುತ್ತಾನೆ..
ಪಾಪ ಜಾಹಿಲ್..
ಯಾರೋ ಅವನಿಗೆ ಇಂತಹ ಹಸಿ ಹಸಿ ಸುಳ್ಳನ್ನು ಬಡಿಸಿರಬೇಕು.
ಅದನ್ನು ವಾಯ್ಸ್ ಮೆಸ್ಸೇಜ್ ಮಾಡಿ ವಾಟ್ಸಪ್ ನಲ್ಲಿ ಕಕ್ಕಿದ್ದಾನೆ.
ಅವನ ಮುಖ್ಯ ಸಂಶಯ ಶಂಸುಲ್ ಉಲಮಾ, ಕಣ್ಣಿಯತ್ ಉಸ್ತಾದರ ಜೀವನ
ಕಾಲದಲ್ಲೇ ಏಕೆ ಸಮಸ್ತವನ್ನು ಪುನಃ ಸಂಘಟಿಸಿದ್ದು...???
ಈ ಪ್ರಶ್ನೆ ಗೆ ಸ್ಪಷ್ಟವಾದ ಉತ್ತರವಿದ್ದರೂ
ನಾವು ಉತ್ತರಿಸದೆ ಜಾರುವುದು ಯಾಕೆಂದು
ಈ ವಾಟ್ಸಪ್ ದಾರಿಗೂ ಗೊತ್ತು...
ಕಾರಣ ಆ ಚರಿತ್ರೆ ಹೇಳುವಾಗ ಮಹಾನರಾದ
ಶಂಸುಲ್ ಉಲಮಾ (ನ.ಮ) ರವರ ಹೆಸರನ್ನು ಪ್ರಸ್ತಾಪಿಸ ಬೇಕಾಗುತ್ತೆ...
👉ಮನುಷ್ಯ ನಿಗೆ 'ಝಲ್ಲತ್' ಸಂಭವಿಸುವುದು ಸಹಜ .ಅದೇ ಸಂದರ್ಭದಲ್ಲಿ ಒಂದು ಇಡೀ ಸಮುದಾಯಕ್ಕೆ ನೇತ್ರತ್ವ ನೀಡುವ ಒಬ್ಬರಿಗೆ
ಝಲ್ಲತ್ ಸಂಭವಿಸಿದರೆ ಅದು ಸಮುದಾಯಲ್ಲಿ
ಪ್ರತಿಫಲಿಸುತ್ತೆ.
ಆವಾಗ ಅದನ್ನು ತಿದ್ದುವುದು ಧರ್ಮ.
ಜೊತಗೆ ಸಮುದಾಯಕ್ಕೆ ಅವರ ಝಲ್ಲತನ್ನು
ಮನವರಿಕೆ ಮಾಡಿಕೊಡುವುದು ಕೂಡಾ ಧರ್ಮ
ಅಲ್ಲಿ ಸತ್ಯಕ್ಕೆ ಎದುರಾಗಿ ಬಹುಮತವಿದ್ದರೂ
ಅದು ನಗಣ್ಯವಾಗುತ್ತೆ.
ನಂತರ ಆ ಝಲ್ಲತ್ ಸಂಭವಿಸಿದ ಮನುಷ್ಯ
ಪಶ್ಚಾತಾಪ ಗೊಂಡು ಸತ್ಯ ತಿಳಿದುಕೊಂಡರೆ
ಅವರನ್ನು ಅಪ್ಪಿ ನಡೆಯುವುದು ಕೂಡಾ ಧರ್ಮ.
ಅದುವೇ ಶಂಸುಲ್ ಉಲಮಾ (ನ.ಮ)ರವರ
ಕಾರ್ಯದಲ್ಲಿ ನಾವು ಸ್ವೀಕರಿಸಿದ ಮಾರ್ಗ.
♻👉 ಇನ್ನು ವಿಷಯಕ್ಕೆ ಬರೋಣ...
ಶರೀಅತ್ ವಿವಾದ ಉದ್ಭವಿಸುವುದಕ್ಕೆ ಮುಂಚೆಯೇ ಸಮಸ್ತವನ್ನು ವಿಭಜಿಸಲು
ಶತ್ರುಗಳು ತಂತ್ರ ಹೆಣೆಯುತ್ತಿದ್ದರು ಎಂಬುವುದಕ್ಕೆ
ಸಮಸ್ತದ ಅಧೀನದಲ್ಲಿರುವ ಕಾಲೇಜ್ ಪಟ್ಟಿಕ್ಕಾಡ್ ನಿಂದ
ಸಮಸ್ತ ಸಕ್ರೇಟರಿಯಾದ ಈ ಕೆ ಉಸ್ತಾದರ ನ್ನು ಹೊರದಬ್ಬಿದ್ದು ಜ್ವಲಂತ ಶಾಕ್ಷಿ.
👉ಶಂಸುಲ್ ಉಲಮಾ ತ್ರಶೂರು ಖಾಝಿಯಾಗಿ ನೇಮಕ ಗೊಂಡಾಗ
ಶಂಸುಲ್ ಉಲಮಾ ಒಬ್ಬ ವಿಲ್ಲೇಜ್ ಖಾಝಿಯಾಗಲೂ ಅರ್ಹತೆ ಇಲ್ಲವೆಂದು
ಬರೆದದ್ದು
ಇದೇ ನಮ್ಮ ಕೂರ ತಂಙಳ್ ಗೆ ಫಾತಿಹ
ಸರಿಯಾಗಿ ಓದಲು ಗೊತ್ತಿಲ್ಲ ವೆಂದು ಒದರಿದವನ ಉಸ್ತಾದ್ ನಾಟಿಗ ಎಂಬ ಊರಿನ ಮೌಲವಿಯಾಗಿದ್ದರು...!
ಅಂದರೆ ಈ ವಾಟ್ಸಪ್ ದಾರಿ ನೆಚ್ಚಿಕೊಂಡ ಸಂಘಟನೆಯ ಪಾರಂಪರ್ಯ ಹೇಗಿತ್ತೆಂದು ಊಹಿಸಿ.
ನಂತರ ಈ ಕೆ ಉಸ್ತಾದ್ ಸಮಸ್ತದ ಸಕ್ರೇಟರಿಯಾಗಿಯೂ
ಎಪಿ ಉಸ್ತಾದ್ ಜೋಯಿಂಟ್ ಸಕ್ರೇಟರಿಯಾಗಿಯೂ ಸಮಸ್ತಕ್ಕೆ ದಿಟ್ಟ ನೇತ್ರತ್ವ ನೀಡುತ್ತಿರುವಾಗ ಇವರನ್ನು ಭಿನ್ನಿಸಲು ಅರೀಕ್ಕಾಡ್ ಮಸೀದಿಯ ವಿವಾದ ಸ್ರಿಷ್ಟಿಸಿ ಎಪಿ ಉಸ್ತಾದರನ್ನು ಅವಹೇಳನ ಮಾಡಲು ಶತ್ರುಗಳು ಶ್ರಮಿಸಿದಾಗ ಎಪಿ ಉಸ್ತಾದರ ಹಸ್ತ ಶುಧ್ದವಾಗಿದೆ ಎಂದು ಹೇಳಿ
ಒಂದು ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ಎಪಿ ಉಸ್ತಾದರನ್ನು ಬಹು ಈಕೆ ಉಸ್ತಾದ್ ಸುಮಾರು ತಾಸುಗಳ ಕಾಲ
ರೈಲ್ವೇ ಸ್ಟೇಷನ್ ನಲ್ಲಿ ಕಾದು ನಿಂತು ಬರಮಾಡಿ ಕೊಂಡದ್ದು ಚರಿತ್ರೆ ....
ಕಾರಣ ಕುಶಾಗ್ರಬುಧ್ದಿಯಿಂದ ಚಿಂತಿಸಿದ ಶಂಸುಲ್ ಉಲಮಾ ನನ್ನ ನಂತರ ಸಮಸ್ತಕ್ಕೆ ದಿಟ್ಟ ನೇತ್ರತ್ವ ನೀಡಬೇಕಾದ ಎಪಿ ಯನ್ನು ಮೊಳೆಕೆಯಲ್ಲಿಯೇ
ಚಿವುಟಿ ಹಾಕಲು ಶ್ರಮಿಸಿದ ಶತ್ರುಗಳಿಗೆ
ಕೊಟ್ಟ ಶಾಕಗಿತ್ತು ಆ ಬರಮಾಡಿದ ಸ್ವೀಕಾರ..
ಕೊನೆಗೆ ಶತ್ರುಗಳು ರಾಜಕೀಯ ಪುಡಾರಿಗಳೊಂದಿಗೆ ಜೊತೆಸೇರಿ ನಿರಂತರ
ಫಿತ್ನ ಮಾಡಿದ ಕಾರಣ ಸಿಹ್ರ್ ನಿಮಿತ್ತವೋ
ಗೊತ್ತಿಲ್ಲ ಶಂಸುಲ್ ಉಲಮಾರನ್ನು ಅವರು
ಹೈಜಾಕ್ ಮಾಡುವಲ್ಲಿ ಸಫಲರಾದರು.
ನಂತರದ ಕೆಲವೊಂದು ಪ್ರಭಾಷಣಗಳು
ಹಳಿ ತಪ್ಪಿದ್ದವು
ನಮಾಜಿನಲ್ಲಿ ಕೈ ಎಲ್ಲಿ ಕಟ್ಟಿದರೂ ಪರವಾಗಿಲ್ಲ
ತರವೀಹ್ ಎಂಟು ಆದರೇನು ಇಪ್ಪತ್ತಾದರೇನು ..ಈ ರೀತಿ ಹಳಿತಪ್ಪಿದ ಪ್ರಭಾಷಣ ಕೆಲವು ಅದೀಕ್ರತ ವ್ಯಕ್ತಿ
(ಹೆಸರು ಉಲ್ಲೇಖ ಮಾಡುವುದಿಲ್ಲ ಕ್ಷಮಿಸಿ)
ಗಳಿಂದಲೇ ಕೇಳಬೇಕಾದ ಸನ್ನಿವೇಶ ಉಂಟು
ಮಾಡುವಷ್ಟರಷ್ಟು ಬೆಳೆಯುತ್ತಾ ಹೋಯಿತು ಫಿತ್ನದ ಗಾಂಬೀರ್ಯತೆ.
ಅದೇ ಸಮಯ ಮುಸ್ಲಿಮ್ ವ್ಯಕ್ತಿ ನಿಯಮ ಬದಲಾವಣೆ ಮಾಡಬಾರದೆಂಬ ಮೆಮೋರಾಂಡ ಅಂದಿನ ಪ್ರಧಾನ ಮಂತ್ರಿ
ರಾಜೀವ್ ಗಾಂಧಿ ಗೆ ಸಮರ್ಪಿಸಲು
ಸಮಸ್ತ ಕಾರ್ಯದರ್ಶಿ ಈ ಕೆ ಉಸ್ತಾದ್
ಜೊತೆ ಕಾರ್ಯದರ್ಶಿ ಎಪಿ ಉಸ್ತಾದ್ ಮತ್ತು
ಉಪಾಧ್ಯಕ್ಷ ರಾದ ಉಳ್ಳಾಲ ತಂಙಳ್ ರವರು ದೆಹಲಿಗೆ ಹೋಗಬೇಕೆಂದು ಮುಶಾವರದ ಒಕ್ಕೂರಲಿನ ತೀರ್ಮಾನವಾಗಿತ್ತು
ಆದರೆ ಕೆಲ ದಿನಗಳ ನಂತರ ಹಾಗೆ ಹೋಗುವುದು ಬೇಡ ಸುನ್ನಿಯೇತರರೊಂದಿಗೆ
ಹೋದರೆ ಸಾಕೆಂದು ಹೇಳಿದಾಗ ಅಲ್ಲೂ ಶತ್ರುಗಳ ಫಿತ್ನಕ್ಕೆ ಅಂಗೀಕಾರ ಸಿಕ್ಕಿತ್ತು.
ಹಾಗೆ ಕೋಝಿಕ್ಕೋಡ್ ನಲ್ಲಿ ಸುನ್ನಿಯೇತರ
ಸಂಘಟನೆಗಳ ಸಭೆ ಸೇರಿತು
ಅದರಲ್ಲಿ ಸಮಸ್ತದ ಕಾರ್ಯದರ್ಶಿ.
ಅಧ್ಯಕ್ಷರಿಗೋ ಉಪಾಧ್ದ್ಯಕ್ಷರಿಗೋ ಜತೆಕಾರ್ಯದರ್ಶಿಗೋ ಯಾರಿಗೂ ಮಾಹಿತಿ
ನೀಡದೆ ಭಾಗವಹಿಸಿದ್ದು ಎಲ್ಲರಲ್ಲೂ ಬೇಸರ ತರಿಸಿತು.
ಮಾತ್ರವಲ್ಲ ಆ ಸಭೆಯಲ್ಲಿ ಒಬ್ಬ ನೂತನವಾದಿ
ಮೂರು ತಲಾಕ್ ಹೇಳಿದರೆ ಒಂದೇ ತಲಾಕ್
ಸಂಭವಿಸುತ್ತದೆ ಎಂಬ ಅಸಂಬದ್ಧ ಹೇಳಿಕೆ ನೀಡಿದಾಗಲೂ ಯಾವನೇ ಒಬ್ಬನು ಕೂಡಾ
ಅದರ ವಿರುದ್ಧ ಧ್ವನಿಯೆತ್ತದೆ ಇದ್ದದ್ದು ಜನರಲ್ಲಿ
ಮತ್ತಷ್ಟು ಬೇಸರ ತರಿಸಿತ್ತು.
♻👉 ನಂತರ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ನ ಅಖಲಾಕ್ ಪಾಠ ಪುಸ್ತಕದಿಂದ ನೂತನ ವಾದಿಗಳಿಗೆ ಸಲಾಂ ಹೇಳ ಬಾರದೆಂಬ ಭಾಗ ವನ್ನು ತಿದ್ದುಪಡಿ
ಮಾಡಬೇಕು ಅಥವಾ ಆ ಪುಸ್ತಕವನ್ನೇ ಬದಲಾಯಿಸಬೇಕೆಂಬ ಬೇಡಿಕೆ ಬಂದಾಗ
ಅಂದಿನ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಧ್ಯಕ್ಷರಾಗಿದ್ದ ಉಳ್ಳಾಲ್ ತಂಙಳ್
ಅದರ ವಿರುದ್ಧ ಶಕ್ತಿಯುತವಾಗಿ ಘರ್ಜಿಸಿದರು.
ಹಾಗೆ ಸಮಸ್ತದಲ್ಲಿ ಶೀತಲ ಸಮರ ನಡೆಯುತ್ತಿದೆಯೆಂಬ ವಾರ್ತಾ ಸಾಮಾನ್ಯ ಜನರಿಗೂ ತಿಳಿಯುವಷ್ಟು ಬಹಿರಂಗವಾಗಿತ್ತು.
ಅದಾದ ನಂತರ SYS ನ ಸಮ್ಮೇಳನ ಎರ್ನಾಕುಲಮ್ ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು.
ಅದಕ್ಕೆ ತಡೆ ಒಡ್ಡಲು ಮದ್ಯ ಕೇರಳ ಸಮ್ಮೇಳನ
ನಿಶ್ಚಯಿಸಿದಾಗ. ಸಂಘಟನಾ ಶಾಸ್ತ್ರ ಪ್ರಕಾರ
ಸಮಸ್ತದ ಅಧೀಕ್ರತ ಸಂಘಟನೆಯಾದ SYS
ಸಮ್ಮೇಳನದ ವಿಜಯಕ್ಕೆ ಆಹ್ವಾನ ಕೊಡುವುದರ ಬದಲು
ಅನಧಿಕೃತವಾದ ಮಧ್ಯ ಕೇರಳ ಸಮ್ಮೇಳನಕ್ಕೆ
ಅಂಗೀಕಾರ ಕೊಡುವ ಸನ್ನಿವೇಶ ಉಂಟಾಯಿತು
ಹಾಗೆ SYS ನ್ನು ಬರ್ಖಾಸು ಗೊಳಿಸುವ ತಂತ್ರ ತೆರೆಮೆರೆಯಲ್ಲಿ ನಡೆಯುತ್ತಾ ಇತ್ತು.
SSF ಅಂದು ಇದರಲ್ಲಿ ಇನ್ವೋಳ್ ಆಗದಿದ್ದರೂ ಎಸ್ಸೆಸ್ಸೆಫ್ ನ್ನು ಕೂಡಾ ನಾಶ ಮಾಡುವ ರೀತಿಯಲ್ಲಿ ಮಾತುಕತೆಗಳು ನಡೆಯುತ್ತಾ ಇತ್ತು.
ಆದರೆ ಮಹಾನರಾದ CM ವಲಿಯ್ಯುಲ್ಲಾಹಿ ತಂಙಳ್ ರವರ ನಿರ್ದೇಶ ಪ್ರಕಾರ SYS ಸಮ್ಮೇಳನದ ಕಾರ್ಯಚಟುವಟಿಕೆಗಳು ಮುಂದುವರಿಯುತ್ತಾ ಇತ್ತು.
ಆವಾಗ ತಕ್ಷಣ ಸಮಸ್ತ ಮುಶಾವರ ಕರೆದು
ದೊಡ್ಡ ದೊಡ್ಡ ಹಿರಿಯ ವಿದ್ವಾಂಸರು ಹೊರಗೆ ಇರುವಂತೆಯೇ ಕೆಲವೊಂದು ಸಣ್ಣ ಸಣ್ಣ ಪ್ರಾಯದ ಮರಿ ಮುಸ್ಲಿಯಾಕರನ್ನು ಸಮಸ್ತ
ಮೆಂಬರ್ ಶಿಫ್ ನೀಡಿ ಬಹುಮತ ಸ್ಥಾಪಿಸಲಾಯಿತು.
ಹಾಗೆ SYS ನ್ನು ವಿಸರ್ಜಿಸಲಾಗುತ್ತದೆಯೆಂಬ
ಸುದ್ದಿ ತಿಳಿದ ತಕ್ಷಣ
ಬಹು T.C ಮುಹಮ್ಮದ್ ಮುಸ್ಲಿಯಾರ್ ವರು
ಆ ಮುಶಾವರ ಸಭೆ ನಡಯದಂತೆ 'ಸ್ಟೇ' ವಾರ್ಡರ್ ತಂದರು
ಆದರೆ ಅವರು ಮನಪೂರ್ವಕವಾಗಿ ಕಣ್ಣಿಯತ್ ಉಸ್ತಾದರ ಹೆಸರು ಸೇರಿಸದೆ ಕೇಸ್ ಕೊಟ್ಟದ್ದು
ಗಮನಾರ್ಹ.
ಅಂದರೆ ವಯೋವ್ರಧ್ದ ಸಹಜವಾದ ಆಯಾಸ ಮೂಲಕ ಕಣ್ಣಯತ್ ಉಸ್ತಾದ್ ಮನೆಯಲ್ಲೇ
ತಂಗುತ್ತಿದ್ದರು
ಹೊರಗೆ ನಡೆಯುವ ಜಟಾಪಟಿಗಳೊಂದು
ಕಣ್ಣಿಯತ್ ಉಸ್ತಾದ್ ತಿಳಿಯುತ್ತಿರಲೇ ಇಲ್ಲ.
(ಈ ಸ್ಟೇ ವಾರ್ಡರ್ ತಂದು ಕೊಟ್ಟದ್ದನ್ನು ನೆಪ ಮಾಡಿ ನಮ್ಮ ವಾಟ್ಸಪ್ ಸಂಘಟನೆ
ಈಗಲೂ ಬೊಬ್ಬಿರಿಯುತ್ತಿದೆ ಸಮಸ್ತ ಕ್ಕೆ ಎದುರಾಗಿ ಕೇಸ್ ಕೊಟ್ಟರು ಕಣ್ಣಿಯತ್ ಉಸ್ತಾದರನ್ನು ಕೋರ್ಟಿನಿಂದ ಕೋರ್ಟಿಗೆ ಅಲೆದಾಡಿಸಿದರು ಎಂದು ಹಸಿ ಹಸಿ ಸುಳ್ಳು ಹೇಳಿ ಮೊಸಳೆ ಕಣ್ಣೀರು ಸುರಿಸಿ ಜನಸಾಮಾನ್ಯರ ಅನುಕಂಪ ಗಿಟ್ಟಿಸುತ್ತಿದ್ದಾರೆ.)
ಅದಿರಲಿ...
ಹಾಗೆ ಸ್ಟೇ ವಾರ್ಡರ್ ಬಂದಾಗ ಅದನ್ನು ವೆಕಟ್ ಮಾಡಲು ಒಬ್ಬ ವಕೀಲ ನನ್ನು ನೇಮಿಸಲಾಯಿತು
ವಿಧಿ ಬರುವ ದಿನ ಮುಶಾವರ ಸಭೆಯನ್ನು ಕರೆದು ಮೊತ್ತಮೊದಲಿಗೆ ಆರನೇ ಬೆರಳಾಗಿ ಮೊಳಸಿದ ಸುನ್ನಿ ಮಹಲ್ ಫೆಡರೇಶನ್ ನ
ಬೈಲಾ ಓದಿ ಅಂಗೀಕಾರ ಕೊಡಲಾಯಿತು.
SYS ಸಮ್ಮೇಳನ ಬರ್ಖಾಸು ಗೊಳಿಸಿ
ಮಹಲ್ ಫೆಡರೇಶನ್ ಗೆ ಅಂಗೀಕಾರ ಕೊಡುವ ವೆಕಟ್ ರಿಪೋರ್ಟ್ ಸಿಗುವ ತನಕ
ಸಮಯ ದೂಡಲಾಯಿತು.
ಪ್ರಸ್ತುತ ಸಭೆಯಲ್ಲಿ ಉಳ್ಳಾಲ ತಂಙಳ್,
ಎಪಿ ಉಸ್ತಾದ್ ಎಂ ಎ ಉಸ್ತಾದ್ ಎಲ್ಲರೂ ಇದ್ದರು.
ಪ್ರಸ್ತುತ ಸಭೆಯು ಸಮಸ್ತದ ಕೇಸನ್ನು ನೋಡಿಕೊಳ್ಳಲು ಈಕೆ ಉಸ್ತಾದರನ್ನು
ಸರ್ವ ಸಮ್ಮತದೊಂದಿಗೆ ನೇಮಿಸಲಾಯಿತು.
ನಂತರ ಎಪಿ ಉಸ್ತಾದ್ ಒಂದು ಕಂಡೀಶನ್ ಹೇಳಿದರು
♻👉ಸಮಸ್ತದ ಇಂದಿನ ತನಕ ಇರುವ ತೀರ್ಮಾನಗಳು,ಮಿನಿಟ್ಸ್ ಗಳಿಗೆ ಯಾವುದೇ
ವಿಧವಾದ ಬದಲಾವಣೆ ತರಬಾರದು
ಕೇಸ್ ಪೂರ್ಣವಾಗಿ ಸಮಸ್ತ ನೋಡಿಕೊಳ್ಳಲಿ.
ಆಗ ಒಂದು ವಿಭಾಗ ಹೇಳಿದರು
ಇಲ್ಲ ಸಮಸ್ತದ ಇಂದಿನ ತನಕ ಇರುವ
ತೀರ್ಮಾನಗಳಲ್ಲಯೂ ಮಿನಿಟ್ಸ್ ಗಳಲ್ಲಯೂ
ಯಾವುದೇ ವಿಧದ ಬದಲಾವಣೆ ತರಲು ಕಾರ್ಯದರ್ಶಿ ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
ಅದಕ್ಕೆ ಎಪಿ ಉಸ್ತಾದ್ ಉಳ್ಳಾಲ್ ತಂಙಳ್ ಒಪ್ಪದಿದ್ದಾಗ
ಬಹುಮತದಿಂದ ನಾವು ಅಂಗೀಕರಿಸುವೆವು
ಅಂತ ಹಠ ಹಿಡಿದಾಗ
ಉಳ್ಳಾಲ್ ತಂಙಳ್ ಹೇಳಿದರು 'ಹಕ್ಕ್' ಗೆ
ವಿರುದ್ಧ ಬಹುಮತವಿದ್ದರೂ ಹಕ್ಕ್ ಹಕ್ಕಾಗಿರುತ್ತೆ.
ಆದ್ದರಿಂದ ನಮ್ಮ ಹನ್ನೊಂದು ಮಂದಿ
ವಿರೋಧ ಇದೆಯೆಂದು ಬರೆದು ನಂತರ
ನಿಮ್ಮ ತೀರ್ಮಾನ ಪಾಸು ಮಾಡಿ ಅಂತ ಹೇಳಿದಾಗ
ಅದಕ್ಕೂ ಅವರು ಸಮ್ಮತಿಸದೆ ಬಹುಮತವಿದೆಯೆಂದು ವಾದಿಸಿ ಮುಂದುವರೆದಾಗ
ಇನ್ನೂ ಈ ಕುರ್ಚಿ ಯಲ್ಲಿ ಕೂರಲು ನಾನಿಲ್ಲ
ಎಂದು ಹೇಳುತ್ತಾ ತಾಜುಲ್ ಉಲಮಾ
ಸಭೆಯಿಂದ ಹೊರನಡೆದರು.
ಅವರನ್ನು ಹಿಂಬಾಲಿಸಿ ಹನ್ನೊಂದು ವಿದ್ವಾಂಸರು ಹೊರನಡೆದರು.
ಆ ಹನ್ನೊಂದು ಮಂದಿಯಲ್ಲಿ ಮಂಗಳೂರು
ಖಾಝಿಯಾಗಿದ್ದ CM ಅಬ್ದುಲ್ಲಾ ಮುಸ್ಲಿಯಾರ್
ಚೆಂಬರಿಕ ಕೂಡಾ ಇದ್ದರು ಎಂಬುದು ಗಮನಾರ್ಹ.
♻👉ಆದರೆ ಯಾವ ಗುರಿ ಉದ್ದೇಶ ಇಟ್ಟುಕೊಂಡು ವರಕ್ಕಲ್ ತಂಙಳ್ ಈ ಸಮಸ್ತವನ್ನು ಸ್ಥಾಪಿಸಿದರೋ
ಅದೇ ಗುರಿ ಇಟ್ಟು ಕೊಂಡು ಸಮಸ್ತದ ಉಪಾಧ್ಯಕ್ಷರಾಗಿದ್ದ ಉಳ್ಳಾಲ್ ತಂಙಳ್
ಅಧ್ಯಕ್ಷರಾಗಿಯೂ ಜೊತೆ ಕಾರ್ಯ ದರ್ಶಿಯಾಗಿದ್ದ ಎಪಿ ಉಸ್ತಾದ್ ಕಾರ್ಯದರ್ಶಿಯಾಗಿಯೂ ಸಮಸ್ತ ಸಂಘಟನೆಯನ್ನು ಪುನಃ ಸಂಘಟಿಸಿದರು
ಸಮಸ್ತದ ಧ್ಯೇಯ ಉದ್ದೇಶಗಳಿಂದ ಅಲ್ಪವೂ
ವ್ಯತಿರಿಕ್ತವಾಗಿ ಚಲಿಸದೆ ಸ್ಥಾಪಿತ ಉದ್ದೇಶವನ್ನು ಗುರಿಯಾಗಿಸಿ ತಲೆಯೆತ್ತಿ ಈಗಲೂ ಚಲಿಸುತ್ತಾ ಇದೆ.
♻👉ಕಣ್ಣಿಯತ್ ಉಸ್ತಾದರು ಉಳ್ಳಾಲ ತಂಙಳ್ ರವರನ್ನು ಕರೆದು
"ಞಾನ್ ತಂಙಳೆ ಕೂಡೆಯಾಣ್"
ಎಂಬ ಅಂಗೀಕಾರ ಕೊಟ್ಟದ್ದು ಸ್ವತಃ ಉಳ್ಳಾಲದ ವರೇ ಕೇಳಿದ್ದಾರೆ.
ಮಾತ್ರವಲ್ಲ ಮಂಗಳೂರಿನಲ್ಲಿ ಉಳ್ಳಾಲ ತಂಙಳ ವಿರುದ್ಧ ಭಾಷಣ ಮಾಡಿಸಲು ಕಣ್ಣಿಯತ್ ಉಸ್ತಾದರನ್ನು ನಮ್ಮ
ವಾಟ್ಸಪ್ ಸಂಘಟನೆ ಕರೆತಂದಾಗ
ಇದ್ಯಾವುದರ ಪರಿವೆಯೇ ಇಲ್ಲದ ಆ ಮಹಾನ್
"ಉಳ್ಳಾಲ ಮುದರ್ರಿಸ್ ಎವಿಡೆ ವಿಳಿಕ್ಕ್"
ಎಂದು ಹೇಳಿದಾಗ ನಮ್ಮ ವಾಟ್ಸಪ್ ಸಂಘಟನೆಯವರು ಮೈಕ್ ಓಫ್ ಮಾಡಿದ್ದು
ಇತಿಹಾಸ.
ಅದೇ ರೀತಿ ಕೇರಳದ ಹಲವಾರು ಸಭೆಗಳಲ್ಲಿ
ಎಪಿ ಉಸ್ತಾದರ ವಿರುದ್ಧ ಹೇಳಿಕೆ ನೀಡಲು
ಕಣ್ಣಿಯತ್ ಉಸ್ತಾದರನ್ನು ಕರೆ ತಂದಾಗ
"ಎಪಿ ಎವಿಡೆ ಅಯಾಳ್ ಪ್ರಸಂಗಿಕಟ್ಟ್'
ಎಂದು ಮೈಕ್ ನಲ್ಲಿ ಹೇಳಿದಾಗ ಅಲ್ಲಿಯೂ
ಮೈಕ್ ಓಫ್ ಮಾಡಿ ಮುಖಭಂಗ ಅನುಭವಿಸಿದ್ದು ಚರಿತ್ರೆ.
ಉಳ್ಳಾಲ ತಂಙಳ್ ರವರ ಭಾಷೆಯಲ್ಲಿ ಹೇಳುವುದಾದರೆ
"ಕಣ್ಣಿಯತ್ ಉಸ್ತಾದ್ ದುಆ ಚೈದ್ ಪೋಯಾಲ್ ಪಿನ್ನೆ ಇವರಲ್ಲೇ ಚಕ್ಕರ ಕಞ್ಞಿ
ವೆಕ್ಕ್ ನೆ ಕಣ್ಣಿಮೊಯಿಲಾರ್ ಅದೊನ್ನುಮ್ ಅರಿಯಿಲ್ಲ"
ಅಂದರೆ ಕಣ್ಣಿಯತ್ ಉಸ್ತಾದರ ಘನತೆಯನ್ನು
ಮುಂದಿರಿಸಿ ಜನರನ್ನು ಇವರು ಅಷ್ಟೊಂದು
ಶೋಷಣೆ ಮಾಡುತ್ತಾ ಇದ್ದರು
ಬಹು ಶಂಸುಲ್ ಉಲಮಾ ತನ್ನ ಅಂತಿಮ ಕಾಲಘಟ್ಟದಲ್ಲಿ ತಾನು ಮಹಾ ವಂಚಕರ ಬಲೆಯಲ್ಲಿ ಸಿಲುಕಿಕೊಂಡಿದ್ದೇನೆ
ಸುನ್ನತ್ ಜಮಾತ್ ಏನಿದ್ದರೂ ಅದು ಎಪಿ ಯ
ಕೈಯಲ್ಲಿ ಭದ್ರವಾಗಿದೆ ಆದ್ದರಿಂದ ನಾವು ಐಕ್ಯ ಗೊಳ್ಳಬೇಕೆಂಬ ಬೇಡಿಕೆ ಇಟ್ಟು ಮರಣ ಹೊಂದಿದ್ದು
ಆ ವಿವರವನ್ನು ಸಮಸ್ತ ಅನುಯಾಯಿ ಕಲ್ಲಾಯಿ ಅಬ್ದುರಹ್ಮಾನ್ ಚಂದ್ರಿಕ ಪತ್ರಿಕೆಯಲ್ಲಿ
ಬರೆದದ್ದು ಈಗಲೂ ಸ್ಪಷ್ಟವಾಗಿದೆ.
ಬಹು ಶಂಸುಲ್ ಉಲಮಾ ತನ್ನ ಧರ್ಮಪತ್ನಿ
ಮರಣ ಹೊಂದಿದಾಗ ಅವರ ಮಯ್ಯಿತ್ ನಿರ್ವಹಣೆ ಮಾಡಲು ಬಹು ಎಪಿ ಉಸ್ತಾದರನ್ನು ನೇಮಿಸಿದ್ದು ನೆನಪಿಸುತ್ತಾ
ಆದ್ದರಿಂದಲೇ ಶಂಸುಲ್ ಉಲಮಾ ರವರ
ಪಾದದ ಅಡಿಯಲ್ಲಿಯೇ ನಾವು ಕೂಡಾ ಇದ್ದೇವೆ
ಅದನ್ನು M.A ಉಸ್ತಾದರ ಭಾಷೆಯಲ್ಲಿ
ಹೇಳುವುದಾದರೆ
" ಶಂಸುಲ್ ಉಲಮಾರಿಗೆ
ಒಂದು ಝಲ್ಲತ್ ಸಂಭವಿಸಿದ್ದು ನಿಜ
ಆದ್ದರಿಂದಲೇ ನಾವು ಹೊರಬರಬೇಕಾಗಿ ಬಂತು.
ಆದರೆ ಕೊನೆಯದಾಗಿ ಅವರು ನಮ್ಮನ್ನು
ಅಂಗೀಕರಿಸಿದ್ದಾರೆ.ನಾವು ಕೂಡಾ ಅವರನ್ನು ಅಪ್ಪಿದ್ದೇವೆ ಅವರ ಪಾದದಡಿ ಯಲ್ಲಿ ಈಗಲೂ ನಾವಿದ್ದೇವೆ ಆತ್ಮೀಯವಾಗಿ ಈಗಲೂ ನಮಗೆ ಮದದ್ ನೀಡುತ್ತಿದ್ದಾರೆ.
♻👉ಅಂದರೆ ಸಮಸ್ತದ ಧ್ಯೇಯ ಉದ್ದೇಶವನ್ನು ಸರಿಯಾಗಿ ಕೊಂಡೊಯ್ಯುತ್ತಿರುವ ಸಮಸ್ತ ಅದು ಉಳ್ಳಾಲ್ ತಂಙಳ್ ಮತ್ತು ಎಪಿ ಉಸ್ತಾದ್ ಹಾಗೂ ಎಂ ಎ ಉಸ್ತಾದ್ ಅಧ್ಯಕ್ಷರಾಗಿದ್ದ ಸಮಸ್ತವೆಂದು ಈ ಕೆ ಉಸ್ತಾದ್ ಕೂಡಾ
ಅಂಗೀಕರಿಸಿದ ಮೇಲೇ
ಇನ್ನು ವಾಟ್ಸಪ್ ದಾರಿ ಅನಗತ್ಯ ಚರ್ಚೆಮಾಡಿ ಸಮಯ ಕೊಲ್ಲುವ ಅಗತ್ಯ ಇಲ್ಲ ಅಂತ ಕಾಣುತ್ತೆ.
ಅಲ್ಲಾಹು ಹಿದಾಯತ್ ನೀಡಲಿ
♻👉ಅಬೂ ಶಝ ಪುತ್ತೂರು
[4:30 AM, 9/30/2017] Gafooru Bayar: ಶರೀಅತ್ ಸಂರಕ್ಷಣೆ ಸಭೆಯಿಂದ ಕಾಂತಪುರಂ ಯಾಕೆ ದೂರ ಸರಿದು ನಿಂತರು?
---------------------
ವಿಷಯ ಇಸ್ಲಾಂ ಶರೀಅತ್ ಆಗಿರುವುದರಿಂದ ಅದರ ಕುರಿತು ಅಗಾಧ ಪಾಂಡಿತ್ಯವಿರುವ ಉಲಮಾಗಳು ನೇತೃತ್ವ ಕೊಡಬೇಕಾದ ಸಭೆಗೆ ಶರೀಅತ್ತನ್ನೇ ಗಾಳಿಗೆ ತೂರಿ ಕೇಕೆ ಹಾಕುವ ರಾಜಕೀಯ ಪಕ್ಷವೊಂದು ನೇತೃತ್ವ ಕೊಡುವುದಾದರೆ ಆ ಸಭೆಯನ್ನು ಬಹಿಷ್ಕರಿಸಬೇಕಾದುದು ಪಂಡಿತ ಧರ್ಮವಾಗಿದೆ. ಅದ್ದರಿಂದಲೇ ಕಾಂತಪುರಂ ಉಸ್ತಾದ್ ಅರ್ಹ ರೀತಿಯಲ್ಲೇ ಆ ಸಭೆಯನ್ನು Avoid ಮಾಡಿದ್ದಾರೆ. ಕಾರಣ ಅವರು ಯಾರದೇ ಒತ್ತಡಕ್ಕೆ ಮಣಿದು ತೀರ್ಮಾನ ತೆಗೆದುಕೊಳ್ಳುವವರಲ್ಲ. ಅವರ ತೀರ್ಮಾನ ಏನಿದ್ದರೂ ದೂರದೃಷ್ಟಿ ಮತ್ತು ಸಮುದಾಯಕ್ಕೆ ಹಿತಕರವಾದ ಚಿಂತನೆಯಿಂದ ಕೂಡಿರುತ್ತದೆ. ಟೀಕೆ, ಬೈಗುಳ, ಅಪಹಾಸ್ಯ, ಪರಿಹಾಸ್ಯಗಳನ್ನು ಅವರು ಕ್ಯಾರೇ ಮಾಡಲ್ಲ. ಆದ್ದರಿಂದ ಅವರು ತೆಗೆದ ತೀರ್ಮಾನವನ್ನು ಪುನಃ ಪರಿಶೋಧನೆ ಮಾಡುವ ಗತಿ ಬರುವುದಿಲ್ಲ. ಕಾರಣ ಅವರು ತೆಗೆದು ಕೊಳ್ಳುವ ತೀರ್ಮಾನಗಳು ಪೂರ್ಣರ್ಥದಲ್ಲಿ ಚಿಂತನೆ ಮಂಥನ ನಡೆಸಿದ ಪಕ್ವತೆಯ ಡಿಶಿಸನಾಗಿರುತ್ತದೆ!
ಮುತ್ತಲಾಕ್ ಮತ್ತು ಏಕರೂಪ ಸಂಹಿತೆ ವಿರುದ್ದ ಶರೀಅತ್ ಸಂರಕ್ಷಣೆ ಎಂಬ ನಿಟ್ಟಿನಲ್ಲಿ ನಿನ್ನೆ ಮುಸ್ಲಿಂ ಲೀಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಪಿ ಉಸ್ತಾದ್ ಭಾಗವಹಿಸಲಿಲ್ಲವೆಂಬ ಕಾರಣ ಹೇಳಿ ಉಸ್ತಾದರನ್ನು ಜೂದಾಸ್, ಅಹಂಕಾರಿ, ಆರ್ ಎಸ್ ಎಸ್ ಎಂದೆಲ್ಲಾ ಆರೋಪಿಸುತ್ತಾ ಸಾಮಾಜಿಕ ತಾಣ ಯೋಧರು ಖಡ್ಗ ಕತ್ತಿ ಸುತ್ತಿ ತೆಗೆದು ತಮ್ಮ ನೆಟ್ ಜಾಲಗಳಲ್ಲಿ ಓಡಾಡುತ್ತಾ ಇದ್ದಾರೆ.
ಅದಿರಲಿ. ನಮಗೆ ಕೆಲವೊಂದು ವಿಷಯ ಮನದಟ್ಟು ಮಾಡೋಣ.
ಹಾಗಾದರೆ ನಾವು ಸ್ವಲ್ಪ ರಿವರ್ಸ್ ಗೇರ್ ತೆಗೆದಕೊಳ್ಳಬೇಕಾಗಿ ಬರುತ್ತದೆ.
1985 ರ ಇಸವಿಯಲ್ಲಿ ಶರೀಅತ್ ವಿವಾದ ಬಂದಾಗ 'ಸಮಸ್ತ' ತೆಗೆದ ತೀರ್ಮಾನ ಏನಾಗಿತ್ತು?
1985ರ ರಲ್ಲಿ ಶಾಬಾನು ಎಂಬ ಮಹಿಳೆಗೆ ಪತಿ ತಲಾಕ್ ನೀಡಿದಾಗ ಅವಳು ಪತಿಯ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ಕೇಸು ಫಯಲ್ ಮಾಡಿದಾಗ, ಪತಿ ತಲಾಖ್ ಹೇಳಿದ ನಂತರವೂ ಅವಳು ಸಾಯುವವರೆಗೂ ಪತಿ ಖರ್ಚಿಗೆ ಕೊಡಬೇಕೆಂಬ ಶರೀಅತ್ ವಿರುದ್ದ ವಿಧಿ ಬರುತ್ತದೆ. ಶರೀಅತ್ ವಿರುದ್ದವಾದ ಈ ನಿಯಮದ ವಿರುದ್ದ ಭಾರತದ ಮುಸ್ಲಿಮರೆಲ್ಲರೂ ಪ್ರತಿಭಟಿಸಿದರು.
ಇದರ ಕುರಿತು 'ಸಮಸ್ತ' ಮುಶಾವರದಲ್ಲಿ ಚರ್ಚೆ ಬಂದಾಗ 'ಸಮಸ್ತ' ಪಕ್ವವಾದ ಒಂದು ತೀರ್ಮಾನ ತೆಗೆದುಕೊಂಡಿತು.
"ಭಾಗಶಃ ಅಥವಾ ಪೂರ್ಣವಾಗಿ ಶರೀಅತ್ ನಿಯಮಗಳಲ್ಲಿ ಬದಲಾವಣೆ ಹೇರಲು ಹೇಸದ ನೂತನ ವಾದಿ ಗಳೊಂದಿಗೆ ಜತೆ ಸೇರಿ ಕಾರ್ಯಚರಿಸುವುದು ಅರ್ಥಶೂನ್ಯವಾಗಿದೆಯೆಂದೂ, ಅವರೊಂದಿಗೆಬೆರೆತು ಕಾರ್ಯಚರಿಸದೆ ಸಮಸ್ತ ಸ್ವಂತವಾಗಿ ಪ್ರತಿಭಟಿಸಬೇಕೆಂದು ತೀರ್ಮಾನಿಸಲಾಯಿತು
ಪ್ರಸ್ತುತ ವಿಷಯದ ಕುರಿತು ಭಾರತದ ಪ್ರಧಾನಮಂತ್ರಿಯನ್ನು ಮುಖತ ಬೇಟಿಯಾಗಿ ವಿರೋದ ವ್ಯಕ್ತಪಡಿಸಲು ಮತ್ತು ಮನವಿಪತ್ರ ಅರ್ಪಿಸಲು ತೀರ್ಮಾನಿಸಲಾಯಿತು. ಅದಕ್ಕಾಗಿ ಈಕೆ ಉಸ್ತಾದ್, ಎಪಿ ಉಸ್ತಾದ್, ಉಳ್ಳಾಲ್ ತಂಙಳ್' ರವರನ್ನು ಆಯ್ಕೆ ಮಾಡಲಾಯಿತು.
ಪ್ರಸ್ತುತ ನಿಯೋಗ ಸಂಘವನ್ನು ಕಳುಹಿಸುವ ಮೂಲಕ ಭಾರತಾದ್ಯಂತ ಸಮಸ್ತದ ಧ್ವನಿಯನ್ನು ತಲುಪಿಸುವ ಗುರಿಯೂ ಸಮಸ್ತಕ್ಕಿತ್ತು
ಅಂದಿನ ವಿದ್ವಾಂಸ ಕೇಸರಿಗಳು ಇಂತಹದೊಂದು ತೀರ್ಮಾನ ಯಾಕಾಗಿ ಕೈಗೊಂಡರು ಎಂಬ ಪ್ರಶ್ನೆಗೆ ಉತ್ತರವಾಗಿ ಹೀಗೆ ಮನದಟ್ಟು ಮಾಡಲಾಗಿತ್ತು.
ವಿಷಯ ಶರೀಅತ್ ಸಂಬಂಧವಾದ್ದರಿಂದ ಶರೀಅತ್ ವಿರುದ್ದ ಚಟುವಟಿಕೆಗಳನ್ನು ಭಾಗಶಃವಾಗಿಯಾದರೂ ನಡೆಸುವವರೊಂದಿಗೆ ಬೆರೆತು ತೀರ್ಮಾನ ಕೈಗೊಂಡರೆ ಅದು ಅಪೂರ್ಣ ಮತ್ತು ಅರ್ಥಶೂನ್ಯವಾದ್ದರಿಂದಲೇ ಸ್ವಂತವಾಗಿಯೇ ನಿಲುವು ಪ್ರಕಟಿಸಲು ಮುಶಾವರ ಸಭೆಯಲ್ಲಿ ತೀರ್ಮಾನ ಕೈಗೊಂಡದ್ದು.
(ಮತ್ತೆ ಅದು ಜಾರಿಗೆ ತರಲಾಯಿತೋ ಇಲ್ಲವೊ ಎಂಬ ವಿಷಯ ಇಲ್ಲಿ ವಿವರಿಸುವುದಿಲ್ಲ)
31ವರ್ಷ ಮುಂಚೆ ಸಮಸ್ತ ತೆಗೆದ ಅದೇ ತೀರ್ಮಾನದ ಪುನರಾವರ್ತನೆಯಾಗಿದೆ ಕಾಂತಪುರಂ ಉಸ್ತಾದ್ ನಿನ್ನೆ ಜಾರಿಗೆ ತಂದದ್ದು.
ಇನ್ನು ಶರೀಅತ್ ಸಂರಕ್ಷಣೆ ಎಂಬ ಹೆಸರಲ್ಲಿ ನಿನ್ನೆ ನಡೆದ ಸಭೆಯಲ್ಲಿ ಭಾಗವಹಿಸಿದವರ ಜಾತಕ ಜಾಲಾಡಿದರೆ ಅವರು ಅದಕ್ಕೆ ಅರ್ಹರೋ ಎಂದು ನೀವೇ ತೀರ್ಮಾನಿಸಿ..
ಶರೀಅತ್ ಸಭೆಗೆ ನೇತೃತ್ವ ಕೊಟ್ಟದ್ದು ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷವಾಗಿದೆ!
ರಾಜಕೀಯದಲ್ಲಿ ಶರೀಅತ್ ವಿರುದ್ದ ಕಾರ್ಯಗಳು ದಾರಾಳವಾಗಿ ಸಂಭವಿಸುತ್ತಿರುವುದರಿಂದಲೇ ಪ್ರಸ್ತುತ ಪಕ್ಷದ ಮುಂದೆ ಇರುವ 'ಮುಸ್ಲಿಂ' ಎಂಬ ನಾಮವನ್ನೇ ಅಳಿಸಿಹಾಕಬೇಕೆಂಬ ಬೇಡಿಕೆ ಹೆಚ್ಚುತ್ತಿರುವಾಗ ಶರೀಅತ್ ಸಭೆಗೆ ಅವರ ನೇತೃತ್ವಕ್ಕೆ ಯಾವುದೇ ಪ್ರಸಕ್ತಿ ಇಲ್ಲ.
ಮಾತ್ರವಲ್ಲ ಆ ಸಭೆಯಲ್ಲಿ ಭಾಗವಹಿಸಿದ ಕೆಲವರ ಹೆಸರು ನೋಡಿದಾಗ ಇವರೆಲ್ಲಾ ಇದಕ್ಕೆ ನಾಲಯಕ್ಕು ಎಂಬುದರಲ್ಲಿ ಎರಡು ಮಾತಿಲ್ಲ.
ಭಾರತದ ವಿಮೋಚನೆ ಇಸ್ಲಾಮಿನ ಮೂಲಕ ಎಂಬ ಕೋಮು ಪ್ರಚೋದಿತ ಘೋಷಣೆಯೊಂದಿಗೆ ಎಂಟ್ರಿ ಕೊಟ್ಟ ಜಮಾತೇ ಇಸ್ಲಾಮಿ ಪ್ರತಿನಿಧಿಗಳು ಭಾಗವಹಿಸಿದ್ದರು. ಮುಸ್ಲಿಮ್ ಮಹಿಳೆಯರನ್ನು ಸಾರ್ವಜನಿಕವಾಗಿ ಪ್ರವೇಶಿಸಿ ಇಸ್ಲಾಮಿನ ಶರೀಅತ್ತನ್ನೇ ಅಪಹಾಸ್ಯಗೈದರೊಂದಿಗೆ ಸೇರಿ ಶರೀಅತ್ ಸಂರಕ್ಷಣೆ ನಡೆಸುವುದು ಕಳ್ಳನ ಕೈಯಲ್ಲಿ ತಿಜೋರಿಯ ಕೀ ಕೊಡುವುದಕ್ಕೆ ಸಮ ತಾನೇ?
ಮತ್ತೊಬ್ಬ ಪ್ರತಿನಿಧಿ ಯಾರೆಂದು ಗೊತ್ತೇ?
ಎಂ ಇ ಎಸ್ ನ ಪ್ರತನಿಧಿ ಫಸಲ್ ಗಫೂರ್!
ಶಿರೋವಸ್ತ್ರ, ಮುಖ ಮಕ್ಕನೆ ವಿರುದ್ದ ದಂಗೆ ಎದ್ದ ಭೂಪ!
ಲಿಂಗ ಸಮತ್ವ ಬೇಕೆಂಬ ಶರೀಅತ್ ವಿರುದ್ದ ಹೇಳಿಕೆ ಕೊಟ್ಟು ಚಾನಲ್ ಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದ. ಮೀಡಿಯ ಒನ್ ಚಾನಲ್ ನಲ್ಲಿ ಸಿನಿಮಾ ಹಾಡು ಮತ್ತು ಸಂಗೀತ ಕಛೇರಿ ನಡೆಸುವ ಫಸಲ್ ಗಫೂರನನ್ನು ಕುಳ್ಳಿರಿಸಿ ಶರೀಅತ್ ಸಂರಕ್ಷಣೆ ಸಭೆ ಸೇರಿದರೆ ಆ ಸಭೆಯ ಅವಸ್ಥೆ ಹೇಗಿರಬಹುದು? ನೀವೊಮ್ಮೆ ಆಲೋಚಿಸಿ ನೋಡಿ.
ಈ ಎಂ ಇ ಎಸ್ಸ್ ಮುಸ್ಲಿಮರ ವಿದ್ಯಾಭ್ಯಾಸ ಪ್ರಗತಿಗೆ ಬೇಕಾಗಿ ಸ್ಥಾಪಿತವಾದರಿಂದಲೇ ಮುಸ್ಲಿಂ ಸಮೂಹ ಅದನ್ನು ಬೆಂಬಲಿಸಿದ್ದರು. ಆದರೆ ಅವರು ಎರ್ನಾಕುಳಂ ನಲ್ಲಿ ಮುಸ್ಲಿಂ ಯುವತಿಯರಿಗೆ ಸಣ್ಣ ಡ್ರೆಸ್ಸ್ ಧರಿಸಿ ಡ್ಯಾನ್ಸ್ ಮಾಡಿಸಿದರು.
ಅದನ್ನು ಅಂದಿನ ಮುಸ್ಲಿಂ ಪಂಡಿತರು ವಿರೋಧಿಸಿದರು. ಆದರೆ ಅದನ್ನವರು ಲೆಕ್ಕಿಸದೆ ಪುನಃ ಕೋಝಿಕ್ಕೋಡ್ ನಲ್ಲಿ ಯುವತಿಯರ ಡ್ಯಾನ್ಸ್ ಸಂಘಟಿಸುವ ಮೂಲಕ ಶರೀಅತ್ ವಿರುದ್ದ ಕಾರ್ಯಕ್ರಮ ನಡೆಸಿದರು.
ನಂತರ ಸಮಸ್ತ ಮುಶಾವರ ಇದರ ವಿರುದ್ದ ತೀರ್ಮಾನ ತೆಗೆದಿತ್ತು!
ಸಮಸ್ತ ಎರಡು ಬಾರಿ ವಿರುದ್ದ ತೀರ್ಮಾನ ತೆಗೆದು ಕೂಡಾ ಕ್ಯಾರ್ ಮಾಡದ ಎಂ ಇ ಎಸ್ಸ್ ನ ಪಧಾದಿಕಾರಿಗಳನ್ನು ಕುಳ್ಳಿರಿಸಿ ಶರೀಅತ್ ಚರ್ಚೆ ನಡೆಸುವುದೆಂದರೆ ಇದಕ್ಕೇನು ಅರ್ಥ?
ಮತ್ತೊಂದು ವಿಭಾಗ ಮುಜಾಹಿದ್ ಅಂದ್ರೆ ಸಳಪಿಗಳು!. ಸುನ್ನಿಗಳನ್ನು ಮುಸ್ಲಿಂಗಳು ಎಂದೇ ಅವರು ನಂಬುದಿಲ್ಲ!!
ಅವರು ನಮ್ಮನ್ನು ಮುಶ್ರಿಕ್ ಗಳೆಂದು ಸಂಭೋಧಿಸುವಾಗ ಅವರೊಂದಿಗೆ ಬೆರೆತು ಮುಸ್ಲಿಂ ಶರೀಅತ್ತನ್ನು ಸಂರಕ್ಷಿಸುದಾ ಅಥವಾ ಮುಶ್ರಿಕ್ ಶರೀಅತನ್ನು ಸಂರಕ್ಷಿಸುವುದಾ? ಮುತ್ತಲಾಕ್ ಹೇಳಿದರೆ ಒಂದೇ ತಲಾಕ್ ಎಂದು ಹೇಳುತ್ತಾ ಶರೀಅ ನಿಯಮವನ್ನು ಕಡೆಗಣಿಸುವ ಈ ಸಳಪಿ ಕಪಟರನ್ನು ಜತೆ ಸೇರಿಸಿ ಶರೀಅ ಸಂರಕ್ಷಣೆ ನಡೆಸಲು ಸುನ್ನಿಗಳಿಗೆ ಬುದ್ಧಿಮಾಂದ್ಯತೆಯೇನು ಹಿಡಿಯಲಿಲ್ಲ ತಾನೇ?
ಇಸ್ಲಾಂ ಶರೀಅ ಸಂರಕ್ಷಣೆ ಸಭೆಯ ಕಡಿವಾಣ ಹಿಡಿಯಲು ಲೀಗ್ ಎಂಬ ರಾಜಕೀಯ ಪಕ್ಷಕ್ಕೆ ಯಾವ ಅರ್ಹತೆ ಇದೆ.
ಮುಸ್ಲಿಂ ಸ್ತ್ರೀಗಳನ್ನು ಬಹಿರಂಗವಾಗಿ ವೇದಿಕೆ ಮೇಲೆ ಹತ್ತಿಸುತ್ತಾ, ಪರಪುರುಷರೊಂದಿಗೆ ಮಾಲೆ ಹಾಕಿ ಪಂಚಾಯತ್ ಚುನಾವಣೆಯ ಹೆಸರಲ್ಲಿ ರೋಡ್ ಶೋ ಮಾಡುತ್ತಾ ಶರೀಅ ನಿಯಮವನ್ನು ಗಾಳಿಗೆ ತೂರುವ ಈ ಲೀಗ್ ಪಕ್ಷಕ್ಕೆ ಶರೀಅತ್ ಕುರಿತು ನೇತೃತ್ವ ಕೊಡುವುದು ಬಿಡಿ, ಅದರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದೆಯಾ?
ಆದ್ದರಿಂದಲೇ ಶರೀಅ ಸಂರಕ್ಷಣೆ ಎಂಬ ಹೆಸರಿನಲ್ಲಿ ನಿನ್ನೆ ನಡೆದ ಸಭೆ ಸಂಪೂರ್ಣವಾಗಿ ಅಪಕ್ವತೆಯ ಸಭೆಯಾಗಿದ್ದು, ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ವಿದೇಶದಲ್ಲಿದ್ದರೂ ತನ್ನ ಯಾವುದೇ ಪ್ರತಿನಿಧಿಗಳನ್ನು ಕಳುಹಿಸದೆ ಬಹಿಷ್ಕರಿಸಿದ್ದು ಅತ್ಯಂತ ಪಕ್ವತೆಯ ನಡೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ರಾಜಕೀಯ ಪುಡಾರಿಗಳ ಕಾಲಿನಡಿಯಲ್ಲಿ ಬಿದ್ದು ನರಳಾಡುವ ಗತಿಗೇಡಿಗೆ ನಮ್ಮ ಉಲಮಾಗಳಿಗೆ ಬಂದಿಲ್ಲ.
ಆಲಿಂಗಳನ್ನು ಕುಳ್ಳಿರಿಸಿ ಅವರೆಲ್ಲಾ ಗ್ರಂಥಹೊರುವ ಕತ್ತೆಗಳು ಎಂದು ಅಪಹಾಸ್ಯ ಮಾಡಲು ಧೈರ್ಯ ತೋರಿಸುವ ಯಾವೊಬ್ಬ ಪುಡಾರಿಯೂ ಇದೀಗ ಬಾಕಿ ಉಳಿದಿಲ್ಲ. ಆ ಕಾಲ ಎಂದೋ ಕಳೆದು ಹೋಗಿದೆ ಎಂದು ಎಲ್ಲಾ ಸಾಮಾಜಿಕ ತಾಣ ಶೂರರು ತಿಳಿಯುವುದು ಒಳಿತು....
-ನಿರೂಪಕ
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Sunday, October 1, 2017
Subscribe to:
Post Comments (Atom)
No comments:
Post a Comment