Saturday, October 7, 2017

ಸ್ವರ್ಗದ ಡಬ್ಬಿಯ ಕುರಿತು ಒಂದಿಷ್ಟು..


ಬೆಳಿಗ್ಗೆಯಿಂದಲೇ ಸ್ವರ್ಗದ ಬಾಕ್ಸ್ ನ ಕುರಿತು ಚರ್ಚೆಯಾಗುತ್ತಲೇ ಇತ್ತು.ನಾನಂತೂ ಅದರ ಕುರಿತು ತಲೆಕೆಡಿಸಲೇ ಇಲ್ಲ.ಕಾರಣ ಇಂತಹ ಅದೆಷ್ಟೋ ಆರೋಪಗಳ ಮಾಲೆಪಟಾಕಿಯನ್ನೇ ವಿರೋದಿಗಳು ಸ್ಪೋಟಿಸಿದಾಗಲೂ ಅದೆಲ್ಲವೂ ಮಳೆ ನೀರಲ್ಲಿ ಒದ್ದೆಯಾದ ಪಟಾಕಿಯಂತೆ ಟುಸ್ ಎಂಬ ಶಬ್ದವೂ ಬಾರದೆ ಅಲ್ಲೇ ಹೊತ್ತಿ ಭಸ್ಮವಾಗುವುದನ್ನು ನೋಡಿ ನೋಡಿ ಸಾಕಾಗಿದೆ.

ಮಿತ್ರನೊಬ್ಬನಿಗೆ ಅದರ ವೀಡಿಯೋ ಕಳುಹಿಸಲು ಹೇಳಿದ್ದೆ.ಇದೀಗ ಅದರ ವೀಡಿಯೋ ಗ್ರೂಪೊಂದರಲ್ಲಿ ಸಿಕ್ಕಿತು.
ಉಸ್ತಾದರ ಪುತ್ರ ಏನು ಹೇಳುತ್ತಿದ್ದಾರೆಂದು ತದೇಕಚಿತ್ತದಿಂದ ಆಲಿಸಿದೆ.
ನನಗೊತ್ತು ಉಸ್ತಾದರಂತೆ ಅವರೂ ಕೂಡಾ ಅತ್ಯಂತ ಪಕ್ವತೆಯಿಂದಲೇ ಎಲ್ಲವನ್ನು ನಿಭಾಯಿಸುವವರು.ಎಡವಟ್ಟು ಮಾಡಲ್ಲ ಅಂತ ಗೊತ್ತು.

ನಾನು ಗ್ರಹಿಸಿದಂತೆ ಅವರು ನಮ್ಮ ನಾಣ್ಯ'ತುಟ್ಟು'ಗಳು ವೇಸ್ಟ್ ಆಗದಂತೆ ನೋಡಿಕೊಳ್ಳಲು ನಮ್ಮ ಮನೆಯಲ್ಲಿ ಡಬ್ಬ ವೊಂದನ್ನು ಸ್ಥಾಪಿಸಲು ಹೇಳುತ್ತಿದ್ದಾರೆ.ಅದರಲ್ಲಿ ನಿಕ್ಷೇಪಿಸಿದ ಹಣ ಮರ್ಕಝ್ ನಲ್ಲಿ ಕಲಿಯುತ್ತಿರುವ ಸಾವಿರಾರು ಯತೀಮ್ ಮಕ್ಕಳ ಸಹಿತ ಬಡ ನಿರ್ಗತಿಕರ ಬಾಳನ್ನು ಬಂಗಾರ ಮಾಡಲು ಉಪಯೋಗಿಸುತ್ತಾರೆಂಬುದು ದಿಟ ತಾನೆ?

ಯತೀಂ ಮಕ್ಕಳ ಪರಿಪಾಲನೆ ಮಾಡುವವನು ಮತ್ತ ನಾನು ನಾಳೆ ಸ್ವರ್ಗದಲ್ಲಿ ಈ ರೀತಿಯಾಗಿ ✌🏻ನಿಕಟವಾಗಿರುವೆನು ಎಂದು ಪುಣ್ಯ ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿರುವಾಗ ಅದಕ್ಕಾಗಿ ಉಪಯೋಗಿಸಲು  ಹಣ ಸಂಗ್ರಹ ಮಾಡುವ ಡಬ್ಬಿ ನಮ್ಮನ್ನು ಸ್ವರ್ಗ ಕ್ಕೆ ಹತ್ತಿರ ಮಾಡಲು ನಿಮಿತ್ತವಾಗಲಿದೆಯೆಂಬ ಅರ್ಥದಲ್ಲಿ ಸ್ವರ್ಗದ ಡಬ್ಬಿ ಎಂದು ಹೇಳಿದರೆ ಅದರ ಅರ್ಥ ಏನೆಂದು ಬುದ್ದಿ ಇರುವವರಿಗೆ  ಅರ್ಥವಾಗುತ್ತದೆ.

ಅಂದರೆ ಡಬ್ಬಿ ಯಾವತ್ತೂ ನಮ್ಮನ್ನು ಸ್ವರ್ಗಕ್ಕೆ ಕೊಂಡುಹೋಗಲ್ಲ ಎಂಬುದು ದಿಟ.ಮತ್ತೆ ಅದರಲ್ಲಿ ನಿಕ್ಷೇಪಿಸುವ ಹಣ ಯತೀಂ ಮಕ್ಕಳ ಕಲ್ಯಾಣಕ್ಕಾಗಿರುವುದರಿಂದ ಆ ಡಬ್ಬಿ ಸ್ವರ್ಗ ಪ್ರವೇಶಕ್ಕೆ ಹಲವು ನಿಮಿತ್ತಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ.

ನಾನು ಮೊನ್ನೆ (ಡಿಸೆಂಬರ್ ಹತ್ತು ತಾರೀಖು ಎಂಬುದು ನನ್ನ ಊಹೆ) ದರ್ಬೆಯಲ್ಲಿ ಮಿತ್ರ ಇಕ್ಬಾಲ್ ಬಪ್ಪಳಿಗೆಯೊಂದಿಗೆ ಮಾತನಾಡುತ್ತಿರಲು ನಮ್ಮ ಎದುರಲ್ಲೆ ತೊಪ್ಪಿ ಧರಿಸಿದ ಉಸ್ತಾದರೊಬ್ಬರ ನೇತೃತ್ವದಲ್ಲಿ ಪುತ್ತೂರಿನ ಕೆಲವೊಂದು ಉಮರಾಗಳು ಸೇರಿ ಅಂಗಡಿ ಅಂಗಡಿ ಹೋಗಿ ಅವರ ಸಂಸ್ಥೆಯ ಸ್ವರ್ಗದ ಡಬ್ಬಿಗಳನ್ನು ವಿತರಿಸುತ್ತಿದ್ದರು
ಅದನ್ನು ಅಂಗಡಿಯ ಮಾಲಕರು ಸ್ವೀಕರಿಸುತ್ತಿದ್ದರು.ಕಾರಣ ಅವರಿಗೂ ಗೊತ್ತು ಈ ಡಬ್ಬಿ ನಮ್ಮನ್ನು ಸ್ವರ್ಗಕ್ಕೆ ಹತ್ತಿರ ಮಾಡುವ ಸಬಬುಗಳಲ್ಲಿ ಒಂದಾಗಿದೆಯೆಂದು..

ಯಾರೂ ಕೂಡಾ ಅದರ ಕುರಿತು ಚಕಾರವೆತ್ತಲಿಲ್ಲ. ಬುದ್ದಿ ಇರುವ ಯಾರೂ ಅದರ ಬಗ್ಗೆ  ಚಕಾರವೆತ್ತಲ್ಲ ತಾನೇ?

ನಾವು ಡಬ್ಬಿ ಕೊಡುವಾಗ ಅದರ ಸಬಬ್ ಕೂಡಾ ಹೇಳಿ ಕೊಟ್ಟಿದ್ದೇವೆ ಅಷ್ಟೇ.
ಹಾಗೆ ನೋಡಿದರೆ ಸಳಪಿ ಮೌಲವಿ ಬಾಲುಶ್ಶೇರಿಯ ಸ್ವರ್ಗಂ ವೆಣೋ ಸ್ವರ್ಣಂ ವೇಣೋ ಎಂಬ ಡೈಲಾಗ್ ಪ್ರಸಿದ್ದ ತಾನೆ?

ಏನೇ ಇರಲಿ ವಿರೋದಿಗಳು ಇದನ್ನು ಇಷ್ಟೊಂದು ಪ್ರಚಾರ ಕೊಟ್ಟದ್ದಕ್ಕೆ ಅವರಿಗೆ ಸ್ಪಷಲ್ ಕೃತಜ್ಞತೆ ಅರ್ಪಿಸಲೇ ಬೇಕು.ಕಾರಣ ನಿನ್ನೆಯ ಇಂಟರ್ನ್ಯಾಶನಲ್ ಮೀಲಾದ್ ಸಮ್ಮೇಳನಕ್ಕೆ ಹೋಗದ ನನ್ನಂತವರಿಗೆ ಆ ಮೆಸ್ಸೇಜ್ ವಿರೋದಿಗಳ ರಂಪಾಟದಿಂದಾಗಿ ತಿಳಿಯುವಂತಾಯಿತು.

ನಾನು ಕೂಡಾ ನನ್ನ ಮನೆಯಲ್ಲಿ ನಾಳೆಯಿಂದಲೇ ಸ್ವರ್ಗದ ಒಂದು ಡಬ್ಬಿ ಸ್ಥಾಪಿಸಲು ತೀರ್ಮಾನಿಸಿಯಾಗಿದೆ.ನೀವು ಕೂಡಾ ಸ್ಥಾಪಿಸುವಿರಿ ತಾನೆ?

ವಿರೋಧಿಗಳು  ರಂಪಾಟ ಮಾಡುತ್ತಲೆ ಇರಲಿ ನಾವು ನಮ್ಮ ಉಸ್ತಾದರ ಕೈ ಬಲಪಡಿಸೋಣ ಕಾರಣ ಮರ್ಕಝ್ ನ ಒಂದು ದಿನದ ಖರ್ಚು ಒಂದುವರೆ ಲಕ್ಷ!
ಸ್ವಂತ ಮಕ್ಕಳನ್ನೇ ಚೆನ್ನಾಗಿ ಸಾಕಿಸಲಹಲು ಹರಸಾಹಸ ಪಡುವ ಈ ಅಲ್'ಕೌಂಗೆ ಇದೆಲ್ಲಾ ಅರ್ಥವಾಗಲ್ಲ.

ನೀವು ಕೂಡಾ ಸ್ವರ್ಗದ ಡಬ್ಬಿ ಸ್ಥಾಪಿಸುವಿರಿ ತಾನೇ?
- ಅಬೂಶಝ

No comments:

Post a Comment