Saturday, October 7, 2017

*ಬೀವಿ ಆತಿಕಾ (ರ)*

ಭಾಗ--3

📝ಮುನೀರ್ ಸಖಾಫಿ, ಸಾಲೆತ್ತೂರು.

_("ಸ್ತ್ರೀಯರನ್ನು ಮಸೀದಿಯಿಂದ ತಡೆಯದಿರಿ" ಎಂಬ ಹದೀಸಿನ ತಾತ್ಪರ್ಯ ಮುಂದಿನ ಭಾಗದಲ್ಲಿ ವಿವರಿಸಲಾಗುವುದು.ಇಂಶಾ ಅಲ್ಲಾಹ್.)_

*ಭಾಗ 0⃣2⃣ ರಲ್ಲಿ ಹೇಳಿದ ಪ್ರಶ್ನೆಗೆ ಉತ್ತರ*

ಒಂದನೇಯ ಪ್ರಶ್ನೆಯ ಉತ್ತರ

ಉಮರ್(ರ) ಪ್ರಸ್ತುತ ನಿಬಂಧನೆ ಅಂಗೀಕರಿಸಲು 2 ಕಾರಣಗಳಿವೆ.
1. *"ಅಲ್ಲಾಹನ ದಾಸಿಯರಾದ ಸ್ತ್ರೀಗಳನ್ನು ಮಸೀದಿಗಳಿಂದ ನೀವು  ತಡೆಯದಿರಿ"*ಎಂಬ ಪ್ರವಾದಿ ವಚನಕ್ಕೆ  ಬಾಹ್ಯ ನೋಟದಲ್ಲಿ ವಿರುದ್ಧವಾಗಬಹುದೇ ಎಂಬ ಭಯದಿಂದ.
ಕಾರಣ, *"ನೀವು ತಡೆಯದಿರಿ"* ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುವಾಗ *"ನಾನು ತಡೆಯುವೆ"* ಎಂದು ಉಮರ್ (ರ) ಹೇಳುವುದು ಪ್ರವಾದಿ ವಚನದ ಗೌರವಕ್ಕೆ ವಿರುದ್ಧವಾಗಿದೆ.

ಅದಕ್ಕೊಂದು ಉದಾಹರಣೆ ನೋಡಿ,
ಇಮಾಮ್ ಮುಸ್ಲಿಂ  (ರ)ಅಬ್ದುಲ್ಲಾಹಿ ಬಿನ್ ಉಮರ್(ರ) ರವರ ಮಗನಾದ ಸಾಲಿಂ  (ರ)ರಿಂದ ವರದಿ ಮಾಡುವ ಒಂದು ಹದೀಸಿನಲ್ಲಿ ಹೀಗಿದೆ;
أن عبد الله بن عمر قال سمعت رسول الله صلى الله عليه وسلم يقول لا تمنعوا نساءكم المساجد إذا استأذنكم إليها قال فقال بلال بن عبد الله والله لنمنعهن قال فأقبل عليه عبد الله فسبه سبا سيئا ما سمعته سبه مثله قط وقال أخبرك عن رسول الله صلى الله عليه وسلم وتقول والله لنمنعهن(مسلم 667)

ಅಬ್ದುಲ್ಲಾಹಿ ಬಿನ್ ಉಮರ್(ರ) ಒಮ್ಮೆ ಹೇಳಿದರು:
*ರಾತ್ರಿ ವೇಳೆ ಸ್ತ್ರೀಯರಿಗೆ ಮಸೀದಿಗೆ ಹೋಗುವುದಕ್ಕೆ ನೀವು ಅನುಮತಿ ನೀಡಿರಿ*  ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ. *ಆಗ ಅವರ* (ಅಬ್ದುಲ್ಲ(ರ)ರವರ) *ಒಬ್ಬ ಪುತ್ರರು ಹೇಳಿದರು;* *ಅಲ್ಲಾಹನಾಣೆ ! ನಾವು ಸ್ತ್ರೀಯರಿಗೆ ಅನುಮತಿ ನೀಡಲಾರೆವು.*
ಸಾಲಿಂ (ರ)ಹೇಳುತ್ತಾರೆ ; *ಆಗ ಅಬ್ದುಲ್ಲ(ರ) ರವರು ಆ ಮಗನನ್ನು ಗಧರಿಸಿದರು.*
"ಅನುಮತಿ ನೀಡಬೇಕೆಂದು" ಅಲ್ಲಾಹನ ಪ್ರವಾದಿವರ್ಯರು  ಹೇಳಿದ್ದಾರೆಂದು ನಾನು ಹೇಳುವಾಗ ಅನುಮತಿ ನೀಡಲಾರೆ ಎಂದು ನೀನು ಹೇಳುತ್ತೀಯಾ ? ಎಂದು ಅವರು ಮಗನೊಂದಿಗೆ ಕೇಳಿದರು"
(ಮುಸ್ಲಿಂ 668).


*ಸ್ತ್ರೀಯರಿಗೆ ಅನುಮತಿ ನೀಡಬೇಕೆಂಬ* ಹದೀಸ್ ತಂದೆ ಹೇಳಿ ಕೊಡುವಾಗ  ಹದೀಸ್ ವಚನದ ಗೌರವಕ್ಕೆ ಕುಂದು ಬರುವಂತೆ *ನಾವು ಒಮ್ಮೆಯೂ ಅನುಮತಿ ನೀಡಲಾರೆವು*  ಎಂದು ಹೇಳಿದಕ್ಕಾಗಿ ಮಾತ್ರ  ಇಬ್ನ್ ಉಮರ್ (ರ) ಮಗನನ್ನು ಗಧರಿಸಿದರು.

ಇಮಾಮ್ ಇಬ್ನ್ ಹಜರ್ (ರ)ರವರ ಮಾತು ನೋಡಿ;
 وكأن السر في ذلك أن بلالا عارض الخبر برأيه ولم يذكر علة المخالفة
(فتح الباري2/237)

*ಬಿಲಾಲ್ (ರ)*(ಪ್ರಸ್ತುತ ಮಾತು ಹೇಳಿದ ಇಬ್ನ್ ಉಮರ್ (ರ)ರವರ ಪುತ್ರನ ಹೆಸರು: ಲೇ)
*ತಡೆಯಲಿಕ್ಕಿರುವ ಕಾರಣ ವಿವರಿಸದೆ  ಹದೀಸನ್ನು ಕಡೆಗಣಿಸಿದರು   ಎಂಬ ಏಕ ಕಾರಣಕ್ಕೆ  ಗಧರಿಸಿದರು*
(ಫತ್ ಹುಲ್ ಬಾರಿ2/237)

ಇಬ್ನ್ ಉಮರ್ (ರ) ರವರು ಮಗನನ್ನು ಗಧರಿಸಿದ ಆ ಪ್ರಯೋಗದಿಂದಲೇ ಇದು ಬಹಳ ಸ್ಪಷ್ಟವಾಗಿದೆ.

ಇಬ್ನ್ ಹಜರ್ (ರ)ನಂತರ ಬರೆಯುತ್ತಾರೆ
وإنما أنكر عليه ابن عمر لتصريحه بمخالفة الحديث وإلا فلو قال مثلا إن الزمان قد تغير وإن بعضهن ربما ظهر منه قصد المسجد وإضمار غيره لكان يظهر أن لا ينكر عليه(فتح الباري)

 ಹದೀಸಿನ ಬಾಹ್ಯ ನೋಟಕ್ಕೆ  ವಿರುದ್ಧವಾಗಿ ತೋರುವಂತೆ ಮಾತಾಡಿದ್ದಕ್ಕೆ ಮಾತ್ರ ಇಬ್ನ್ ಉಮರ್ (ರ)ಮಗನನ್ನು ಗಧರಿಸಿದ್ದಾರೆ. ಹೊರತು ಕಾಲ ಬದಲಾಗಿಯೆಂದೂ ತಪ್ಪು ಕಲ್ಪನೆಗಳನ್ನು ಮನದಲ್ಲಿಟ್ಟು ಇಂದು ಸ್ತ್ರೀಯರು ಮಸೀದಿಗೆ ಹಾಜಾರಾಗುವರು ಎಂಬ  ಕಾರಣವನ್ನು  ವಿವರಿಸಿ ಹೇಳಿರುತ್ತಿದ್ದರೆ ಯಾವ ಕಾರಣಕ್ಕೂ ಇಬ್ನ್ ಉಮರ್ (ರ) ಮಗನನ್ನು ಗಧರಿಸುತ್ತಿರಲಿಲ್ಲ ಎಂಬುವುದು ಬಹಳ ಸ್ಪಷ್ಟ.
(ಫತ್ ಹುಲ್ ಬಾರಿ 2/237)

ಸ್ತ್ರೀಯರು ಮಸೀದಿಗೆ ಹಾಜರಾಗಬೇಕೆಂದಿಲ್ಲ ಎಂಬ ವಿಷಯದಲ್ಲಿ ಇಬ್ನ್ ಉಮರ್ (ರ)ಮತ್ತು ಬಿಲಾಲ್(ರ)ಒಮ್ಮತಾಭಿಪ್ರಾಯದವರಾಗಿದರೆಂದು ಇದರಿಂದ ಬಹಳ ಸ್ಪಷ್ಟ.
ಆತಿಕ ಬೀವಿಯ ಮಸೀದಿ ಪ್ರವೇಶದ ಈ  ಹದೀಸನ್ನು ಮತ್ತು ಸ್ತ್ರೀಯರಿಗೆ ಅವರವರ ಮನೆಯೇ ನಮಾಝಿಗೆ ಉತ್ತಮವೆಂಬ ಹದೀಸನ್ನೂ ವರದಿ ಮಾಡಿದ್ದು ಇಬ್ನ್ ಉಮರ್(ರ)ರವರೇ ಆಗಿದ್ದಾರೆಂಬುದನ್ನು ಮರೆಯಬಾರದು.

 ಬುಖಾರಿಯ ವ್ಯಾಖ್ಯಾನ ಗ್ರಂಥವಾದ ಲಾಮಿಉದ್ದರಾರಿಯಲ್ಲಿ ಈ ರೀತಿ ಕಾಣಬಹುದು.
والأوجه هو التحاشي عن صورة المعارضت بقول سيد ولد آدم، والإشتراط أيض يكون لأجل ذلك (لامع الدراري: ١٣/٢
ಆದಂ ಸಂತತಿಗಳ ನಾಯಕರ ಮಾತಿಗೆ ವಿರುದ್ಧವಾಗುವುದನ್ನು ತಪ್ಪಿಸಲಿಕ್ಕಾಗಿ ಉಮರ್ (ರ) ಪತ್ನಿಯನ್ನು ತಡೆಯಲಿಲ್ಲ ಎಂಬುವುದಾಗಿದೆ ಅದರ ನ್ಯಾಯ. ಪ್ರಸ್ತುತ ನಿಬಂಧನೆ ಅಂಗೀಕರಿಸಲು ಇದುವೇ ಕಾರಣ.(ಲಾಮಿಉದ್ದರಾರಿ2/13)

ಒಟ್ಟಿನಲ್ಲಿ ವಿವಾಹದ ಸಂದರ್ಭಉಮರ್(ರ) ಪ್ರಸ್ತುತ ನಿಬಂಧನೆ ಅಂಗೀಕರಿಸಲು ಕಾರಣ  ಪ್ರವಾದಿ ವಚನದ ಮೇಲಿನ ಅತಿಯಾದ ಗೌರವದಿಂದ ಮಾತ್ರವಾಗಿತ್ತು. ಹೊರತು ಸ್ತ್ರೀಯರು ಮಸೀದಿ ಹೋಗುವ ವಿಷಯದಲ್ಲಿ ಉಮರ್ (ರ)ರಿಗೆ ಇಷ್ಟವಿರಲಿಲ್ಲ ಎಂಬುವುದು ಈ ವಿವರಣೆಯಿಂದ ತಿಳಿಯಿತು.

*ಇನ್ನೊಂದು ಉತ್ತರ ಮುಂದಿನ ಭಾಗದಲ್ಲಿ*




ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ.

No comments:

Post a Comment