Thursday, October 5, 2017

ಉರೂಸ್ ಆಚರಣೆ ಇಸ್ಲಾಮಿನಲ್ಲಿ.

ಭಾಗ -9

📝 ಟಿ.ಎಂ ಮುಹ್ಯಿದ್ದೀನ್ ಖಾಮಿಲ್ ಸಖಾಫಿ , ತೋಕೆ.

ಒಟ್ಟಿನಲ್ಲಿ ಮೌಖೂಫ್ ಅಥವಾ ಮುಸಬ್ಬಲತ್ ಆದ ಭೂಮಿಯಲ್ಲಿ ಸಾಮಾನ್ಯ ವ್ಯಕ್ತಿಯ ಖಬರನ್ನು ಎತ್ತರಿಸಿ ಕಟ್ಟುವುದು ನಿಷಿದ್ಧವೆಂದಾಗಿದೆ ಇಮಾಮರುಗಳು ಹೇಳಿದ್ದು.ಅದಕ್ಕೆ ಅವರು ನೀಡಿದ ಕಾರಣ ಅದು ಖಬರ್ ಆರಾಧನೆ ಎಂದಲ್ಲ.ಹೊರತು ಅದರಿಂದ ಇತರರನ್ನು ಆ ಖಬರಿನಲ್ಲಿ ದಫನ ಮಾಡುವುದಕ್ಕೆ ಅಡ್ಡಿಯುಂಟಾಗುತ್ತದೆ ಎಂದಾಗಿದೆ.ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ  ದಫನ್ ಗಾಗಿ ವಖಫ್ ಮಾಡಲ್ಪಟ್ಟ  ಅಥವಾ ಮುಸಬ್ಬಲ್ ಆದ ಭೂಮಿಯಲ್ಲಿ ಸಾಮನ್ಯರ ಖಬರನ್ನು ಎತ್ತರಿಸಿ ಕಟ್ಟುವುದು ಮಾತ್ರವಲ್ಲ ನಿಷಿದ್ಧವಾಗುವುದು, ಹೊರತು ಅಲ್ಲಿ ಮದ್ರಸಾ , ಅಂಗಡಿ ಹಾಗೂ ಇನ್ನಿತರ ಕಟ್ಟಡಗಳನ್ನೂ ಕೂಡಾ ನಿರ್ಮಿಸುವುದು ನಿಷಿದ್ಧವಾಗಿದೆ.
ಇಲ್ಲೂ ಕೂಡಾ ಸಲಪಿಗಳೊಂದಿಗೆ ಒಂದೆರಡು ಪ್ರಶ್ನೆಗಳು.
1.
ಮೌಖೂಫ್ ಅಥವಾ ಮುಸಬ್ಬಲತ್ ಆದ ಭೂಮಿಯಲ್ಲಿ ಖಬರ್ ಕಟ್ಟುವುದು ಖಬರ್ ಆರಾಧನೆ ಎಂದು ಯಾವುದೇ ಪೂರ್ವೀಕ ವಿಧ್ವಾಂಸರು ಹೇಳಿದ್ದಾರೆಯೇ?

2.
ಅದು ಶಿರ್ಕೆಂದು ತಿಳಿಸುವ ಯಾವುದಾದರೊಂದು ಸೂಕ್ತ ಅಥವಾ ಹದೀಸ್ ತೋರಿಸಿ ಕೊಡಬಹುದೇ?

ಇದುವರೆಗೆ ಸಾಮಾನ್ಯ ವ್ಯಕ್ತಿಯ ಖಬರನ್ನು ಆತನ ಸ್ವಂತ ಭೂಮಿಯಲ್ಲೂ , ಮೌಖೂಫ್ ಆದ ಅಥವಾ ಸಾರ್ವಜನಿಕ ಭೂಮಿಯಲ್ಲೂ  ಕಟ್ಟುವುದರ ಕುರಿತು ತಿಳಿದು ಕೊಂಡಾಯಿತು.
ಇನ್ನು ನಾಲ್ಕನೆಯದಾಗಿ ತಿಳಿಸಿದ ಮಹಾಪುರುಷರ ಖಬರ್ ಗಳ ಕುರಿತು ಪರಿಶೀಲಿಸೋಣ.
ಸಾಮಾನ್ಯ ವ್ಯಕ್ತಿಯ ಖಬರನ್ನು ಸಾರ್ವಜನಿಕ ದಫನ್ ಭೂಮಿಯಲ್ಲಿ ಕಟ್ಟುವುದು ನಿಷಿದ್ಧವೆಂದು ಹೇಳಿದ ವಿಧ್ವಾಂಸರು ಮಹಾ ಪುರುಷರ ಖಬರನ್ನು ಎತ್ತರಿಸಿ ಕಟ್ಟಬಹುದೆಂದು ತಮ್ಮ ಗ್ರಂಥಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಮಾಮ್ ಶರ್ಖಾವೀ ರಳಿಯಲ್ಲಾಹು ಅನ್ಹು ಹೇಳುವುದನ್ನು ನೋಡಿ.
" ಸಾರ್ವಜನಿಕ ದಫನ್ ಭೂಮಿಯಲ್ಲಿ ಕಟ್ಟುವಿಕೆ ಹರಾಮ್ ಎಂಬ ನಿಯಮದಿಂದ ಅಂಬಿಯಾಗಳು , ಅವ್ ಲಿಯಾಗಳು  ಮುಂತಾದ ಸಜ್ಜನರ ಖಬ್ ರ್ ಗಳನ್ನು ಹೊರತು ಪಡಿಸಲಾಗಿದೆ.
ಅದ್ದರಿಂದ ಝಿಯಾರತ್ ಜೀವಂತ ಗೊಳಿಸಲಿಕ್ಕೂ ಬರ್ಕತ್ ಗಾಗಿಯೂ ಅವರ ಖಬರ್ ಗಳನ್ನು ಎತ್ತರಿಸಿ ಕಟ್ಟಬಹುದಾಗಿದೆ.
( ಶರ್ಖಾವೀ 345 / 1)

ಇಮಾಮ್ ಬುಜೈರಿಮಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಸಜ್ಜನರ ಸಮಾಧಿಗಳನ್ನು ಕಟ್ಟುವುದು ಅನುವದನೀಯವಾಗಿದೆ.ಅದು ಖುಬ್ಬ ನಿರ್ಮಿಸಿಯಾದರೂ ತೊಂದರೆಯಿಲ್ಲ.ಅದಕ್ಕಿರುವ ಕಾರಣ ಝಿಯಾರತನ್ನು ಜೀವಂತಗೊಳಿಸುವುದು ಮತ್ತು ಬರ್ಕತ್ ಸಂಪಾದಿಸುವುದೂ ಆಗಿದೆ.
( ಇಖ್ ನಾಅ್ 263 / 2)

ಇಮಾಮ್ ಬುಜೈರಿಮಿಯವರೇ ಹೇಳುತ್ತಾರೆ,
" ಮೌಖೂಫ್ ಆದ ದಫನ್ ಭೂಮಿಯಲ್ಲಿ ಕಟ್ಟುವಿಕೆ ನಿಷಿದ್ಧವೆಂದು ಹೇಳಿದ್ದು ಸಜ್ಜನರ ಖಬ್ ರಗಳ ಕುರಿತಲ್ಲ.
( ಬುಜೈರಿಮಿ 496 / 1)
ಇದೇ ವಿಷಯವನ್ನು ಹಾಶಿಯತುಲ್ ಬರ್ಮಾವೀ , ಪುಟ 116 ರಲ್ಲೂ , ಬಾಜೂರಿ 267 / ರಲ್ಲೂ, ಫತ್ ಹುಲ ಅಲ್ಲಾಂ 288/ 3 , ಮಶಾರಿಖುಲ್ ಅನ್ವಾರ್ 32 ರಲ್ಲೂ ಕಾಣಬಹುದು.

ಇಮಾಮ್ ತೌರಬಶ್ತಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ, " ಅವ್ ಲಿಯಾಗಳ ಹಾಗೂ ಪ್ರಸಿದ್ಧರಾದ ಖಬರಿನ ಮೇಲೆ ಕಟ್ಟಡ ನಿರ್ಮಿಸುವುದನ್ನು ಸಲಫ್ ಅಥವಾ ಸ್ವಹಾಬಿಗಳು ಅನುಮತಿಸಿದ್ದರು.ಅದು ಜನರು ಅವರನ್ನು ಸಂದರ್ಶಿಸಲಿಕ್ಕೂ ಹಾಗೂ ಅವರ ಬಳಿ ಮನಶ್ಶಾಂತಿ ಪಡೆಯಲಿಕ್ಕೂ ಆಗಿದೆ.( ಮಿರ್ಖಾತ್ 372/ 2)
 ಅದೇ ರೀತಿ ಫತ್ ಹುಲ್ ಅಲ್ಲಾಂ 228 / 1 ,
ಹಾಶಿಯತುಲ್ ಬಾಜೂರಿ 267 /1 , ಹಾಶಿಯತುಲ್ ಬರ್ಮಾವೀ 116 , ಹಾಶಿಯತುಲ್ ಖಲ್ ಯೂಬಿ
 350 / 1 ಮುಂತಾದ ಗ್ರಂಥಗಳಲ್ಲಿ ಕಾಣಬಹುದು.

ಸಲಫ್ ಅಂದರೆ ಸ್ವಹಾಬಿಗಳು ಎಂದರ್ಥವಾಗಿದೆ.
ಆಗ ಬಹು ! ಇಮಾಂ ತೌರಬಶ್ತಿ ಯವರ ಮಾತಿನ ಪ್ರಕಾರ ಸಜ್ಜನರ ಖಬ್ ರ್ ಗಳ ಮೇಲೆ ಕಟ್ಟಡ ನಿರ್ಮಿಸುವುದು ಸ್ವಹಾಬಿಗಳೇ ಅನುಮತಿಸಿದ್ದರು ಎಂದು ತಿಳಿದು ಬರುತ್ತದೆ.

ಮುಂದುವರಿಯುವುದು...

No comments:

Post a Comment