ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Sunday, October 1, 2017
ಇಬ್ರಾಹಿಮ್ ಮಖಾಂ ಕುರಿತು ಒಂದಿಷ್ಟು..
————————————
ವಿಶುದ್ಧ ಕಾಬಾವನ್ನು ಪುನರ್'ನಿರ್ಮಿಸುವಾಗ ಇಬ್ರಾಹಿಮ್ (ಅ) ಒಂದು ಶಿಲೆಯಲ್ಲಿ ಹತ್ತಿ ನಿಂತಾಗ ಆ ಶಿಲೆಯಲ್ಲಿ ಇಬ್ರಾಹಿಮ್ ನೆಬಿಯವರ ಎರಡು ಪಾದಗಳ ನಿಶಾನೆ ಅಚ್ಚೊತ್ತಿ ನಿಂತವು!
ಆ ಶಿಲೆಯಾಗಿದೆ 'ಇಬ್ರಾಹಿಮ್ ಮಖಾಂ' ಎಂಬುದರ ತಾತ್ಪರ್ಯ ಎಂದು ಮುಫಸ್ಸಿರುಗಳು ವಿವರಿಸುತ್ತಾರೆ.
ಅಲ್ಲಾಮಾ ಇಬ್ನ್'ಸ್ಸಹೂದು (ರ) ಬರೆಯುತ್ತಾರೆ..
اي اثر قدميه عليه السلام في الصخرة التي كان عليه السلام يقوم عليها وقت رفع الحجارة لبناء الكعبة عند ارتفاعه...
ಮತ್ತೊಂದು ವರದಿಯಲ್ಲಿ ಹೀಗೆ ಇದೆ.👇🏻
او عند غسل رأسه علي ما روي انه عليه السلام جاء زائرا من الشام الي مكة فقالت له امرأة إسماعيل عليه السلام انزل حتي اغسل رأسك فلم ينزل فجاءته بهذ الحجر فوضعته علي شقه الأيمن فوضع قدميه عليه حتي غسلت شق رأسه ........اخ
ابو السعود ١/٢٢٤
ಹಝ್ರತ್ ಇಬ್ರಾಹಿಮ್ (ಅ) ಶಾಮ್'ನಿಂದ ಮಕ್ಕತುಲ್ ಮುಕರ್ರಮ ಸಂದರ್ಶಿಸಲು ಬಂದಾಗ, ಇಸ್ಮಾಈಲ್ (ಅ) ರವರ ಪತ್ನಿ ಹೇಳಿದರು.
"ಓ ಪ್ರವಾದಿಯವರೇ ತಾವು ವಾಹನದಿಂದ ಕೆಳಗಿಳಿದು ಬನ್ನಿ ತಮ್ನ ತಲೆಯನ್ನು ನಾನು ತೊಳೆಯುತ್ತೇನೆ."
ಆದರೆ ಇಬ್ರಾಹಿಮ್ ನೆಬಿಯವರು ಕೆಳಗೆ ಇಳಿಯದೆ ಬಂದಾಗ ಬೀವಿಯವರು ಒಂದು ಶಿಲೆಯನ್ನು ನೆಬಿಯವ ಬಲಭಾಗದಲ್ಲಿ ತಂದಿತ್ತರು ಅದರ ಮೇಲೆ ನೆಬಿಯವರು ಕಾಲೂರಿ ನಿಂತಾಗ ಬೀವಿಯವರು ಹಝ್ರತ್ ಇಬ್ರಾಹಿಮ್ ನೆಬಿಯವರ ತಲೆಯ ಬಲಭಾಗ ತೊಳೆದು ಕೊಟ್ಟರು.
ನಂತರ ಶಿಲೆಯನ್ನು ಎಡಭಾಗದಲ್ಲಿ ತಂದಿತ್ತು ಅದರ ಮೇಲೆ ನೆಬಿಯವರು ಕಾಲೂರಿ ನಿಂತಾಗ ತಲೆಯ ಎಡಭಾಗವನ್ನು ಬೀವಿಯವರು ತೊಳೆದು ಕೊಟ್ಟರು.
ಹಝ್ರತ್ ಇಬ್ರಾಹಿಮ್ ನೆಬಿಯವರು ಪಾದವೂರಿದ ಆ ಶಿಲೆಯಲ್ಲಿ ಪವಿತ್ರ ಪಾದದ ನಿಶಾನೆ ಅಚ್ಚೊತ್ತಿ ನಿಂತಿತ್ತು!
(ಅಬೂಸಹೀದ್ 1/466)
ಹೌದು ಪ್ರವಾದಿ ಇಬ್ರಾಹಿಮ್ (ಅ) ರವರ ಪಾದಸ್ಪರ್ಶಗೊಂಡ ಕಲ್ಲನ್ನು ಗೌರವಿಸಿ ಕುರಾನ್ ಈ ರೀತಿ ಹೇಳಿದೆ👇🏻👇🏻
واذ جعلنا البيت مثابة للناس وامنا واتخذوا من مقام ابراهيم مصلي.
البفرة ١٢٥
ನಾವು ಆ ಭವನ (ಕಾಬಾ) ವನ್ನು ಜನರಿಗಾಗಿ, ಪರಸ್ಪರ ಒಟ್ಟು ಸೇರುವ ಹಾಗೂ ಸುರಕ್ಷಿತ ಸ್ಥಳವಾಗಿ ಮಾಡಿದೆವು.
ಇಬ್ರಾಹಿಮ್ (ಅ) ನಿಂತ ಸ್ಥಾನವನ್ನು
(ಪಾದಸ್ಪರ್ಶಗೊಂಡ ಶಿಲೆ) ಯನ್ನು ನೀವು ನಮಾಜು ಮಾಡುವ ಸ್ಥಳವನ್ನಾಗಿ ಬಳಸಿರಿ
(ಎಂದು ನಾವು ಆದೇಶಿಸಿದ್ದೆವು.)
ಸೂರತ್ ಆಲಿ ಇಮ್ರಾನ್ ನ 97ನೇ ಆಯತ್ ನಲ್ಲಿ ಅಲ್ಲಾಹು ಹೇಳುತ್ತಾನೆ.
"ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. ಇಬ್ರಾಹಿಮ್ ಮಖಾಂ ಇದೆ. ಅಲ್ಲಿ ಪ್ರವೇಶಿಸಿದವನು ಸುರಕ್ಷಿತನಾದನು!
ಹೌದು ಪ್ರವಾದಿಗಳ ಪಾದಸ್ಪರ್ಶಗೊಂಡ ಒಂದು ಶಿಲೆಗೆ ಇಷ್ಟು ಗೌರವ ಇರುವುದಾದರೆ ಅವರ ಪವಿತ್ರ ಶರೀರವನ್ನು ದಫನ್ ಮಾಡಿದ ದರ್ಗಾಕ್ಕೆ ಎಷ್ಟು ಮಹತ್ವ ಇರಬಹುದು.
(ಚಿಂತಿಸುವವರಿಗಾಗಿ ಮಾತ್ರ!)
✒ ಅಬೂಶಝ
Labels:
ಅಬೂ ಶಝ ಲೇಖನಗಳು
Subscribe to:
Post Comments (Atom)
No comments:
Post a Comment