Saturday, October 7, 2017

*#ಅಪಪ್ರಚಾರ #ಮತ್ತು #ಒಣ #ಪ್ರತಿಷ್ಠೆಯ #ಯುಗ*


-----------------------

ಅದೇನೇ ಇದ್ದರೂ ತಾನು ಮೆಚ್ಚದ/ನೆಚ್ಚದ ಸಂಘಟನೆಯ ಆದರ್ಶ ಆಶಯಗಳಿಗೆ ನಿಲುಕದ ಸಂಗತಿಗಳು ಘಟಿಸಿದಾಗ ಅದರ ಬಗ್ಗೆ ಕ್ಲಾರಿಫಿಕೇಶನ್ ಕೇಳುವ ಬದಲು ಸಿಕ್ಕಿದ ಛಾನ್ಸನ್ನು ಆಯುಧವನ್ನಾಗಿ ಮಾಡಿ ಮುಗಿಬೀಳುವ ಕೆಟ್ಟ ಸಂಪ್ರದಾಯ ಬಹಳವಾಗಿ ಸಮುದಾಯವನ್ನು ಕಾಡುತ್ತಿದೆ.

ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವ ಜಾಯಮಾನ ಇಡೀ ಸಮುದಾಯದ ಅಡಿಗಲ್ಲನ್ನೇ ಕಿತ್ತೆಸೆಯವ ರೀತಿಯಲ್ಲಿ ತಾಂಡವಾಡುತ್ತಿದೆ.

ಪ್ರತಿಯೊಂದು ಸಂಘಟನೆಗಳಿಗೂ ಅದರದ್ದೇ ಆದ ಕೆಲವೊಂದು ತೀರ್ಮಾನಗಳಿರುತ್ತವೆ.ಅಜೆಂಡಾ ಇರುತ್ತದೆ.
ಸಮುದಾಯ ಹೆಸರಲ್ಲಿ ಕಾರ್ಯಚರಿಸುವ ಪ್ರತಿಯೊಂದು ಸಂಘಟನೆಗಳ ದ್ಯೋಯೋಧ್ದೇಶ ಸಮುದಾಯ ಸಬಲೀಕರಣವಾಗಿದೆ.
ಆದರೆ ಇಲ್ಲಿ ಏನು ಸಂಭವಿಸುತ್ತದೆಯೆಂದರೆ ಸಮುದಾಯ ಪರ ಸಂಘಟನೆ ಹುಟ್ಟು ಹಾಕಿದಾಗ ಸಹಜವಾಗಿಯೇ ಯುವಕರು ಅದರತ್ತ ಆಕರ್ಷಿತರಾಗುತ್ತಾರೆ.
ಪರಿಣಾಮ ಸಂಘಟನೆ ಬಲಿಷ್ಠವಾಗುತ್ತಾ ಹೋದಂತೆ ಅದರಲ್ಲಿರುವ ಯುವಕರಿಗೆ ಸಮುದಾಯ ಪರ ಕಾಳಜಿಗಿಂತ ಸಂಘಟನೆಯ ಪ್ರತಿಷ್ಠೆಯೇ ಮುಖ್ಯ ವಿಷಯವಾಗಿರುತ್ತದೆ.
ಎಷ್ಟರವರೆಗೆಂದರೆ ಸ್ವಂತ ಸಮುದಾಯದ ಮತ್ತೊಂದು ಸಂಘಟನೆಯ ಕೆಳಮಟ್ಟದ ನಾಯಕರ/ಕಾರ್ಯಕರ್ತರಿಂದ ಅಚಾತುರ್ಯವಾಗಿ ಘಟಿಸುವ ಘಟನೆಗಳಿಗೂ ಉಪ್ಪು ಖಾರ ಸೇರಿಸಿ ಅವರನ್ನು ಸಮುದಾಯ ದ್ರೋಹಿಗಳಂತೆ ಚಿತ್ರೀಕರಿಸಲು ಬೇಕಾದ ಸಕಲ ಆಯುಧಗಳನ್ನು ಅವನು‌ ಕೂಡಿಹಾಕುತ್ತಾನೆ!
ತನ್ನ ಬಳಿ ಇಲ್ಲದ ಆಯುಧಗಳಗಳನ್ನು ಶೇಖರಿಸಲಿಕ್ಕೆ ಬೇಕಾಗಿ ಇನ್ನಿಲ್ಲದ 'ಜಿಹಾದ್' ಗೆ ದುಮುಕಿರುತ್ತಾನೆ!

ಆವಾಗ ಅವನ ಸಮುದಾಯ ಪ್ರೀತಿ ಅವನಿಂದ ಅದೆಷ್ಟೋ ದೂರ ಸರಿದಿರುತ್ತದೆ.

ಇದೀಗ ಅವನ ಮನಸ್ಸಿನಲ್ಲಿ ಒಂದೇ ಚಿಂತೆ.
ಸಿಕ್ಕಿದ ಛಾನ್ಸನ್ನು ಬಿಡಬಾರದು, ಅವನು ಸಮುದಾಯದ ಕೊಂಡಿಯೇ ಆಗಿದ್ದರೂ ನನ್ನ ವಿರುದ್ದ ಸಂಘಟನೆಯವನು!
ತನ್ನ ಸಂಘಟನೆಯವನಲ್ಲದವನಿಂದ ತಪ್ಪು ಸಂಭವಿಸಿದರೆ ಆವಾಗ ಇವನ ಸಮುದಾಯ ಪ್ರೀತಿ ಮಂಗಮಾಯವಾಗಿರುತ್ತದೆ.
ತಾನು ಸಮುದಾಯ ಸಂಘಟನೆಯ ಪ್ರಾಥಮಿಕ ಸದಸ್ಯತನ ಪಡೆಯುವಾಗ ಇದ್ದ ದ್ಯೇಯೋದ್ದೇಶ ಎಂದೋ ಮೆರೆತು ಬಿಟ್ಟಿರುತ್ತಾನೆ.
ಇದೀಗ ಸಂಘಟನೆಯ ಅಂಧ ಭಕ್ತುನಾಗಿದ್ದಾನೆ!!

ಇತರರನ್ನು ' ಭಕ್ತ' ಅಂತ ಹೀಯಾಳಿಸುವಾಗಲೂ ತಾನೊಬ್ಬ ಅಂಧ ಭಕ್ತನೆಂಬ ಪರಮ ಸತ್ಯ ತಿಳಿಯದಷ್ಟು ಮೂಢನಾಗಿರುತ್ತಾನೆ.

ಸಮುದಾಯದ ಇತರ ಸಂಘಟನೆ ಗಳಿಗೆ MRM ಮಸಿ ಬಳಿಯುವುದಕ್ಕೂ ಕೂಡಾ ಸಮುದಾಯ ಸಬಲೀಕರಣ ಎಂಬ ಸುಂದರ ನಾಮ ಹಾಕಿರುತ್ತಾನೆ!

ಎಂತಹ ವಿಪರ್ಯಾಸ ನೋಡಿ ಸಮುದಾಯ ಸಬಲೀಕರಣಕ್ಕೆ ಸಂಘಟನೆ ಕಟ್ಟಿದವನು ಇದೀಗ ಸಮುದಾಯದ ಒಳಗಿರುವವರನ್ನೇ MRM ಪಟ್ಟ ಹಾಕಿ ಹೊರಹಾಕುವ ತುರಾತುರಿಯಲ್ಲಿದ್ದಾನೆ!

ಅದಕ್ಕಾಗಿ ಕೃತಕ ವಾಯ್ಸ್ ಮೆಸ್ಸೇಜ್ ಗಳನ್ನು ಕ್ರಿಯೇಟ್ ಮಾಡಿ ವಿರುದ್ದ ಸಂಘಟನೆಯ ವಕ್ತಾರನಂತೆ ಫೋಸು ಕೊಡುತ್ತಾನೆ!
ಅದನ್ನು ಭಕ್ತ ಜನಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ರವಾನಿಸಿ ಆತ್ಮಸಂತೃಪ್ತಿ ಪಡೆಯುತ್ತಿರುವಾಗಲೂ ತಾವೂ ಅಂಧಭಕ್ತರು ಎಂಬ ಪರಿವೆಯೇ ಅವರಿಗಿರುವುದಿಲ್ಲ!

ಸ್ವಂತ ಸಂಘಟನೆಯ ಕಾರ್ಯಕರ್ತರಿಂದಲೇ ನಾಯಕರಿಗೆ ಛೀಮಾರಿ ಎಂಬ ನಕಲಿ ತಲೆ ಬರಹ ಹಾಕಿ ಒಳಗೊಳಗೆ ಆತ್ಮರತಿ ಪಡೆಯುತ್ತಾನೆ.
ಅಂಧಭಕ್ತುರನ್ನು ಸಮಾಧಾನ ಪಡಿಸಲು ಅದು ಸಾಕಾಗುತ್ತದೆ.

ಇದೀಗ ಸಮುದಾಯ ಪ್ರೇಮವೆಂದರೆ ವಿರುದ್ದ ಸಂಘಟನೆಗೆ MRM ಪಟ್ಟ ಕೊಡುವುದೆಂಬ ಹೊಸ ವ್ಯಾಖ್ಯೆ ಚಾಲ್ತಿಯಲ್ಲಿದೆ..

ಅದಕ್ಕಾಗಿ ಸ್ವಂತವಾಗಿ ಮೆಸ್ಸೇಜ್ ಕ್ರಿಯೇಟ್ ಮಾಡಿ ಅದರಡಿಯಲ್ಲಿ ಹಿಂದು ಧರ್ಮಾವಲಂಭಿಯ ಹೆಸರು ಹಾಕಲು ಹಿಂಜರಿಯದಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ

ಅಂದರೆ ಸಮುದಾಯ ಪ್ರೇಮಕ್ಕೆ ಮತ್ತೊಂದು ಸಂಘಟನೆಯನ್ನು ಇನ್ನಿಲ್ಲದಂತೆ ನಾಶ ಮಾಡುವ ಕುತಂತ್ರ ಎಂಬ ಹೊಸ ವ್ಯಾಖ್ಯೆ ರೆಡಿಯಾಗಿದೆ.

ಸ್ವಂತ ಸಂಘಟನೆಯ ತಾರೀಪನ್ನು ಸ್ವತಃ ತಾನೇ ಗೀಚಿ ಅದರಡಿಯಲ್ಲಿ ಇತರ ಧರ್ಮದವರ ಹೆಸರು ಅಚ್ಚು ಹಾಕಿ ಅವರ ಬೆಂಬಲ ನಮಗಿದೆ ಎಂದು ಸಾಬೀತು ಪಡಿಸುವ ವಿಚಿತ್ರ ರೀತಿ.

ತಮ್ಮ ನಾಯಕರು ಯಾರ ಬಳಿಯೂ ಹೋಗಬಹುದು, ಕೊರಳಿಗೆ ಹಾರ ಹಾಕಬಹುದು, ಶಾಲು ಹೊದಿಸಬಹುದು, ಕಾಲ್ನಡಿಗೆ ಜಾಥದಲ್ಲಿ ಭುಜಕ್ಕೆ ಭುಜ ತಾಗಿ ನಡೆಯಬಹುದು, ಆದರೆ ಸಮುದಾಯದ ಮತ್ತೊಂದು ಸಂಘಟನೆಯವರು ಈ ರೀತಿ ಮಾಡಿದ ಕೂಡಲೇ ಅವರು ಖಾವಿ ಮೌಲಾನಗಳು, MRM ಏಜೆಂಟ್ ಗಳು, ಸಮುದಾಯ ದ್ರೋಹಿಗಳು!

 ಸಮುದಾಯ ಎಂಬುದು ಬರೀ ಲೇಬಲ್ ಮಾತ್ರವಾಗಿದ್ದು, ಸದರಿ ಲೇಬಲಡಿಯಲ್ಲಿ ತಮ್ಮ ಅಜೆಂಡಗಳನ್ನು ಕಾರ್ಯರೂಪಕ್ಕಿಳಿಸುವ ಕುತಂತ್ರವೆಂದು ನಿಷ್ಪಕ್ಷಪತಿಯೊಬ್ಬ ಸಂಶಯಿಸಿದರೆ ಅದು ಅವನ ತಪ್ಪಾಗಲಾರದು.
ಅದಲ್ಲದಿದ್ದರೆ ಸಮುದಾಯ ಸಬಲೀಕರಣಕ್ಕಾಗಿ ಸಂಘಟನೆ ಕಟ್ಟಿದವರು ಸಮುದಾಯದವರನ್ನೇ ಹೊಸಕಿ ಹಾಕುವ ಕುತಂತ್ರಕ್ಕೆ ಗಂಟುಬೀಳುವುದು ಯಾಕೆ?

ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗಲು ಯಾಕೆ ಸಾದ್ಯವಾಗುದಿಲ್ಲ?

ಟೀಕೆ ವಿಮರ್ಶೆ ಸಹಜವಾಗಿದ್ದು, ತನ್ನ ಅಪ್ರಬುಧ್ದತೆ ನಡೆಯಿಂದ ಸಮುದಾಯ ಭಿನ್ನಿಸಬಾರದೆಂಬ ಸಾಮಾನ್ಯ ಪ್ರಜ್ಞೆ ಸಬಲೀಕರಣಕ್ಕೆ ಟೊಂಕ ಕಟ್ಟಿ ನಿಂತವರಿಂದ ಸಾದ್ಯವಾಗುದಿಲ್ಲ ಯಾಕೆ?

ಅಲ್ಲದಿದ್ದರೂ ಹತ್ತರಲ್ಲಿ ಹನ್ನೊಂದು ಎಂಬಂತೆ ಅಂಕೆ ಸಂಖ್ಯೆ ಏರಿ ಪರಸ್ಪರ ಕೆಸರೆಚಾಟಕ್ಕೆ ಹೊಸ ವೇದಿಕೆ ನಿರ್ಮಾಣವಾಗಿದೆಯೇ ಹೊರತು ಸಮುದಾಯದಲ್ಲಿ ಅಣುವಿನಷ್ಟು ಸಬಲೀಕರಣ ಸಾದ್ಯವಾಗಿದೆಯಾ?

ಸಮುದಾಯ ಈಗಲೂ ಸ್ವತಂತ್ರವಾಗಿ ತಲೆ ಎತ್ತಿ ನಡೆಯುಂತಾಗಿದೆಯಾ?

ಪರಸ್ಪರ ಕೊಲೆ ದೊಂಬಿ ಕೊಳ್ಳೆಗಳಿಗೆ ಅಂಕಿತ ಬಿದ್ದಿದೆಯಾ?

ಸಮುದಾಯದ ಭಿನ್ನತೆಗೆ ಮತ್ತಷ್ಟು ಶಕ್ತಿತುಂಬಲು ಹೇತುವಾಗಿದಿಯೇ ಹೊರತು ಮಧ್ಯಸ್ಥಿಕೆಯ ರೋಲನ್ನು ನಿರ್ವಹಿಸಲು ಸಾದ್ಯವಾಗಿದೆಯಾ?

ಮುಸ್ಲಿಂ ಯುವಕರು ಜೈಲುಪಾಲಾಗುವುದನ್ನು ತಪ್ಪಿಸಲು ಸಾದ್ಯವಾಗಿದೆಯಾ?

ನಮ್ಮ ಯುವಕರು ಎದೆ ತಟ್ಟಿ ಸಾಮಾಜಿಕ ತಾಣದಲ್ಲಿ ವೀರಾವೇಶ ಮೊಳಗಿಸಿದರೆ ಸಾಕಾ?
ಅದುವಾ ಸಬಲೀಕರಣ?

ಕನಿಷ್ಠ ಪಕ್ಷ ಸಾಮಾಜಿಕ ತಾಣದಲ್ಲಾದರೂ ಪರಸ್ಪರ ಕದನವಿರಾಮ ಘೋಷಿಸಲು ಸಾದ್ಯವಾಗುದಿಲ್ಲ ಯಾಕೆ?

ವಿವಾದಗಳನ್ನೇ ಅಮಲನ್ನಾಗಿ ತಲೆಗೇರಿಸುವುದಕ್ಕೆ ಕಡಿವಾಣ ಯಾಕೆ ಸಾದ್ಯವಾಗುವುದಿಲ್ಲ.

ಸಣ್ಣ ಪುಟ್ಟ ಎಡವಟ್ಟುಗಳು ಸಂಭವಿಸುವಾಗ ನಯವಾಗಿ ತಿಳಿ ಹೇಳಿ ತಿದ್ದುವ ಬದಲು ಸಮುದಾಯ ದ್ರೋಹಿಯಾಗಿ ಚಿತ್ರೀಕರಿಸಿ ಮೂಲೆ ಗುಂಪು ಮಾಡುವುದರಿಂದ ಸಮುದಾಯ ಸಬಲೀಕರಣ ಸಾದ್ಯವೇ?

 ಸಮುದಾಯದ ಯುವಕರು ಕೆಟ್ಟವರಾದರೆ ಸದರಿ ಸಮುದಾಯ ಪರಾಜಿತಗೊಳ್ಳುತ್ತದೆ. ಮಾತ್ರವಲ್ಲ ಆ ಸಮುದಾಯದ ಉತ್ತಮ ಬೆಳವಣಿಗೆಗೆ ಅವರು ಕಂಟಕವಾಗಿರುತ್ತಾರೆ.
ಇಲ್ಲಿ ಹೆಚ್ಚು ಕಮ್ಮಿ ಅದೇ ಸಂಭವಿಸುತ್ತಿದೆ.

- ಅಬೂಶಝ

No comments:

Post a Comment