🕌ಝಿಯಾರತ್ತ್ ಕೇಂದ್ರ🕌
🌹0⃣2⃣🌹
➖➖➖➖➖➖➖➖
👉🏿ಭಾಗ 0⃣2⃣👈
☪ *ಅಜ್ಮೀರ್ ದರ್ಗಾ ಶರೀಫ್*☪
✍ಗಫೂರ್ ಬಾಯಾರ್.
➖➖➖➖➖➖➖➖
🕌ಸುಲ್ತಾನ್ ಶಿಹಾಬುದ್ದೀನ್ ಮುಹಮ್ಮದ್ ಘೋರಿಯವರ ಸಂಘದೊಂದಿಗೆಯಾಗಿದೆ ಭಾರತಕ್ಕೆ ತಲುಪಿರುವುದು ಎಂದು ಚರಿತ್ರೆ ಇದೆ.
ಅಜ್ಮೀರಿಗೆ ತಲುಪಿದ ಮಹಾನರು ಅಲ್ಲಿ ಸ್ಥಿರ ವಾಸವಾದರು. ಬಹು ಬೇಗನೆ ಖ್ವಾಜರವರ (ರ) ಪ್ರಾಶಸ್ತ್ಯ ನಾಡೆಲ್ಲ ಪ್ರಚಾರವಾಯಿತು..
ಬಹುದೈವ ವಿಶ್ವಾಸಿಗಳು ಮಾತ್ರವಿದ್ದ ಉತ್ತರ ಭಾರತದಲ್ಲಿ ಖ್ವಾಜಾರವರ ಆಗಮನದೊಂದಿಗೆ ಇಸ್ಲಾಮಿನ ಮಹತ್ವವಾದ ಸಂದೇಶ ಪ್ರಚಾರಗೊಂಡಿತು...
ಶಿರ್ಕ್ ನ ಅಂಧಕಾರದಿಂದ ದೊಡ್ಡ ಒಂದು ಸಮೂಹ ತೌಹೀದಿನ ಬೆಳಕಿನೆಡೆಗೆ ದಾಟಿ ಬಂದರು.
ಶಿರಿಯಾದ ವಿದ್ವಾಂಸರಾಗಿದ್ದ ಅಬೂ ಇಸ್ಹಾಖ್ ಶಾಮಿ (ರ) ರವರ "ಚಿಸ್ತಿ" ಎಂಬ ಆತ್ಮಿಯ ಸರಣಿ ಭಾರತದಲ್ಲಿ ಪ್ರಚಾರವಾದದ್ದು ಅಜ್ಮೀರ್ ಖ್ವಾಜರವರ (ರ) ಮುಖಾಂತರವಾಗಿದೆ.
ದೆಹಲಿಯಲ್ಲಿ ಅಂತ್ಯವಿಶ್ರಮ ಹೊಂದುತಿರುವ ಶೈಖ್ ಕುತುಬುದ್ದೀನ್ ಬಖ್ತಿಯರ್ ಕಾಕಿ (ರ) ರವರು ಆಗಿದ್ದಾರೆ ಖ್ವಾಜರವರ (ರ) ಶಿಷ್ಯರು.
ಅವರ ಶಿಷ್ಯರಾಗಿದ್ದಾರೆ ಖಾಜ ಹಝ್ರತ್ತ್ ನಿಝಾಮುದ್ದೀನ್ (ರ)ರವರು.
ಶೈಖುನರು ಅಜ್ಮೀರ್ ತಲುಪಿದಾಗ ಅಂದಿನ ರಾಜರಾದ ಪ್ರಿಥ್ವಿರಾಜ್ ಚೌಹಾನರಿಂದ ಶೈಖುನವರಿಗೂ, ಶಿಷ್ಯಯಂದಿರರಿಗೂ, ಹಲವಾರು ವಿರೋಧಗಳು, ತೊಂದರೆಗಳು ಎದುರಿಸಬೇಕಾಯಿತು. ಅಂದು ನಡೆದ ಒಂದು ಘಟನೆಯಿಂದ ಶೈಖ್ ನವರ ಮಹತ್ವ ರಾಜರಿಗೆ ಮನವರಿಕೆಯಾಯಿತು.
ಅಜ್ಮೀರಿನ ಜಲ ಶ್ರೋತೃ ಆಗಿದ್ದ "ಅನಾಸಾಗರ್" ನದಿ ನೀರನ್ನು ಉಪಯೋಗಿಸುದನ್ನು ರಾಜರ ನೌಕರು ಶೈಖರವರನ್ನು ತಡೆದಿದ್ದರು. ಶೈಖವರು ಒಂದು ಪಾತ್ರೆ ನೀರು ಮಾತ್ರ ತಟಾಕದಿಂದ ತೆಗೆಯಲು ಅನುಮತಿ ಕೇಳಿದರು. ಅದರ ಪ್ರಕಾರ ಪಾತ್ರೆಯಲ್ಲಿ ನೀರು ಶೇಖರಿಸಿದರು. ಏನಧ್ಭುತ!!.. ಆ ಸಮಯದಲ್ಲೇ ಅನಾಸಾಗರ್ ಬತ್ತಿ ಬರಡಾಯಿತು... ಗಾಬರಿಗೊಂಡ ರಾಜರು ಮತ್ತು ಸಂಗವು ಶೈಖರೊಂದಿಗೆ ಕ್ಷಮಾಪಣೆ ಕೇಳಿದ ಮೇಲೆ ಶೈಖರವರು ಪಾತ್ರೆಯ ನೀರು ನದಿಯಲ್ಲಿ ಪುನಃ ಸುರಿದಾಗಲೇ ಅನಾಸಾಗರ್ ಪೂರ್ವ ಸ್ಥಿತಿಗೆ ಬಂದಿರುವುದು.
ಅಜ್ಮೀರಿನಲ್ಲಿ ಝಿಯಾರತ್ತಿಗೆ ಬರುವ ಜನರು ಅಧಿಕವು ಅಜ್ಮೀರಿನ "ತಾರಾಘಾಟ್" ಪರ್ವತ ಸಾಲುಗಳು. ಸಂದರ್ಶಿಸುತ್ತಾರೆ.
ಸಯ್ಯದ್ ಹುಸೈನ್ ಮಶ್ ಹಾದಿ (ರ) ರವರು ಹಾಗೂ ಇಸ್ಲಾಮಿಗೆ ಬೇಕಾಗಿ ಜೀವ ತ್ಯಾಗ ಮಾಡಿದ ಧಾರಾಳ ಶುಹದಾಗಳ ಖಬರುಗಳು ಅಲ್ಲಿದೆ.
ತಾರಾಘಾಟ್ ಗೆ ಹೋಗುವ ದಾರಿಯಲ್ಲಿರುವ ಪರ್ವತ ಸಾಲುಗಳು ಸಂಚಾರ ಕಾಣಲು ಒಳ್ಳೆಯ ಒಂದು ದೃಶ್ಯ ಯಾತ್ರೆ ಅನುಭವವಾಗಿದೆ.
ಆದರೆ, ತಾರಾಘಾಟ್ ನಲ್ಲಿ "ಶಿಯಾ" ಸ್ವಾದೀನ ಪ್ರಕಟವಾಗಿ ಕಾಣಬಹುದು.
ಎಲ್ಲಾ ದಿಕ್ಕುಗಳು ಪರ್ವತಗಳಿಂದ ಸುತ್ತುವರಿದ ಅಜ್ಮೀರ್ ಒಂದು ಮನೋಹರವಾದ ನಗರವಾಗಿದೆ. ಅರವಾಳಿ ಮಲೆ, ಸಾಲುಗಳ ದೃಶ್ಯಗಲಾಗಿವೆ ಅಜ್ಮೀರನ್ನು ಸುತ್ತುವರಿದು ನೆಲೆಗೊಳ್ಳುತಿರುವುದು. ಅಜ್ಮೀರ್ ರೈಲ್ವೆ ನಿಲ್ದಾಣದಿಂದ ಅರ್ಧ ಕಿಲೋ ಮೀಟರ್ ಮಾತ್ರವಾಗಿದೆ ದರ್ಗಾ ಶರೀಫಿಗೆ ಇರುವ ದೂರ.
ಸುಮಾರು 2 ಎಕ್ಕರೆ ವಿಸ್ತಿರಣದಲ್ಲಿ ದರ್ಗಾ ಕಾಂಪೌಂಡ್ ನಲ್ಲಿ, ಸ್ವರ್ಣದಿಂದ ಅಲಂಕರಿಸಿದ ಬಿಳುಪಿನ ಮಾರ್ಬೆಲ್ ನ ಕೆಳಗೆ ಪವಿತ್ರ ಮಣ್ಣಿನಲ್ಲಿ ಬೆಳ್ಳಿಯಲ್ಲಿ ಮುಗಿಸಿದ ಬಾಗಿಲುಗಳ ಒಳಗೆ ರಾಜ ಪ್ರೌಡಿಯೊಂದಿಗೆಯಾಗಿದೆ ಖಾಜಯವರ (ರ) ಮಖ್ಬರವಿರುವುದು.
(ಇದು ರಾಜರ ಕಾಲದ ರಾಜರುಗಳ ನಿರ್ಮಿತಗಳು ಆಗಿರಬಹುದು. ಮಸ್ಜಿದುಗಳು, ದರ್ಗಾಗಳು, ಅಧಿಕವಾಗಿ ಅಲಂಕರಿಸುವುದು ಕರ್ಮ ಶಾಸ್ತ್ರವಾಗಿ ತಾರತಮ್ಯ ಮಾಡುವಾಗ ಭಿನ್ನ ವೀಕ್ಷಣಗಳಿಗೆ ವಿದಾಯವಾಗುವ ವಿಷಯವಾಗಿದೆ.)
ಸಂದರ್ಶಕರು ಅರಳುವ ಗುಲಾಬಿ ಹೂವುಗಳ ಅದಿಕ್ಯ ಹಾಗೂ ದರ್ಗಾದಲ್ಲಿ ಸದಾ ಸಮಯವು ಗುಲಾಬಿ ನೀರಿನ ಪರಿಮಳ ಸೂಸುತ್ತದೆ.
ಖ್ವಾಜರವರ (ರ) ಸಂಭದಿಕರು ಮತ್ತು ಶಿಷ್ಯರಾದ ಹಲವು ಮಹಾತ್ಮಾಗಳ ಕಬರ್ ಗಳು ಪರಿಸರದಲ್ಲಿ ಇದೆ.
ಔರಂಗಝೇಬ್, ಶಜಹಾನ್, ಅಕ್ಬರ್, ಎಂಬಿ ಚಕ್ರವರ್ತಿಗಳು ನಿರ್ಮಿಸಿದ ವಿವಿಧ ಮಸ್ಜಿದುಗಳು, ದಾರುಲ್ ಉಲೂಂ ( ಮತ ಪಾಠ ಶಾಲೆ )
ಅನಾಥ-ನಿರ್ಗತಿಕರ ಮಂದಿರ, ವಿಶ್ರಮ ಕೇಂದ್ರಗಳು, ಬಡವರಿಗೆ ಭಕ್ಷ್ಯ ವಿತರಣೆ ಕೇಂದ್ರ, ಡಿಸ್ಪೆನ್ಸರಿ, ಮೊದಲಾದ ವಿವಿದ ಸಂಭ್ರಮಗಳು ಅಲ್ಲಿ ಕಾಣಬಹುದು.
ಭಾರತ ಉಪ ಭೂಕಂಡದ ಮುಸ್ಲಿಂಮರು ಅಧಿಕವು ಜೀವನದಲ್ಲಿ ಒಮ್ಮೆಯಾದರೂ, ಅಜ್ಮೀರ್ ಸಂದರ್ಶಿಸಬೇಕು ಎಂದು ಆಗ್ರಹಿಸುವವರಾಗಿದ್ದಾರೆ.
ಝಿಯಾರತ್ತಿಗೆ ತಲುಪುವ ಹಲವರಿಗೆ ಖ್ವಾಜ (ರ) ಅವರನ್ನು ಕನಸಿನಲ್ಲಿ ದರ್ಶಿಸಲು ಬಾಗ್ಯ ಲಬಿಸುತ್ತದೆ.
🚈ಅಹಮದಾಬಾದ್- ದೆಹಲಿ ರೈಲ್ವೆ ರಸ್ತೆಯಲ್ಲಾಗಿದೆ ರಾಜಸ್ಥಾನದ ಅಜ್ಮೀರ್ ರೈಲ್ವೆ ಸ್ಟೇಷನ್.
ಈ ದಾರಿಯಾಗಿ ಎಲ್ಲಾ ಟ್ರೈನ್ ಗಳು ಅಲ್ಲಿ ನಿಲ್ಲುತ್ತದೆ. ಮಂಗಳೂರು ದಾರಿಯಾಗಿ ಹೋಗುವ Eranakulam- Ajmeer, Marusagar Express. ಆಗಿದೆ ಅಜ್ಮೀರಿಗೆ ನೇರವಾದ ಟ್ರೈನ್. ವಾರದಲ್ಲಿ ಒಂದು ಮಾತ್ರವಿರುವ ಅದಕ್ಕೆ Reservation ಲಭಿಸಲು ಯಾವಾಗಲೂ ಕಷ್ಟವಾಗುತ್ತದೆ.... ತಿಂಗಳುಗಳ ಮೊದಲೇ Book ಮಾಡಬೇಕು.
ಆಗ್ರಾ, ಅಹಮದಾಬಾದ್, ಮುಂಬೈ, ಕೊಟ್ಟ ಎಂಬಿ ಯಾವುದಾದರು ಒಂದು ಸ್ಟೇಷನ್ ಮಾರ್ಗವಾಗಿಯೂ ಹೋಗಬಹುದು. ಆಗ್ರಾ ದಾರಿಯಾಗಿ ಹೋಗಿ, ದೆಹಲಿ ದಾರಿಯಾಗಿ ಮರಳಿ ಬರುವಾಗ ಆಗ್ರಾ ಮತ್ತು ದೆಹಲಿ ಕೂಡ ಸಂದರ್ಶಿಸಬಹುದು. Ticket ತೆಗೆಯುವಾಗ ಆಗ್ರಾ ಹಾಗೂ ದೆಹಲಿ ಮುಖ್ಯ ಲಕ್ಷ್ಯ ಮಾಡದಿದ್ದರೆ Telescopic Fare ಕೊಟ್ಟರೆ ಸಾಕಾಗುತ್ತದೆ.
ಜೈಪುರ್ ಆಗಿದೆ ಹತ್ತಿರದ ವಿಮಾನ ನಿಲ್ದಾಣ. (ದೂರ KM 135).
🕌ಖ್ವಾಜರವರ (ರ) ಚರಿತ್ರೆ ಹಾಗೂ ಕೀರ್ತನೆಯ ಹಲವಾರು ಮೌಲಿದುಗಳು ರಚಿಸಲ್ಪಟ್ಟಿದೆ.
ಮಹಾನರಾದ ಶೈಖ್ ಮಾಪ್ಪಿಳ ಲಬ್ಬ ಆಲಿಂ ಸಾಹಿಬ್ ಅಲ್ ಖಾದಿರಿ (ರ) ಮತ್ತು ಮೌಲಾನ ಶಾಲಿಯಾತಿ (ರ) ಮೊದಲಾದವರ ಮೌಲಿದುಗಳು ಪ್ರಸಿದ್ದವಾಗಿದೆ.
✍ಗಫೂರ್ ಬಾಯಾರ್.
🕌ಮಹಾನವರ ಬರ್ಕತ್ತ್
ನಿಂದ ಅಲ್ಲಾಹು ನಮ್ಮನ್ನು ಇರು ಲೋಕದಲ್ಲಿಯು ಅನುಗ್ರಹಿಸಲಿ.
ಆಮೀನ್....
🕎🕎🕎🕎🕎🕎🕎🕎




No comments:
Post a Comment