Saturday, October 7, 2017

*💚ಅಹ್ಲುಬೈತ್ ಅಂದರೆ ಏನು..?*
*💚ಅಹ್ಲುಬೈತ್ ಅಂದರೆ ಯಾರು..?*
*💚ಆ ಪರಂಪರೆ ಈಗಲೂ ಇದೆಯೇ..?*

     ಒಂದು ಫಿತ್ನಾ ಸಂದೇಶ ಓದಲು ಸಾಧ್ಯವಾಯಿತು. ಅದೇನೆಂದರೆ, ನೆಬಿ ﷺ ತಂಙಳರಿಗೆ ಎರಡು ಗಂಡು ಮಕ್ಕಳು, ಅವರು ಚಿಕ್ಕ ವಯಸ್ಸಿನಲ್ಲೇ ವಫಾತ್ ಆಗಿದ್ದಾರೆ. ಅಲ್ಲಿಗೆ ನೆಬಿ ತಂಙಳರ ನೇರ ವಂಶವು ಮುಗಿಯುತ್ತದೆ. ಹೀಗಿರುವಾಗ ಮುಂದೆ ನೆಬಿ  ﷺ ತಂಙಳರ ವಂಶ ಪಾರಂಪರ್ಯ ಇಲ್ಲ. ಅಂದರೆ ಇವರು ಹೇಳುತ್ತಿರುವುದು, ಗಂಡು ಮಕ್ಕಳು ಇಲ್ಲದ ಕಾರಣ ಅಹ್ಲುಬೈತ್ ಎಂಬುದು ಇಲ್ಲ ಎನ್ನುವ ಧಾಟಿಯಲ್ಲಾಗಿದೆ.

ಇಂತಹ ಪ್ರಶ್ನೆಗಳು ನಿಮ್ಮ ಮನದೊಳಗೆ ಹಾಕುವ ಮೂಲಕ, ಅಥವಾ ಹೊಸ ಮೊಂಡುವಾದಗಳ ಮೂಲಕ ನಿಮ್ಮನ್ನು ವಸ್ವಾಸ್ ಮಾಡಲು ಅನೇಕರು ನಮ್ಮೆಡೆಗೆ ಬರುತ್ತಾರೆ. ಇದು ಇಬ್ಲೀಸ್'ನ ಇನ್ನೊಂದು ಮುಖವೆಂದರೂ ತಪ್ಪಿಲ್ಲ. ಇರಲಿ ಬಿಡಿ, ನಾವು ವಿಷಯಕ್ಕೆ ಬರೋಣ.

"ಅಹ್ಲುಬೈತ್" ಇದರ ಕುರಿತು ಒಂದೆರಡು ವಿಷಯಗಳನ್ನು ಬರೆಯಲು ನನಗೆ ಭಾಗ್ಯ ಸಿಕ್ಕಿದ್ದಕ್ಕೆ ಮೊದಲನೇಯದಾಗಿ ಅಲ್ಲಾಹನಿಗೆ ಸರ್ವ ಸ್ತುತಿ. ಅಲ್ ಹಂದುಲಿಲ್ಲಾಹ್

ಅಹ್ಲುಬೈತ್ ಪರಂಪರೆ ಹೇಗೆ ಖುರ್'ಆನ್- ಹದೀಸ್ ಮೂಲಕ ತಿಳಿಯೋಣ;

*
•إِنَّمَا يُرِيدُ اللَّـهُ لِيُذْهِبَ عَنكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا •

ಸೂರಃ ಅಅ್'ಝಾಬ್ (33:33) ಅವತರಣೆಯಾದ ಸಂದರ್ಭದಲ್ಲಿ, ನೆಬಿ ﷺ ಒಂದು ಚಾದರ ತೆಗೆದು ಅಲಿ ರ.ಅ, ಫಾತಿಮಾ ಬೀವಿ ರ.ಅ ಹಾಗೂ ಹಸನ್-ಹುಸೈನ್ ರ.ಅ ಮೇಲೆ ಹೊದಿಸಿ ಹೇಳಿದರು; ಇವರು ನನ್ನ ಅಹ್ಲು ಬೈತ್ ಆಗಿದ್ದಾರೆ. ಇವರಿಂದ ನಾನು ಎಲ್ಲಾ ಮಾಲಿನ್ಯಗಳನ್ನು ನೀಗಿಸಿದ್ದೇನೆ. ಮತ್ತೂ ಮುಂದುವರಿದು, ಅಲ್ಲಾಹು ಅವರನ್ನು ಶುದ್ಧಿ ಮಾಡಿದ್ದಾನೆ ಎಂದು ಹೇಳಿದರು. ಇದು ಇಮಾಮ್ ಅಹ್ಮದ್ ರ.ಅ ರಿಪೋರ್ಟ್ ಮಾಡಿದ್ದಾರೆ. (ತಿರ್ಮುದ್ಸಿ)

*ಅಹ್ಲು ಬೈತಿನ ಮಹತ್ವವನ್ನು ಹೇಳಿದ ಇನ್ನೊಂದು ಹದೀಸ್ ಹೀಗಿದೆ. "ಅಹ್ಲು ಬೈತನ್ನು ಯಾರಾದರೂ ದ್ವೇಶಿಸಿದರೆ ಅವರಿಗೆ ನರಕವಾಗಿದೆ. ಇಮಾಮ ಹಾಕಿಂ ರ.ಅ ರವರ, 'ಮುಸ್ತದ್ರಕ್" ಎಂಬ ಕಿತಾಬಿನಲ್ಲಿ ಉಲ್ಲೇಖಿಸಿದ್ದಾರೆ. (150/3)

*ಸೌದಿ ಅರೇಬಿಯಾದಲ್ಲಿ ಔಖಾಫ್ ಮಂತ್ರಿಯಾಗಿದ್ದ ಮಕ್ಕಾ ನಿವಾಸಿಯಾದ ಮುಹಮ್ಮದ್ ಅಬ್ದು ಯಮಾನಿ ರವರ, ಬಹು ಭಾಷೆಗಳಿಗೆ ಭಾಷಾಂತರಗೊಂಡು ಇತಿಹಾಸ ನಿರ್ಮಿಸಿದ ಪ್ರಸಿದ್ಧ ಪುಸ್ತಕವಾದ
 " علموا أولادكم محبة آهل بيت النبي  صلى الله عليه وسلم "
(ಅಹ್ಲ್ ಬೈತ್ ನೊಂದಿಗಿರುವ ಮಹಬ್ಬತ್'ನ ಕುರಿತು ನೀವು ನಿಮ್ಮ ಮಕ್ಕಳಿಗೆ ಕಲಿಸಿರಿ ) ಇದರಲ್ಲಿ ಅಹ್ಲು ಬೈತಿನ ಮಹತ್ವವನ್ನು ವಿವರಿಸಲಾಗಿದೆ.

*ಅಹ್ಲುಬೈತ್ ಕುಟುಂಬ ಪರಂಪರೆ ಈಗಲೂ ಇದೆಯೇ ಎಂಬುದು ಇನ್ನೂ ಕೆಲವರ ಪ್ರಶ್ನೆ. ಅದಕ್ಕೆ ಈ ಕೆಳಗಿನ ಹದೀಸ್ ಸ್ಪಷ್ಟವಾಗಿ ಉತ್ತರ ಕೊಡುತ್ತದೆ.

 أخرج أحمد بن حنبل في مسنده ( 2 ) عن أبي سعيد الخدري ، عن النبي صلى الله عليه وآله قال : ( إني أوشك أن أدعى فأجيب ، وإني تارك فيكم الثقلين : كتاب الله عز وجل ، وعترتي ، كتاب الله حبل ممدود من السماء إلى الأرض ، وعترتي أهل بيتي ، وإن اللطيف الخبير أخبرني بهما أنهما لن يفترقا حتى يردا علي الحوض ، فانظروا كيف تخلفوني فيهما ).

ನೆಬಿ (ﷺ) ಹೇಳಿದ್ದನ್ನು, ಅಬೀ ಸಈದಿಲ್ ಖುದ್ರೀ (ರ.ಅ) ಹೀಗೆ ವರದಿ ಮಾಡುತ್ತಾರೆ. ನೆಬಿ ﷺ ತಂಙಳರು ಹೇಳುತ್ತಾರೆ- ನನ್ನ ರೂಹನ್ನು ಹಿಡಿಯಲು ಅಝ್ರಾಯಿಲ್ ಅ.ಸ ಬಂದಾಗ, ನಾನು ಅವರಿಗೆ ಉತ್ತರ ಕೊಡುವೆ. ಅಂದರೆ ನಾನು ಸಮ್ಮತಿಸುವೆ ಹಾಗೂ ನಾನು ಹೋಗುವಾಗ ಗೌರವವಿರುವ ಎರಡು ವಿಷಯಗಳನ್ನು ನಿಮ್ಮಲ್ಲಿ ಬಿಟ್ಟು ಹೋಗುವೆ. ಅದೇನೆಂದರೆ, 1) ಅಲ್ಲಾಹನ ಕಿತಾಬ್ ಆದ "ಖುರ್-ಆನ್" . ಅಲ್ಲಾಹನ ಕಿತಾಬ್ ಆದ ಪರಿಶುದ್ಧ ಖುರ್'ಆನ್ ಅದು ಆಕಾಶದಿಂದ ಇಳಿಸಲ್ಪಟ್ಟ ಉದ್ದವಾದ ಹಗ್ಗವಾಗಿದೆ. ಅದನ್ನು ಗಟ್ಟಿಯಾಗಿ ಹಿಡಿದವನು ವಿಜಯಿಸುವನು. ಸದಾ ಖುರ್'ಆನ್ ಓದುತ್ತಿರುವನು ರಕ್ಷೆ ಹೊಂದುವನು ಎಂದರ್ಥ. ಎರಡು ಕಾರ್ಯಗಳಲ್ಲಿ ಇನ್ನೊಂದು, 2) " وعترتي أهل بيتي" ಅಂದರೆ ನನ್ನ ಕುಟುಂಬವಾದ ಅಹ್ಲುಬೈತ್. ನೆಬಿ (ﷺ) ತಂಙಳರ ಕುಟುಂಬ, ಆ ಪರಂಪರೆ ಖಿಯಾಮತ್ ದಿನದವರೆಗೆ ಇರುತ್ತದೆ ಎಂಬುದನ್ನು ಇದರಿಂದ ನಮಗೆ ಅರ್ಥ ಮಾಡಬಹುದಾಗಿದೆ. ಈ ಮೇಲೆ ಹೇಳಿದ ಎರಡು ಕಾರ್ಯಗಳು ಎಂದಿಗೂ ಬೇರ್ಪಡದು; ಎಲ್ಲಿಯವರೆಗೆಂದರೆ ಹೌಳುಲ್ ಕೌಸರ್ ಸಿಗುವವರೆಗೂ. ಇನ್ನೂ ಮುಂದುವರಿದು ನೆಬಿ (ﷺ) ತಂಙಳರು ಹೇಳುತ್ತಾರೆ, ಈ ಎರಡು ಕಾರ್ಯಗಳನ್ನು ಹೇಗೆ ಹಿಡಿಯಬಹುದೆಂದು ನೀವು ನೋಡಿರಿ. ಈ ವರದಿಯನ್ನು ಇಮಾಂ ಅಹ್ಮದ್ ಇಬ್ನು ಹಂಬಲ್ (ರ.ಅ) ತನ್ನ 'ಮುಸ್ನದ್' ನಲ್ಲಿ ಬರೆದಿದ್ದಾರೆ.

*ಇದೇ ವಿಷಯವನ್ನು 'ಇಮಾಂ ಮುಸ್ಲಿಂ ರ.ಅ' ವರದಿ ಮಾಡಿದ್ದಾರೆ.
 وفي صحيح مسلم ( 1 ) قال النبي صلى الله عليه وآله . ( وأنا تارك فيكم الثقلين : أولهما كتاب الله فيه الهدى والنور ، فخذوا بكتاب الله واستمسكوا به ، فحث على كتاب الله ورغب فيه ، ثم قال : وأهل بيتي ، أذكركم الله في أهل بيتي ، أذكركم الله في أهل بيتي).

ನೆಬಿ (ﷺ) ಹೇಳಿದರು; ನಿಮ್ಮಲ್ಲಿ ಎರಡು ವಿಷಯಗಳನ್ನು ನಾನು ಬಿಟ್ಟು ಹೋಗುತ್ತೇನೆ. ಅದು ಬಹಳ ಗೌರವ ಇರುವ ವಿಷಯಗಳಾಗಿದೆ. ಅದರಲ್ಲಿ ಅಲ್ಲಾಹನ ಹಿದಾಯತ್ ಇದೆ, ಅಲ್ಲಾಹನ ಪ್ರಕಾಶವಿದೆ. ಅದೇನೆಂದರೆ ಒಂದು, "ಖುರ್'ಆನ್". ನಂತರ ಅದರ ಶ್ರೇಷ್ಠತೆಯನ್ನು ವಿವರಿಸುತ್ತಾರೆ. ಮುಂದುವರೆದು ನೆಬಿ (ﷺ) ಹೇಳಿದರು; ಇನ್ನೊಂದು "ನನ್ನ ಕುಟುಂಬ ಅಂದರೆ ಅಹ್ಲುಬೈತ್". ಈ ವಿಷಯದಲ್ಲಿ ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ನೀವು ಅಲ್ಲಾಹನನ್ನು ಭಯಪಡಿರಿ; ನೀವು ಅವರಿಗೆ ಉಪದ್ರ ಮಾಡುವುದೋ, ಅಥವಾ ಅವರೊಂದಿಗೆ ಅನುಚಿತವಾಗಿ ವರ್ತಿಸುವುದೋ ಸಲ್ಲದು.

ಅಹ್ಲುಬೈತಿನ ಕುರಿತು ಈಗ ನಿಮಗೆ ಸ್ಪಷ್ಟವಾಗಿ ಮನದಟ್ಟಾಗಿರಬಹುದು ಎಂದು ಭಾವಿಸುತ್ತೇನೆ. ಆರಂಭದಲ್ಲಿ ಹೇಳಿದಂತೆ, ಇಂತಹ ಮೊಂಡುವಾದಗಳನ್ನು ಹಿಡಿದು ಕೊಂಡು ಮುಗ್ಧರನ್ನು ಬಲೆಗೆ ಬೀಳಿಸುವ ಕೆಲಸಗಳನ್ನು ಸಲಫಿಗಳು ಮಾಡುತ್ತಿದ್ದಾರೆ. ಅಂತಹ ಫಿತ್ನಾಗಳನ್ನು ಮೂಲೆಗೆಸೆಯಿರಿ. ಹತ್ತೆಂಟು ವರ್ಷಗಳ ಕಾಲ ದರ್ಸಿನಲ್ಲಿ ಕಷ್ಟಪಟ್ಟು ಕಲಿತ ಆಲಿಮ್'ಗಳ ನೇತ್ರತ್ವವಿಲ್ಲದೇ, ಬರೀ ಕೆಲವು ತಿಂಗಳುಗಳ ಕಾಲದಲ್ಲಿ CD ಹಾಗೂ ಕನ್ನಡ/ಮಲಯಾಳ ಭಾಷಾಂತರವನ್ನು ನೋಡಿ ದೀನ್ ಕಲಿತು ಜನರನ್ನು ವಸ್ವಾಸ್ ಮಾಡಲು ಬರುವ ಬಹಳ ಮಂದಿ ನಮ್ಮೆಡೆಯಲ್ಲಿ ಇದ್ದಾರೆ. ಅವರಿಂದ ವಂಚಿತರಾಗದಿರಿ.

ಅಹ್ಲು ಸುನ್ನತಿ ವಲ್ ಜಮಾಅತಿನ ನೈಜ ಆಶಯ ಆದರ್ಶಗಳಡಿಯಲ್ಲಿ ಜೀವಿಸಲು ಅಲ್ಲಾಹು ನಮಗೆ ತೌಫೀಖ್ ನೀಡಲಿ ಹಾಗೂ ಅಹ್ಲುಬೈತನ್ನು ಗೌರವಿಸುವ ಕೂಟದಲ್ಲಿ ಅಲ್ಲಾಹು ನಮ್ಮನ್ನು ಒಳಪಡಿಸಲಿ. ಆಮೀನ್.

*✍🏻ಅನ್ಸಾರ್ ಸೈದು*

No comments:

Post a Comment