🕌🕌🕌🕌🕌🕌🕌🕌🕌🕌🕌🕌 *ಸುಬಹಿ* *ನಮಾಝಿನಲ್ಲಿ* *ಖುನೂತ್.* 🕌🕌🕌🕌🕌🕌🕌🕌🕌🕌🕌🕌
*﷽*
*ಭಾಗ --0⃣3⃣*
📝 *ಮುನೀರ್* *ಸಖಾಫಿ,* *ಸಾಲೆತ್ತೂರು.*
------------------------------------------------------
*ಖುರ್ ಆನಿನಲ್ಲಿ ಖುನೂತ್ ನ ಬಗ್ಗೆ ಪ್ರಸ್ತಾಪಿಸಲಾದ ಆಯತ್ ನ ಕುರಿತು ಖುರ್ ಆನ್ ವ್ಯಾಖ್ಯಾನಗಾರರು ಬರೆದ ವ್ಯಾಖ್ಯಾನವನ್ನು ಭಾಗ 1ಮತ್ತು ಎರಡರಲ್ಲಿ ವಿವರಿಸಿದ್ದೇನೆ. ಸುಬಹಿ ನಮಾಝಿ ನಲ್ಲಿ ಖುನೂತ್ ಇದೆಯೆಂದು ಇಮಾಮರುಗಳ ಮಾತಿನಿಂದಲೇ ಬಹಳ ಸ್ಪಷ್ಟವಾಯಿತು.*
*ಖುನೂತ್* *ಹದೀಸ್* *ಗಳ* *ಆಧಾರದಲ್ಲಿ....*
ಇಮಾಮ್ ಬೈಹಖೀ (ರ) ರವರ ತನ್ನ ಸುನನ್ ನ ಒಂದು ಅಧ್ಯಾಯ ನೋಡಿ;
باب الدليل علي انه لم يترك اصل القنوت في صلاة الصبح انما ترك الدعاء لقوم او علي اخرين باسمائهم او قبائلهم.
(ಅರ್ಥ : ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತನ್ನು ತ್ಯಜಿಸಲಿಲ್ಲ.ಶತ್ರುಗಳಿಗೆ ವಿರುದ್ಧವಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆಯನ್ನು ತ್ಯಜಿಸಿದ್ದಾರೆ.)
ನಂತರ ಇಮಾಮ್ ಬೈಹಖೀ (ರ) ಹಲವಾರು ಹದೀಸ್ ಗಳನ್ನು ವರದಿ ಮಾಡುತ್ತಾರೆ.
ಅದರಲ್ಲಿ ಕೆಲವೊಂದು ಹದೀಸನ್ನು ನೋಡಿರಿ,
عن الربيع بن انس : ان النبي صلي الله عليه وسلم قنت شهرا يدعو عليهم،ثم تركه ،فاما في الصبح فلم يزل يقنت حتي فارق الدنيا (سنن الكبري)
ಅನಸ್ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳ ಕಾಲ ಶತ್ರುಗಳಿಗೆ ವಿರುದ್ಧವಾಗಿ ಪ್ರಾರ್ಥಿಸುತ್ತಿದ್ದರು.ನಂತರ ಅದನ್ನು ನಿಲ್ಲಿಸಿದರು.ಸುಬಹಿ ನಮಾಝಿನಲ್ಲಿ ವಫಾತ್ ತನಕ ಖೂನೂತ್ ಓದಿಯೇ ನಮಾಝ್ ನಿರ್ವಹಿಸುತ್ತಿದ್ದರು."
(ಸುನನುಲ್ ಬೈಹಖೀ).
ಇನ್ನೂಂದು ಹದೀಸ್ ನೋಡಿ,
عن الربيع بن انس قال: كنت جالسا عند انس فقيل له انما قنت رسول الله صلي الله عليه وسلم شهرا- فقال : ما زال رسول الله صلي الله عليه وسلم - يقنت في صلاة الغداة حتي فارق الدنيا.
(سنن الكبري للبيهقي 3230)
*ತಾಬಿಈ ಪ್ರಮುಖರಾದ ರಬೀಅ ಬಿನ್ ಅನಸ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ;ನಾನು ಅನಸ್ ರಲಿಯಲ್ಲಾಹು ಅನ್ಹುರವರ ಬಳಿ ಕುಳಿತಿದ್ದೆ.ಆವಾಗ ಅಲ್ಲಿ ಒಬ್ಬರು ಹೀಗೆ ಹೇಳಿದರು;*
" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳು ಮಾತ್ರ ಖುನೂತ್ ಓದಿದ್ದಾರೆ"ಇದನ್ನು ಕೇಳಿದ ,ಅನಸ್ ರಳಿಯಲ್ಲಾಹು ಅನ್ಹು ತಕ್ಷಣ ಹೇಳಿದರು,
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಮರಣದ ತನಕ ಖುನೂತ್ ನಿರ್ವಹಿಸಿದ್ದಾರೆ".
(ಸುನನುಲ್ ಕುಬ್ರಾ)
*ಹದೀಸ್* *ಲಹೀಫ್* *ಎಂಬ* *ವಾದಕ್ಕೆ* *ಉತ್ತರ* *...*
ಈ ಹದೀಸ್ ನ ಕುರಿತು ಇಮಾಮ್ ಬೈಹಖಿಯವರ ಮಾತು ನೋಡಿ;
قال ابو عبد الله : هذا اسناد صحيح سنده ثقات رواته، والربيع بن انس تابعي معروف من اهل البصرة سمع انس بن مالك ،روي عنه سليمان التيمي وعبد الله بن المبارك وغيرهما .وقال ابو محمد بن ابي حاتم سألت ابي وابا زرعة عن الربيع بن انس فقالا : صدوق
ثقة.(سنن الكبري)
ಅಬೂ ಅಬ್ದುಲ್ಲಾ (ರ)ಹೇಳುತ್ತಾರೆ; ಈ ಹದೀಸಿನ ಸನದ್ ಸಹೀಹ್ ಆಗಿದೆ.ವರದಿಗಾರರೆಲ್ಲರೂ ವಿಶ್ವಾಸ ಯೋಗ್ಯರಾದ ವ್ಯಕ್ತಿಗಳಾಗಿದ್ದಾರೆ.ರಬೀಅ ಬಿನ್ ಅನಸ್ ಎಂಬವರು ಬಸರ ನಿವಾಸಿಯೂ ತಾಬಿವುಗಳ ಪೈಕಿ ಉನ್ನತರೂ ಆಗಿದ್ದಾರೆ.ಅಬೂ ಮುಹಮ್ಮದ್ (ರ) ಹೇಳುತ್ತಾರೆ; ನಾನು ನನ್ನ ತಂದೆಯೊಂದಿಗೆ ಮತ್ತು ಅಬೂ ಝುರ್ ಅರೊಂದಿಗೆ ಅವರ ಬಗ್ಗೆ ಕೇಳಿದಾಗ ಸತ್ಯವಂತರೆಂದು ಉತ್ತರಿಸಿದರು.
(ಸುನನುಲ್ ಕುಬ್ರಾ)
ಇಮಾಮ್ ಬೈಹಖಿ ಅಲ್ಲದೇ ಹಲವಾರು ಇಮಾಮರುಗಳು ಈ ಹದೀಸನ್ನು ಸಹೀಹ್ ಎಂದು ಹೇಳಿದ್ದಾರೆ.
ಇಮಾಮ್ ಹಾಫಿಲ್ ಹೈಸಮೀ (ರ) ಹೇಳುತ್ತಾರೆ;
وعن انس ما زال رسول الله صلي الله عليه وسلم يقنت في الفجر حتي فارق الدنيا.رواه احمد والبزار بنحوه .ورجاله موثقون.
(مجمع الزوايد)
*ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ್ ಖುನೂತ್ ಓದುತ್ತಿದ್ದರು.ಇದನ್ನು ಇಮಾಮ್ ಅಹ್ಮದ್ , ಬಝ್ಝಾರ್ ,ವರದಿ ಮಾಡಿದ್ದಾರೆ.ಇದರ ವರದಿಗಾರರು ವಿಶ್ವಸ್ಥರಾಗಿದ್ದಾರೆ.*
(ಮಜ್ ಮಉಝ್ಝವಾಯಿದ್ )
ಒಂದು ವೇಳೆ ಈ ಹದೀಸ್ ಲಯೀಫ್ ಆಗಿದ್ದರೆ ಇಮಾಮ್ ಬೈಹಖಿಯವರೇ ಅದನ್ನು ಹೇಳುತ್ತಿದ್ದರು. ಮಾತ್ರವಲ್ಲ ಇಮಾಮ್ ಬೈಹಖಿ (ರ) ಈ ಹದೀಸನ್ನು ಸಹೀಹ್ ಎಂದೇ ಹೇಳಿದ್ದಾರೆ.
ಸುಬಹಿ ನಮಾಝಿನಲ್ಲಿ ಖುನೂತ್ ಓದುವುದು ಬಿದ್ ಅತ್ ಆಗಿದ್ದರೆ ಇಮಾಮ್ ಬೈಹಖಿ (ರ) ಈ ಹದೀಸನ್ನು ಖುನೂತ್ ಗೆ ಆಧಾರವಾಗಿ ವರದಿ ಮಾಡುತ್ತಿರಲಿಲ್ಲ.(ಇಮಾಮ್ ಬೈಹಖಿ ಪ್ರಸ್ತುತ ಹದೀಸ್ ವರದಿ ಮಾಡಿದ ಅಧ್ಯಾಯವನ್ನು ಮೇಲೆ ವಿವರಿಸಿದ್ದೇನೆ.)
ಇಮಾಮ್ ಬೈಹಖಿಯವರ ಪ್ರಸ್ತುತ ಹದೀಸಿನ ಕುರಿತು ಇಮಾಮ್ ಇಬ್ನ್ ಹಜರ್ (ರ) ರವರ ಗ್ರಂಥದಲ್ಲಿ ಲಹೀಫೆಂದು ಹೇಳಿದ್ದಾರೆಂದು ಒಬ್ಬ ಮೌಲವಿ ಬರೆದುದನ್ನು ಓದಲು ಸಾಧ್ಯವಾಯಿತು.
ಪವಿತ್ರ ಖುರ್ ಆನಿಗೆ ಮತ್ತು ಹದೀಸಿಗೆ ದುರ್ವ್ಯಾಖ್ಯಾನ ನೀಡುವುದು, ಹದೀಸನ್ನು ದುರ್ಬಲಗೊಳಿಸುವುದು ,ಕಿತಾಬಿನ ಇಬಾರತ್ ಕದ್ದು ಅರ್ಧ ಓದುವುದು ವಹ್ಹಾಬಿಗಳ ನಿತ್ಯ ಶೈಲಿಯಾಗಿ ಬಿಟ್ಟಿದೆ.ಇಲ್ಲೂ ಕೂಡಾ ಅದೇ ಸಂಭವಿಸಿದೆ.ಇಮಾಮ್ ಇಬ್ನ್ ಹಜರ್ (ರ)ಪ್ರಸ್ತುತ ಹದೀಸಿನಲ್ಲಿರುವ ವರದಿಗಾರರಾದ ಅಬೂ ಜಅಫರ್ ಎಂಬವರ ಕುರಿತು ತನ್ನ "ತಹ್ದೀಬುತ್ತಹ್ದೀಬಿ" ನಲ್ಲಿ ಹಲವಾರು ಇಮಾಮರುಗಳು ಹೇಳಿದ ಹೇಳಿಕೆಗಳನ್ನು ಉದ್ಧರಿಸಿದ್ದಾರೆ.ಹಲವಾರು ಇಮಾಮರುಗಳು ಅವರ ಕುರಿತು ಸತ್ಯವಂತರೆಂದು ಹೇಳಿದ್ದನ್ನು ಅದರಲ್ಲೇ ಕಾಣಬಹುದು.ಇದನ್ನು ಮುಚ್ವಿಟ್ಟು ಅಜ್ಞಾನಿ ತನ್ನ ಬೇಳೆ ಬೇಯಿಸಲು ಶ್ರಮಿಸಿದ್ದಾನೆ.
ಪ್ರಸ್ತುತ ಗ್ರಂಥದಲ್ಲಿ ಇಮಾಮ್ ಇಬ್ನ್ ಹಜರ್ (ರ) , ಅಬೂಜಾಫರ್ ಎಂಬವರ ಕುರಿತು ಇಮಾಮರುಗಳು ಹೇಳಿದ್ದನ್ನು ವಿವರಿಸುವುದು ನೋಡಿ,6
(ಮೌಲವಿ ಕದ್ದ ಭಾಗ)
قال اسحاق بن منصور عن يحي بن معين كان ثقة.
ಇಬ್ನ್ ಮಯೀನ್ ರಿಂದ ಇಬ್ನ್ ಇಸ್ ಹಾಖ್ (ರ) ಹೇಳುತ್ತಾರೆ;
ಅವರು ವಿಶ್ವಾಸ ಯೋಗ್ಯರು.
وقال ابن ابي خيثمة عن بن معين صالح.
ಇಬ್ನ್ ಅಬೀ ಕೈಸಮ ಹೇಳುತ್ತಾರೆ; ಅವರು ಸ್ವೀಕಾರ್ಯರು.
وقال الدوري عن بن معين ثقة
وهو يغلط فيما يروي عن مغيرة .
ಇಬ್ನ್ ಮಯೀನ್ ರಿಂದ ಇಮಾಮ್ ದವ್ ರೀ ಹೇಳುತ್ತಾರೆ;ಅವರು ವಿಷ್ವಾಸ ಯೋಗ್ಯರು.
ಮುಗೀರತ್ (ರ) ರಿಂದ ವರದಿ ಮಾಡಿದವುಗಳಲ್ಲಿ ಪ್ರಮಾದ ಸಂಭವಿಸಿದೆ.(ಖುನೂತ್ ನ ಹದೀಸ್ ಅವರಿಂದ ವರದಿ ಮಾಡಿದ ಹದೀಸ್ ಅಲ್ಲ.)
وقال محمد بن عثمان بن ابي شيبة عن علي بن المديني كان عندنا ثقة.
ಮುಹಮ್ಮಮದ್ ಬಿನ್ ಉಸ್ಮಾನ್ (ರ) ಹೇಳುತ್ತಾರೆ;
"ಅವರು ವಿಶ್ವಾಸಯೋಗ್ಯರು."
وقال بن عمار ثقة .
ಇಬ್ನ್ ಅಮ್ಮಾರ್ ಹೇಳಿದರು;
" ಅವರು ವಿಶ್ವಸ್ಥರು."
وقال ابو حاتم : ثقة صدوق صالح الحديث.
ಅಬೂ ಹಾತಿಮ್ ಹೇಳಿದರು;
"ಅವರು ಹದೀಸಿಗೆ ಅರ್ಹತೆಯಿರುವವರು"
وقال بن عدي : له احاديث صالحة
"ಅವರಿಗೆ ಸ್ವೀಕಾರ್ಹವಾದ ಹದೀಸುಗಳಿವೆ."
وقال بن سعد: كان ثقة.
ಇಬ್ನ್ ಸ ಅದ್ (ರ) ಹೇಳುತ್ತಾರೆ; ಅವರು ವಿಶ್ವಸ್ಥರು"
(ತಹ್ದೀಬುತ್ತಹ್ದೀಬ್ )
ಇನ್ನೂ ಕೂಡಾ ಅಬೂ ಜ ಅಫರ್ ಎಂಬವರ ವಿಶ್ವಾಸಯೋಗ್ಯರು ಎಂಬುವುದಕ್ಕೆ ಹಲವಾರು ಉದ್ಧರಣಿಗಳಿವೆ.ಲೇಖನ ಧೀರ್ಘವಾಗುವ ಭಯದಿಂದ ಇಷ್ಟಕ್ಕೆ ಸೀಮಿತಗೊಳಿಸುತ್ತೇನೆ.
ಮಾತ್ರವಲ್ಲ ,ಒಂದು ಹದೀಸಿನ ಕುರಿತು ಲಹೀಫ್ ಅಥವಾ ಸ್ವಹೀಹ್ ಎಂದು ಹೇಳಲು ಹಾಫಿಲ್ ಗಳಾದ ಮುಹದ್ದಿಸ್ ಗಳಿಗೆ ಮಾತ್ರ ಅಕಾಶವಿದ್.ಅದು ಬಿಟ್ಟು ಕಂಡ ಕಂಡವರಿಗೆಲ್ಲಾ ಹದೀಸನ್ನು ಲಹೀಫ್ ಗೊಳಿಸುವ ಅರ್ಹತೆ ಇಲ್ಲ.ಈ ವಿಷಯವನ್ನು ಇಮಾಮ್ ಸುಯೂಥಿ (ರ) ತನ್ನ"ಅಲ್ ಫಿಯ" ದಲ್ಲಿ ವಿವರಿಸಿದ್ದಾರೆ.ಹದೀಸಿನ ಕುರಿತು ಬಾಲಪಾಠವಿಲ್ಲದ ವಹ್ಹಾಬಿಗಳು ಏನು ಹೇಳಿದರೂ ಆಶ್ಚರ್ಯಪಡಬೇಕಾಗಿಲ್ಲ.
*ಖುನೂತಿನ ಕುರಿತಿರುವ ಹದೀಸ್ ಗಳೆಲ್ಲವೂ ಲಹೀಫ್ ಆಗಿದ್ದರೆ(ವಹ್ಹಾಬಿಗಳ ವಾದ ಪ್ರಕಾರ) ಇಮಾಮರುಗಳು ಖುನೂತು ಸುನ್ನತ್ತೆಂದು ಗ್ರಂಥಗಳಲ್ಲಿ ಹೇಳುತ್ತಿರಲಿಲ್ಲ.ಶಾಫಿಈ ಮದ್ಸ್ ಹಬ್ ನ ಎಲ್ಲಾ ಗ್ರಂಥಗಳಲ್ಲಿ ಖುನೂತ್ ಸುನ್ನತ್ತಿದೆಯೆಂದೂ ಒಂದುವೇಳೆ ಖುನೂತ್ ಮರೆತು ಹೋದರೆ ಸಹ್ ವಿನ ಸುಜೂದಿನಿಂದ ಅದು ಪರಿಹಸಲ್ಪಡುತ್ತದೆ ಎಂದು ಹೇಳುವಾಗ ಈ ಇಮಾಮರುಗಳೆಲ್ಲರೂ ಬಿದತ್ ನ ಪ್ರಚಾರಕರಾಗಿದ್ದರೇ?*
ಒಟ್ಟಿನಲ್ಲಿ ಖುನೂತ್ ನ ಹದೀಸ್ ವರದಿ ಮಾಡಿದ ಅಬೂ ಜ ಅಫರ್ ಎಂಬವರು ವಿಶ್ವಾಸ ಯೋಗ್ಯರಾಗಿದ್ದಾರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಇಮಾಮರುಗಳು ಒಂದು ಹೇಳಿಕೆಯನ್ನು ಹೇಳಿದರೆ ಮುಸ್ಲಿಮರಿಗೆ ಅದು ಬಿಟ್ಟು ಅಧುನಿಕ ವಹ್ಹಾಬಿಗಳ ಸಂಶೋಧನೆಯ ಅಗತ್ಯವಿಲ್ಲ.
ಮನಬಂದಂತೆ ಹದೀಸನ್ನು ದುರ್ಬಲ ಗೊಳಿಸಿದ ಅಲ್ಬಾನಿ ಎಂಬ ಅಲ್ಪಜ್ಞಾನಿಯೋ ಇನ್ನಿತರ ಇಬ್ನ್ ಬಾಝ್ ನಂತಹ ವಹ್ಹಾಬಿಗಳ ಮಾತಿಗೆ ಮುಸ್ಲಿಮರು ಬೆಲೆ ಕಲ್ಪಿಸಬೇಕಾದ ಆವಶ್ಯಕತೆಯಿಲ್ಲ.
ಮುಂದುವರಿಯುವುದು...
*ವಿ.ಸೂ: ಖುನೂತ್ ನ ಕುರಿತಿರುವ ಇನ್ನಷ್ಟು ಹದೀಸ್ ಗಳು ಮುಂದಿನ ಭಾಗದಲ್ಲಿ.*
No comments:
Post a Comment