Thursday, October 5, 2017

ಉರೂಸ್ ಆಚರಣೆ ಇಸ್ಲಾಮಿನಲ್ಲಿ.

ಭಾಗ -16

📝 ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ , ತೋಕೆ.

ಜನ್ನತುಲ್ ಬಖೀಅದಲ್ಲಿದ್ದ ಪ್ರಮುಖ ದರ್ಗಾಗಳು:

ಜನ್ನತುಲ್ ಬಖೀಅದಲ್ಲಿ ಅಲಿಯ್ಯ್ ಬಿನ್ ಹುಸೈನ್ , ಮುಹಮ್ಮದ್ ಬಿನ್ ಅಲಿಯ್ಯುಲ್ ಬಾಖಿರ್ ,
ಜಅ್ ಫರುಸ್ಸಾದಿಖ್ , ಉಖೈಲ್ ಬಿನ್ ಅಬೀ ತ್ವಾಲಿಬ್ ರಳಿಯಲ್ಲಾಹು ಅನ್ಹುಮ್ ಮುಂತಾದವರ ಖಬರ್ ಗಳ ಮೇಲೆ ಖುಬ್ಬಗಳು ಇತ್ತೆಂದು 'ಅಲ್ ಫಜ್ರುಲ್ ಮುನೀರ್ ಗ್ರಂಥದ 128, 129 ಪುಟಗಳಲ್ಲಿ ಕಾಣಬಹುದು.

ಇಮಾಮ್ ಅಬೂ ಹನೀಫ ರಲಿಯಲ್ಲಾಹು ಅನ್ಹು ರವರ ದರ್ಗಾ:

ಬಹು! ಇಮಾಮುಲ್ ಅಅ್ ಳಮ್ ಅಬೂ ಹನೀಫಾ ರಲಿಯಲ್ಲಾಹು ಅನ್ಹುರವರ ಖಬರಿನ ಮೇಲೆ ಖುಬ್ಬ ಇದೆಯೆಂದೂ ಅಲ್ಲಿ ಝಿಯಾರತ್ ಗಾಗಿ ಜನರು ಬರುತ್ತಿದ್ದಾರೆಂದೂ ಇಮಾಮ್ ಝರ್ಕಶೀ ರಲಿಯಲ್ಲಾಹು ಅನ್ಹು ತನ್ನ ಇಅ್ ಲಾಮುಸ್ಸಾಜಿದ್ ಬಿಅಹ್ ಕಾಮಿಲ್ ಮಸಾಜಿದ್  ನ ಪುಟ 32ರಲ್ಲೂ, ಇಮಾಮ್ ಇಬ್ನ್ ಖಲ್ಲಿಖಾನ್ ತನ್ನ ವಫಯಾತುಲ್ ಅಅ್ ಯಾನ್ 414/ 5 ರಲ್ಲೂ ಸ್ಪಷ್ಟಪಡಿಸಿದ್ದಾರೆ.

ಇಮಾಮ್ ಮಾಲಿಕ್ ರಲಿಯಲ್ಲಾಹು ಅನ್ಹುರವರ ದರ್ಗಾ:

ಇಮಾಮ್ ಮಾಲಿಕ್ ರಲಿಯಲ್ಲಾಹು ಅನ್ಹು ರವರ ಖಬರ್ ಜನ್ನತುಲ್ ಬಖೀಅದಲ್ಲಾಗಿದೆಯೆಂದೂ , ಅದರ ಮೇಲ್ಭಾಗದಲ್ಲಿ ಖುಬ್ಬ ಇದೆಯೆಂದೂ ಇಮಾಮ್ ನವವಿ ರಲಿಯಲ್ಲಾಹು ಅನ್ಹು ತನ್ನ ತಹ್ ದ್ಸೀಬುಲ್ ಅಸ್ಮಾಇ ವಲ್ಲುಗಾತ್ 79/ 2 ರಲ್ಲಿ ತಿಳಿಸಿದ್ದಾರೆ.

ಇಮಾಮ್ ಶಾಫಿಈ ರಲಿಯಲ್ಲಾಹು ಅನ್ಹು ರವರ ದರ್ಗಾ:

ಇಮಾಮ್ ಶಾಫಿಈ ರಲಿಯಲ್ಲಾಹು ಅನ್ಹುರವರ ಖಬರ್ ಈಜಿಪ್ತಿನಲ್ಲಗಿದೆಯೆಂದೂ ಅದರ ಮೇಲ್ಭಾಗದಲ್ಲಿ ಅತೀ ಮನೋಹರವಾದ ಖಬ್ಬ ಇದೆಯೆಂದೂ ಇಮಾಮ್ ನವವೀ ರಲಿಯಲ್ಲಾಹು ಅನ್ಹು ತನ್ನ ಶರಹುಲ್ ಮುಹದ್ದಬ್ ನ 13/ 1 ರಲ್ಲೂ ,ನೂರುಲ್ ಅಬ್ ಸ್ವಾರ್  ನ ಪುಟ  246 ರಲ್ಲೂ ಕಾಣಬಹುದಾಗಿದೆ.
ಮಾತ್ರವಲ್ಲ ಇಂದೂ ಕೂಡಾ ಆ ದರ್ಗಾವನ್ನು ಅದೇ ರೀತಿ  ಕಾಣಬಹುದಾಗಿದೆ.

ಇಮಾಮ್ ಇಬ್ನ್ ಫೂರಕ್ ರಲಿಯಲ್ಲಾಹು ಅನ್ಹು ರವರ ದರ್ಗಾ:

ಬಹು! ಇಮಾಮ್ ಅಬೂಬಕರ್ ಬಿನ್ ಫೂರಕ್ ರಲಿಯಲ್ಲಾಹು ಅನ್ಹು ರವರ ಖಬರಿನ ಮೇಲ್ಭಾಗದಲ್ಲಿ  ಕಟ್ಟಡವಿತ್ತೆಂದೂ  ಜನರು ಝಿಯಾರತ್ ಗಾಗಿ ಅಲ್ಲಿಗೆ ಬರುತ್ತಾರೆಂದೂ ವಫಯಾತುಲ್ ಅಅ್ ಯಾನ್  27 /4 ರಲ್ಲಿ ಕಾಣಬಹುದಾಗಿದೆ.

ವಹ್ಹಾಬಿಗಳ ಕರಸೇವೆ!

ಮಕ್ಕಾ ಮದೀನಾದಲ್ಲಿ ಹಲವಾರು ದರ್ಗಾಗಳಿತ್ತೆಂಬುವುದನ್ನೂ , ಅಲ್ಲಿಗೆ ಜನರು ಝಿಯಾರತ್ ಗಾಗಿ ಬರುತ್ತಿದ್ದರೆಂಬುವುದನ್ನು ಈಗಾಗಲೇ ವಿವರಿಸಲಾಯಿತು.ಆದರೆ ಹಿ.12 ನೇ ಶತಮಾನದಲ್ಲಿ ಸೌದಿ ಅರೇಬಿಯಾದ ಆಡಳಿತವು ವಹ್ಹಾಬಿಗಳ ಕೈಗೆ ಸಿಕ್ಕಿದಾಗ ಅಲ್ಲಿದ್ದ ಸರ್ವ ದರ್ಗಾಗಳನ್ನು ಅವರು ಕೆಡವಿ ನೆಲಸಮಗೊಳಿಸಿದರು.ಅದನ್ನು ಸ್ವತಃ ವಹ್ಹಾಬಿಗಳೇ  ಅವರ ಪುಸ್ತಕದಲ್ಲಿ ತಿಳಿಸಿದ್ದಾರೆ.ಕೇರಳ ನದ್ವತುಲ್ ಮುಜಾಹಿದೀನ್ ( ಸಲ್ಪಿ ಸಂಘಟನೆ ) ವತಿಯಿಂದ ಪ್ರಕಟಿಸಿದ
'ಇಸ್ಲಾಹೀ ಪ್ರಸ್ಥಾನ ಚರಿತ್ರತ್ತಿನ್ನೊರು ಆಮುಗಂ '
ಎಂಬ ಪುಸ್ತಕದಲ್ಲಿ ಪಿ.ಕುಟ್ಟಶ್ಶೇರಿ ಮೌಲವಿ ಹೇಳುವುದನ್ನು ನೋಡಿ,
"ಪ್ರವಾದಿಯವರ ಖಬರಿನ ಬಳಿ ಸಹಾಭ್ಯರ್ಥನೆ ನಡೆಸಬಾರದೆಂದಾಗಿದೆ ಅವರು ( ಇಬ್ನ್ ಅಬ್ದಿಲ್ ವಹ್ಹಾಬ್ ) ಪ್ರಥಮವಾಗಿ ವಾದಿಸಿದ್ದು.ನೂಲು ಮಂತ್ರಿಸಿ ಊದುವುದು , ತಾಯಿತ ಕಟ್ಟುವುದು , ಮಹಾತ್ಮರುಗಳ ಖಬರುಗಳಿಗೆ ವಿಶೇಷ ಮಹತ್ವವನ್ನು ನೀಡುವುದು ತಪ್ಪಾಗಿದೆಯೆಂದು ಅವರು ಸಮರ್ಥಿಸಿದರು(?) ಮಖ್ ಬರಗಳನ್ನು ಧ್ವಂಸಗೊಳಿಸಿದರಲ್ಲದೆ ಜನರು ಪೂಜಿಸುತ್ತಿದ್ದ ಮರಗಳನ್ನು ಕಡಿದು ಹಾಕಿದರು"
(ಪುಟ 14 )

ಡಾ! ಅಬ್ದುಲ್ ಬಾಸಿತ್ ರವರು ಹೇಳುವುದನ್ನು ನೋಡಿ,
( ವಹ್ಹಾಬಿಯಾಗಿದ್ದ )ಅಬ್ದುಲ್ ಅಝೀಝ್ ಬಿನ್ ಸಊದ್  ಹಿ.1344 ರಲ್ಲಿ ಮದೀನವನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ದರ್ಗಾಗಳನ್ನು ಕೆಡವಿ ನೆಲಸಮಗೊಳಿಸಿದನು"
(ಅತ್ತಾರಿಖುಶ್ಶಾಮಿಲ್ ಲಿಲ್ ಮದೀನತಿಲ್ ಮುನವ್ವರ 297, 298/ 3)
ಬಹುಮಾನ್ಯರಾದ ಅಲ್ಲಾಮಾ ಇಬ್ರಾಹಿಂ ಅಸ್ಸಮ್ ನೂದಿ ರಲಿಯಲ್ಲಾಹು ಅನ್ಹು ಹೇಳುವುದನ್ನು ನೋಡಿ,
" ವಹ್ಹಾಬಿಗಳು ಮಕ್ಕಾದಲ್ಲಿದ್ದ ಔಲಿಯಾಗಳ ಖುಬ್ಬಗಳನ್ನು ಕೆಡವಿ ಹಾಕಿದರು".
( ಸಆದತುದ್ದಾರೈನ್ 39 / 1)

ಮುಂದುವರಿಯುವುದು...

No comments:

Post a Comment