..

ವಿದೇಶಿ ಛಾಪಿನ ಧರ್ಮಗಳಲ್ಲಿ ಮೊದಲಿಗೆ ಭಾರತದ ನೆಲದಲ್ಲಿ ನೆಲೆಯೂರಲು ಸಾಧ್ಯವಾದದ್ದು ಯಹೂದಿ ಧರ್ಮಕ್ಕೆ. ಮದ್ಯಪ್ರಾಚ್ಯದಲ್ಲಿ ಆರಂಭವಾಗಿದ್ದ ಇಸ್ಲಾಮಿ ಹಾಗೂ ಕ್ರೈಸ್ತ ಧರ್ಮ ಯುದ್ದ (ಕ್ರುಸೇಡ್)ದ ಬಲಿಪಶುಗಳಾಗಿದ್ದ ಯಹೂದ್ಯರು ಮೊದಲಿಗೆ ಒಂದೂವರೆ ಸಾವಿರ ವರ್ಷದಿಂದೀಚೆಗೆ ಭಾರತಕ್ಕೆ ಸಮುದ್ರಮಾರ್ಗವಾಗಿ ಬಂದರು, ಇಂದಿನ ಕೇರಳದ ಕರಾವಳಿಯಲ್ಲಿ ಹಾಗು ಪೂರ್ವಕರಾವಳಿಯ ಮೂಲಕ ತ್ರಿಪುರ ಹಾಗು ನಾಗಾಲ್ಯಾಂಡಿನ ಗುಡ್ಡಗಾಡುಗಳಲ್ಲಿ ಇವರು ನೆಲೆಯೂರಿದರು. ಅನಂತರದ ಸರದಿ ಜತುರಾಷ್ಠನ ಅನುಯಾಯಿಗಳಾದ ಪರ್ಶಿಯನ್ನರದ್ದು. ಅರಬ್ಬಿಯಾದ ತುಂಬಾ ತನ್ನ ತೋಳ್ಬಲದಿಂದ ನೆಲೆ ಸ್ಥಾಪಿಸಿಕೊಂಡಿದ್ದ ಇಸ್ಲಾಂ ಪರ್ಷಿಯಾದ ರಾಜಗದ್ದುಗೆಯನ್ನ ಅಲುಗಾಡಿಸಿ ಅಲ್ಲಿನ ರಾಜಧರ್ಮವಾದ ಮೇಲೆ ನಿಷ್ಟಾವಂತ ಅಗ್ನಿ ಆರಾಧಕರಾದ ಪರ್ಶಿಯನ್ನರಿಗೆ ದೇಶಭ್ರಷ್ಟರಾಗುವ ಹೊರತು ಇನ್ಯಾವುದೆ ಆಯ್ಕೆಗಳು ಉಳಿದಿರಲಿಲ್ಲ.
ಹೀಗಾಗಿ ಅವರಲ್ಲಿ ಬಹುತೇಕರು ಸ್ವಧರ್ಮ ಭ್ರಷ್ಟರಾಗಲು ಇಚ್ಚಿಸದೆ ಭಾರತ ಉಪಖಂಡದ ಗುಜರಾತ್ ಹಾಗು ಮಹಾರಾಷ್ಟ್ರದ ಕರಾವಳಿಗಳಿಗೆ ರಾಜಕೀಯ ಆಶ್ರಯ ಬಯಸಿ ಗುಳೆ ಬಂದರು. ಇವೆರಡೂ ಧರ್ಮಾನುಯಾಯಿಗಳು ಕೇವಲ ಇಲ್ಲಿ ನೆಲೆ ಕಂಡುಕೊಂಡು ಮುಖ್ಯವಾಹಿನಿಯಲ್ಲಿ ಬೆರೆತುಹೋದರೆ ವಿನಃ ತಮ್ಮ ಧರ್ಮ ಪ್ರಚಾರದ ಯಾವುದೆ ಒಳ ಉದ್ದೇಶಗಳನ್ನ ಹೊಂದಿರಲಿಲ್ಲ ಅನ್ನೋದು ಗಮನಾರ್ಹ. ಇದರ ಬಗ್ಗೆ ಒಂದು ಕುತೂಹಲ ಹುಟ್ಟಿಸುವ ಕಥೆ ಚಾಲ್ತಿಯಲ್ಲಿದೆ. ಗುಜರಾತಿನ ಅಂದಿನ ಸನಾತನ ರಾಜನ ಬಳಿ ಆಶ್ರಯ ಬಯಸಿ ಬಂದ ಪರ್ಶಿಯನ್ನರ ಮುಖಂಡನಿಗೆ ರಾಜ 'ಆಶ್ರಯ ಕೇಳುವ ನಿಮ್ಮನ್ನ ಹೇಗೆ ನಂಬೋದು?' ಅಂದನಂತೆ. ಆವಾಗ ರಾಜನ ಪಾಕಶಾಲೆಯಿಂದ ಒಂದು ಲೋಟ ಹಾಲನ್ನು ತರಿಸಲು ಕೋರಿದ ಆ ಪರ್ಶಿಯನ್ನರ ಮುಖಂಡ ತನ್ನ ಚೀಲದಿಂದ ಚಮಚೆ ಸಕ್ಕರೆ ತೆಗೆದು ಅದಕ್ಕೆ ಬೆರೆಸಿ 'ನೋಡಿ ಹಾಲಲ್ಲಿ ಸಕ್ಕರೆ ಬೆರೆತಂತೆ ನಿಮ್ಮೊಂದಿಗೆ ಬೇರೆಯುತ್ತೇವೆ!' ಎಂದು ಉತ್ತರಿಸಿದನಂತೆ. ಹೀಗೆ ರಾಜನ ಮನಗೆದ್ದ ಪರ್ಷಿಯನ್ನರು ಕೊನೆಗೂ ತಮ್ಮ ನುಡಿಗೆ ಬದ್ಧರಾಗಿಯೆ ಉಳಿದರು. ಇಂದಿಗೂ ಗುಜರಾತಿನ ಸೂರತ್ ಹಾಗು ಮಹಾರಾಷ್ಟ್ರದ ಮುಂಬೈನ ಆರ್ಥಿಕ ಪ್ರಪಂಚದಲ್ಲಿ ಪಾರಸಿ ವ್ಯಾಪಾರಿಗಳದ್ದೆ ರಾಜ್ಯಭಾರ. ಹೀಗಿದ್ದರೂ ಅವರನ್ನ ಧರ್ಮಾಧರಿತವಾಗಿ ಗುರುತಿಸಲಾಗದಂತೆ ಸಮಾಜದ ಐಕ್ಯತೆಯಲ್ಲಿ ಆ ಸಮುದಾಯ ಲೀನವಾಗಿ ಹೋಗಿದೆ. ಉದಹಾರಣೆಗೆ ಟಾಟಾ ಉದ್ಯಮ ಸಮುದಾಯವನ್ನೆ ಗಮನಿಸಿ.
ಆದರೆ ಭಾರತಕ್ಕೆ ಇಸ್ಲಾಮಿನ ಆಗಮನದ ಕಥೆ ತುಸು ವಿಭಿನ್ನವಾಗಿದೆ. ಎಲ್ಲರೂ ಆದು ಬಲಪ್ರಯೋಗದ ಮೂಲಕ, ಹೆಚ್ಚಾಗಿ ಗಜನಿ ಮಹಮ್ಮದನ ಅತಿಕ್ರಮಣದದಿಂದ ಭಾರತವನ್ನ ಹೊಕ್ಕಿತು ಅಂತಲೆ ಭಾವಿಸಿದ್ದಾರೆ. ಆದರೆ ವಾಸ್ತವ ಅದಲ್ಲ. ಇಸ್ಲಾಂ ಭಾರತದ ಭೂಮಿಗೆ ಅಡಿಯಿಟ್ಟದ್ದು ನೈಋತ್ಯ ಕರಾವಳಿಯ ಮೂಲಕ. ಗಜನಿ ಮಹಮದನ ಅತಿಕ್ರಮಣಕ್ಕೂ ಎರಡೂವರೆ ಶತಮಾನದ ಹಿಂದೆಯೆ ಕೇರಳದ ಕರಾವಳಿ ತೀರದಲ್ಲಿರುವ ಅಂದಿನ ಮುಸ್ಸೇರಿ ಪಟ್ಟಣ (ಇಂದಿನ ಕೊಲ್ಲಂ)ದ ಮೂಲಕ ಇಸ್ಲಾಂ ಭಾರತವನ್ನ ಪ್ರವೇಶಿಸಿತ್ತು. ಅದು ಅಂದಿನ ಕೇರಳದ ಪ್ರಮುಖ ರೇವುಪಟ್ಟಣವಾಗಿತ್ತು. ಅಂದಿನ ಕೇರಳ ಚಂದ್ರಗಿರಿಯ ದಕ್ಷಿಣಕ್ಕಿರುವ ತಂಬುರದಿಂದ ಭಾರತಭೂಮಿಯ ತುತ್ತತುದಿಗಿರುವ ಶಚೀಂದ್ರಂ (ಈಗ ತಮಿಳುನಾಡಿಗೆ ಸೇರಿದೆ) ವರೆಗೆ ವ್ಯಾಪಿಸಿದ್ದು ಐದು ಮುಖ್ಯ ರಾಜ್ಯಗಳಾಗಿ ಹಂಚಿಹೋಗಿತ್ತು. ಆ ಎಲ್ಲಾ ಪಾಳೆಪಟ್ಟುಗಳು ನಡು ಕೇರಳದಲ್ಲಿರುವ ಕೊಡುಂಗಲ್ಲೂರು ಸ್ಥಿತ ಚೇರ ರಾಜಮನೆತನದ ಸಾಮ್ರಾಜ್ಯಕ್ಕೆ ಅಧೀನವಾಗಿದ್ದು ರಾಜಕೀಯವಾಗಿ ಅಲ್ಲಿನ ವರ್ಮನ್ ಗದ್ದುಗೆಗೆ ನಿಷ್ಠವಾಗಿದ್ದವು.
ಅಲ್ಲಿಗೆ ಇಸ್ಲಾಂ ಪ್ರವೇಶಿಸಿದ ಬಗ್ಗೆ ಎರಡು ತರಹದ ಕತೆಗಳು ಚಾಲ್ತಿಯಲ್ಲಿವೆ. ಎರಡೂ ಕೂಡ ಜಾನಪದ ಮೂಲದವೇ ಅನ್ನೋದು ಗಮನಾರ್ಹ. ಮೊದಲನೆಯ ಕಥೆ ಹೀಗಿದೆ, ಅಲ್ಲಿನ ಆಳರಸ ನಡುವಯಸ್ಸಿನ ರಾಜ ರಾಮವರ್ಮ ಕುಲಶೇಖರನಿಗೆ ಒಂದು ರಾತ್ರೆ ಆಕಾಶದಿಂದ ತಾರೆಯೊಂದು ಎರಡಾಗಿ ಒಡೆದು ಬೀಳುವ ಅಪರೂಪದ ದೃಶ್ಯ ಕಂಡುಬಂತು. ಅದನ್ನ ಅನಿಷ್ಟದ ಶಕುನವಾಗಿ ಚಿಂತಿಸಿದ ರಾಜ 'ಚೇರಮಾನ ಪೆರುಮಾಳ್" (ಶ್ರೀಸಾಮಾನ್ಯರು ಅವನನ್ನ ಕರೆಯುತ್ತಿದ್ದುದೆ ಹಾಗೆ.) ಆಸ್ಥಾನದ ಜೋತಿಷಿಗಳಲ್ಲಿ ಈ ಬಗ್ಗೆ ವಿಚಾರಿಸಿದ. ಸೂಕ್ತ ಉತ್ತರ ದೊರೆಯದೆ ಖಿನ್ನನಾಗಿದ್ದ. ಆಗ ಅಲ್ಲಿಗೆ ಅರಬ್ಬಿಗಳ ವ್ಯಾಪಾರಿ ನಿಯೋಗವೊಂದು ವ್ಯಾಪಾರದ ಅನುಮತಿ ಕೋರಲು ಅವನ ಆಸ್ಥಾನಕ್ಕೆ ಬಂದಿತ್ತು. ಆ ನಿಯೋಗದ ಮುಖಂಡ ಈ ಸಮಸ್ಯೆಯನ್ನ ಮಹಮದ್ ಪೈಗಂಬರ್ ಇಸ್ಲಾಮನ್ನು ಅಲ್ಲಾಹನಿಂದ ಪ್ರೇರಿತನಾಗಿ ಭೋದಿಸ ತೊಡಗಿದ್ದಕ್ಕೆ ಸಮೀಕರಿಸಿದ. ಕಾಕತಾಳೀಯವಾಗಿ ಕನಸು ಬಿದ್ದ ಕಾಲಕ್ಕೂ ಪೈಗಂಬರನ ಪ್ರವಾದಿತನದ ಸ್ವಘೋಷಣೆಗೂ ಕಾಲದಲ್ಲಿ ಸಾಮ್ಯತೆ ಕಂಡು ಬಂತು. ಕ್ರಿಸ್ತಶಕ 639ಕ್ಕೆ ಕನಸು ಬಿದ್ದದ್ದು, ಪ್ರವಾದಿ ಭೋದನೆಗೆ ಆರಂಭಿಸಿದ್ದು ಕ…
[2:55 PM, 10/3/2017] Gafooru Bayar: ಎಸ್ಸೆಸ್ಸೆಫ್ ನ ವಜ್ರಪ್ರಕಾಶ ಇಮೇಜನ್ನು ವಜ್ರದೇಹಿ ಸ್ವಾಮೀಜಿಗೆ ಕೂಡಾ ಅಡಗಿಸಲು ಸಾದ್ಯವಿಲ್ಲ ಯಾಕೆ?
---------------------
ಹೌದು...
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ವಿರೋಧಿಗಳು, ನಾನಾ ರೀತಿಯಲ್ಲಿ ವಿಮರ್ಶಿಸಿದ್ದಾರೆ.
ಹೇಚ್ಚೇಕೆ 'ಹುಚ್ಚ' ನೆಂದೇ ಕರೆದರು!
ನಿಜವಾಗಿಯೂ ಪುಣ್ಯ ರಸೂಲರಿಗೆ ಅಂತಹ ಗಂಭೀರ ನ್ಯೂನತೆ ಬಿಡಿ, 'ನ್ಯೂನತೆ' ಎಂಬುದೇ ನೆಬಿಯವರನ್ನು ಟಚ್ಚ್ ಮಾಡಲಿಲ್ಲ!
ಅಷ್ಟಾಗಿಯೂ ಅವರು ಆ ಪುಣ್ಯ ರಸೂಲರನ್ನು 'ಹುಚ್ಚ' ನೆಂದೇ ಕರೆದು ಬಿಟ್ಟರು!!
ಇಲ್ಲಿ ನಾವು ಗಮನಿಸಬೇಕಾದ ಸತ್ಯವೊಂದಿದೆ.
ಅವರು (ಮಕ್ಕಾ ಮುಶ್ರಿಕರು) ಅದೆಷ್ಟೇ ಕೀಳುಮಟ್ಟದಲ್ಲಿ ನೆಬಿಯವರನ್ನು ವಿಮರ್ಶಿಸಿದರೂ ಒಳಗೊಳಗೆ ಅವರಿಗೆ ಆತಂಕವಿತ್ತು!
ಅವರು ಕೂಡಾ ಅವರರಿಯದೆ ಹೇಳುತ್ತಿದ್ದ ಒಂದು ವಾಕ್ಯವಿತ್ತು "ಅಲ್ ಅಮೀನ್" "ಸತ್ಯವಂತ"!
ಅಂದ್ರೆ ಬಿಲ್ಕುಲ್ ಸುಳ್ಳು ಹೇಳಲ್ಲ, ವಂಚನೆ ಮಾಡಲ್ಲ, ವಚನ ಭೃಷ್ಟ ಇಲ್ಲ, ಟೋಟಲಿಯಾಗಿ ಪುಣ್ಯ ರಸೂಲರು ಸತ್ಯವಂತ ಎಂಬ ಇಮೇಜ್ ವಜ್ರದಂತೆ ವಿರೋಧಿಗಳ ಎದೆಯನ್ನು ಸೀಳಿ ಪ್ರಕಾಶಿಸುತ್ತಿತ್ತು.
ಆದರೂ ಅವರು ತಮ್ಮವರನ್ನು ತೃಪ್ತಿ ಪಡಿಸಲು ನ್ಯೂನತೆಗಳಿಗೆ ಅತೀತವಾದ ಪುಣ್ಯ ಮನುಷ್ಯನನ್ನು "ಹುಚ್ಚನೆಂದು" ಕರೆದೇ ಬಿಟ್ಟರು!!
ಅದು ಈ ಲೋಕದ ರೂಡಿ ಕೂಡಾ!
ನಿಜವಾಗಿಯೂ ಇಲ್ಲಿ ಇಸ್ಲಾಂ ದಾಈ ಗಳಿಗೆ ಪಾಠವಿದೆ.
ಪ್ರತಿಯೊಬ್ಬ ಪ್ರಭೋದಕ ಅಥವಾ ಧಾರ್ಮಿಕ ಸಂಘಟನೆಗಳ ವಿರುದ್ದ ವಿಮರ್ಶನೆಗಳು ಸಹಜ. ಆರೋಪಗಳು ಅಷ್ಟೇ ಅಧಿಕ.
ಅದೇನೇ ಇದ್ದರೂ ಸದರಿ ಪ್ರಭೋದಕ ಅಥವಾ ಸಂಘಟನೆ ತನ್ನ ಇಮೇಜನ್ನು ಭದ್ರಪಡಿಸಿಕೊಳ್ಳಬೇಕು.
ಅದರಲ್ಲಿ ಎಸ್ಸೆಸ್ಸೆಫ್ ನೂರು ಶೇಖಡಾ ವಿಜಯಿಸಿದೆ.
ಕಾರಣ ಆ ಸಂಘಟನೆ ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳ ಆಶೀರ್ವಾದ ಮತ್ತು ನೇತೃತ್ವದಲ್ಲಿ ನಡೆಯುತ್ತದೆ.
ಹಾಗಾಗಿಯೇ ಎಸ್ಸೆಸ್ಸೆಫ್ ನ ವಿರುದ್ದ ಯಾರೂ ಏನೇ ಆರೋಪ ಮಾಡಿದರೂ ಅವರೆಲ್ಲರ ಹೃದಯ ಸೀಳಿ ಅದರ ಇಮೇಜ್ ವಜ್ರದಂತೆ ಪ್ರಕಾಶಿಸುತ್ತಲೇ ಇದೆ.
ಆದ್ದರಿಂದಲೇ ಪ್ರಸ್ ಮೀಟ್ ನೋಟ್ ನಲ್ಲಿ ಮತೀಯವಾದದ ಆರೋಪ ಟೈಪ್ ಮಾಡಿದವರಿಗೆ ಎಸ್ಸೆಸ್ಸೆಫ್ ಧರ್ಮದ ಏಳಿಗೆಗಾಗಿ ಎಂದು ಹೇಳಲೇ ಬೇಕಾಯಿತು!
ಅದಾಗಿದೆ ವಜ್ರ ಪ್ರಕಾಶದ ಇಮೇಜ್!
ಅಂದ್ರೆ ಎಸ್ಸೆಸ್ಸೆಫ್ ನ ಇಮೇಜನ್ನು ಮರೆಮಾಚಲು ಶ್ರಮಿಸುವುದು
ಸೂರ್ಯ ಪ್ರಕಾಶ ಮರೆಮಾಚಲು ಶ್ರಮಿಸುವುದಕ್ಕೆ ಸಮ.
ಕೆಲವೊಂದು ಸಂಘಟನೆಗಳು ಈ ವಿಷಯದಲ್ಲಿ ಸೋತಿದೆ.
ಅವರ ಎಂಟ್ರಿಯೇ ಆತಂಕಜನಕವಾಗಿತ್ತು!
ಅವರ ತರಗತಿಗಳು ಮಧ್ಯ ರಾತ್ರಿಯಲ್ಲಾಗಿತ್ತು!!
ಅವರಿಗೆ ಒಳಿತಿನ ಇಮೇಜ್ ಇರಲಿಲ್ಲ.
ಜಾತಿಬೇಧವಿಲ್ಲದೆ ಎಲ್ಲರೂ ಅವರ ಕುರಿತು ಆತಂಕ ಮತ್ತು ಭಯಭೀತಿಯಲ್ಲಿದ್ದರು. ಆ ಆತಂಕ ಮತ್ತು ಭಯ ನೀಗಿಸಲು ಅವರಿಗೆ ಇಂದಿಗೂ ಸಾದ್ಯವಾಗಿಲ್ಲ.
ಹಾಗಾಗಿಯೇ ಅವರು ಮಾಡುವ ಒಳಿತನ್ನು ಜನರು ಸಂಶಯ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಧರ್ಮ ರಕ್ಷಕರ ಹೆಸರಲ್ಲಿ ಬಂದವರಿಂದಲೇ ಧರ್ಮವು ಅಪಾಯ ಎದುರಿಸುತ್ತಿದೆ ಎಂದು ಹೇಳುವ ಮಟ್ಟಿಗೆ ತಲುಪಿದೆ.
ಇದರಲ್ಲಿ ಹಿಂದು ಮುಸ್ಲಿಮ್ ಎಂಬ ವ್ಯತ್ಯಾಸ ಇಲ್ಲ.
ಮೊನ್ನೆ ನಾನು ಮಿತ್ರರೊಬ್ಬರ ಜತೆ ಬಸ್ಸಲ್ಲಿ ಮಂಗಳೂರು ಸಂಚರಿಸುವಾಗ ಹಿಂದೂ ಮತೀಯ ಸಂಘಟನೆಯ ಹೆಸರಲ್ಲಿರುವ ಬಸ್ಸು ತಂಗುದಾಣದವೊಂದರ ಬೋರ್ಡ್ ನೋಡಿದೆ.
ಮಿತ್ರ ಅಚ್ಚರಿಯಿಂದ ಕೇಳಿದ
ಇವರು ಕೂಡಾ ಸೋಷಿಯಲ್ ವರ್ಕ್ ಮಾಡುತ್ತಾರಾ? ಇದರಲ್ಲಿ ಏನಾದರೂ ತಂತ್ರ ಇರಬಹುದೆಂದು...
ನನ್ನ ಮನಸ್ಸು ಅದು ಸರಿಯೆಂದು ಹೇಳಿತು.
ಇದೇ ರೀತಿ ಮುಸ್ಲಿಂ ಮತೀಯ ಸಂಘಟನೆಯವರ ಸೋಷಿಯಲ್ ವರ್ಕ್ ನೋಡಿ ಒಬ್ಬ ಹಿಂದು ಸಹೋದರನ ಮನಸ್ಸು ಅದೇ ರೀತಿ ಮಂತ್ರಿಸುತ್ತಿದ್ದರೆ ಅದು ಅವನ ತಪ್ಪಲ್ಲ.
ಕಾರಣ ಇಂತಹ ಸಂಘಟನೆಗಳು ಸಮಾಜದಲ್ಲಿ ಸಂಶಯಾಸ್ಪದವಾಗಿ ಎಂಟ್ರಿ ಕೊಟ್ಟಿದ್ದರಿಂದಲೇ ಅವರಿಗೆ ಒಳ್ಳೆಯ ಇಮೇಜ್ ಇಲ್ಲ.
ನಿರಂತರ ಆರೋಪಗಳು ಬರುತ್ತಿರುವಾಗ ಅದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.
ಆದರೆ ಎಸ್ಸೆಸ್ಸೆಫ್ ಅಂದೂ ಇಂದೂ ತನ್ನ ಉತ್ತಮ ಮತ್ತು ಒಳಿತಿನ ಇಮೇಜ್ ಗೆ ಬದ್ದವಾಗಿರುವುದರಿಂದಲೇ ಅದೆಷ್ಟೋ ಬೆಟ್ಟದಷ್ಟು ಆರೋಪ ಬಂದರೂ ಅದರ ವಜ್ರ ಪ್ರಕಾಶದ ಇಮೇಜ್ ನ ಮುಂದೆ ಅದೆಲ್ಲವೂ ನಗಣ್ಯವಾಗುತ್ತದೆ.
ನಿನ್ನೆ ವಜ್ರದೇಹಿ ಸ್ವಾಮೀಜಿಯವರ ಮಾತಿನ ತಿರುಳು ಕೂಡಾ ಅದೇ ಆಗಿತ್ತು. ಸರಿ ತಾನೇ?
- ಅಬೂಶಝ
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment