Sunday, October 1, 2017

ಖರ್ಜೂರದ ಮಡಲಿನ ಬೆಳಕಿನಿಂದ ಇಲೆಕ್ಟ್ರಾನಿಕ್ ಬಲ್ಬ್ ಗಳಿಗೆ ಬದಲಾದ ಮದೀನ ಮಸ್ಜಿದ್ 〰〰〰〰〰〰〰

 ✍ ಗಫೂರ್ ಬಾಯಾರ್
〰〰〰〰〰〰〰
🕌ಮದೀನ ಮಸೀದಿಯಲ್ಲಿ ಪ್ರಥಮವಾಗಿ ಸ್ಥಾಪಿಸಲಾದ ಇಲೆಕ್ಟ್ರಾನಿಕ್ ಬಲ್ಬ್ ನ ಚಿತ್ರಗಳು ಈಗಾಗಲೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಹಿಜರಿ ವರ್ಷ; 1325 ರಲ್ಲಾಗಿದೆ (1907) ಈ ಬಲ್ಬ್ ಮದೀನ ಮಸೀದಿಯಲ್ಲಿ ಸ್ಥಾಪಿಸಿರುವುದು ಎಂದಾಗಿದೆ ಬಲ್ಬ್ ನ ಮೇಲೆ ಬರೆದಿರುವುದು.

ಉಸ್ಮಾನಿಯ ಖಲೀಫ ಸುಲ್ತಾನ್ ಅಬ್ದುಲ್ ಮಾಜಿದ್ ಆಗಿದ್ದಾರೆ ಮದೀನ ಮಸೀದಿ ವಿಕಸನ ಸಮಯದಲ್ಲಿ ಈ ಬಲ್ಬ್ ಸ್ಥಾಪಿಸಿರುವುದು.

💡ಆ ಕಾಲಘಟ್ಟದಲ್ಲಿಯೇ ಆಗಿದೆ
ಪ್ರಥಮವಾಗಿ ಅರೇಬಿಯಾಕ್ಕೆ ವಿದ್ಯುತ್ ತಲುಪಿರುವುದು. ಅರೇಬಿಯನ್ ಉಪದ್ವೀಪೀನಲ್ಲಿ ಪ್ರಥಮವಾಗಿ ವಿದ್ಯುತ್ ದೀಪ ಹೊತ್ತಿಸಿರುವುದು ಮದೀನದ ಪ್ರವಾದಿ ﷺ ಯವರ ಮಸೀದಿಯಲ್ಲಾಗಿದೆ ಎಂದು ಹೇಳಲಾಗುತ್ತದೆ.

💡ಮದೀನ ಮಸೀದಿಯಲ್ಲಿ ದೀಪಗಳು ಸ್ಥಾಪಿಸಿದ ಚರಿತ್ರೆಗಳಲ್ಲಿ, ಮದೀನ ಮಸೀದಿಯಲ್ಲಿ ಪ್ರಥಮ ಕಾಲದಲ್ಲಿ ಬೆಳಕು ಲಭಿಸಲು ಖರ್ಜೂರದ ಮಡಲುಗಳನ್ನು ಹೊತ್ತಿಸುತ್ತಿರುವುದು ಸಾಮಾನ್ಯವಾಗಿತ್ತು. ಆದರೆ ಹಿಜರಿ 9 ನೇ ವರ್ಷ (AD 630) ಇಸ್ಲಾಂ ಆಶ್ಲೇಷಿಸಿದ ಸಹಾಬಿವರ್ಯರಾದ ತಮಿಮುದ್ದಾರಿ (ರ) ರವರಾಗಿದ್ದಾರೆ ಮಡಲುಗಳು ಹೊತ್ತಿಸುವ ಬದಲು ಎಣ್ಣೆ ದೀಪಗಳು ಸ್ಥಾಪಿಸಲು ಮಾರ್ಗನಿರ್ದೇಶಗಳು ನೀಡಿರುವುದು.

💡ಈ ತರ ಮಸೀದಿಯಲ್ಲಿ ಎಣ್ಣೆ ದೀಪಗಳ ಆರಂಭವಾಯಿತು.

💡2ನೇ ಖಲೀಫ ಉಮರ್ ಬಿನ್ ಖತ್ತಾಬ್ (ರ) ರವರಾಗಿದ್ದರು ಮದೀನ ಮಸ್ಜಿದ್ ನಲ್ಲಿ ಹೆಚ್ಚು ದೀಪಗಳು ಸ್ಥಾಪಿಸಲು ಉಸ್ತವಾರಿ ವಹಿಸಿರುವುದು ಎಂಬುದಾಗಿದೆ ಚರಿತ್ರೆಗಳಲ್ಲಿ ಕಾಣುವುದು. *ತರಾವಿಹ್ ನಮಾಜ್ ಒಂದು ಇಮಾಮಿನ ಅಧೀನಲ್ಲಾಗಿ ಉಮರ್ (ರ) ರವರ ಕಾಲದಲ್ಲಿ ಜಾರಿಯಾದಾಗ ಜನರು ಧಾರಾಳವಾಗಿ ರಾತ್ರಿ ಸಮಯಯಲ್ಲಿ ಮಸೀದಿಗೆ ಬರುತ್ತಿದ್ದರು. ಈ ಕಾರಣಕ್ಕಾಗಿ ದೀಪಗಳ ಸಂಖ್ಯೆ ವರ್ಧಿಸಲು ಆವಿಶ್ಯಪಡುತ್ತಿದ್ದರು.

💡ನಂತರ ವಿವಿಧ ಆಡಳಿತ ಅಧಿಕಾರಿಗಳ ಅಧೀನದಲ್ಲಿ ಅಗತ್ಯವಾದ ದೀಪಗಳು ಸ್ಥಾಪಿಸಿದಾದ್ದರೂ, AD 1850 ಗಳಲ್ಲಿ ಉಸ್ಮಾನಿಯಾ ಖಲೀಫ ಸುಲ್ತಾನ್ ಅಬ್ದುಲ್ ಮಜೀದವರು ಮಸೀದಿ ವಿಕಸನಗೊಳಿಸುವಾಗ 600 ರಷ್ಟು ದೀಪಗಳನ್ನು ಸ್ಥಾಪಿಸಿ ಅಲಂಕರಿಸುವುದು ಚರಿತ್ರೆಯಾಗಿದೆ.

💡ಸುಲ್ತಾನ್ ಅಬ್ದುಲ್ ಮಜೀದ್ 2ನೇಯವರ ಕಾಲದಲ್ಲಿ ಅಂದರೆ 1908 ಸೆಪ್ಟಬರ್ ನಲ್ಲಾಗಿದೆ ಮದೀನ ಮಸೀದಿಯಲ್ಲಿ ಪ್ರಥಮವಾಗಿ ವಿದ್ಯುತ್ತ್ ದೀಪ/ಬೆಳಕು ಹೊತ್ತಿಸಲು ಆರಂಭಿಸಿರುವುದು.

💡1950ಗಳಲ್ಲಿ ಸೌದಿ ರಾಷ್ಟ್ರಪಿತರಾದ ಅಬ್ದುಲ್ ಅಝೀಝ್ ರಾಜರವರ ಮಸೀದಿ ವಿಕಸನ ಪ್ರಕ್ರಿಯೆಯೊಂದಿಗೆ ಮಸೀದಿಯಲ್ಲಿ 2427 ಬಲ್ಬುಗಳನ್ನು ಸ್ಥಾಪಿಸಿದರು.

💡ಮಸೀದಿಯಲ್ಲಿ ಯಾವ ಅಡಚಣೆವಿಲ್ಲದೆ ಬೆಳಕು ಲಭಿಸಲಿಕ್ಕಾಗಿ ಪ್ರತ್ಯೇಕ ವಿದ್ಯುತ್ ಕೇಂದ್ರವನ್ನೇ ರಾಜರ ಕಾಲದಲ್ಲಿ ಆರಂಭಿಸಿದರು.

💡ಮದೀನ  ಮಸೀದಿ ಹಾಗು ಪರಿಸರಗಳಲ್ಲಿ ದುಬಾರಿ ಬೆಲೆಯ ಬುಲ್ಬುಗಳಿಂದ  ಅಲಂಕರಿಸಲು ನಂತರ  ಆಡಳಿತಕ್ಕೆ ಬಂದ ಎಲ್ಲಾ ರಾಜರುಗಳು ಸರ್ವ ಬೆಂಬಲವು ಮತ್ತು ಸಹಾಯವು ಮಾಡಿರುತ್ತಾರೆ. ಅದು ಇಂದು ಕೂಡ ಮುಂದುವರಿಯುತ್ತಾ ಇದೆ.

No comments:

Post a Comment