🕌🕌🕌🕌🕌🕌🕌🕌🕌🕌🕌🕌 *ಸುಬಹಿ* *ನಮಾಝಿನಲ್ಲಿ* *ಖುನೂತ್.* 🕌🕌🕌🕌🕌🕌🕌🕌🕌🕌🕌🕌
*﷽*
*ಭಾಗ --1⃣0⃣*
📝 *ಮುನೀರ್* *ಸಖಾಫಿ,* *ಸಾಲೆತ್ತೂರು.*
------------------------------------------------------
*ಹದೀಸ್* *ನಂ* *4*
اخبرنا ابو مالك قال قلت لابي يا ابت انك قد صليت خلف رسول الله صلي الله عليه وسلم وابي بكر وعمر وعثمان وعلي هاهنا بالكوفة قريبا من خمس سنين اكانوا يقنتون قال اي بني محدث
(مسند احمد 3/472، ترمذي ، نسائي 1/164، ابن ماجه 87 )
ಅಬೂ ಮಾಲಿಕ್ (ರ) ಹೇಳುತ್ತಾರೆ;
ನಾನು ನನ್ನ ತಂದೆಯೊಂದಿಗೆ ಕೇಳಿದೆ, ನೀವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ , ಅಬೂಬಕರ್ , ಉಮರ್ , ಉಸ್ಮಾನ್ ,ಅಲೀ (ರ) ರವರ್ ಹಿಂದೆ ನಮಾಝ್ ಮಾಡಿದ್ದೀರಲ್ಲವೇ .ಅವರು ಯಾರಾದರು ಖುನೂತ್ ಓದಿದ್ದರೇ?
ಆಗ ತಂದೆ ಹೇಳಿದರು;
" ಅದು ಹೊಸತಾಗಿ ನಿರ್ಮಿಸಲ್ಪಟ್ಟದ್ದಾಗಿದೆ"
(ಮುನದ್ ಅಹ್ಮದ್ , ನಸಾಈ, ತುರ್ಮುದ್ಸೀ)
*ಉತ್ತರ*:
ಇಮಾಮ್ ಇಬ್ನ್ ಅಲ್ಲಾನ್ (ರ) ಹೇಳುತ್ತಾರೆ;
واجاب ائمتنا بان الذين اثبتوا معهم زيادة علم فوجب تقديمهم لا سيما وهم اكثر.قلت : قال الحافظ ولعل النبي صلي الله عليه وسلم ومن ذكر اسروه فلم يسمعه ابو مالك وكان بعيدا او نسي.
(فتوحات الربانية 2/287)
ನಮ್ಮ ಉಲಮಾಅ ಪ್ರಸ್ತುತ ಹದೀಸಿಗೆ ನೀಡಿದ ಉತ್ತರ ಈ ರೀತಿಯಾಗಿದೆ."ಖುನೂತ್ ಇದೆ ಎಂದು ಹೇಳಿದವರ ಬಳಿ ಹೆಚ್ಚು ಜ್ಞಾನವಿರುವುದರಿಂದ ಅವರ ಮಾತನ್ನು ಸ್ವೀಕರಿಸುವುದು ಖಡ್ಡಾಯವಾಗಿದೆ.ಮಾತ್ರವಲ್ಲ ಅವರ(ಖುನೂತ್ ಇದೆ ಎನ್ನುವವರ) ಸಂಖ್ಯೆಯು ಅಧಿಕವಾಗಿದೆ.
ಇಮಾಮ್ ಹಾಫಿಲ್ (ರ) ಹೇಳಿದರು;"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಹೆಸರು ಹೇಳಲ್ಪಟ್ಟ ಆ ಸ್ವಹಾಬಿಗಳು ಮೆಲು ದ್ವನಿಯಲ್ಲಿ ಖುನೂತ್ ಓದಿರುವುದರಿಂದಲೋ ಅಥವಾ ಅವರು ಇಮಾಮರಿಂದ ದೂರ ನಿಂತ ಕಾರಣದಿಂದ ಕೇಳದಿರಲು ಸಾಧ್ಯತೆ ಇದೆ.ಅಥವಾ ಖುನೂತ್ ಮರೆತಿರಲೂಬಹುದು.
(ಫುತೂಹಾತುರ್ರಬ್ಬಾನಿಯ್ಯ 2/287)
ನೂತನವಾದಿಗಳ ಅಂಗೀಕೃತ ನೇತಾರ ಮುಬಾರಕ್ ಫೂರಿಯವರು ಈ ಹದೀಸಿನ ಕುರಿತು ಹೇಳುವುದು ನೋಡಿ;
وقد صح عنهم االقنوت واذا تعارض الاثبات والنفي قدم المثبت
(تحفة الاحوذي)
ಅವರಿಂದ ಖುನೂತ್ ಸ್ತಿರಪಟ್ಟಿದೆ.اثبات (ಓದಿದ್ದಾರೆ)
ಹಾಗೂ نفي (ಓದಿಲ್ಲ) ವೈರುಧ್ಯವಾದ ರೀತಿಯಲ್ಲಿ ಬಂದರೆ اثبات ನ್ನು ಪರಿಗಣಿಸಬೇಕಾಗಿದೆ.
( ತುಹ್ಫತುಲ್ ಅಹ್ವದ್ಸೀ 2/363)
-------------------------------
*ಹದೀಸ್ ನಂ 5 :*
ಇಮಾಮ್ ಅಹ್ಮದ್ (ರ) ವರದಿ ಮಾಡುತ್ತಾರೆ;
"حدثني عبد الله حدثني حسين بن محمد ثنا خلف عن ابي مالك قال : كان ابي قد صلي خلف رسول الله صلي الله عليه وسلم وهو ابن ست عشرة سنة وابي بكر وعمر وعثمان فقلت له اكانوا يقنتون قال : لا اي بني محدث
(احمد 27253، ترمذي نسائي ،ابن ماجه )
ಅಬೂ ಮಾಲಿಕ್ (ರ) ಹೇಳುತ್ತಾರೆ;
ನನ್ನ ತಂದೆ 16 ವರ್ಷ ಪ್ರಾಯವಿದ್ದಾಗಲೇ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದ್ದರು.ಅದೇ ರೀತಿ ಅಬೂ ಬಕರ್, ಉಮರ್, ಉಸ್ಮಾನ್ (ರ) ಹಿಂದೆಯೂ ನಮಾಝ್ ಮಾಡಿದ್ದರು.ಅವರು ಯಾರೂ ಕೂಡಾ ಖುನೂತ್ ಓದುತ್ತಿರಲಿಲ್ಲ.
ಅದು ನೂತನವಾಗಿ ನಿರ್ಮಿಸಲ್ಪಟ್ಟದ್ದಾಗಿದೆ.
(ಮುಸ್ನದ್ ಅಹ್ ಮದ್ )
*ಉತ್ತರ*
ಇಮಾಮ್ ಬೈಹಖೀ (ರ) ಹೇಳುತ್ತಾರೆ;
طارق بن اشيم الاشجعي لم يحفظه عمن صلي خلفه فرآه محدثا وقد حفظه غيره فالحكم له دونه
(سنن الكبري للبيهقي 3/58)
ತ್ವಾರಿಖ್ ಬಿನ್ ಅಶ್ ಯಮ್ ಅಲ್ ಅಶ್ಜಈ (ರ)
( ಮೇಲಿನ ಹದೀಸಿನಲ್ಲಿ ಹೇಳಿದ ಅಬೂ ಮಾಲಿಕ್ ರ ತಂದೆಯ ಹೆಸರಾಗಿದೆ ಇದು.)ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಹಾಗೂ ಇತರ ಸ್ವಹಾಬಿಗಳಿಂದ ಖುನೂತ್ ಕಂಠಪಾಠ ಮಾಡಿಲ್ಲ.ಆದ್ದರಿಂದಲೇ ಅವರು ಅದನ್ನು ನೂತನವಾಗಿ ನಿರ್ಮಿಸಲ್ಪಟ್ಟದ್ದೆಂದು ಹೇಳಿದರು.ಇವರಲ್ಲದ ಹಲವರು ಖುನೂತ್ ಕಂಠಪಾಠ ಮಾಡಿದವರಾಗಿದ್ದಾರೆ.ಆದುದರಿಂದ ಖುನೂತ್ ಇದೆ ಎನ್ನುವವರ ಮಾತು ಸ್ವೀಕಾರ್ಯವಾಗಿದೆ.
(ಸುನನುಲ್ ಬೈಹಖೀ 3/58)
ಮೇಲಿನ ಹದೀಸಿನ ಕುರಿತು
ಇಮಾಮ್ ನವವೀ (ರ) ಬರೆಯುತ್ತಾರೆ;
"والجواب عن حديث سعيد بن طارق ان رواية الذين اثبتوا القنوت معهم زيادة علم وهم اكثر.فوجب تقديمهم.
(شرح المهذب 3/503)
ಖುನೂತ್ ಸ್ಥಿರಪಡಿಸುವವರ ಸಂಖ್ಯೆ ಅಧಿಕವಿದೆ.ಮಾತ್ರವಲ್ಲ ಅವರ ಬಳಿ ಹೆಚ್ಚು ಜ್ಞಾನವೂ ಇರುವುದರಿಂದ ಅವರನ್ನು ಅಂಗೀಕರಿಸುವುಸು ಖಡ್ಡಾಯವಾಗಿದೆ ಎಂದು ತ್ವಾರಿಖ್ (ರ) ಹದೀಸಿಗೆ ಉತ್ತರಿಸಬಹುದಾಗಿದೆ.
(ಶರಹುಲ್ ಮುಹದ್ದಬ್ 3/503)
ಇಮಾಮ್ ತ್ವೀಬೀ (ರ) ಹೇಳುತ್ತಾರೆ;
"
لا يلزم من نفي هذا الصحابي نفي القنوت ،لانه شهادة بالنفي وقد شهد جماعة بالاثبات مثل الحسن وابي هريرة وانس وابن عباس رضي الله عنهم وصحبهم مع رسول الله صلي الله عليه وسلم اكثر من صحبة هذا الصحابي وهو طارق بن اشيم فتكون شهادتهم اثبت.
(الكاشف عن حقائق السنن 4/232)
ತ್ವಾರಿಖ್ ಬಿನ್ ಅಶ್ ಯಮ್ ಎಂಬ ಸ್ವಹಾಬಿಯು ಖುನೂತ್ ನಿಷೇಧಿಸಿದರಿಂದ ಖುನೂತ್ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.ಕಾರಣ ಅವರು ಇಲ್ಲ ಎಂಬುವುದಕ್ಕೆ ಸಾಕ್ಷ್ಯ ನಿಂತಿದ್ದಾರೆ.ಖುನೂತ್ ಇತ್ತು ಎಂಬುವುದಕ್ಕೆ ಹಸನ್ , ಅಬೂಹುರೈರ, ಅನಸ್, ಇಬ್ನ್ ಅಬ್ಬಾಸ್ (ರ) ಮುಂತಾದ ಗಣ್ಯರು ಸಾಕ್ಷ್ಯ ವಹಿಸಿದ್ದಾರೆ. ತ್ವಾರಿಖ್ (ರ) ಗಿಂತ ಅತೀ ಹೆಚ್ಚು ಈ ಸ್ವಹಾಬಿಗಳಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸಂಪರ್ಕವಿದೆ.ಆದುದರಿಂದ ಆ ಸ್ವಹಾಬಿಗಳ ಮಾತನ್ನು ಅಂಗೀಕರಿಸಬೇಕಾಗಿದೆ.
(ಅಲ್ ಕಾಶಿಫ್ ಅನ್ ಅಖಾಯಿಕಿ ಸ್ಸುನನ್ 4/232)
ಮಿರ್ಖಾತುಲ್ ಮಫಾತೀಹ್ ನಲ್ಲೂ (2/166) ಇದನ್ನು ಕಾಣಬಹುದಾಗಿದೆ.
ಇದೇ ಆಶಯವನ್ನು ವಹ್ಹಾಬಿಗಳ ನೇತಾರ ಮುಬಾರಕ್ ಫೂರಿ ಹೇಳಿದ್ದನ್ನು ಮೇಲೆ ನೀವು ಓದಿದ್ದೀರಿ.
, *ಮುಂದುವರಿಯುವುದು..*
*-----------------------------------*
No comments:
Post a Comment