ಉರೂಸ್ ಆಚರಣೆ ಇಸ್ಲಾಮಿನಲ್ಲಿ.
ಭಾಗ -10
📝 ಟಿ.ಎಂ ಮುಹ್ಯಿದ್ದೀನ್ ಖಾಮಿಲ್ ಸಖಾಫಿ , ತೋಕೆ.
ವಸಿಯ್ಯತ್ ಮಾಡುವಾಗ ಅದು ಅನುವದನೀಯವಾದ ಕಾರ್ಯಕ್ಕಾಗಿರಬೇಕೆಂಬ ಇಮಾಮ್ ನವವೀ ರಲಿಯಲ್ಲಾಹು ಅನ್ಹು ರವರ ಮಾತನ್ನು ವಿವರಿಸುತ್ತಾ ಇಮಾಮ್ ಮುಹಮ್ಮದ್ ಶಿರ್ಬೀನಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಪಾಪಕರವಲ್ಲ್ ಎಂಬುವುದು ಬಡವರಿಗೆ , ಮಸೀದಿ ನಿರ್ಮಾಣಕ್ಕೆ ಹಾಗೂ ಅಂಬಿಯಾಗಳ ಖಬರನ್ನು ಕಟ್ಟುವಿಕೆಗೆ ಮಾಡುವ ವಸಿಯ್ಯತನ್ನೂ ಒಳಪಡಿಸುತ್ತದೆ.ಬಹು ! ಇಮಾಮ್ ಅಬೂ ಮುಹಮ್ಮದ್ ರಲಿಯಲ್ಲ್ಲಾಹು ಅನ್ಹು ರವರು ವಿದ್ವಾಂಸರ ಹಾಗೂ ಸಜ್ಜನರ ಖಬರ್ ಗಳನ್ನು ಇದರಲ್ಲಿ ಒಳಪಡಿಸಿದ್ದಾರೆ.ಅರ್ಥಾತ್ ಅವರ ಖಬರ್ ಗಳನ್ನು ಕಟ್ಟುವುದು ಅನುವದನೀಯವಾಗಿದೆ.ಏಕೆಂದರೆ ಅದರಲ್ಲಿ ಅವರ ಖಬರ್ ಸಂದರ್ಶನವನ್ನು ಜೀವಂತಗೊಳಿಸುವುದು ಮತ್ತು ಬರ್ಕತ್ ಪಡೆಯುವುದು ಎಂಬ ಪುಣ್ಯ ಕಾರ್ಯವು ಅಡಗಿದೆ.( ಮುಗ್ನಿ 40/ 3)
ನೋಡಿ, ಅಂಬಿಯಾಗಳ , ಅವ್ ಲಿಯಾಗಳ ಹಾಗೂ ಸಜ್ಜನರ ಖಬರ್ ಗಳನ್ನು ಎತ್ತರಿಸಿ ಕಟ್ಟುವುದಕ್ಕಾಗಿ ವಸಿಯ್ಯತ್ ಮಾಡಬಹುದೆಂದೂ ಅದು ಅಲ್ಲಾಹನಿಗಾಗಿರುವ ಆರಾಧನೆಯೆಂದೂ ಪೂರ್ವಿಕ ವಿದ್ವಾಂಸರು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಾರೆ.
ಅದೇ ರೀತಿ ಇಮಾಮ್ ಇಬ್ನ್ ಹಜರ್ ರವರು ತನ್ನ
ತುಹ್ಫಾ7/5 ರಲ್ಲೂ ಸ್ಪಷ್ಟಪಡಿಸಿದ್ದನ್ನು ಕಾಣಬಹುದು.
ಇಷ್ಟರವರೆಗಿನ ವಿವರಣೆಯಿಂದ ಈ ಕೆಳಗಿನ ಅಂಶಗಳು ಸ್ಪಷ್ಟವಾಯಿತು.
1.
ಸಾಮಾನ್ಯ ವ್ಯಕ್ತಿಯ ಖಬರನ್ನು ಸ್ವಂತ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದು ಕರಾಹತ್ ಮಾತ್ರವಾಗಿದೆ.ಶಿರ್ಕ್ , ಕುಫ್ರ್ ಅಲ್ಲ.
2.
ಸಾಮಾನ್ಯ ವ್ಯಕ್ತಿಯ ಖಬರನ್ನು ಸಾರ್ವಜನಿಕ ದಫನ್ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದು ನಿಷಿದ್ಧವಾಗಿದೆ.
3.
ಸಾರ್ವಜನಿಕ ದಫನ ಭೂಮಿಯಲ್ಲಿ ಸಾಮಾನ್ಯನೊಬ್ಬನ ಖಬರನ್ನು ಎತ್ತರಿಸಿ ಕಟ್ಟುವುದು ಹರಾಮ್ ಆಗಲು ಕಾರಣ ಇತರರ ಅವಕಾಶಕ್ಕೆ ಅಡ್ಡಿಯುಂಟಾಗುವುದರಿಂದಾಗಿದೆ.
4.
ಸ್ವಂತ ಭೂಮಿಯಲ್ಲಿ ಕರಾಹತ್ ಆಗಲು ಕಾರಣ ಅನಪೇಕ್ಷಿತ ಸೌಂದರ್ಯ ಹಾಗೂ ಜಂಭತನವಾಗಿದೆ.
5.
ಖಬರ್ ಕಟ್ಟುವಿಕೆ ಎಂಬ ಕಾರಣಕ್ಕಾಗಿ ಅದು ನಿಷಿದ್ಧವಲ್ಲ.
6.
ಪೂರ್ವಿಕ ವಿದ್ವಾಂಸರ್ಯಾರೂ ಖಬರ್ ಎತ್ತರಿಸಿ ಕಟ್ಟುವುದು ಶಿರ್ಕ್, ಬಿದ್ ಅತ್ ಎಂದು ಹೇಳಿಲ್ಲ.
7.
ಮಹಾ ಪುರುಷರ ಖಬರನ್ನು ಸಾರ್ವಜನಿಕ ದಫನ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದು ಅನುವದನೀಯವಾಗಿದೆ.
8.
ಮಹಾ ಪುರುಷರ ಖಬರ್ ಗಳ ಮೇಲೆ ಕಟ್ಟಡ ನಿರ್ಮಿಸುವುದನ್ನು ಸ್ವಹಾಬಿಗಳೇ ಅನುಮತಿಸಿದ್ದರು.
9.
ಖಬರ್ ಎತ್ತರಿಸಿ ಶಿರ್ಕ್ , ಬಿದ್ ಅತ್ ಎಂದು ತಿಳಿಸುವ ಒಂದೇ ಒಂದು ಆಯತ್ ನ್ ಅಥವಾ ಹದೀಸ್ ನ ತುಣುಕು ಕೂಡಾ ಇಲ್ಲ.
10.
ಈ ವಿಷಯದಲ್ಲಿ ನೂತನವಾದಿಗಳು ಪ್ರಚಾರಪಡಿಸುತ್ತಿರುವ ಕಾರ್ಯಗಳು ಶುದ್ಧ ಕಾಪಟ್ಯದಿಂದ ಕೂಡಿದೆ.
ಮುಂದುವರಿಯುವುದು...
No comments:
Post a Comment