*ಬೀವಿ ಆತಿಕಾ (ರ)*
ಭಾಗ--7
📝ಮುನೀರ್ ಸಖಾಫಿ, ಸಾಲೆತ್ತೂರು.
ಉಮರ್ (ರ)ರವರ ವಫಾತ್ ನ ನಂತರ ಝುಬೈರ್ ಬಿನ್ ಅವ್ವಾಮ್ (ರ)ರವರು ಆತಿಕ ಬೀವಿಯನ್ನು ವಿವಾಹವಾಗಿದ್ದಾಗಿ ಒಂದನೇಯ ಭಾಗದಲ್ಲಿ ನೀವು ಓದಿದ್ದೀರಿ.ಅವರ ಪತ್ನಿಯಾಗಿದ್ದ ವೇಳೆ ಆತಿಕ ಬೀವಿ ಮಸೀದಿಗೆ ಹೋಗಿದ್ದಾಗಿಯೂ ಝುಬೈರ್ ಬಿಮ್ ಅವ್ವಾಮ್ (ರ) ದಾರಿ ಮಧ್ಯೆ ಅವಿತು ಕುಳಿತು ಆತಿಕ ಬೀವಿಗೆ ಹೊಡೆದದ್ದಾಗಿಯೂ ಆಗ ಅತಿಕ ಬೀವಿ "ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್" ಎಂದು ಹೇಳುತ್ತಾ "ಜನರು ಹಾಳಾಗಿದ್ದಾರೆ" ಎಂದು ಹೇಳಿ ಮನೆಗೆ ಬರಳಿ ಬಂದ ಘಟನೆಯನ್ನು ಇಮಾಮ್ ಇಬ್ನ್ ಹಜರ್ (ರ)ತನ್ನ ಅಲ್ ಇಸ್ವಾಬ ಫೀ ತಮೀಝಿಸ್ವಹಾಬ 4/357ರಲ್ಲಿ ವಿವರಿಸಿದ್ದಾರೆ.
وكان الزّبير شرط ألا يمنعها من المسجد وكانت امرأة خليقَةً، فكانت إذا تهيأت إلى الخروج للصّلاة قال لها: والله إنك لتخرجين وإني لكارهٌ؛ فتقول: فامنعني فأجلس، فيقول: كيف وقد شرطت لك ألا أفعل، فاحتال فجلس لها على الطّريق في الغلس، فلَما مرت وضع يده على كفلها؛ فاسترجعت، ثم انصرفت إلى منزلها، فلما حان الوقت الذي كانت تخرج فيه إلى المسجد لم تخرج، فقال لها الزّبير: مالك لا تخرجين إلى الصّلاة؟ قالت: فسد النّاس، والله لا أخرج من منزلي(الاصابة4/357)
ಒಟ್ಟಿನಲ್ಲಿ ಹೊಡೆದದ್ದು ಉಮರ್(ರ)ಆದರೂ ಅಥವಾ ಝುಬೈರ್ ಬಿನ್ ಅವ್ವಾಮ್ (ರ)ಆದರೂ ಫಸಾದ್ ಉಂಟಾದಲ್ಲಿ ಸ್ತ್ರೀಯರು
ಮಸೀದಿಗೆ ಹೋಗ ಕೂಡದು ಎಂಬ ತತ್ವವನ್ನೇ ಆತಿಕ ಬೀವಿ ಅಂಗೀಕರಿಸಿದ್ದರು.
ಕೊನೆಯದಾಗಿ ...
ಆತಿಕ ಬೀವಿಯ ಘಟನೆಯನ್ನು ಆಧಾರವಾಗಿಸಿ ಸ್ತ್ರೀಯರನ್ನು ಮಸೀದಿಗೆ ಕರೆದು ಕೊಂಡು ಹೋಗಲು ವಹ್ಹಾಬಿಗಳಿಗೆ ಯಾವುದೇ ಪುರಾವೆಯಿಲ್ಲ.
ಕಾರಣ, ಕೇರಳದ ಮುಸ್ಲಿಯಾರುಗಳು ದೀನಿನಲ್ಲಿ ಪ್ರಮಾಣಯೋಗ್ಯರಲ್ಲದಂತೆ ಸ್ವಹಾಬಿಗಳೂ ಕೂಡಾ ಪ್ರಮಾಣರಲ್ಲ ಎಂದು ವಹ್ಹಾಬಿಗಳು ಅವರ ಅಧಿಕೃತ ಪತ್ರಿಕೆಯಲ್ಲಿ ಬರೆದಿದ್ದಾರೆ.
ವಹ್ಹಾಬಿಗಳಿಗೆ ಸ್ವಹಾಬಿಗಳೇ ಪುರಾವೆಯಾಗದೇ ಇರುವಾಗ ಆತಿಕ ಬೀವಿ ಎಂಬ ಸ್ವಹಾಬೀ ವನಿತೆಯೊಬ್ಬರ ಘಟನೆ ಹೇಗೆ ತಾನೇ ಪುರಾವೆಯಾದೀತು?
*"ಸ್ತ್ರೀಯರನ್ನು ನೀವು ಮಸೀದಿಯಿಂದ ತಡೆಯದಿರಿ" ಎಂಬ ಹದೀಸಿನ ತಾತ್ಪರ್ಯವೇನು?*
ಇಸ್ಲಾಮಿನ ಪ್ರಾರಂಭದಲ್ಲಿ ಪುರುಷರಂತೆ ಸ್ತ್ರಿಯರೂ ಕೂಡಾ ಮಸೀದಿಗೆ ಹಾಜರಾಗಿ ಮುಸ್ಲಿಮರ ಹೆಚ್ಚಿನ ಸಂಖ್ಯೆ ಯನ್ನು ಸತ್ಯ ನಿಷೇಧಿಗಳಿಗೆ ತೋರಿಸಿ ಕೊಡುತ್ತಿದ್ದರು.
ಇಮಾಮ್ ಅಬೂಬಕರ್ ಅಲ್ ಕಾಸಾನೀ(ರ)ತನ್ನ ಬದಾಇಉಸ್ಸನಾಯಿಯ್ ಎಂಬ ಗ್ರಂಥದಲ್ಲಿ ಇದು ವಿವರಿಸಿದ್ದಾರೆ.
ಇಮಾಮ್ ಇಬ್ನ್ ಹಜರ್ (ರ)ಹೇಳುತ್ತಾರೆ;
ثم الوجه حمله علي زمن النبي صلي الله عليه وسلم (تحفة)
ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು.
(ತುಹ್ಫ 2/252)
ಕಾರಣ ,ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೆಚ್ಚು ಸಮಯವನ್ನು ಮಸೀದಿಯಲ್ಲೇ ಕಳೆಯುತ್ತಿದ್ದರು.
ಮಸೀದಿಯಲ್ಲಿರುವ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸ್ತ್ರೀ ಪುರುಷರೆಲ್ಲರೂ ವ್ಯತ್ಯಸ್ತ ವಿಷಯಗಳಿಗೆ ಸಮೀಪಿಸುತ್ತಿದ್ದರು.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಎಲ್ಲರಿಗೂ ಪರಿಹಾರ ನೀಡುತ್ತಿದ್ದರು.
ಸ್ತ್ರೀಯರನ್ನು ಮಸೀದಿಯಿಂದ ತಡೆದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಬಹಳ ಕಷ್ಟಕರಾವಾದೀತು ಎಂಬ ನೆಲೆಯಲ್ಲಿ ಸ್ತ್ರೀಯರನ್ನು ಮಸೀದಿಯಿಂದ ತಡೆಯದಿರಿ ಎಂಬ ಮಾತನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ ವಿನಃ ಅನ್ಯ ಪುರುಷರೊಂದಿಗೆ ಸೇರಿ ಕೊಂಡು ಜುಮುಅ ಜಮಾಅತ್ ಗೆ ಹಾಜರಾಗಲು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರಸ್ತುತ ಹದೀಸಿನಲ್ಲಿ ಹೇಳಿದ್ದಾಗಿ ಯಾವ ಇಮಾಮರುಗಳು ಕೂಡಾ ಹೇಳಿಲ್ಲ.ಅದನ್ನು ತೋರಿಸಲು ಯಾವ ವಹ್ಹಾಬಿಗಳಿಗೂ ಸಾಧ್ಯವಿಲ್ಲ.
*ಮುಗಿಯಿತು*
ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ
No comments:
Post a Comment