Wednesday, October 4, 2017

🕌🕌🕌🕌🕌🕌🕌🕌🕌🕌🕌🕌 *ಸುಬಹಿ* *ನಮಾಝಿನಲ್ಲಿ* *ಖುನೂತ್.* 🕌🕌🕌🕌🕌🕌🕌🕌🕌🕌🕌🕌

*﷽*
*ಭಾಗ --0⃣6⃣*

📝 *ಮುನೀರ್* *ಸಖಾಫಿ,* *ಸಾಲೆತ್ತೂರು.*
------------------------------------------------------

ಇಮಾಮ್ ದಾರಖುತ್ ನಿ ವರದಿ ಮಾಡುತ್ತಾರೆ;

عن الحسن عن انس بن مالك قال صليت مع رسول الله صلي الله عليه وسلم فلم يزل يقنت بعد الركوع في صلاة الغداة حتي فارقته -قال- وصليت خلف عمر بن الخطاب فلم يزل يقنت بعد الركوع في صلاة الغداة حتي فارقته.
(دارقطني 2/40 )
"ಅನಸ್ ಬಿನ್ ಮಾಲಿಕ್ (ರ) ರಿಂದ ಹಸನ್ (ರ) ವರದಿ ,ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ನಮಾಝ್ ಮಾಡಿದ್ದೇನೆ.ಅವರು ಸುಬಹಿ ನಮಾಝಿನಲ್ಲಿ ರೂಕೂಅ ನ ನಂತರ ವಫಾತ್ ತನಕ ಖುನೂತ್ ಓದಿದ್ದರು.ಉಮರ್ (ರ)ರೊಂದಿಗೂ ನಮಾಝ್ ಮಾಡಿದ್ದೇನೆ.ಅವರೂ ಕೂಡಾ ಖುನೂತ್ ಓದಿದ್ದರು".
(ದಾರಖುತ್ ನಿ 2/40 )
---------------------------
عن الحسن عن انس قال قنت مع رسول الله صلي الله عليه وسلم وعمر حتي فارقتهما.
(دار قطني 2/40)
"ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ
,ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಮತ್ತು ಉಮರ್ (ರ)ರೊಂದಿಗೆ ಖುನೂತ್ ಓದಿದ್ದೇನೆ".
(ದಾರಖುತ್ ನಿ 2/40 )
------------------------ ---
عن علي وعمار انهما صليا خلف النبي صلي الله عليه وسلم -فقنت في صلاة الغداة.
(دارقطني 2/40)

ಅಲಿಯ್ಯ್ (ರ) ಮತ್ತು ಅಮ್ಮಾರ್ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದ್ದರು.ಸುಬಹಿ ನಮಾಝಿನಲ್ಲಿ ಅವರು ಖುನೂತ್ ಓದಿದ್ದರು".
(ದಾರಖುತ್ ನೀ 2/40)
------------------------ -----
عن سعيد بن عبد العزيز فيمن نسي القنوت في صلاة الصبح قال يسجد سجدتي السهو.
ಸಈದ್ ಬಿನ್ ಅಬ್ದುಲ್ ಅಝೀಝ್ (ರ) ಹೇಳುತ್ತಾರೆ;
"ಸುಬಹಿ ನಮಾಝಿನಲ್ಲಿ ಖುನೂತ್ ಮರೆತರೆ ಸಹ್ ವಿನ ಎರಡು ಸುಜೂದು ನಿರ್ವಹಿಸಬೇಕು".
(ದಾರಖುತ್ ನೀ 2/40)
------------------------ ---
عن ابن عباس قال ما زال رسول الله صلي الله عليه وسلم يقنت حتي فارق الدنيا
ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದಿದ್ದರು".
(ದಾರಖುತ್ ನೀ 2/41).
------------------------ ----
عن عطاء ان رسول الله صلي الله عليه وسلم قنت في الفجر
 ಅತ್ವಾಅ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತ್ ಓದಿದ್ದರು"
(ಮುಸನ್ನಫ್ ಇಬ್ನ್ ಅಬೀಶೈಬ 2/211)
------------------------ ---
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಸ್ವಹಾಬಿಗಳು ಖುನೂತ್ ಓದಿದ ಕುರಿತು ವರದಿಯಾದ ಕೆಲವೊಂದು ಹದೀಸ್ ಗಳನ್ನು ನೀವು ಓದಿದಿರಿ.
ಈ ಹದೀಸ್ ಗಳನ್ನು ಸ್ವಹೀಹ್ ಎಂದು ಹೇಳಿದವರ ಉದ್ದರಣಿಗಳನ್ನು ಮೇಲೆ ವಿವರಿಸಲಾಗಿದೆ.
ಇದೂ ಅಲ್ಲದೇ ನೂರಾರು ಹದೀಸ್ ಗಳು ಈ ವಿಷಯದಲ್ಲಿ ಇವೆ.ಎಲ್ಲಾ ಹದೀಸ್ ಗಳ ಆಶಯ ಒಂದೇ ಆಗಿರುವುದರಿಂದ ಎಲ್ಲವನ್ನೂ ಇಲ್ಲಿ ನೀಡಲು ಬಯಸುವುದಿಲ್ಲ.
ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತೆಂದು ತಿಳಿಯಲು ಈ ಹದೀಸ್ ಗಳೇ ಧಾರಾಳ ಸಾಕು.
*ಖುನೂತ್ ಬಿದ್ ಅತ್ ಆಗಿದ್ದರೆ (ಸುಬಹಿ ನಮಾಝಿನ ನಂತರ(ಸುನ್ನಿಗಳು ಎಲ್ಲಿ ಖನೂತ್ ಓದುವರು ಎಂದೂ ಕೂಡಾ ತಿಳಿಯದ ಶತ ಮೂರ್ಖ 😀😀) ಖುನೂತ್ ಓದುವುದು ವ್ಯಭಿಚಾರಕ್ಕಿಂತಲೂ ಮಹಾ ಪಾಪವೆಂದು ಮುಜಾಹಿದ್ ಬಾಲುಶ್ಶೇರಿ ಮೌಲವಿ ಹೇಳಿದ್ದಾನೆ.)* *ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಅನುಯಾಯಿಗಳು ಅದನ್ನು ನಿರ್ವಹಿಸುತ್ತಿರಲಿಲ್ಲ.ಮಾತ್ರವಲ್ಲ ಆ ಅನಾಚಾರವನ್ನು ಇಮಾಮರು ಅವರ ಗ್ರಂಥಗಳಲ್ಲಿ ಉಲ್ಲೇಖಿಸುತ್ತಿರಲಿಲ್ಲ. ಶಾಫಿಈ ಮದ್ಸ್ ಹಬ್ ನಲ್ಲಿ ಖುನೂತ್ ಸುನ್ನತ್ತೆಂದು ಹೇಳದ ಯಾವ ಇಮಾಮರೂ ಕೂಡಾ ಇಲ್ಲ.
ವಹ್ಹಾಬಿಗಳ ವಾದ ಪ್ರಕಾರ ಇಮಾಮರುಗಳು ಮಹಾಪಾಪವನ್ನು ಪ್ರಚಾರ ಮಾಡಿದರೇ?*
ವಹ್ಹಾಬಿಗಳು ಇದಕ್ಕೆ ಉತ್ತರಿಸಬೇಕು.

ಮುಂದುವರಿಯುವುದು....

No comments:

Post a Comment