ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Sunday, October 1, 2017
🌷 #ಹಜರುಲ್_ಅಸ್ವದ್🌷
✍ ಗಫೂರ್ ಬಾಯಾರ್
ಸ್ವರ್ಗದಿಂದ ತರಲಾದ ಮುತ್ತು ನಬಿ ﷺ ರವರು ಚುಂಬಿಸಿದ ಹಜರುಲ್ ಅಸ್ವದ್ ಹಲವಾರು ಸಲ ಚುಂಬಿಸಲು ನೀ ಭಾಗ್ಯವ ನೀಡು ಅಲ್ಲಾಹ್ ಆಮೀನ್
🕋ವಿಶುದ್ಧ ಕಅಬಾಲಯದ ಆರಂಭದಿಂದಲೇ ಕಅಬಾಲಯದ ಒಂದು ಮೂಲೆಯಲ್ಲಿ ಸಂರಕ್ಷಿಸಿಕೊಂಡು ಬರುತ್ತಿರುವ, ಅತೀ ಪುರಾತನವಾದ ಒಂದು ಕಪ್ಪು ಕಲ್ಲಾಗಿದೆ
ಹಜರುಲ್ ಅಸ್ವದ್.
ಮನುಷ್ಯರು ಅಲ್ಲಾಹುವನ್ನು ಆರಾಧಿಸಲಿಕ್ಕಾಗಿ ಭೂಮಿಯಲ್ಲಿ ಸ್ಥಾಪಿಸಿದ ಮೊದಲನೇ ಭವನ ಕಅಬಾಲಯ. ಇದರ ಆರಂಭದಿಂದಲೇ ಏಕ ಇಲಾಹಿ ಆರಾಧನೆಗೆ ಸಾಕ್ಷಿ ವಹಿಸಿದ ಒಂದು ಕಲ್ಲು, ಎಂಬಿ ಚರಿತ್ರೆ ಪ್ರಾಧಾನ್ಯವಿದೆ ಈ ಕಲ್ಲಿಗೆ.
ಇದಕ್ಕೆ ಆಧಾರವಾಗಿ ಹದೀಸ್ ಉಲ್ಲೇಖಿಸುವುದು ಹೀಗೆಯಾಗಿದೆ.....
ಹಜರುಲ್ ಅಸ್ವದ್ ಸ್ವರ್ಗದ ಕಲ್ಲಾಗಿದೆ. ಇಬ್ನು ಅಬ್ಬಾಸ್ (ರ)ರವರ ಒಂದು ಹದೀಸಿನಲ್ಲಿ ಈ ಪ್ರಕಾರ ಕಾಣಬಹುದು. "ಹಜರುಲ್ ಅಸ್ವದ್ ಸ್ವರ್ಗದಿಂದ ತಂದಿರುದಾಗಿದೆ. (ತಿರ್ಮುದಿ, ನಸಾಈ (ರ))
ಮುಹಮ್ಮದ್ ನಬಿ ﷺ ರವರು ಕಅಬಾಲಯ ಪ್ರದಕ್ಷಿಣೆ ಸಮಯ ಆರಂಭಿಸಲಿಕ್ಕಿರುವ ಗುರುತಾಗಿ ಇದನ್ನು ನಿಶ್ಚಯಿಸಿದ್ದರು.
ಅದನ್ನು ಚುಂಬಿಸುವುದು, ಮುಟ್ಟಿ ಚುಂಬಿಸುವುದು, ಅದಕ್ಕೂ ಸಾದ್ಯವಾಗದ ಅವಸ್ಥೆಯಾದರೆ ಕೈಯಿಂದ ಅದರ ನೇರಕ್ಕೆ ಆಂಗ್ಯ ತೋರಿಸಿ
ತವಾಫ್ (ಪ್ರದಕ್ಷಿಣೆ) ಮಾಡಬೇಕು. (ಆರಂಭಿಸಬೇಕು)
ಈ ವಿಷಯದಲ್ಲಿ 2ನೇ ಖಲೀಫರಾದ ಉಮರುಲ್ ಫಾರೂಖ್ (ರ)ರವರು ನಡೆಸಿದ ಮಾತು ಬಹಳ ಪ್ರಶಿದ್ದವಾಗಿದೆ.
ಕಅಬಾಲಯ ಪ್ರದಿಕ್ಷಿಣೆ ಮಾಡುವ ಸಮಯ ಹಜರುಲ್ ಅಸ್ವದ್ ಚುಂಬಿಸಿಕೊಂಡು ಉಮರ್ (ರ)ರವರು ಹೇಳಿದರು, "ಕಲ್ಲೇ, ನೀನು ಒಂದು ಕಲ್ಲು ಮಾತ್ರವಾಗಿದೆ ಎಂದು ನನಗೆ ಗೊತ್ತು. ನಿನಗೆ ಏನಾದರೂ ಉಪಕಾರ ಮಾಡಿ ಕೊಡಲೋ, ಉಪದ್ರದಿಂದ ನನ್ನನ್ನು ಸಂರಕ್ಷಿಸಲೋ, ಸಾಧ್ಯವಿಲ್ಲ. ನಬಿ ﷺ ರವರು ನಿನ್ನನ್ನು ಚುಂಬಿಸುವುದು ನಾನು ಕಂಡಿಲ್ಲವಾದರೆ ನಾನು ಒಮ್ಮೆಯೂ ನಿನ್ನನ್ನು ಚುಂಬಿಸುತ್ತಿರಲಿಲ್ಲ."
ಅದೇ ಸಮಯ ಸಾವಿರಾರು ಜನರು ಒಂದೇ ಸಮಯ ಕಅಬಾಲಯಕ್ಕೆ ಸುತ್ತಲೂ ತವಾಫ್ ಮಾಡುವಾಗ ಹಜರುಲ್ ಅಸ್ವದನ್ನು ಚುಂಬಿಸಲು, ಮುಟ್ಟಿ ಚುಂಬಿಸಲು, ಎಲ್ಲರಿಗೂ
ಸಾಧ್ಯವಾಗುವುದಿಲ್ಲ.
ನೂಕುನುಗ್ಗಲನಲ್ಲಿ ತವಾಫ್ ಮಾಡುವವರಿಗೆ ಕಷ್ಟವಾಗದೆ ಈ ಕಾಲದಲ್ಲಿ ಹಜರುಲ್ ಅಸ್ವದಿನ ಹತ್ತಿರಕ್ಕೆ ಕೂಡ ತಲುಪಲು ಸಾಧ್ಯವಿಲ್ಲ. ಪ್ರತ್ಯೇಕಿಸಿ ರಮಳಾನ್ ಕಾಲದಲ್ಲಿ.
ಹಜರುಲ್ ಅಸ್ವದ್ ಚುಂಬಿಸುವುದೆಂದರೆ ಸುನ್ನತ್ತ್ ಮಾತ್ರವಾಗಿದೆ. ಅದಕ್ಕಾಗಿ ಒಟ್ಟಿಗೆ ತವಾಫ್ ಮಾಡುವವರಿಗೆ ತೊಂದರೆ ಕೊಡುವುದು ನಿಷಿದ್ಧವಾಗಿದೆ. ನೂಕುನುಗ್ಗಲಿನೊಂದಿಗೆ ತವಾಫ್ ಮಾಡುವವರಿಗೆ ಕಷ್ಟಗಳನ್ನು ಕೊಟ್ಟು ಹಜರುಲ್ ಅಸ್ವದನ್ನು ಚುಂಬಿಸಲು ಶ್ರಮಿಸುವಾಗ ನಷ್ಟವಾಗುವುದು ಉಮ್ರ ಒಳಗೊಂಡ ನಮ್ಮ ಸತ್ಕರ್ಮಗಳಾಗಿದೆ.
ಚುಂಬಿಸುವುದು, ಮುಟ್ಟಿ ಚುಂಬಿಸುವುದು.. ಇದಕ್ಕೆ ಸಾಧ್ಯವಾಗದ ಅವಸ್ಥೆಯಾದರೆ ಕೈಯಿಂದ ಕಲ್ಲಿನ ನೇರ ಆಂಗ್ಯ ತೋರಿಸುವುದು.. ಇದಾಗಿದೆ ಪ್ರವಾದಿ ﷺ ನಿರ್ದೇಶಗಳು.
ನೂಕುನುಗ್ಗಲಿನಿಂದ ತವಾಫ್ ಮಾಡುವ ವೃದ್ದೆಯರು, ಅಬಲೆಯರು ಒಳಗೊಂಡ ಜನರಿಗೆ ಪ್ರಯಾಸ ಉಂಟು ಮಾಡಿ ಹಜರುಲ್ ಅಸ್ವದನ್ನು ಚುಂಬಿಸುವುದಕ್ಕಿಂತ ಒಳ್ಳೆಯದು ಕೈಯಿಂದ ಕಲ್ಲಿನ ನೇರಕ್ಕೆ ಆಂಗ್ಯ ತೋರಿಸುವುದಾಗಿದೆ ಉತ್ತಮ. ಪ್ರತ್ಯೇಕಿಸಿ ಸ್ತ್ರೀಯರಿಗಾಗಿ ಎಚ್ಚರಿಕೆ ವಹಿಸುವುದು ಒಳ್ಳೆಯದು.
✍ ಗಫೂರ್ ಬಾಯಾರ್
Labels:
ಜನರಲ್
Subscribe to:
Post Comments (Atom)
No comments:
Post a Comment