ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, October 7, 2017
ಎಸ್ಸೆಸ್ಸೆಫ್ ನ ವಜ್ರ ಪ್ರಕಾಶ ಇಮೇಜನ್ನು ವಜ್ರದೇಹಿ ಸ್ವಾಮೀಜಿಗೆ ಕೂಡಾ ಅಡಗಿಸಲು ಸಾದ್ಯವಿಲ್ಲ ಯಾಕೆ?
---------------------
ಹೌದು...
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ವಿರೋಧಿಗಳು, ನಾನಾ ರೀತಿಯಲ್ಲಿ ವಿಮರ್ಶಿಸಿದ್ದಾರೆ.
ಹೇಚ್ಚೇಕೆ 'ಹುಚ್ಚ' ನೆಂದೇ ಕರೆದರು!
ನಿಜವಾಗಿಯೂ ಪುಣ್ಯ ರಸೂಲರಿಗೆ ಅಂತಹ ಗಂಭೀರ ನ್ಯೂನತೆ ಬಿಡಿ, 'ನ್ಯೂನತೆ' ಎಂಬುದೇ ನೆಬಿಯವರನ್ನು ಟಚ್ಚ್ ಮಾಡಲಿಲ್ಲ!
ಅಷ್ಟಾಗಿಯೂ ಅವರು ಆ ಪುಣ್ಯ ರಸೂಲರನ್ನು 'ಹುಚ್ಚ' ನೆಂದೇ ಕರೆದು ಬಿಟ್ಟರು!!
ಇಲ್ಲಿ ನಾವು ಗಮನಿಸಬೇಕಾದ ಸತ್ಯವೊಂದಿದೆ.
ಅವರು (ಮಕ್ಕಾ ಮುಶ್ರಿಕರು) ಅದೆಷ್ಟೇ ಕೀಳುಮಟ್ಟದಲ್ಲಿ ನೆಬಿಯವರನ್ನು ವಿಮರ್ಶಿಸಿದರೂ ಒಳಗೊಳಗೆ ಅವರಿಗೆ ಆತಂಕವಿತ್ತು!
ಅವರು ಕೂಡಾ ಅವರರಿಯದೆ ಹೇಳುತ್ತಿದ್ದ ಒಂದು ವಾಕ್ಯವಿತ್ತು "ಅಲ್ ಅಮೀನ್" "ಸತ್ಯವಂತ"!
ಅಂದ್ರೆ ಬಿಲ್ಕುಲ್ ಸುಳ್ಳು ಹೇಳಲ್ಲ, ವಂಚನೆ ಮಾಡಲ್ಲ, ವಚನ ಭೃಷ್ಟ ಇಲ್ಲ, ಟೋಟಲಿಯಾಗಿ ಪುಣ್ಯ ರಸೂಲರು ಸತ್ಯವಂತ ಎಂಬ ಇಮೇಜ್ ವಜ್ರದಂತೆ ವಿರೋಧಿಗಳ ಎದೆಯನ್ನು ಸೀಳಿ ಪ್ರಕಾಶಿಸುತ್ತಿತ್ತು.
ಆದರೂ ಅವರು ತಮ್ಮವರನ್ನು ತೃಪ್ತಿ ಪಡಿಸಲು ನ್ಯೂನತೆಗಳಿಗೆ ಅತೀತವಾದ ಪುಣ್ಯ ಮನುಷ್ಯನನ್ನು "ಹುಚ್ಚನೆಂದು" ಕರೆದೇ ಬಿಟ್ಟರು!!
ಅದು ಈ ಲೋಕದ ರೂಡಿ ಕೂಡಾ!
ನಿಜವಾಗಿಯೂ ಇಲ್ಲಿ ಇಸ್ಲಾಂ ದಾಈ ಗಳಿಗೆ ಪಾಠವಿದೆ.
ಪ್ರತಿಯೊಬ್ಬ ಪ್ರಭೋದಕ ಅಥವಾ ಧಾರ್ಮಿಕ ಸಂಘಟನೆಗಳ ವಿರುದ್ದ ವಿಮರ್ಶನೆಗಳು ಸಹಜ. ಆರೋಪಗಳು ಅಷ್ಟೇ ಅಧಿಕ.
ಅದೇನೇ ಇದ್ದರೂ ಸದರಿ ಪ್ರಭೋದಕ ಅಥವಾ ಸಂಘಟನೆ ತನ್ನ ಇಮೇಜನ್ನು ಭದ್ರಪಡಿಸಿಕೊಳ್ಳಬೇಕು.
ಅದರಲ್ಲಿ ಎಸ್ಸೆಸ್ಸೆಫ್ ನೂರು ಶೇಖಡಾ ವಿಜಯಿಸಿದೆ.
ಕಾರಣ ಆ ಸಂಘಟನೆ ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳ ಆಶೀರ್ವಾದ ಮತ್ತು ನೇತೃತ್ವದಲ್ಲಿ ನಡೆಯುತ್ತದೆ.
ಹಾಗಾಗಿಯೇ ಎಸ್ಸೆಸ್ಸೆಫ್ ನ ವಿರುದ್ದ ಯಾರೂ ಏನೇ ಆರೋಪ ಮಾಡಿದರೂ ಅವರೆಲ್ಲರ ಹೃದಯ ಸೀಳಿ ಅದರ ಇಮೇಜ್ ವಜ್ರದಂತೆ ಪ್ರಕಾಶಿಸುತ್ತಲೇ ಇದೆ.
ಆದ್ದರಿಂದಲೇ ಪ್ರಸ್ ಮೀಟ್ ನೋಟ್ ನಲ್ಲಿ ಮತೀಯವಾದದ ಆರೋಪ ಟೈಪ್ ಮಾಡಿದವರಿಗೆ ಎಸ್ಸೆಸ್ಸೆಫ್ ಧರ್ಮದ ಏಳಿಗೆಗಾಗಿ ಎಂದು ಹೇಳಲೇ ಬೇಕಾಯಿತು!
ಅದಾಗಿದೆ ವಜ್ರ ಪ್ರಕಾಶದ ಇಮೇಜ್!
ಅಂದ್ರೆ ಎಸ್ಸೆಸ್ಸೆಫ್ ನ ಇಮೇಜನ್ನು ಮರೆಮಾಚಲು ಶ್ರಮಿಸುವುದು
ಸೂರ್ಯ ಪ್ರಕಾಶ ಮರೆಮಾಚಲು ಶ್ರಮಿಸುವುದಕ್ಕೆ ಸಮ.
ಕೆಲವೊಂದು ಸಂಘಟನೆಗಳು ಈ ವಿಷಯದಲ್ಲಿ ಸೋತಿದೆ.
ಅವರ ಎಂಟ್ರಿಯೇ ಆತಂಕಜನಕವಾಗಿತ್ತು!
ಅವರ ತರಗತಿಗಳು ಮಧ್ಯ ರಾತ್ರಿಯಲ್ಲಾಗಿತ್ತು!!
ಅವರಿಗೆ ಒಳಿತಿನ ಇಮೇಜ್ ಇರಲಿಲ್ಲ.
ಜಾತಿಬೇಧವಿಲ್ಲದೆ ಎಲ್ಲರೂ ಅವರ ಕುರಿತು ಆತಂಕ ಮತ್ತು ಭಯಭೀತಿಯಲ್ಲಿದ್ದರು. ಆ ಆತಂಕ ಮತ್ತು ಭಯ ನೀಗಿಸಲು ಅವರಿಗೆ ಇಂದಿಗೂ ಸಾದ್ಯವಾಗಿಲ್ಲ.
ಹಾಗಾಗಿಯೇ ಅವರು ಮಾಡುವ ಒಳಿತನ್ನು ಜನರು ಸಂಶಯ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಧರ್ಮ ರಕ್ಷಕರ ಹೆಸರಲ್ಲಿ ಬಂದವರಿಂದಲೇ ಧರ್ಮವು ಅಪಾಯ ಎದುರಿಸುತ್ತಿದೆ ಎಂದು ಹೇಳುವ ಮಟ್ಟಿಗೆ ತಲುಪಿದೆ.
ಇದರಲ್ಲಿ ಹಿಂದು ಮುಸ್ಲಿಮ್ ಎಂಬ ವ್ಯತ್ಯಾಸ ಇಲ್ಲ.
ಮೊನ್ನೆ ನಾನು ಮಿತ್ರರೊಬ್ಬರ ಜತೆ ಬಸ್ಸಲ್ಲಿ ಮಂಗಳೂರು ಸಂಚರಿಸುವಾಗ ಹಿಂದೂ ಮತೀಯ ಸಂಘಟನೆಯ ಹೆಸರಲ್ಲಿರುವ ಬಸ್ಸು ತಂಗುದಾಣದವೊಂದರ ಬೋರ್ಡ್ ನೋಡಿದೆ.
ಮಿತ್ರ ಅಚ್ಚರಿಯಿಂದ ಕೇಳಿದ
ಇವರು ಕೂಡಾ ಸೋಷಿಯಲ್ ವರ್ಕ್ ಮಾಡುತ್ತಾರಾ? ಇದರಲ್ಲಿ ಏನಾದರೂ ತಂತ್ರ ಇರಬಹುದೆಂದು...
ನನ್ನ ಮನಸ್ಸು ಅದು ಸರಿಯೆಂದು ಹೇಳಿತು.
ಇದೇ ರೀತಿ ಮುಸ್ಲಿಂ ಮತೀಯ ಸಂಘಟನೆಯವರ ಸೋಷಿಯಲ್ ವರ್ಕ್ ನೋಡಿ ಒಬ್ಬ ಹಿಂದು ಸಹೋದರನ ಮನಸ್ಸು ಅದೇ ರೀತಿ ಮಂತ್ರಿಸುತ್ತಿದ್ದರೆ ಅದು ಅವನ ತಪ್ಪಲ್ಲ.
ಕಾರಣ ಇಂತಹ ಸಂಘಟನೆಗಳು ಸಮಾಜದಲ್ಲಿ ಸಂಶಯಾಸ್ಪದವಾಗಿ ಎಂಟ್ರಿ ಕೊಟ್ಟಿದ್ದರಿಂದಲೇ ಅವರಿಗೆ ಒಳ್ಳೆಯ ಇಮೇಜ್ ಇಲ್ಲ.
ನಿರಂತರ ಆರೋಪಗಳು ಬರುತ್ತಿರುವಾಗ ಅದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.
ಆದರೆ ಎಸ್ಸೆಸ್ಸೆಫ್ ಅಂದೂ ಇಂದೂ ತನ್ನ ಉತ್ತಮ ಮತ್ತು ಒಳಿತಿನ ಇಮೇಜ್ ಗೆ ಬದ್ದವಾಗಿರುವುದರಿಂದಲೇ ಅದೆಷ್ಟೋ ಬೆಟ್ಟದಷ್ಟು ಆರೋಪ ಬಂದರೂ ಅದರ ವಜ್ರ ಪ್ರಕಾಶದ ಇಮೇಜ್ ನ ಮುಂದೆ ಅದೆಲ್ಲವೂ ನಗಣ್ಯವಾಗುತ್ತದೆ.
ನಿನ್ನೆ ವಜ್ರದೇಹಿ ಸ್ವಾಮೀಜಿಯವರ ಮಾತಿನ ತಿರುಳು ಕೂಡಾ ಅದೇ ಆಗಿತ್ತು. ಸರಿ ತಾನೇ?
- ಅಬೂಶಝ
Subscribe to:
Post Comments (Atom)
No comments:
Post a Comment