Sunday, October 8, 2017

*ಸ್ವರ್ಗ ಪ್ರವೇಶಕ್ಕಿರುವ ಸುವರ್ಣಾವಕಾಶಗಳು.!*

(ನೌಫಲ್ ಸಖಾಫಿ ಉಸ್ತಾದರ ಪ್ರಭಾಷಣದ ಸಾರಾಂಶ)

ಪರಲೋಕ ವಿಜಯಕ್ಕೆ ಪ್ರವಾದಿ ﷺ ರು ಸೂಚಿಸಿದ ಸೂತ್ರಗಳಲ್ಲೊಂದಾಗಿದೆ, ಉಲಮಾಗಳನ್ನು ಪ್ರೀತಿಸುವುದು. "ನೀನು ಆಲಿಂ ಆಗು, ಇಲ್ಲವೇ ಇಲ್ಮ್ ಕಲಿಯುವ ಮುತ'ಅಲ್ಲಿಂ ಆಗು, ಇಲ್ಲವೇ ಇಲ್ಮನ್ನು ಪ್ರೀತಿಸುವವನಾಗು, ಇಲ್ಲವೇ ಇಲ್ಮ್ ಕೇಳಿ ತಿಳಿಯುವವನಾಗು, ಈ ನಾಲ್ಕರ ಹೊರತು ಐದನೇ ವ್ಯಕ್ತಿ ಯಾಗಬೇಡ" (ಹದೀಸ್)

ಇದರಲ್ಲಿ ಸೂಚಿಸಿರುವ ಮೂರನೇ ಸೂತ್ರಗಳಿಗೊಳಪಟ್ಟ ವಿಷಯವಾಗಿದೆ ಇಲ್ಮ್ ಕಲಿತ ಉಲಮಾಗಳನ್ನು ಪ್ರೀತಿಸುವುದು. ಇಲ್ಮ್ ಕಲಿತವರನ್ನು ಪ್ರೀತಿಸುವುದು ಸ್ವರ್ಗ ಪ್ರವೇಶಕ್ಕಿರುವ ಒಂದು ಸುಲಭ ದಾರಿ ಕೂಡಾ ಆಗಿದೆ ಎಂದು ಪ್ರವಾದಿ ﷺ ನುಡಿದಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟ ಮತ್ತೊಂದು ಹದೀಸ್ ನೋಡಿ: ಪ್ರವಾದಿ ﷺ ರು ಸ್ವಹಾಬಿ ಯೋರ್ವರಲ್ಲಿ ಹೇಳಿದರು "ನೀವು ಯಾರನ್ನು ಹೆಚ್ಚು ಪ್ರೀತಿಸುತ್ತೀರೋ, ಅವರೊಂದಿಗೆ ಸ್ವರ್ಗದಲ್ಲಿರುವಿರಿ" ಎಂಬುದು.

ಈ ಎರಡು ಹದೀಸ್ ಗಳು ಸತ್ಯ ವಿಶ್ವಾಸಿಗಳ ಪಾಲಿಗೆ ಮಹತ್ವ ವುಲ್ಲವುಗಳಾಗಿವೆ. ಈ ಎರಡು ಹದೀಸ್ ಗಳ ಸಾರಾಂಶ ಒಂದೇ, ಸ್ವರ್ಗ ಪ್ರವೇಶಿಸಲು ಸುಲಭ ದಾರಿ ಅದು ಉಲಮಾಗಳನ್ನು ಪ್ರೀತಿಸುವುದಾಗಿದೆ.

ಅಂತಹ ಉಲಮಾ ದಿಗ್ಗಜರಲ್ಲೋರ್ವರಾಗಿದ್ದಾರೆ ಬಹುಮಾನ್ಯರಾದ ತಾಜುಲ್ ಉಲಮಾ (ಖ.ಸಿ) ರವರು. ತಾಜುಲ್ ಉಲಮಾ ರ ಬಗ್ಗೆ ವಿಶ್ವ ಉಲಮಾಗಳೆಡೆಯಲ್ಲಿ ಎರಡಾಭಿಪ್ರಾಯವಿಲ್ಲ. ವಿಶ್ವದ ಪ್ರಗಲ್ಭ ಉಲಮಾ, ಸೈಯ್ಯಿದ್-ಸಾದಾತು ಗಳೂ ತಾಜುಲ್ ಉಲಮಾ ರವರನ್ನು ಗೌರವಿಸುವವರೂ, ಪ್ರೀತಿಸುವವರೂ, ಅಂಗೀಕರಿಸುವವರೂ ಆಗಿದ್ದಾರೆ. ತನ್ನ ತೊಂಬತ್ತಾರು ವರ್ಷಗಳ ಇತಿಹಾಸದಲ್ಲಿ ವಿಶ್ರಾಂತಿ ಪಡೆದುಕೊಂಡ ಒಂದು ಅವಧಿಯನ್ನು ತೋರಿಸಲು ಯಾರಿಂದಲೂ ಸಾದ್ಯವಿಲ್ಲ. ವಿಶ್ರಾಂತಿ ಇಲ್ಲದೆ, ರಾತ್ರೀ-ಹಗಲು ಅಲ್ಲಾಹನ ಆರಾಧನೆಯಲ್ಲೇ ಮಗ್ನರಾಗಿದ್ದವರಾಗಿದ್ದರು ತಾಜುಲ್ ಉಲಮಾ. ಎರಡು-ಮೂರು ದಿನಕ್ಕೊಮ್ಮೆಯಾದರೂ ಒಂದು ಕತಮ್ ಮುಗಿಸುತ್ತಿದ್ದರು. ಪ್ರತೀ ದಿನ ಹನ್ನೊಂದು ರಕಹತ್ ವಿತ್ರ್ ನಮಾಝ್ ಸಹಿತ ಪ್ರತಿಯೊಂದು ನಮಾಝನ್ನೂ ನಿಂತುಕೊಂಡೇ ನಮಾಝ್ ಮಾಡುತ್ತಿದ್ದರು. ಜೀವನದ ಪ್ರತಿಯೊಂದು ಸಮಯದಲ್ಲೂ ಮುತ'ಅಲ್ಲಿಂ ಗಳಿಗೆ ಇಲ್ಮ್ ಕಲಿಸಿಕೊಡುವ ವಿಷಯದಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಿದ್ದರು. ಯಾವುದೇ ಊರಲ್ಲಿ ಧಾರ್ಮಿಕ ಕಾರ್ಯಕ್ರಮವಿದ್ದರೂ, ತನ್ನ ಅನಾರೋಗ್ಯವನ್ನೂ ಲೆಕ್ಕಿಸದೆ ರಾತ್ರೀ-ಹಗಲು ನಿದ್ದೆಗೆಟ್ಟು ಸುನ್ನತ್-ಜಮಾಹತ್ ಗಾಗಿ ಓಡಾಡಿದವರಾಗಿದ್ದರು ತಾಜುಲ್ ಉಲಮಾ.

ಅಂತಹ ಓರ್ವ ಮಹಾನ್ ವ್ಯಕ್ತಿ ಸ್ವರ್ಗ ಪ್ರವೇಶದ ಅವಕಾಶ ಪಡೆಯುವರು ಎಂಬ ವಿಷಯದಲ್ಲಿ ಬಡಗರ ತಂಙಳ್ ಉಪ್ಪಾಪ ರಂತಹ ವಲಿಯ್ಯ್ ಗಳ ಸಹಿತ ನಮಗ್ಯಾರಿಗೂ ಸಂಶಯವಿಲ್ಲ. ಅದಕ್ಕಾಗಿ ನಾವು ತಾಜುಲ್ ಉಲಮಾರನ್ನು ಅತಿಯಾಗಿ ಪ್ರೀತಿಸುತ್ತೇವೆ ಮತ್ತು ಅನುಸರಿಸುತ್ತೇವೆ.

ಮಹಷರಾದಲ್ಲಿ ಪ್ರವಾದಿ (ﷺ) ಗಳ ನಂತರ ಅವನ ಇಷ್ಟ ದಾಸರಾದ ಉಲಮಾಗಳಿಗೆ ಶಫಾಹತ್ ಮಾಡುವ ಅಧಿಕಾರವನ್ನು ಅಲ್ಲಾಹನು ಕೊಡುತ್ತಾನೆ. ಈ ಅಧಿಕಾರಾವಧಿಯಲ್ಲಿ ಅವರು ತಮಗಿಷ್ಟ ಬಂದವರನ್ನು (ತಮ್ಮನ್ನು ಪ್ರೀತಿಸುವವರನ್ನು) ಶಫಾಹತ್ ಮಾಡಬಹುದು. ಈ ಒಂದು ಅವಕಾಶಕ್ಕಾಗಿಯಾಗಿದೆ ನಾವು ಉಲಮಾಗಳು ಮತ್ತು ತಂಙಳ್ ಗಳು ನೇತೃತ್ವ ಕೊಡುವ SSF ನಂತಹ ಸುನ್ನತ್ ಜಮಾಹತ್ ಸಂಘಟನೆಯಲ್ಲಿ ಸೇರಿಕೊಂಡಿದ್ದು.

ಆರಾಧನೆಯಿಂದ ಸ್ವರ್ಗ ಪ್ರವೇಶಿಸಲು ಕಡು ಗಾತ್ರದಷ್ಟು ಅರ್ಹತೆಗಳೂ ನಮ್ಮಲ್ಲಿಲ್ಲ. ಸ್ವರ್ಗ ಪ್ರವೇಶದ ಮಾತು ಬಿಡಿ, ಕನಿಷ್ಠ ಪಕ್ಷ ಸಾವಿರ ಕಿ.ಮೀ ದೂರದಲ್ಲಿ ಸ್ವರ್ಗದ ಪರಿಮಳವನ್ನು ಆಸ್ವಾದಿಸುವ ಅರ್ಹತೆಗಳೂ ನಮ್ಮಲ್ಲಿಲ್ಲ. ಹೆಚ್ಚೇಕೆ, ತಾಜುಲ್ ಉಲಮಾರ ಒಂದು ಸಮಯದ ಆರಾಧನೆಯನ್ನು ನಮ್ಮ ಇಡೀ ಜೀವಿತಾವಧಿಯಲ್ಲಿ ಮಾಡಿ ಮುಗಿಸಲು ನಮ್ಮಿಂದ ಸಾದ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ನಾವು ಸ್ವರ್ಗ ಪ್ರವೇಶನದ ಅವಕಾಶವನ್ನು ಪಡೆಯುವುದಾದರೂ ಹೇಗೆ?

ಅದಕ್ಕಾಗಿ, ಅಲ್ಲಾಹನ ಇಷ್ಟದಾಸರಾದ ಉಲಮಾಗಳನ್ನು-ತಂಙಳ್ ಗಳನ್ನು ಪ್ರೀತಿಸುವುದಲ್ಲದೆ ಬೇರೆ ಯಾವ ದಾರಿಯೂ ನಮ್ಮ ಮುಂದಿಲ್ಲ.  ನಮ್ಮ ಪರಲೋಕ ವಿಜಯಕ್ಕಾಗಿ ಉಲಮಾ-ತಂಙಳ್ ಗಳನ್ನು ಪ್ರೀತಿಸುವವರಾಗೋಣ, ಅಲ್ಲಾಹು ಅನುಗ್ರಹಿಸಲಿ.

ಅಲ್ಲಾಹನೇ, ಉಲಮಾ-ತಂಙಳ್ ಗಳನ್ನು ಪ್ರೀತಿಸಿ-ಅನುಸರಿಸಿ ನಡೆದು, ಆ ಕಾರಣದಿಂದಾದರೂ ಸ್ವರ್ಗ ಪ್ರವೇಶಿಸುವ ಸೌಭಾಗ್ಯವನ್ನು ನಮಗೆಲ್ಲರಿಗೂ ಕರುಣಿಸು, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment