*ಕುತ್ತ್ ರಾತೀಬ್ ಇಸ್ಲಾಮಿಕವೇ?*
📝 _ಮುನೀರ್ ಸಖಾಫಿ ಸಾಲೆತ್ತೂರು_
ಭಾಗ--1
----------------------------------------------------
ಹಲವು ರಾತೀಬುಗಳು ನಮಗೆ ಪರಿಚಯವಿದೆ.ಮುಹ್ಯುದ್ದೀನ್ ರಾತೀಬ್,ರಿಫಾಯೀ ರಾತೀಬ್,ಹದ್ದಾದ್ ರಾತೀಬ್,ಶಾದುಲಿ ರಾತೀಬ್ ಹೀಗೆ ಹಲವಾರು ರಾತೀಬ್ ಗಳು.
ಮಹಾತ್ಮರಾದ ಔಲಿಯಾಗಲು ಅವರ ಶಿಷ್ಯಂದಿರ ಪಾರತ್ರಿಕ ಲೋಕದ ವಿಜಯಕ್ಕಾಗಿ ಖುರ್'ಆನ್ ಮತ್ತು ಹದೀಸಿನಲ್ಲಿ ವರದಿಯಾದ ಕೆಲವು ದ್ಸಿಕ್ರ್ ಗಳನ್ನು ದೈನಂದಿನ ಜಪಿಸಲು ನೀಡಿದ ದ್ಸಿಕ್ರ್ ಗಳಾಗಿದೆ ರಾತೀಬ್.
ಔಲಿಯಾಗಳ ನಾಯಕ ಶೈಖ್ ರಿಪಾಯೀ (ರ) ರವರ ಹೆಸರಲ್ಲಿ ನಡೆಸಿಕೊಂಡು ಬರುವ ಪ್ರತ್ಯೇಕ ರಾತೀಬಾಗಿದೆ ಕುತ್ತ್ ರಾತೀಬ್ ಎಂಬುವುದು.
ರಾತೀಬ್ ನ ನಡುವೆ ಅಥವಾ ರಾತೀಬ್ ನ ನಂತರ ಆಯುಧಗಳಿಂದ ಶರೀರಕ್ಕೆ ಚುಚ್ಚುವುದಕ್ಕೆ "ಕುತ್ತ್ ರಾತೀಬ್" ಎನ್ನುತ್ತಾರೆ.
ವಹ್ಹಾಬಿ ಯಾನೆ ಮೌದೂದಿಗಳು ಇದನ್ನು ಕ್ರಿಮಿನಲ್ ರಾತೀಬ್ ಎಂದು ಹೇಳಿ ಪರಿಹಾಸ್ಯ ಮಾಡುವುದುಂಟು.
ಇದರ ನೈಜತೆಯ ಬಗ್ಗೆ ಅಲ್ಪ ವಿವರಿಸುತ್ತೇನೆ.
ಮಾರಕಾಯುಧಗಳಿಂದ ಶರೀರಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ಚುಚ್ಚುವುದು ನಿಷಿದ್ಧವಾಗಿದೆ.ಇದು ಖುರ್'ಆನಿನಲ್ಲೇ ಹೇಳಲಾಗಿದೆ.
ಅಭ್ಯಾಸ ಅಥವಾ ವಾಡಿಕೆಯಿಂದ ಹಾಗೂ ಕರಾಮತ್ ನಿಂದ ಅಪಾಯ ಸಂಭವಿಸದು ಎಂದು ದೃಡವಿದ್ದಲ್ಲಿ ಚುಚ್ಚುದಕ್ಕೆ ಯಾವುದೇ ಅಡ್ಡಿಯಿಲ್ಲ.
ಇಮಾಮ್ ಇಬ್ನ್ ಹಜರುಲ್ ಹೈತಮೀ (ರ)ಬರೆಯುತ್ತಾರೆ,
ولا يحرم من الطاهر إلا نحو حجر وتراب ومنه مدر وطفل لمن يضره وعليه يحمل إطلاق جمع متقدمين حرمته بخلاف من لا يضره كما قاله جمع متقدمون واعتمده السبكي وغيره وسم وإن قل إلا لمن لا يضره
(تحفة 9/ 479)
ಕಲ್ಲು ,ಮಣ್ಣು ಮುಂತಾದ ಶುದ್ಧಿಯಿರುವ ವಸ್ತುಗಳನ್ನು ತಿನ್ನುವುದರಿಂದ ತೊಂದರೆಯಿದೆ ಎಂದಾದಲ್ಲಿ ಅದನ್ನು ತಿನ್ನುವುದು ಹರಾಮ್ ಆಗಿದೆ.ನಿಶ್ಶರತ್ತ್ ಅದು ತಿನ್ನುವುದು ಹರಾಮ್ ಎಂದು ಹೇಳಿದ ಇಮಾಮರುಗಳ ಮಾತನ್ನು ಈ ರೀತಿ ವ್ಯಾಖ್ಯಾನಿಸಬೇಕಾಗಿದೆ.
ತಿನ್ನುವುದರಿಂದ ಯಾವುದೇ ತೊಂದರೆಯಿಲ್ಲದ ಜನರಿಗೆ ತಿನ್ನುವುದಕ್ಕೆ ಯಾವುದೇ ನಿಷೇಧವಿಲ್ಲ.
ಪೂರ್ವೀಕರಾದ ಹಲವಾರು ಇಮಾಮರುಗಳು ಇದನ್ನು ಸ್ಪಷ್ಟಪಡಿಸಿದ್ದು, ಇಮಾಮ್ ಸುಬುಕಿ (ರ)ಇದನ್ನು ಪ್ರಬಲ ಮಾಡಿದ್ದಾರೆ.ವಿಷ ಅಲ್ಪವಾದರೂ ತಿನ್ನುವುದು ಹರಾಮ್ ಆಗಿದೆ.ಆದರೆ ತಿನ್ನುವುದರಿಂದ ತೊಂದರೆಯಿಲ್ಲದ ಜನರಿಗೆ ಅದು ತಿನ್ನುವುದು ಹರಾಮ್ ಅಲ್ಲ.
(ತುಹ್'ಫ 9/479)
ಇದೇ ರೀತಿ ಇಮಾಮ್ ರಂಲೀ ನಿಹಾಯದಲ್ಲಿ ಮತ್ತು ಖತೀಬುಶ್ಶಿರ್'ಬೀನಿ ಮುಗ್ನಿಯಲ್ಲೂ ವಿವರಿಸಿದ್ದಾರೆ.
_______________________________
ಸ್ವಹಾಬೀ ಪ್ರಮುಖರಾದ ಕಾಲಿದ್ ಬಿನ್ ವಲೀದ್ (ರ) ರವರು ವಿಷ ಕುಡಿದು ಒಂದು ಘಟನೆ ಪ್ರಸಿದ್ಧವಾಗಿದೆ.
ಅಬುಸ್ಸಫರ್ (ರ) ವರದಿ ಮಾಡುವ ಆ ಘಟನೆ ಹೀಗಿದೆ.
ಕಾಲಿದ್(ರ) ಹೀರತ್ ಎಂಬ ಸ್ಥಳಕ್ಕೆ ಹೋದಾಗ ಶತ್ರು ಸೈನ್ಯದ ಬಳಿ ತಲುಪಿದರು.ಆವಾಗ ಅವರಲ್ಲಿ ಇಸ್ಲಾಮ್ ಸತ್ಯ ದೀನ್ ಆಗಿದ್ದರೆ ,ನಿನ್ನ ಅಲ್ಲಾಹು ಏಕನಾಗಿದ್ದರೆ ಈ ವಿಷವನ್ನು ಕುಡಿದು ತೋರಿಸಬೇಕೆಂದು ಅವರು ಸವಾಲು ಹಾಕಿದಾಗ ಕಾಲಿದ್ (ರ) ವಿಷ ವನ್ನು" ಬಿಸ್ಮಿ" ಹೇಳಿ ಕುಡಿದರು.ಅಲ್ಲಾಹನ ಅನುಮತಿ ಪ್ರಕಾರ ಅವರಿಗೆ ಯಾವುದೇ ತೊಂದರೆಯಾಗಿಲ್ಲ.
(ಮುಸನ್ನಫ್ ಇಬ್ನ್ ಅಬೀ ಶೈಬ 8/56)
ಈ ಘಟನೆಯನ್ನು ಹಲವಾರು ಮುಹದ್ದಿಸ್ ಗಳು ವರದಿ ಮಾಡಿದ್ದಾರೆ.
ಇಮಾಮ್ ಬೈಹಖೀ ತನ್ನ ದಲಾಇಲುನ್ನುಬುವ್ವ 3324 ,
ಇಮಾಮ್ ತ್ವಬ್'ರಾನಿ ಅಲ್ ಮುಹ್'ಜಮುಲ್ ಕಬೀರ್ ನ 3718 ,
ಇಮಾಮ್ ಅಬೂ ಯಹ್'ಲ ತನ್ನ ಮುಸ್ನದ್ ನ 7029 ರಲ್ಲೂ ಉಲ್ಲೇಖಿಸಿದ್ದಾರೆ.
ವಹ್ಹಾಬಿಗಳು ಈ ಘಟನೆಯನ್ನು ತಳ್ಳಿಹಾಕುವಂತಿಲ್ಲ.
ಕಾರಣ , ವಹ್ಹಾಬಿಗಳ ಶೈಖುಲ್ ಇಸ್ಲಾಮ್ ಇಬ್ನ್ ತೀಮಿಯ್ಯ ತನ್ನ ಗ್ರಂಥದಲ್ಲೇ ಇದನ್ನು ವರದಿ ಮಾಡಿದ್ದಾರೆ.
ಅವರು ಹೇಳುವುದು ನೋಡಿ,
وكرامات الصحابة والتابعين بعدهم وسائر الصالحين كثيرة جدا..........
وخالد بن الوليد حاصر حصنا منيعا، فقالوا: لا نسلم حتى تشرب السم، فشربه فلم يضره.(الفرقان ،66،67)
ಸ್ವಹಾಬಿಗಳ ಮತ್ತು ತಾಬಿವುಗಳ ಕರಾಮತ್ ಹಲವಾರು ಇದೆ..........
ಖಾಲಿದ್ ಬಿನ್ ವಲೀದ್ (ರ)ರೊಂದಿಗೆ ಶತ್ರುಗಳು ವಿಷವನ್ನು ಕುಡಿಯಬೇಕೆಂದು ಸವಾಲು ಹಾಕಿದಾಗ ಕುಡಿದು ಬಿಟ್ಟರು.ಯಾವ ತೊಂದರೆಯೂ ಅವರಿಗಾಗಿಲ್ಲ.
(ಇಬ್ನ್ ತೀಮಿಯ್ಯ ರ ಅಲ್ ಫುರ್'ಖಾನ್ ,ಪುಟ 66,67).
_______________________________
ಖಾಲಿದ್ (ರ )ರವರ ಪ್ರಸ್ತುತ ಘಟನೆಯನ್ನು ಇಮಾಮ್ ದಮೀರಿ ತನ್ನ ಹಯಾತುಲ್ ಹಯವಾನುಲ್ ಕುಬ್ರಾದಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ.ಕಾಲಿದ್(ರ)ರವರು ವಿಷವನ್ನು ಕುಡಿದ ಕರಾಮತ್ತನ್ನು ನೋಡಿದ ಶತ್ತು ಸೈನ್ಯ ಅವರೊಂದಿಗೆ ಯುದ್ಧ ಮಾಡದೆ 80,000 ದಿರ್ಹಮ್ ನೀಡಿ ಅವರೊಂದಿಗೆ ಸ್ನೇಹ ಒಪ್ಪಂದ ಮಾಡಿ ಹೊರಟು ಹೋದರು.
(ಹಯಾತುಲ್ ಹಯವಾನ್ 1/391).
ಈ ಘಟನೆಯಿಂದ ಶರೀರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ದೃಢವಿದ್ದಲ್ಲಿ ಅಪಾಯದ ವಸ್ತು ತಿನ್ನುವುದು /ಇನ್ನಿತರ ಅದ್ಭುತಗಳನ್ನು ನಡೆಸುವುದು ಅನಿಸ್ಲಾಮಿಕವಲ್ಲ ಎಂದು ಮನವರಿಕೆಯಾಯಿತು.
ಒಂದು ವೇಳೆ ಅನಿಸ್ಲಾಮಿಕವಾಗಿರುತ್ತಿದ್ದಲ್ಲಿ ಕಾಲಿದ್(ರ) ಇದಕ್ಕೆ ತಯಾರಾಗುತ್ತಿರಲಿಲ್ಲ.
ಇನ್ನಷ್ಟು ಪುರಾವೆಗಳು ಮುಂದಿನ ಭಾಗದಲ್ಲಿ ನಿರೀಕ್ಷಿಸಿ.
ان شاء الله
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment