Monday, September 23, 2019

ಝಿಯಾರತ್ತ್ ಕೇಂದ್ರ 65. ಕೈಪಟ್ಟ ಬಿರಾನ್ ಮುಸ್ಲಿಯಾರ್ (ನ:ಮ)

*ಝಿಯಾರತ್ತ್ ಕೇಂದ್ರ​​​*
      ​6⃣5⃣
➖➖➖➖➖➖➖➖➖
*"ಬಹು ಭಾಷಾ ವಿದ್ವಾಂಸರು" ಕೈಪಟ್ಟ ಬಿರಾನ್ ಕುಟ್ಟಿ ಮುಸ್ಲಿಯಾರ್ (ನ:ಮ). ಓತುಕುನ್ನಳ್, ಕೊಟ್ಟಕ್ಕಲ್, ಮಲಪ್ಪುರಂ*

*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************

ಕೇರಳದಲ್ಲಿ ಹುಟ್ಟಿ ಬೆಳೆದ ಬಹುತೇಕ ಇಸ್ಲಾಮಿಕ್ ವಿಧ್ವಾಂಸರುಗಳು ಹಲವಾರು ಭಾಷೆಗಳನ್ನು  ಕರಗತ ಮಾಡಿಕೊಂಡ ಬಹು ಮುಖ ಪ್ರತಿಭೆಗಳಾಗಿದ್ದರು.

*ಅಂತಹ ಬಹು ಮುಖ ಪ್ರತಿಭಾಶಾಲಿಗಳಾದ ವಿಧ್ವಾಂಸರ ಪೈಕಿ ಶೈಖುನಾ ಕೈಪಟ್ಟ ಬೀರಾನ್ ಕುಟ್ಟಿ ಮುಸ್ಲಿಯಾರ್(ನ.ಮ) ಕೂಡ ಒಬ್ಬರು.*

ಹಿಜರಿ 1377 (ಕ್ರಿ.ಶ.1898)ರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಉಮ್ಮಿಣಿಕಡವತ್ತ್ ಅವರುಕುಟ್ಟಿ ಮತ್ತು ತಾಚ್ಚುಮ್ಮ ದಂಪತಿಗಳ ಮಗನಾಗಿ ಜನಿಸಿದ ಉಸ್ತಾದರು, ಕೈಪಟ್ಟ ಜುಮಾ ಮಸೀದಿಯ ದರ್ಸ್'ನಿಂದ ವ್ಯಾಸಂಗ ಆರಂಭಿಸಿ ನಂತರ ಚೆಮ್ಮಂಗಡವ್, ಕಡವತ್ತೂರ್ ಪರಂಬ್, ಕೊಡಂಚೇರಿ, ಕೊಳಪ್ಪುರಂ, ವಾಯಕಾಡ್ ದಾರುಲ್ ಉಲೂಮ್ ಮತ್ತು ಮದ್ರಾಸಿನ ಜಮಾಲಿಯಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು.

ಪ್ರಾಥಮಿಕ ಶಿಕ್ಷಣ ಆರಂಭಿಸಿದಾಗಿನಿಂದ ತೊತ್ತುಂಗಲ್ ಮರಕಾರ್ ಮೊಲ್ಲ (ನ:ಮ), ಕೆ.ಟಿ. ಕುಂಜಾಮುಟ್ಟಿ ಮಾಸ್ಟರ್ (ನ:ಮ), ಮಟ್ಟತ್ತೂರ್ ವೆಯುಂತರ ಅಹ್ಮದ್ ಮುಸ್ಲಿಯಾರ್ (ನ:ಮ), ಮೌಲಾನಾ ಮುಹಮ್ಮದಾರ್ ಆಲಿಂ ಸಾಹಿಬ್ (ನ:ಮ), ಚೆರುಶೋಲ ಸಯ್ಯಿದ್ ಅಲವಿ ಕೋಯ ತಂಗಳ್ (ನ:ಮ), ಪರಂಬಿಲ್ ಕುಂಜಾಹ್ಮದ್ ಮುಸ್ಲಿಯಾರ್ (ನ:ಮ), ಕರಿಂಬನಕಲ್ ಮಮ್ಮುಟ್ಟಿ ಮುಸ್ಲಿಯಾರ್ (ನ:ಮ), ಚೆರುಶ್ಶೋಲ ಕುಂಞಜಾನ್ ಮುಸ್ಲಿಯಾರ್ (ನ:ಮ), ಕೊಡಂಚೆರಿ ಕುಂಜಿ ಅಹ್ಮದ್ ಮುಸ್ಲಿಯಾರ್' (ನ:ಮ) ರಂಥಹ ಮಹಾತ್ಮರಿಂದ ವಿದ್ಯಾರ್ಜನೆ ಮಾಡಿದರು.

ನಂತರ ಕೇರಳದ ಹಲವಾರು ಕಡೆ ದರ್ಸ್ ನಡೆಸಿದ ಕೈಪಟ್ಟ ಉಸ್ತಾದರ (ನ:ಮ) ಅಸಂಖ್ಯ ಶಿಷ್ಯರಲ್ಲಿ, *ಪುತಿಯಾಪ್ಪಿಳ ಅಬ್ದು ರಹ್ಮಾನ್ ಮುಸ್ಲಿಯಾರ್ (ನ:ಮ), ಪಟ್ಟರ್'ಕಡವ್ ಕೆ.ಎಂ.ಎಸ್. ಪೂಕೋಯ ತಂಗಳ್ (ನ:ಮ)* ರಂತಹ ಮಹಾತ್ಮರು ಅವರ ಪ್ರಮುಖ ಶಿಷ್ಯರುಗಳಲ್ಲಿ ಪ್ರಮುಖರು.

ಪ್ರಮುಖ ಸೂಫಿವರ್ಯರೂ, ಗ್ರಂಥಕರ್ತರೂ, ಇಸ್ಲಾಮಿಕ್ ಕರ್ಮ ಶಾಸ್ತ್ರದ ಪ್ರಮುಖ ವಿದ್ವಾಂಸರೂ ಆಗಿದ್ದ ಶೈಖುನಾ ಕೈಪ್ಪಟ್ಟ ಬಿರಾನ್ ಕುಟ್ಟಿ ಮುಸ್ಲಿಯಾರ್ (ನ:ಮ)ರು ಇಂಗ್ಲಿಷ್, ಉರ್ದು,ಫಾರ್ಸಿ, ಸಂಸ್ಕೃತ, ಹಿಂದಿ, ಅರಬಿ, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಪ್ರಾವಿಣ್ಯತೆ ಗಳಿಸಿದ್ದರು.

*ಬೀರಾನ್ ಕುಟ್ಟಿ ಉಸ್ತಾದರ (ನ:ಮ) ಒಂದು ರೈಲು ಯಾತ್ರೆ.*

ಮಹಾನರು ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು.
ಆಗ ಅವರೆದುರಿನ ಆಸನದಲ್ಲಿ ಇಬ್ಬರು ಯುವಕರಿದ್ದರು.
ಉಸ್ತಾದರ ತಲೆಕಟ್ಟು ಮತ್ತು ಗಡ್ಡವನ್ನು ಕಂಡ ಆ ಯುವಕರು ಇಂಗ್ಲೀಷಿನಲ್ಲಿ ಉಸ್ತಾದರ ಬಗ್ಗೆ ತಮ್ಮ ತಮ್ಮಲ್ಲೇ ಮಾತನಾಡುತ್ತಾ...
"ಈ ಮುಂಡಾಸು ಕಟ್ಟುವವರಿದ್ದಾರಲ್ಲ ಅವರ ತಲೆಯ ಮೇಲೆ ದೊಡ್ಡ ಮುಂಡಾಸು ಮಾತ್ರ ಆದರೆ ತಲೆಯೊಳಗೇನೂ ಇಲ್ಲದ ಅವಿವೇಕಿಗಳು. ಓದು ಬರಹವೂ ಬಾರದವರು ಎಂದೆಲ್ಲಾ.. ಆ ಇಬ್ಬರು ಯುವಕರು ಉಸ್ತಾದರನ್ನು ಕುಹಕ ಮಾಡುತ್ತಿದ್ದರು.

ಅವರ ಸಂಭಾಷಣೆಯನ್ನು ಕೇಳಿಸಿಕೊಂಡ ಉಸ್ತಾದರು, ಸ್ವಲ್ಪ ಹೊತ್ತಿನ ನಂತರ ಆ ಯುವಕರೊಂದಿಗೆ
ಇಂಗ್ಲೀಷಿನಲ್ಲೇ ಮಾತು ಆರಂಭಿಸಿ, ನಿರರ್ಗಳವಾಗಿ ಮಾತನಾಡುತ್ತಾ ಶೇಕ್ಷ್'ಫಿಯರ್'ನಿಂದ ಹಿಡಿದು ಸಾಕ್ರೆಟಿಸ್, ಐನ್'ಸ್ಟಿನ್ ತನಕ ಎಲ್ಲರ ಬಗ್ಗೆಯೂ ಚರ್ಚಿಸುತ್ತಾ ಮುಂದುವರಿದು ದೀನೀ ವಿದ್ವಾಂಸ ಸಾಗರವಾದ ಇಮಾಮ್ ಶಾಫಿಈ (ರ) ರಿಂದ ಹಿಡಿದು ಇಮಾಮ್ ಗಝ್ಝಾಲಿ (ರ)
ಸೇರಿದಂತೆ ದೀನೀ ಪಂಡಿತರ ಬಗೆಗೆಲ್ಲ ಚರ್ಚಿಸುತ್ತಾ ಯಾವತ್ತೂ ಯಾರನ್ನೂ ಅಲ್ಪರೆಂದು ಭಾವಿಸಬಾರದೆಂಬುದನ್ನು ಮನದಟ್ಟು ಮಾಡಲು ಪ್ರಯತ್ನಿಸಿದರು.

 ಉಸ್ತಾದರ ಪ್ರತಿಭೆ ಮತ್ತು ವಿಧ್ವತ್ತನ್ನು ಕಂಡು ಬೆರಗಾದ ಆ ಯುವಕರಿಗೆ ತಮ್ಮ ತಪ್ಪಿನ ಅರಿವಾಗಿ  ಯುವಕರಿಬ್ಬರೂ ಉಸ್ತಾದರಲ್ಲಿ ಕ್ಷಮೆ ಕೇಳುತ್ತಾ ನಾವು ಉತ್ತರ ಪ್ರದೇಶದ ಆಲಿಘಡ್'ನಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿರುವ ವಿದ್ಯಾರ್ಥಿಗಳಾಗಿದ್ದೇವೆ ಎಂದರು.

ಆಗ ಉಸ್ತಾದರು ಅವರನ್ನು ಕ್ಷಮಿಸುತ್ತಾ ಜೀವನದಲ್ಲಿ ಯಾರನ್ನೂ ಕಡಿಮೆಯಾಗಿ ಲೆಕ್ಕ ಹಾಕಬಾರದೆಂಬ ಉಪದೇಶದೊಂದಿಗೆ ಬೀಳ್ಕೊಟ್ಟರು.

ಹೀಗೆ "ಮಹಾನರ ಉಪದೇಶಗಳೆಲ್ಲವೂ ಸಾರ್ವಕಾಲಿಕ ಮೌಲ್ಯವುಳ್ಳದ್ದಾಗಿದ್ದು ಇಂದಿನ ಪೀಳಿಗೆಯ ಮಕ್ಕಳಿಗೆ ತಕ್ಕ ಉಪದೇಶವಾಗಿದೆ."

ಗ್ರಂಥಕರ್ತರೂ ಆಗಿದ್ದ ಮಹಾನರು *ರಿಸಾಲತ್ತುತ್ತನ್'ಬಿಹ್ ಅಲ್ ವರಕಾತ್ತ್, ಮದಾ ವಸ್ವಿಲತ್ತುಲ್ ಫುಖಹಾಹ್, ಅಲ್ ಬರಾಈಲ್ ಲಿ ರಿಸಾಲತ್ತಿಲ್ ಮಾರದಿನಿ, ಅಖಾಇದು ಶ್ಶತ್ತಾ.* ಎಂಬ ಹೆಸರಾಂತ ಗ್ರಂಥಗಳನ್ನು ರಚಿಸಿದ್ದಾರೆ.

1998 ಫೆಬ್ರುವರಿ 05, ಶುಕ್ರವಾರ (ಹಿಜರಿ 1408 ಜಮಾದುಲ್ ಉಖ್'ರಾ 17) ರಂದು ವಫಾತಾದ ಮಹಾನರನ್ನು  ಕುಯಿಪುರಂ ಸಮೀಪದ ಕೈಪಟ್ಟ ಜುಮಾ ಮಸೀದಿಯ ಸಮೀಪ ಧಫನ್ ಮಾಡಲಾಯಿತು.

ದಾರಿ: ಕೈಪ್ಪಟ್ಟ ಜುಮಾ ಮಸೀದಿ, ಕುಯಿಪ್ಪುರಂ, ಒತುಕುಂಗಿಲಿಲ್, ಕೊಟ್ಟಕ್ಕಲ್. ಮಲಪ್ಪುರಂ.

🔹🔹🔹🔹🔹🔹🔹🔹🔹

No comments:

Post a Comment