Tuesday, September 24, 2019

ಝಿಯಾರತ್ತ್ ಕೇಂದ್ರ 66/01. ಕುತ್ತುಬಿ ಮುಹಮ್ಮದ್ ಮುಸ್ಲಿಯಾರ್ (ನ:ಮ)

*ಝಿಯಾರತ್ತ್ ಕೇಂದ್ರ​​​*
_ಸಮಸ್ತ ನಾಯಕರು_
      ​6⃣6⃣
👉 *ಭಾಗ= 01*
➖➖➖➖➖➖➖➖➖
*"ಅಸ್ಮಾಉಲ್ ಹುಸ್ನಾ ರಾತ್ತಿಬ್" ಕ್ರೂಡೀಕರಿಸಿದ, "ಶಂಸುಲ್ ಉಲಮ" ಕುತ್ತುಬಿ ಮುಹಮ್ಮದ್ ಮುಸ್ಲಿಯಾರ್ (ನ:ಮ). ಚೊಕ್ಲಿ, ಕಣ್ಣೂರು*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************

"ಶಂಸುಲ್ ಉಲಮಾ" ಎಂದಾಕ್ಷಣ ತಟ್ಟನೆ ನೆನಪಿಗೆ ಬರುವ ಹೆಸರು ಮಹಾನರಾದ ಈ.ಕೆ. ಅಬೂಬಕರ್ ಮುಸ್ಲಿಯಾರ್ (ನ.ಮ) ಅಥವಾ ಈ.ಕೆ ಉಸ್ತಾದ್. (ನ:ಮ) ಆದರೆ ಅದೇ ಬಿರುದಾಂಕಿರಾದ ಮತ್ತೊಬ್ಬರು ಉಲಮಾ ದಿಗ್ಗಜರಾದ *"ಶಂಸುಲ್ ಉಲಮಾ ಖುತುಬಿ" ಮುಹಮ್ಮದ್ ಮುಸ್ಲಿಯಾರ್ (ನ.ಮ)* ರ ಬಗ್ಗೆ ತಿಳಿದವರು ವಿರಳ.
 
ಸುನ್ನೀ ಜನ ಮಾನಸದಲ್ಲಿ ಮನೆ ಮಾತಾಗಿರುವ ಸುಪ್ರಸಿದ್ಧ *ಅಸ್ಮಾಉಲ್ ಹುಸ್ನಾ ರಾತೀಬ್* ಎಂಬ ಸೃಷ್ಟಿಕರ್ತನಾದ ಅಲ್ಲಾಹನ ನಾಮಗಳನ್ನೊಳಗೊಂಡ ರಾತೀಬ್'ಗೆ ಸಂಬಂಧಿಸಿದ ಆಧಾರಗಳನ್ನು ಪೂರ್ವಜರಾದ ಇಮಾಮರ ಗ್ರಂಥಗಳಿಂದ ಕ್ರೂಡೀಕರಿಸಿ ಜನ ಮಾನಸಕ್ಕೆ ತಲುಪಿಸಲು ಶ್ರಮಿಸಿದ ಮಹಾನರಾದ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ನ.ಮ) ಹಿಜರಿ 1299 ರಲ್ಲಿ ಮಲಪ್ಪುರಂ ಜಿಲ್ಲೆಯ ಕೊಡುವಾಯೂರಿನಲ್ಲಿ ಜನಿಸಿದರು.

ಚೆರುಚಾಲಿಲ್ ಅಹ್ಮದ್ (ನ:ಮ) ಎಂಬುವವರ ಪುತ್ರರಾದ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ನ.ಮ) ರವರು *ತಾಜುಲ್ ಉಲಮಾ ಕೆ.ಕೆ. ಸ್ವದಖತ್ತುಲ್ಲ ಮುಸ್ಲಿಯಾರ್ (ನ:ಮ) ರವರ ತಂದೆಯಾದ ಕರಿಂಬನಕಲ್ ಪೊಕರ್ ಮುಸ್ಲಿಯಾರ್ (ನ:ಮ), ಮಹಾನರಾದ ಕುಟ್ಟೂರ್ ಕಮ್ಮಣ್ಣಿ ಮುಸ್ಲಿಯಾರ್ (ನ:ಮ), ಚಾಲಿಲಕತ್ತ್ ಕುಂಜಾಅಹ್ಮದ್ ಹಾಜಿ (ನ:ಮ)* ರಂತಹ ಉಲಮಾ ದಿಗ್ಗಜರಿಂದ ತಲಕಡತ್ತೂರ್, ತಿರೂರಂಙಾಡಿ, ಪೆರಿಯಂಙಾಡಿ ಮತ್ತಿತರೆಡೆ ದರ್ಸ್ ಕಲಿತರು.

ನಂತರ ವಾಯಕಾಡ್ ದಾರುಲ್ ಉಲೂಮ್, ತಾನೂರ್, ನಾದಾಪುರಂ, ಪಾನೂರ್, ಮುಂತಾದ ಸ್ಥಳಗಳಲ್ಲಿ ದರ್ಸ್ ನಡೆಸಿದ ಖುತುಬಿ(ನ.ಮ)ರಿಗೆ ಅಸಂಖ್ಯ ಶಿಷ್ಯರಿದ್ದು ಆ ಪೈಕಿ, *ರಈಸುಲ್ ಮುಹಖ್ಖಿಖೀನ್ ಕಣ್ಣಿಯತ್ತ್ ಉಸ್ತಾದ್ (ನ:ಮ), ಶಂಸುಲ್ ಉಲಮಾ ಈ.ಕೆ. ಉಸ್ತಾದ್ (ನ:ಮ), ತಾಜುಲ್ ಉಲಮಾ ಸ್ವದಖತ್ತುಲ್ಲ ಉಸ್ತಾದ್ (ನ:ಮ), ಶಂಸುಲ್ ಉಲಮಾ ಕಿಯನ ಓರ್ (ನ:ಮ), ಮೌಲಾನಾ ಕೈಪ್ಪಟ್ಟ ಮುಸ್ಲಿಯಾರ್ (ನ:ಮ), ನಾದಾಪುರಂ ಮೆಪ್ಪಿಲಾಚ್ಚೆರಿ ಮೊಯ್ತಿನ್ ಮುಸ್ಲಿಯಾರ್ (ನ:ಮ), ಕಾಂಗೊಟ್ಟ್ ಓರ್ (ನ:ಮ), ನಾದಾಪುರಂ ಕಲಂದರ್ ಮುಸ್ಲಿಯಾರ್ (ನ:ಮ), ಕೊಲ್ಲಾಳಿ ಅಬ್ದುಲ್ ಖಾದಿರ್ ಮುಸ್ಲಿಯಾರ್ (ನ:ಮ)* ರಂತಹ ಹೆಸರಾಂತ ವಿಧ್ವಾಂಸರು ಅವರ ಶಿಷ್ಯರಲ್ಲಿ ಪ್ರಮುಖರು.

ಇಂದಿನಂತೆ ವಾರ್ತಾ ಮಾದ್ಯಮಗಳಿಲ್ಲದ ಆ ಕಾಲಘಟ್ಟದಲ್ಲಿ ಉತ್ತರ ಮತ್ತು ಮಧ್ಯ ಕೇರಳದ ಇಸ್ಲಾಮಿಕ್ ವಿಧ್ವಾಂಸರು ದೀನೀ ಸಂದೇಶವನ್ನು ಸಮುದಾಯಕ್ಕೆ ತಲುಪಿಸುವ ಕಾರಣದಿಂದ ರೂಪೀಕರಿಸಿದ ತಿರುವನಂತಪುರಂ-ಕೊಚ್ಚಿ ಜಂಇಯತ್ತುಲ್ ಉಲಮಾವನ್ನು ಖುತುಬಿ ಉಸ್ತಾದರ ನೇತೃತ್ವದಲ್ಲಿ ಪುನರ್ ಸಂಘಟಿಸಿ ಐಕ್ಯ ಕೇರಳ ಜಂಇಯತ್ತುಲ್ ಉಲಮಾ ಎಂದೂ, ನಂತರ ದಕ್ಷಿಣ ಕೇರಳ ಜಂಇಯತ್ತುಲ್ ಉಲಮಾ ಎಂದೂ ಪುನರ್ ನಾಮಕರಣ ಮಾಡಲಾಯಿತು.

ಸಮಸ್ತದ ಬಹುತೇಕ ಎಲ್ಲಾ ಸಭೆಗಳ ನೇತೃತ್ವವೂ ಉಸ್ತಾದರದಾಗಿತ್ತು. ಕಾರಣ ಅಂದಿನ ಉಲಮಾಗಳ ಸಮೂಹದಲ್ಲಿ ಮಹಾನರಿಗೆ ಮಹತ್ವದ ಸ್ಥಾನವಿತ್ತು. ಕೇರಳದ ಪ್ರಪ್ರಥಮ ಇಸ್ಲಾಮಿಕ್ ಬಿರುದುದಾನ ಸ್ಥಾಪನೆಯಾದ ಪಟ್ಟಿಕ್ಕಾಡ್ ಜಾಮಿಯಾ ನೂರಿಯ್ಯಾವನ್ನು ಉದ್ಘಾಟಿಸಿದವರು ಖುತುಬಿ ಉಸ್ತಾದ್ (ನ.ಮ)ರಾಗಿದ್ದರು.

*1945 ರಲ್ಲಿ ಕಾರ್ಯವಟ್ಟಮ್ ಎಂಬಲ್ಲಿ ನಡೆದ ಸಮಸ್ತದ ಸಮ್ಮೇಳನದಲ್ಲಿ ಸುನ್ನತ್ ಜಮಾಅತಿನ ಉಲಮಾ, ಉಮರಾಗಳಿಂದ ಮಹಾನರಿಗೆ "ಶಂಸುಲ್ ಉಲಮಾ"  ಬಿರುದು ಪ್ರಧಾನ ಮಾಡಲಾಯಿತು.*

ಚಾಲಿಲಕತ್ತ್ ಕುಂಙಾ ಅಹ್ಮದ್ (ನ:ಮ) ಎಂಬ ಮಹಾನರ ಬಳಿ ಕಲಿಯುತ್ತಿದ್ದಾಗ ತರ್ಕ ಶಾಸ್ತ್ರಕ್ಕೆ ಸಂಬಂಧಿಸಿದ *"ಖುತುಬಿ"* ಎಂಬ ಕಿತಾಬಿನ ಪಠಣದಲ್ಲಿ ಅವರ ಆಸಕ್ತಿ ಮತ್ತು ಅಸಾಧಾರಣ ಪ್ರತಿಭೆಯಿಂದಾಗಿ ಖುತುಬಿ ಎಂಬ ಹೆಸರು ಬರಲು ಕಾರಣವಾಗಿರಬಹುದು ಎನ್ನುವುದು ಒಂದು ಅಭಿಪ್ರಾಯವಾದರೆ, ಪ್ರತಿಭಾವಂತರಾಗಿದ್ದ ಖುತುಬಿ ಉಸ್ತಾದ್ (ನ.ಮ)ರು ಪೆರಿಯಂಙಾಡಿಯಲ್ಲಿ ದರ್ಸ್ ಕಲಿಯುತ್ತಿರುವಾಗಲೇ ಆ ಭಾಗದ ಬಹುತೇಕರು ಅವರಿಗೆ ತಮ್ಮ ಹೆಣ್ಣು ಮಕ್ಕಳನ್ನು ಕೊಟ್ಟು ಅಳಿಯರನ್ನಾಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಕಾರಣ ತಮ್ಮ ಪಾಂಡಿತ್ಯದಿಂದ ಹೆಸರುವಾಸಿಯಾಗಿದ್ದ ಉಸ್ತಾದರು ಅಷ್ಟರಲ್ಲಾಗಲೇ  "ಖುತುಬಿ ಕಲಿಯುವ ಮುಸ್ಲಿಯಾರ್" ಎಂದು ಗುರುತಿಸಲ್ಪಡುತ್ತಿದ್ದರು. ಬಹುಶಃ ಈ ಕಾರಣದಿಂದಲೂ ಖುತುಬಿ ಎಂಬ ಹೆಸರು ಬಂದಿರಬಹುದೆಂಬ ಅಭಿಪ್ರಾಯವೂ ಇದೆ.

*ಮುಂದುವರಿಯುವುದು*
ಇನ್ ಷಾ ಅಲ್ಲಾಹ್..
🔹🔹🔹🔹🔹🔹🔹🔹🔹

No comments:

Post a Comment