Sunday, September 22, 2019

*ಅಸಹಾಯಕ ಸಂದರ್ಭದಲ್ಲಿ ಪ್ರತೀಕಾರ ತೀರಿಸುವವರು..!*

ನಮ್ಮನ್ನು ನಮ್ಮ ಸಂಘಟನೆಯನ್ನು ಯಾರಾದರೂ ವಿರೋಧಿಸುತ್ತಿದ್ದಾರೆಂದರೆ, ಅದಕ್ಕೆ ಅವರಿಗೆ ಅದೇನೋ ಕಾರಣಗಳಿರಬಹುದು.
ಅದಕ್ಕೆ ನಾವು ಅವರಿಗೆ ಕೊಡಬೇಕಾದ ಉತ್ತರ,  ಅವರು ಟೀಕಿಸುವಂತಹ ಕಾರ್ಯ ನಮ್ಮಲ್ಲಿಲ್ಲ ಎಂಬುದನ್ನು ತೋರಿಸಿಕೊಡುವುದು. ಅಥವಾ, ನಮ್ಮ ಕಾರ್ಯ ಧಾರ್ಮಿಕ ವಾಗಿದೆ (ಧಾರ್ಮಿಕ ವಾಗಿದ್ದರೆ) ಎಂಬುದನ್ನು ಆಧಾರದ ಸಹಿತ ಸಾಬೀತು ಪಡಿಸುವುದು.  ಅದಲ್ಲದಿದ್ದರೆ, ತಪ್ಪನ್ನು ತಿದ್ದಿಕೊಳ್ಳುವುದು.

ಇದ್ಯಾವುದನ್ನೂ ಮಾಡದೆ, ಟೀಕಿಸಿದವರಿಗೆ ಬ್ಲಡ್ ಕೊಟ್ಟು, ನಾವು ಏನೆಂದು ತೋರಿಸಿಕೊಟ್ಟೆವು ಎಂದು ಹೇಳುವುದು ಟೀಕೆಗೆ ಉತ್ತರ ವಾಗಲು ಸಾದ್ಯವಿಲ್ಲ. ಬ್ಲಡ್ ಕೊಟ್ಟ ತಕ್ಷಣ ಟೀಕಿಸಲ್ಪಡುವ ಕಾರಣ ನಮ್ಮಿಂದ ಇಲ್ಲದಾಗುವುದೂ ಇಲ್ಲ.
 ಕಷ್ಟದ ಸಮಯದಲ್ಲಿ ಸಹಾಯ ಮಾಡದ ಯಾವ ಸಂಘಟನೆಯೂ ಇರಲಾರದು. ಅದನ್ನೇ ಸಂಘಟನೆ ಕಟ್ಟಲು ಬಂಡವಾಳ ವಾಗಿಸುವುದು ಸಲ್ಲದು.
ಅಸಹಾಯಕ ಪರಿಸ್ಥಿತಿಯಲ್ಲಿ ಸಹಾಯ ಮಾಡುವಾಗ ಪಕ್ಷ, ಸಂಘ, ಗ್ರೂಪ್, ಶತ್ರುವೋ ಮಿತ್ರರೋ ಇದ್ಯಾವುದನ್ನು ಯಾವ ಸಂಘಟನೆ ಕೂಡಾ ನೋಡುವುದಿಲ್ಲ.

ಒಬ್ಬರು ಅಸಹಾಯಕ ಸ್ಥಿತಿಯಲ್ಲಿ ರಕ್ತವನ್ನು ಕೇಳಿದಾಗ, ಅವರೊಂದಿಗೆ ನಮಗೆ ವಿರೋಧ ವಿದ್ದರೆ ರಕ್ತ ಕೊಡದೆ ದೂರ ನಿಲ್ಲಬಹುದು. ಯಾಕೆಂದರೆ, ಇಲ್ಲಿ ಬ್ಲಡ್ ಕೊಡಲು ನೂರಾರು ಸಂಘಟನೆಗಳು ಇವೆ. ಇದ್ಯಾವುದನ್ನೂ ಮಾಡದೆ, ತಕ್ಷಣ ಓಡಿ ಹೋಗಿ ಬ್ಲಡ್ ಕೊಟ್ಟು, ಅದನ್ನು ಹೇಳಿ ಪ್ರತೀಕಾರ ತೀರಿಸಿದ್ದು ತುಂಬಾ ನೀಚ ಕೆಲಸ. ನೋವಿನ ಮೇಲೆ ಬರೆ ಎಳೆಯುವ ಇಂತಹ ಉಪಕಾರಕ್ಕಿಂತ, ಬ್ಲಡ್ ಕೊಡದೆ ದೂರ ನಿಂತಿದ್ದರೇ ಚೆನ್ನಾಗಿರುತ್ತಿತ್ತು.

ಅಷ್ಟಕ್ಕೂ ಒಂದು ಸಂಘಟನೆಯನ್ನು ಸ್ವೀಕರಿಸುವುದು ಮತ್ತು ವಿರೋಧಿಸುವುದರ ಮಾನದಂಡ ಸಮಾಜ ಸೇವೆಯೋ, ಉಪಕಾರವೋ, ಒಲಿತೋ ಅಲ್ಲವೇ ಅಲ್ಲ.
ಸಮಾಜ ಸೇವೆ, ಉಪಕಾರ ಮಾಡದಂತಹ ಯಾವ ಸಂಘಟನೆಯೂ ಈ ಭೂಮಿ ಮೇಲೆ ಇರಲು ಸಾದ್ಯವಿಲ್ಲ. ಹಾಗೆ ಸಮಾಜ ಸೇವೆ ಮಾಡುವ ಕಾರಣಕ್ಕೆ ಸಂಘಟನೆಯನ್ನು ಸ್ವೀಕರಿಸಬೇಕಾದರೆ, ಇಲ್ಲಿ ನಮ್ಮ ನಡುವೆ ಇರುವ ಎಲ್ಲಾ ಕೋಮುವಾದಿ, ಉಗ್ರವಾದಿ ಸಂಘಟನೆ ಗಳನ್ನೂ ಸ್ವೀಕರಿಸಬೇಕಾದೀತು. ವೀರಪ್ಪನ್ ಕೂಡಾ ಜನರಿಗೆ ಉಪಕಾರ ಮಾಡುತ್ತಿದ್ದನಂತೆ.

ಅಲ್ಲಾಹನ ಬಳಿ ಸ್ವೀಕರಿಸಲ್ಪಡುವುದರ ಮಾನದಂಡ *ಸಮಾಜಸೇವೆ, ಒಳಿತುಗಳು* ಆಗಿರುತ್ತಿದ್ದರೆ,  ಇಂದು ಇಬ್ಲೀಸ್ ಅತ್ಯಂತ ದೊಡ್ಡ ಸ್ಥಾನದಲ್ಲಿ ಇರಬೇಕಿತ್ತು. ಇಬ್ಲೀಸ್ ನನ್ನು ಯಾರೂ ವಿರೋಧಿಸುವಂತಿರಲಿಲ್ಲ. ಯಾಕೆಂದರೆ, ಇಬ್ಲೀಸ್ ನಷ್ಟು ಒಳಿತನ್ನು ಮಾಡಿದ ಓರ್ವ ಅಲ್ಲಾಹನ ದಾಸ ಈ ಭೂಮಿ ಮೇಲೆ ಬೇರೆಯಾರೂ ಇಲ್ಲ.
ಆದರೂ ಅಲ್ಲಾಹು ಅವನನ್ನು ಸ್ವೀಕರಿಸಲಿಲ್ಲ. ಅವನು ಮಾಡಿದ ತಪ್ಪು ಕೇವಲ ಅಲ್ಲಾಹನ ಇಷ್ಟ ದಾಸನನ್ನು ನಿಂದಿಸಿದ್ದು (ಸ್ವೀಕರಿಸದ್ದು.)
ಕೇವಲ ಇಷ್ಟು ಸಣ್ಣ ವಿಷಯಕ್ಕೆ ಆತನ ಅಷ್ಟು ದೊಡ್ಡ ಆರಾಧನೆಯನ್ನೇ ಅಲ್ಲಾಹು ಪರಿಗಣಿಸಲಿಲ್ಲ ಅಂದಮೇಲೆ, ದಿನಂಪ್ರತೀ ಅಲ್ಲಾಹನ ಇಷ್ಟ ದಾಸರಾದ ಉಲಮಾಗಳನ್ನು ತಂಙಳ್ ಗಳನ್ನು, ಸುನ್ನತ್ ಜಮಾಹತ್ ಸಿದ್ಧಾಂತ ಗಳನ್ನು ಟೀಕಿಸುತ್ತಾ ನಿಂದಿಸುತ್ತಾ ದಿನ ಕಳೆಯುವ ಸಂಘಟನೆಯನ್ನು  ಸ್ವೀಕರಿಸುವುದಾದರೂ ಯಾವ ಆಧಾರದಲ್ಲಿ. ‌ಈ ವಿಷಯದಲ್ಲಿ ಅವರಿಗೆ ಇಬ್ಲೀಸ್ ನಷ್ಟೂ ಅರ್ಹತೆ ಇಲ್ಲ ಎಂಬುದಂತೂ ಸಾವಿರಪಟ್ಟು ಸತ್ಯತಾನೇ.

ನಮ್ಮ ಒಳಿತುಗಳು ಅಲ್ಲಾಹನಿಗೆ ಮುಖ್ಯವಲ್ಲ. ಬದಲಾಗಿ ನಮ್ಮ ವಿಶ್ವಾಸವಾಗಿದೆ ಅತೀ ಮುಖ್ಯ. ವಿಶ್ವಾಸವನ್ನು ಸರಿಪಡಿಸದ ಹೊರತು ನಮ್ಮ ಯಾವ ಆರಾಧನೆ, ಸಮಾಜಸೇವೆಗೂ ಅಲ್ಲಾಹನ ಬಳಿ ಮಾನ್ಯತೆ ಇಲ್ಲ.
*ಅಲ್ಲಾಹು ನಮ್ಮೆಲ್ಲರನ್ನು ಇಹಪರ ವಿಜಯಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment