*ಶ್ರೀಮಂತರ ತಪ್ಪು ಗಳನ್ನು ಖಡಾಖಂಡಿತವಾಗಿ ವಿರೋಧಿಸಬಾರದೇಕೆ? ಈ ಬಗ್ಗೆ ಪ್ರವಾದಿ ﷺ ರ ಚರ್ಯೆ ಹೇಗೆ?*
ಶ್ರೀಮಂತರಲ್ಲಿರುವ ಅನಿಸ್ಲಾಮಿಕ ಕಾರ್ಯಗಳನ್ನು ಉಲಮಾಗಳು ಯಾಕೆ ಖಡಾಖಂಡಿತವಾಗಿ ವಿರೋಧಿಸುವುದಿಲ್ಲ. ಉಲಮಾಗಳಿಗೆ ಅದನ್ನು ನಿಲ್ಲಿಸಲು ಸಾದ್ಯವಿಲ್ಲವೇ.
ಸಾದ್ಯವಿಲ್ಲವಾದರೆ, ಅಂತಹವರ ಸಹವಾಸವನ್ನು ಉಲಮಾಗಳಿಗೆ ಬಿಟ್ಟು ಬಿಡಬಿಡಬಾರದೇ, ಎಂಬಿತ್ಯಾದಿ ಸಂಶಯಗಳು ಜನಸಾಮಾನ್ಯರಲ್ಲಿ ಎಡೆಮಾಡಿರಬಹುದು.
*ಈ ಬಗ್ಗೆ ಪ್ರವಾದಿ ﷺ ರ ಚರ್ಯೆ ಹೇಗೆ?*
*ಸಂಧರ್ಭ 1:* 👉🏾
ತಬೂಕ್ ಯುದ್ಧದ ಸಂಧರ್ಭದಲ್ಲಿ ಯುದ್ಧಕ್ಕೆ ಹೋಗಲು ಹಿಂದೇಟು ಹಾಕಿದ ಮೂವರಲ್ಲಿ ಓರ್ವರಾಗಿದ್ದರು *ಕಹ್'ಬಿಬುನು ಮಾಲಿಕ್ (ರ).*
ಆ ಕಾರಣಕ್ಕೆ ಪ್ರವಾದಿ ﷺ ರು ಆ ಸ್ವಹಾಬಿ ಯೊಂದಿಗೆ ಬರೋಬ್ಬರಿ 50 ದಿವಸಗಳ ಕಾಲ ಮಾತನಾಡಿರಲಿಲ್ಲ.
*ಸಂಧರ್ಭ 2:* 👉🏾
ಸಹ್ಲಬತುಲ್ ಅನ್ಸಾರ್ (ರ) ಎಂಬ ಸ್ವಹಾಬಿಯವರು ಒಮ್ಮೆ ಅಚಾನಕ್ಕಾಗಿ ತನ್ನ ಸಹೋದರನ ಪತ್ನಿಯ ಮುಖವನ್ನು ನೋಡಿದರು. ಇದರಿಂದ ನೊಂದುಕೊಂಡ ಆ ಸ್ವಹಾಬಿ ಪ್ರವಾದಿ ﷺ ರಲ್ಲಿ ವಿಷಯವನ್ನು ತಿಳಿಸಿದಾಗ, ಕೋಪಗೊಂಡ ಪ್ರವಾದಿ ﷺ ರು ಹಲವಾರು ದಿನಗಳ ಕಾಲ ಆ ಸ್ವಹಾಬಿ ಯೊಂದಿಗೆ ಮಾತನಾಡಿರಲಿಲ್ಲ.
*,ಸಂಧರ್ಭ 3:* 👉🏾
ಒಮ್ಮೆ ಪ್ರವಾದಿ ﷺ ರಲ್ಲಿ ಓರ್ವ ವ್ಯಕ್ತಿ ಬಂದು ಹೇಳಿದರು, *ಓ ಪ್ರವಾದಿ ﷺ ರವರೇ, ನಾನು ವ್ಯಭಿಚಾರ ಮಾಡುತ್ತೇನೆ, ಮದ್ಯಪಾನ ಮಾಡುತ್ತೇನೆ, ಸುಳ್ಳು ಹೇಳುತ್ತೇನೆ* ಈ ರೀತಿ ಅವರಲ್ಲಿರುವ ಎಲ್ಲಾ ಕೆಟ್ಟ ಗುಣಗಳನ್ನು ವಿವರಿಸುತ್ತಾ ಹೇಳಿದರು, *ನನಗೆ ಇದನ್ನೆಲ್ಲಾ ಬಿಡಲು ಸಾದ್ಯವಾಗುತ್ತಿಲ್ಲ* ಎಂದಾಗ, ಪ್ರವಾದಿ ﷺ ಆ ವ್ಯಕ್ತಿ ಯೊಂದಿಗೆ *ನೀನು ಎಲ್ಲಾ ಸಂಧರ್ಭದಲ್ಲೂ ಸತ್ಯವನ್ನೇ ಹೇಳಬೇಕು* ಎಂದು ಮಾತ್ರ ಉಪದೇಶಿಸಿ ಕಳುಹಿಸುತ್ತಾರೆ.
(ಇಲ್ಲಿ ಆ ವ್ಯಕ್ತಿಯ ತಪ್ಪು ಗಳ ಕಾರಣದಿಂದ ಪ್ರವಾದಿ ﷺ ಆ ವ್ಯಕ್ತಿಯೊಂದಿಗೆ ಕೋಪಿಸಿಕೊಳ್ಳುವುದಿಲ್ಲ. ಮಾತ್ರವಲ್ಲ, ತನ್ನೆಲ್ಲಾ ತಪ್ಪು ಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಕೂಡಾ ಹೇಳುವುದಿಲ್ಲ)
☝🏽 ಈ ಮೂರು ಸಂಧರ್ಭಗಳಲ್ಲಿ, ಪ್ರವಾದಿ ﷺ ರ ಧರ್ಮ ಬೋಧನೆಯ ಶೈಲಿ ವಿಭಿನ್ನವಾಗಿತ್ತು.
ಅಂದರೆ, ಎಲ್ಲರೊಂದಿಗೂ ಧರ್ಮ ಬೋಧನೆ ಮಾಡುವ ರೀತಿ ಒಂದೇ ಸಮನ ಅಲ್ಲ. ಕೆಲವರೊಂದಿಗೆ ಅವರ ತಪ್ಪು ಗಳನ್ನು ಖಡಾಖಂಡಿತವಾಗಿ ವಿರೋಧಿಸಿದರೆ, ಇನ್ನು ಕೆಲವರೊಂದಿಗೆ ಹಿಕ್ಮತ್ ಪ್ರಯೋಗಿಸಬೇಕಾಗುತ್ತದೆ ಎಂಬುದು ಪ್ರವಾದಿ ﷺ ರ ಈ ಮೇಲಿನ ನಡೆಯೇ ಸೂಚಿಸುತ್ತದೆ.
*ಮೊದಲೆಡರು ಸಂಧರ್ಭದಲ್ಲಿನ ಪ್ರವಾದಿ ﷺ ರ ಕಠಿಣ ವರ್ತನೆಗೆ ಕಾರಣವೇನೆಂದರೆ, ಆ ಎರಡು ತಪ್ಪುಗಳನ್ನು ಮಾಡಿದವರು, ಅಲ್ಲಾಹು ಮತ್ತು ಅಲ್ಲಾಹನ ರಸೂಲ್ ﷺ ರಲ್ಲಿ ಅಪಾರವಾದ ವಿಶ್ವಾಸಗಳನ್ನಿಟ್ಟ ಸ್ವಹಾಬಿ ಗಳಾಗಿದ್ದರು. ಅವರು ಪ್ರತಿಯೊಂದು ಕಾರ್ಯಕ್ಕೂ ಸೂಕ್ಷ್ಮತೆ ವಹಿಸುವವರಾಗಿದ್ದರು. ಅವರೊಂದಿಗೆ ಪ್ರವಾದಿ ﷺ ರು ತಮ್ಮ ತಪ್ಪಿನ ಕಾಠಿಣ್ಯತೆಯನ್ನು ವಿವರಿಸಿಕೊಟ್ಟರೆ, ಅವರದನ್ನು ಸ್ವೀಕರಿಸಿ, ಅಲ್ಲಾಹನಲ್ಲಿ ಭಯಪಟ್ಟು ಅತ್ತೂ ಅತ್ತೂ ತೌಬಾ ಮಾಡುವವರಾಗಿದ್ದರು.*
ಮೂರನೇ ಸಂಧರ್ಭದಲ್ಲಿ ವಿವರಿಸಲಾದ ವ್ಯಕ್ತಿ ಆ ರೀತಿಯವರಲ್ಲ. ಅವರು ಅಲ್ಲಾಹು ಮತ್ತು ರಸೂಲ್ ﷺ ರನ್ನು ಅನುಸರಿಸದೆ, ಮಹಾ ಧಿಕ್ಕಾರಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಯಾಗಿದ್ದರು.
ಇಂತಹ ವ್ಯಕ್ತಿಯಲ್ಲಿ ಅವರ ತಪ್ಪು ಗಳನ್ನೆಲ್ಲಾ ಖಡಾಖಂಡಿತವಾಗಿ ವಿರೋಧಿಸಿದ್ದರೆ, ಆ ಕಾರಣಕ್ಕೆ ಕೋಪಿಸಿಕೊಂಡಿದ್ದರೆ, ಮುಂದೆ ಅವರೆಂದೂ ಪ್ರವಾದಿ ﷺ ರ ಹತ್ತಿರ ಸುಳಿಯುತ್ತಿರಲಿಲ್ಲ. ಮತ್ತು ತನ್ನಲ್ಲಿರುವ ಯಾವ ತಪ್ಪುಗಳನ್ನೂ ತಿದ್ದದೆ, ಮೊದಲಿದ್ದ ಸ್ಥಿತಿಯಲ್ಲೇ ಇರುತ್ತಿದ್ದರು.
ಅಂತಹ ಅಪಾಯವನ್ನು ಮನಗಂಡ ಪ್ರವಾದಿ ﷺ, ಆ ವ್ಯಕ್ತಿಯಲ್ಲಿ ಸುಳ್ಳೊಂದನ್ನು ಮಾತ್ರ ತ್ಯಜಿಸುವಂತೆ ವಿನಂತಿಸುತ್ತಾರೆ.
ನಂತರ ಆ ವ್ಯಕ್ತಿ ತನ್ನಲ್ಲಿರುವ ತಪ್ಪು ಗಳನ್ನೆಲ್ಲಾ ಒಂದೊಂದಾಗಿ ತ್ಯಜಿಸಿ ಒಳ್ಳೆಯ ವ್ಯಕ್ತಿಯಾಗಿ ಜೀವಿಸಲು ಸಾದ್ಯವಾಯಿತು.
ನಮ್ಮ ನಡುವೆ ಅದೆಂತೆಂತಹ ಶ್ರೀಮಂತರಿದ್ದಾರೆಂದರೆ, ಹೆಚ್ಚಿನವರಿಗೆ ಧರ್ಮದೊಂದಿಗೆ ಯಾವುದೇ ಬಂಧ ಇಲ್ಲವೆಂದೇ ಹೇಳಬಹುದು. ಹೆಚ್ಚಿನವರು ನೂತನವಾದಿಗಳ ನಂಟನ್ನು ಬೆಳೆಸಿರುತ್ತಾರೆ. ಇನ್ನು ಕೆಲವರು, ವ್ಯಭಿಚಾರ, ಮದ್ಯ ದ ದಾಸರಾಗಿರುತ್ತಾರೆ. ನಮಾಝ್, ಉಪವಾಸ ತೀರಾ ಇರುವುದಿಲ್ಲ. ಮನೆಯ ಹೆಣ್ಣು ಮಕ್ಕಳಲ್ಲಿ ಬುರ್ಖಾ ಹಾಕುವ ಸಂಪ್ರದಾಯವೂ ಇರುವುದಿಲ್ಲ. ಧರ್ಮದ ಕಾನೂನೆಲ್ಲವನ್ನು ಒಪ್ಪಲಂತೂ ಸುತರಾಂ ಸಿದ್ದರಿರುವುದಿಲ್ಲ. ಉಲಮಾಗಳು ಮತ್ತು ತಂಙಳ್ ಗಳ ಬಗ್ಗೆ, ಅವರ ಗೌರವದ ಬಗ್ಗೆ ಗೊತ್ತೇ ಇರುವುದಿಲ್ಲ. ಮ್ಯೂಸಿಕ್ ಹಾಡು, ಸಿನಿಮಾ, ಡ್ಯಾನ್ಸ್ ಗಳಂತೂ ಮಾಮೂಲು. ಒಳ್ಳೆಯ ಕಾರ್ಯಕ್ಕೆ ಹಣ ಕರ್ಚುಮಾಡುವ ಸಂಪ್ರದಾಯವಂತೂ ಇರುವುದಿಲ್ಲ. ಪ್ರತಿಯೊಂದು ವಿಷಯಕ್ಕೂ ಧರ್ಮದ ಕಾನೂನನ್ನು ಪ್ರಶ್ನಿಸುವಷ್ಟರ ಮಟ್ಟಿಗೆ ಹೋಗುತ್ತಾರೆ, ಒಂತರಾ ನಾಸ್ತಿಕ ವಾದಿಗಳಂತೆ. ಝಕಾತ್ ಗಳ ಬಗ್ಗೆ ಗೊತ್ತೇ ಇರುವುದಿಲ್ಲ.
*ಇಂತಹವರ ಮಧ್ಯೆ, ಇಂತಹ ನಡೆಗಳಿಗೆಲ್ಲಾ ವ್ಯತಿರಿಕ್ತವಾಗಿ, ಹೆಚ್ಚಿನ ವಿಷಯದಲ್ಲೆಲ್ಲಾ ಧಾರ್ಮಿಕ ಚೌಕಟ್ಟಿನಲ್ಲೇ ಜೀವಿಸುವ ಶ್ರೀಮಂತರಿದ್ದಾರೆಂದರೆ, ಅದು ಉಲಮಾಗಳಿಂದಾದ ಮಹಾ ಪರಿವರ್ತನೆ ಎಂಬುದನ್ನು ನಾವು ಮರೆಯಬಾರದು.*
ನಮಾಝ್ ಉಪವಾಸ ಕೈ ಬಿಡುವುದಿಲ್ಲ. ಝಕಾತ್ ಉಳಿಸಿಕೊಳ್ಳಲಾರರು. ತಮ್ಮ ಹಣವನ್ನು ಅನಾಥಾಶ್ರಮಕ್ಕೆ, ಮಸ್ಜಿದ್-ಮದರಸ ಗಳಿವೆ, ಸ್ಥಾಪನೆಗಳಿಗೆ, ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ, ಮನೆ ಕಟ್ಟಿ ಕೊಡುವ ಕಾರ್ಯಕ್ಕೆ ಹೀಗೆ ವಿವಿಧ ಧಾರ್ಮಿಕ ಕಾರ್ಯಗಳಿಗೆ ವ್ಯಯಿಸುತ್ತಾರೆ. ಉಲಮಾಗಳ ತಂಙಳ್ ಗಳ ಮೇಲೆ ಅಪಾರ ಪ್ರೀತಿ-ವಿಶ್ವಾಸ ಬೆಳೆಸುತ್ತಾರೆ. ಧರ್ಮದ ಬಗ್ಗೆ, ಧರ್ಮದ ಕಾನೂನಿನ ಬಗ್ಗೆ ಗೌರವ ಕೊಡುತ್ತಾರೆ. ಸಾಮಾಜದ ಮುಂದೆ ಧರ್ಮವನ್ನು ಪ್ರಶ್ನಿಸಲಾರರು. ನೂತನವಾದಿಗಳ ಸಹವಾಸವಂತೂ ಮಾಡಲಾರರು.
ಇದೆಲ್ಲದರ ಹೊರತಾಗಿಯೂ ಅವರಲ್ಲಿ, ಅವರ ಪ್ರತಿಷ್ಟೆಗೆ ಧಕ್ಕೆಯಾಗದ ರೀತಿಯ ಕೆಲವೊಂದು ಅನಿಸ್ಲಾಮಿಕ ಕಾರ್ಯಗಳು ಇರಬಹುದು. ಅದನ್ನು ತಪ್ಪು ಅಲ್ಲ ಎಂದು ಹೇಳಲು ಸಾದ್ಯವಿಲ್ಲ.
ಆದರೆ, ಅದನ್ನು ಉಲಮಾಗಳು ಖಡಾಖಂಡಿತವಾಗಿ ವಿರೋಧಿಸಿದರೆ, ಆ ಕಾರಣಕ್ಕೆ ಅವರ ಬಂಧವನ್ನು ಉಲಮಾಗಳು ತ್ಯಜಿಸಿದರೆ, ಅವರು ಉಲಮಾಗಳ ವಿರೋಧಿಯಾಗಬಹುದು. ನಂತರ ಅವರು ಉಲಮಾಗಳ ಬಂಧವನ್ನೇ ತ್ಯಜಿಸಬಹುದು. ಹಾಗೇನಾದರು ಆದರೆ, ಅವರು ಸಮಾಜದಲ್ಲಿರುವ ಇತರ ಶ್ರೀಮಂತರಂತೆ ಧರ್ಮ ಧಿಕ್ಕಾರಿಗಳಾಗಿ ಜೀವಿಸುವ ಅಪಾಯವಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರವಾದಿ ﷺ ಮೂರನೇ ವ್ಯಕ್ತಿಯೊಂದಿಗೆ ತೋರಿದ ಅದೇ ಹಿಕ್ಮತನ್ನು ಇವರೊಂದಿಗೂ ಪ್ರಯೋಗಿಸಬೇಕಾಗುತ್ತದೆ.
*ಉಲಮಾಗಳಿಂದಲೇ ವಿದ್ಯೆ ಕಲಿತು ಬಂದು, ಅದೇ ಉಲಮಾಗಳು ಮತ್ತು ತಂಙಳ್ ಗಳನ್ನೇ ಧಿಕ್ಕರಿಸಿ ಹಿಯಾಲಿಸಿ ನಡೆಯುವ ಇಂದಿನ ಯುವ ಪೀಳಿಗೆಗೆ ಮಾದರಿ ಎಂಬಂತೆ, ಸಮಾಜದಲ್ಲಿ ಆಗರ್ಭ ಶ್ರೀಮಂತರೆನಿಸಿಕೊಂಡವರು ಉಲಮಾಗಳನ್ನು ತಂಙಳ್ ಗಳನ್ನು ಪ್ರೀತಿಸಿ, ಗೌರವಿಸಿ ನಡೆಯುತ್ತಿರುವುದು, ಉಲಮಾಗಳಿಂದಾದ ಅತೀ ದೊಡ್ಡ ಬದಲಾವಣೆಯಾಗಿದೆ.*
*ಉಲಮಾಗಳನ್ನು ತಂಙಳ್ ಗಳನ್ನು ಯಾರು ಪ್ರೀತಿಸಿ, ಗೌರವಿಸಿ ನಡೆಯುತ್ತಾರೋ, ಅಂತಹವರಲ್ಲಿ ಅದೆಂತಹ ಕೆಟ್ಟ ಕಾರ್ಯಗಳಿದ್ದರೂ, ಮುಂದೆ ಅವರು ಒಳ್ಳೆಯವರಾಗುವ ಸಾಧ್ಯತೆಗಳಿರುತ್ತದೆ.*
*ಯಾರು ಉಲಮಾಗಳನ್ನು ತಂಙಳ್ ಗಳನ್ನು ಗೌರವಿಸದೆ ನಡೆಯುತ್ತಾರೋ, ಅವರೆಂದೂ ಒಳ್ಳೆಯವರಾಗಲು ಸಾದ್ಯವಿಲ್ಲ.*
ಅಲ್ಲಾಹು ನಮ್ಮೆಲ್ಲರನ್ನು ಅವನ ಇಷ್ಟದಾಸರಾದ ಉಲಮಾಗಳನ್ನು ತಂಙಳ್ ಗಳನ್ನು ಪ್ರೀತಿಸಿ, ಗೌರವಿಸಿ ನಡೆಯುವ ಅವನ ಸಜ್ಜನರ ಕೂಟದಲ್ಲಿ ಸೇರಿಸಲಿ, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment