*ಝಿಯಾರತ್ತ್ ಕೇಂದ್ರ*
👉 7⃣2⃣
➖➖➖➖➖➖➖➖➖
*ಪುಲ್ಲಾರ 'ಶುಹದಾ'ಗಳು*
*ಏರನಾಡು, ಮಲಪ್ಪುರಂ*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
***********************
*ಪುಲ್ಲಾರ ಶುಹದಾಕಳ್*
ಸಾವಿರದ ನಾನೂರ ಐವತ್ತು ವರ್ಷಗಳ ಹಿಂದೆ ಅರೇಬಿಯಾದ ಮಣ್ಣಿನಲ್ಲಿ ಅಲ್ಲಾಹನ ರಸೂಲರಾದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಅನುಯಾಯಿಗಳಾದ ಧೀರ ಸ್ವಹಾಬಾಗಳು ಅಲ್ಲಾಹನ ದೀನಿನ ಬದ್ದ ವೈರಿಗಳಾಗಿದ್ದ ಶತ್ರು ಸೈನ್ಯದ ವಿರುದ್ಧ ನಡೆಸಿದ ಪ್ರತಿರೇೂಧ ಹೇೂರಾಟದ ಸಮಯದಲ್ಲಿ ಅಲ್ಲಾಹನ ದೀನಿನ ಉಳಿವಿಗಾಗಿ ಸರ್ವಸ್ವವನ್ನೂ ಸಮರ್ಪಿಸಿದ್ದಷ್ಟೇ ಅಲ್ಲದೆ ಅನಿವಾರ್ಯವೆನಿಸಿದಾಗ ತಮ್ಮ ಪ್ರಾಣವನ್ನೇ ಸಮರ್ಪಿಸಿದ್ದ ಆ ತ್ಯಾಗ ಮತ್ತು ಬಲಿದಾನಗಳು ನಮಗೆಲ್ಲ ಗೊತ್ತೇ ಇದೆ. ಆ ಮಹನೀಯರ ಹೆಸರು ಕೇಳುವಾಗ ಸತ್ಯ ವಿಶ್ವಾಸಿಯ ಮೈಮನ ಪುಳಕಗೊಳ್ಳುವುದಷ್ಟೇ ಅಲ್ಲದೆ ಪ್ರತಿ ವಿಶ್ವಾಸಿ ಹೃದಯವೂ ಆ ರಕ್ತಸಾಕ್ಷಿಗಳ ಬರ್ಕತ್'ಗಾಗಿ ಸದಾ ತುಡಿಯುತ್ತಲೇ ಇರುತ್ತದೆ. ಕಾರಣ ಅಂಥಹ ಧೀರ ಶುಹದಾಗಳ ಚರಿತ್ರೆ ಕೇಳಿ ಕಲಿಯುವುದಷ್ಟೇ ಅಲ್ಲ ಆ ಶುಹದಾಗಳ ನಾಮಸ್ಮರಣೆಯೂ ಸಹ ಪುಣ್ಯಕರವೆನ್ನುವುದರಲ್ಲಿ ಸಂಶಯವಿಲ್ಲ.
ಹಾಗೆ ಅಲ್ಲಾಹನ ದೀನನ್ನು ಶತ್ರುಗಳಿಂದ ಸಂರಕ್ಷಿಸಲು ಬದ್'ರ್, ಉಹ್ದ್, ಖಂದಕ್, ಖೈಬರ್ ಸೇರಿದಂತೆ ಹತ್ತು ಹಲವು ಯುದ್ಧಗಳಲ್ಲಿ ಭಾಗವಹಿಸಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಆ ಧೀರ ಶುಹದಾಗಳಿಂದ ಪ್ರೇರಿತರಾಗಿ ಅಲ್ಲಾಹನ ಭವನಗಳ ಸಂರಕ್ಷಣೆಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸುವುದರೊಂದಿಗೆ ತಮ್ಮ ಕೊನೆಯುಸಿರಿನ ತನಕವೂ ಶತ್ರುಗಳೊಂದಿಗೆ ಹೇೂರಾಡಿ ಭಾರತದ ಇಸ್ಲಾಮಿಕ್ ಇತಿಹಾಸದಲ್ಲಿ ಸ್ಥಾನಗಳಿಸಿ ಅಜರಾಮರರಾದ ಅಸಂಖ್ಯ ಧೀರ ಶುಹದಾಗಳನ್ನು ಕಂಡ ನಾಡು ಕೇರಳ.
ಅಲ್ಲಾಹನ ಪ್ರಪ್ರಥಮ ಸೃಷ್ಟಿಯೂ, ಸೃಷ್ಟಿಗಳಲ್ಲೇ ಅತ್ಯುತ್ತಮರೂ, ಅಲ್ಲಾಹನ ರಸೂಲರೂ, ಅಂಬಿಯಾಗಳ ನೇತಾರರೂ ಆದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಅನುಯಾಯಿಗಳಾದ ಸ್ವಹಾಬಾಗಳ ಸ್ಥಾನ ಬಹಳ ಉನ್ನತವಾದುದು. ಹಾಗಾಗಿ ಅವರ ಚರಿತ್ರೆ ಕೇಳಿದರೂ ಸಹ ಬಹಳಷ್ಟು ಪುಣ್ಯ ಲಭ್ಯ. ಆದರೆ ನಂತರದ ಕಾಲಘಟ್ಟದಲ್ಲಿ ಅಲ್ಲಾಹನ ದೀನಿನ ಸಂರಕ್ಷಣೆಗಾಗಿ ಹೇೂರಾಡಿ ಹುತಾತ್ಮರಾದ ಶುಹದಾಗಳು ಸ್ವಹಾಬಾಗಳ ಸ್ಥಾನಕ್ಕೆ ತಲುಪಲಾರರಾದರೂ ಅವರ ಸ್ಥಾನಮಾನ ಚಿಕ್ಕದೇನೂ ಅಲ್ಲ ಹಾಗಾಗಿ ದೀನಿನ ಮಾರ್ಗದಲ್ಲಿ ಅಲ್ಲಾಹನಿಗಾಗಿ ಹೇೂರಾಡಿ ಮಡಿದ ಇತರ ಶುಹದಾಗಳ ಚರಿತ್ರೆ ಕೇಳಿ ಕಲಿತರೂ ಪುಣ್ಯ ಲಭ್ಯವೆಂಬುದರಲ್ಲಿ ಸಂಶಯವಿಲ್ಲ.
ಮಲಪ್ಪುರಂ ಜಿಲ್ಲೆಯ ಏರನಾಡು ಎಂಬಲ್ಲಿ ಹಿಜರಿ ಹನ್ನೊಂದನೇ ಶತಮಾನದ ಅಸುಪಾಸಿನಲ್ಲಿ ಸೃಷ್ಟಿಕರ್ತನಾದ ಅಲ್ಲಾಹನ ಆರಾಧನೆಗಾಗಿ ಸತ್ಯವಿಶ್ವಾಸಿಗಳು ಆ ಭಾಗದಲ್ಲಿ ನಿರ್ಮಿಸಿದ ಪ್ರಪ್ರಥಮ ಮಸೀದಿಯಾಗಿತ್ತು ಪುಲ್ಲಾರ ಮಸೀದಿ.
ಆ ಮಸೀದಿಯು ಹುಲ್ಲು ಹಾಸಿನ ಚಿಕ್ಕ ಗುಡಿಸಲಾಗಿದ್ದರೂ ಸಹ ಅಲ್ಲಾಹನ ಭವನವೆಂಬ ಗೌರವದಿಂದ ಸದ್ಗುಣ ಸಂಪನ್ನರಾಗಿದ್ದ ಪುಲ್ಲಾರ ನಿವಾಸಿಗಳು ಕಷ್ಟಪಟ್ಟು ಕಟ್ಟಿದ್ದ ಆ ಮಸೀದಿಯನ್ನು ಬಹಳ ಹಚ್ಚಿಕೊಂಡಿದ್ದರು.
ಕಾಲಕ್ರಮೇಣ ಅಂದರೆ 1152ರಲ್ಲಿ ಆ ಮಸೀದಿಯ ಜೀರ್ಣೇೂದ್ದಾರ ಮಾಡಬೇಕೆಂದು ತೀರ್ಮಾನಿಸಿದ ಪುಲ್ಲಾರದ ಮುಸ್ಲಿಮರು ಅರಿಬ್ರ ಮಲೆ ಎಂಬಲ್ಲಿ ಮಸೀದಿಯ ದುರಸ್ತಿಗೆ ತಕ್ಕನಾದ ಹಲಸಿನ ಮರವೊಂದನ್ನು ಆಯ್ಕೆ ಮಾಡಿದರು.
ಆದರೆ ಆ ಹಲಸಿನ ಮರದ ಕೊಡು ಕೊಳ್ಳುವಿಕೆಯ ತರ್ಕವು ಮುಗಿಲುಮುಟ್ಟಿ ಕೊನೆಗದು ಘನಘೇೂರವಾದ ಯುದ್ಧವನ್ನೇ ಹುಟ್ಟುಹಾಕಿ ಅಪಾರ ಜೀವಹಾನಿಗೆ ಕಾರಣವಾಯಿತು.
ಕಾರಣ ಹಿಜರಿ 1151ರಲ್ಲಿ ನಾಡದೊರೆ ಪಾರನಂಬಿಯು ಕುಮ್ಮಕ್ಕಿನಿಂದ ವಲಿಯಂಙಾಡಿ ಜುಮಾ ಮಸೀದಿಗೆ (ಮಲಪ್ಪುರಂ ಪಡ) ಬೆಂಕಿ ಹಾಕಿ ಸುಡಲೆಂದು ಬಂದಿದ್ದ ಸಾವಿರಾರು ಸಂಖ್ಯೆಯ ಶತ್ರುಪಡೆಯೊಂದಿಗೆ ಮುಸ್ಲಿಮರು ನಡೆಸಿದ ಪ್ರತಿರೇೂಧ ಹೇೂರಾಟದಲ್ಲಿ ನಲವತ್ತನಾಲ್ಕು ಮಂದಿ ಮುಸ್ಲಿಮರು ಹುತಾತ್ಮರಾದರೆ ಶತ್ರು ಪಡೆಯ ಒಂಬೈನೂರ ಐವತ್ತಕ್ಕೂ ಹೆಚ್ಚು ಮಂದಿ ಹತರಾಗಿದ್ದು ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯನ್ನು ಅರಗಿಸಿಕೊಳ್ಳಲಾಗದೆ ಮುಸ್ಲಿಮರ ವಿರುದ್ಧ ಕೆಂಡಕಾರುತ್ತಿದ್ದ ಪಾರನಂಬಿಯು ಪುಲ್ಲಾರ ಮಸೀದಿಗೆ ಸಂಬಂಧಿಸಿದ ಹಲಸಿನ ಮರದ ತರ್ಕವನ್ನು ಮುಸ್ಲಿಮರ ವಿರುದ್ಧ ಸೇಡು ತೀರಿಸಲು ಬಳಸಿಕೊಂಡು ಹಲಸಿನ ಮರದ ಮಾಲಿಕನನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಅಗತ್ಯವಿರುವ ಎಲ್ಲ ನೆರವೂ ನೀಡುವುದಾಗಿ ಹೇಳಿದನಲ್ಲದೆ ಜನರನ್ನು ಸಂಘಟಿಸಿ ಮಸೀದಿಯನ್ನೇ ಸುಟ್ಟುಹಾಕಲು ಪ್ರೇರೇಪಿಸಿದನು.
ಪಾರನಂಬಿಯ ಕುಮ್ಮಕ್ಕಿನಿಂದ ಪ್ರೇರಿತರಾದ ಹಲವರು ಮಸೀದಿಯನ್ನು ಹೊಡೆದುರುಳಿಸಲು ಸಜ್ಜಾದರು. ಹಾಗೆ ಹಿಜರಿ 1152ರ ರಮಲಾನ್ 23ರಂದು ಮಸೀದಿಯನ್ನು ಹೊಡೆದುರುಳಿಸಲು ಶತ್ರುಗಳು ಬರುವರೆಂಬ ವದಂತಿ ಹಬ್ಬಿದ್ದರಿಂದ ಮಸೀದಿಯಲ್ಲಿ ಜಮಾಯಿಸಿದ ಮುಸ್ಲಿಂ ಜನತೆ ಮಸೀದಿಯ ಸಂರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿ ಮಸೀದಿಗೆ ಕಾವಲು ನಿಂತರು. ಬೆಳಗಿನ ಜಾವದ ತನಕ ಶತ್ರುಗಳ ಸುಳಿವೇ ಇರಲಿಲ್ಲ. ಆಮೇಲೆ ರಮಳಾನ್ ಮಾಸವಾದುದರಿಂದ ಸಹರಿಗಾಗಿ ಎಲ್ಲರೂ ತಮ್ಮ ತಮ್ಮ ಮನೆಯತ್ತ ನಡೆದರು.
ಸಹರಿಗಾಗಿ ಮುಸ್ಲಿಮರು ತಮ್ಮ ಮನೆಯತ್ತ ಹೊರಡುವ ಸಮಯಕ್ಕಾಗಿ ಕಾಯುತ್ತಿದ್ದ ಶತ್ರು ಪಡೆ ಈ ಅವಕಾಶವನ್ನು ಬಳಸಿಕೊಂಡು ಆಯುಧ ಸಮೇತ ಮಸೀದಿಯೊಳ ಹೊಕ್ಕು ಹೊರಗಿನಿಂದ ಯಾರೂ ಒಳಬರದಂತೆ ಭದ್ರವಾಗಿ ಎಲ್ಲ ಬಾಗಿಲುಗಳನ್ನೂ ಮುಚ್ಚಿದರು.
ಆಗ ಮಸೀದಿಯ ಹತ್ತಿರವಿರುವ ತಮ್ಮ ಮನೆಯಲ್ಲಿ ಆಹಾರ ಸೇವಿಸುತ್ತಿದ್ದ ಕೊಲಾಂತೇೂಡ್ ಪೇೂಕರ್ (ಖ.ಸಿ) ಎಂಬುವವರಿಗೆ ಬಹುಶಃ ಮಸೀದಿಯಿಂದ ಶತ್ರುಗಳ ಶಬ್ಧ ಕೇಳಿಸಿರಬಹುದು ಅಥವಾ ಶತ್ರುಗಳನ್ನು ಕಂಡಿರಬಹುದು. ಒಟ್ಟಿನಲ್ಲಿ ಶತ್ರುಗಳು ಮಸೀದಿಯೊಳಗೆ ನುಸುಳಿರುವ ಸುಳಿವರಿತ ಕೊಲಾಂತೇೂಡ್ ಪೇೂಕರ್ (ಖ.ಸಿ) ತಕ್ಷಣ ಎದ್ದು ಆಯುಧವನ್ನೆತ್ತಿಕೊಂಡು ಮಸೀದಿಯತ್ತ ಧಾವಿಸಿದರು.
ಶತ್ರುಗಳು ಮಸೀದಿಯ ಬಾಗಿಲುಗಳನ್ನೆಲ್ಲ ಮುಚ್ಚಿದ್ದರಿಂದ ಒಳಗೆ ಪ್ರವೇಶಿಸಲಾಗದ ಕಾರಣ ತಂತ್ರಶಾಲಿಯಾಗಿದ್ದ ಕೊಲಾಂತೇೂಡ್ ಪೇೂಕರ್ (ಖ.ಸಿ)ರವರು ನಿಧಾನವಾಗಿ ಔಲಿನತ್ತ ತೆರಳಿ ಔಲಿನಿಂದ ನೀರು ಹೊರ ಹೇೂಗುವ ಕಿಂಡಿಯ ಮೂಲಕ ಕಷ್ಟಪಟ್ಟು ನುಸುಳಿ ಮಸೀದಿಯ ಒಳಗೆ ಪ್ರವೇಶಿಸಿ, ಮೊದಲಿಗೆ ದೀಪ ನಂದಿಸಿದರು. ಅನಂತರ ಮರೆಯಲ್ಲಿ ನಿಂತು ಎದುರಿಗೆ ಸಿಕ್ಕಿದವರನ್ನೆಲ್ಲ ಇರಿಯಲಾರಂಭಿಸಿದರು. ಇರಿತಕ್ಕೊಳಗಾದವರ ಅರಚಾಟ ಕಿರುಚಾಟಗಳಿಂದ ವಿಷಯವೇನೆಂದರಿಯದೆ ಕಂಗಾಲಾದ ಶತ್ರು ಪಡೆಯವನೊಬ್ಬ ಮುಸ್ಲಿಂ ಮುಸ್ಲಿಂ ಎಂದು ಕಿರುಚಿದನು.
ದೀಪ ಆರಿದಾಗಲೇ ವಿಚಲಿತರಾಗಿದ್ದ ಶತ್ರುಗಳು ಮುಸ್ಲಿಮರು ಬಂದರೆಂದು ತಿಳಿದಾಗ ಭಯಭೀತರಾಗಿ ಎದುರಿಗೆ ಸಿಕ್ಕಿದವರನ್ನೆಲ್ಲ ಕತ್ತಲೆಯಲ್ಲಿ ಪರಸ್ಪರ ಇರಿಯಲಾರಂಭಿಸಿದರು. ಇದರಿಂದ ಹಲವರಿಗೆ ಜೀವಹಾನಿ ಸಂಭವಿಸಿತು.
ಶತ್ರುಗಳು ಮಸೀದಿಗೆ ನುಗ್ಗಿರುವ ಸಂಗತಿಯನ್ನು ಊರಿನ ಜನರಿಗೆ ತಿಳಿಸುವ ಸಲುವಾಗಿ ಪೇೂಕರ್' (ಖ.ಸಿ)ರವರು ಆಝಾನ್ ಕರೆ ಕೊಡುವ ಎತ್ತರದ ದಿಬ್ಬ ಹತ್ತಿ ಸರ್ವಶಕ್ತಿಯನ್ನೂ ಕ್ರೂಡೀಕರಿಸಿ ಜೇೂರಾಗಿ ಆಝಾನ್ ಮೊಳಗಿಸಿದರು. ಅಲ್ಲಿಯ ತನಕ ಮಸೀದಿಯೊಳಗೆಷ್ಟು ಮುಸ್ಲಿಮರಿದ್ದಾರೆ ಏನು ಕತೆ ಎಂದೊಂದೂ ಅರಿಯದೆ ಪರಸ್ಪರ ತಮ್ಮವರನ್ನೇ ಇರಿಯುತ್ತಿದ್ದ ಶತ್ರುಗಳು ಆಝಾನ್ ಕರೆ ಮೊಳಗಿದಾಗ ಅತ್ತ ಧಾವಿಸಿ ಪೇೂಕರ್'(ಖ.ಸಿ)ರನ್ನು ಹಿಡಿದು ಅವರ ಶಿರಶ್ಛೇದನ ಮಾಡಿ ಮಸೀದಿಯ ಪಕ್ಕದ ಬಾವಿಗೆಸೆದರು.
ಆಝಾನ್ ಕರೆ ಕೇಳಿ ಮಸೀದಿಯತ್ತ ಧಾವಿಸಿ ಬಂದ ಚಂಬಕುಳಂ ಪಂದಪ್ಪಿಲಾಕಲ್ (ಖ.ಸಿ), ಚಪ್ಪತ್ತೇೂಡಿ ಪಳ್ಳಿಯಾಳಿತೊಡಿ (ಖ.ಸಿ), ತುಡಂಙಿ ಸೂಫಿ (ಖ.ಸಿ), ಕೇೂಯಾಮುಟ್ಟಿ, ಕುಟ್ಟಿಯಮ್ಮು (ಖ.ಸಿ), ಮುಹ್ಯುದ್ದೀನ್ (ಖ.ಸಿ) ಮತ್ತಿತರರು ಮಸೀದಿಯೊಳಗಿದ್ದ ಶತ್ರುಗಳನ್ನು ಸದೆಬಡಿಯಲಾರಂಭಿಸಿದರು. ಈ ಕಾಳಗದಲ್ಲಿ ಹನ್ನೆರಡು ಮಂದಿ ಮುಸ್ಲಿಮರು ಹುತಾತ್ಮರಾದರೆ ಶತ್ರುಗಳೆಡೆಯಿಂದ ಅಪಾರ ಜೀವಹಾನಿ ಸಂಭವಿಸಿತ್ತು.
ಅಳಿದುಳಿದ ಶತ್ರುಗಳು ಹುಲ್ಲುಹಾಸಿನ ಆ ಮಸೀದಿಗೆ ಬೆಂಕಿಯಿಟ್ಟು ಪಲಾಯನ ಮಾಡಿದರು.
ಮರುದಿನ ಕಾಡ್ಗಿಚ್ಚಿನಂತೆ ಈ ಸುದ್ದಿ ಊರಿಡೀ ಹರಡಿತು. ವಿಷಯ ತಿಳಿದ ಜನ ಮಸೀದಿಯಲ್ಲಿ ಜಮಾಯಿಸಿ ಮಸೀದಿಯೊಳಗೆ ಮತ್ತು ಹೊರಗಿದ್ದ ಹನ್ನೊಂದು ಶುಹದಾಗಳ ಮೃತ ಶರೀರವನ್ನು ಮಸೀದಿಯ ಎದುರು ದಫನ ಮಾಡಿದರಾದರೂ ಶತ್ರುಗಳು ಕೊಂದು ಬಾವಿಗೆಸೆದಿದ್ದ ಪೇೂಕರ್'ರವರ ಪಾರ್ಥೀವ ಶರೀರ ಮಾತ್ರ ಸಿಗಲಿಲ್ಲ.
ಮರುದಿನ ರಾತ್ರಿ ಅಲ್ಲಿನ ಖಾಝಿಯಾಗಿದ್ದ ಒಟ್ಟಕತ್ತ್ ಪಯ್ಯನಯಿ ಮರಕಾರ್ ಮುಸ್ಲಿಯಾರ್ (ಖ.ಸಿ)ರೊಂದಿಗೆ ಆ ಊರಿನವರು ಕೊಲಾಂತೇೂಡ್ ಪೇೂಕರ್ (ಖ.ಸಿ)ರವರು ಮಸೀದಿಯ ಪಶ್ಚಿಮಕ್ಕಿರುವ ಬಾವಿಯೊಳಗಿದ್ದಾರೆ ಎನ್ನುತ್ತಿರುವುದಾಗಿ ಕನಸು ಕಂಡಿತು.
ಮರುದಿನ ಬೆಳಿಗ್ಗೆ ಖಾಝಿಯವರು ಬಾವಿಯತ್ತ ಹೇೂಗಿ ನೇೂಡಿದಾಗ ಪೇೂಕರ್ (ಖ.ಸಿ)ರವರ ಶರೀರ ಆ ಬಾವಿಯಲ್ಲಿತ್ತು. ನಂತರ ಆ ಮಹಾನರ ಶರೀರವನ್ನು ಬಾವಿಯಿಂದ ಹೊರತೆಗೆದು ಮಸೀದಿಯ ಪಶ್ಚಿಮ ಭಾಗದಲ್ಲಿ ದಫನ್ ಮಾಡಲಾಯಿತು.
ಅಲ್ಲಾಹನ ಭವನದ ಸಂರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಜಿಸಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಆ ಧೀರ ಶುಹದಾಗಳ ಸ್ಮರಣಾರ್ಥ ಪ್ರತಿ ವರ್ಷವೂ ರಮಳಾನ್ 22 ರಂದು ಅನುಸ್ಮರಣಾ ಸಭೆ ಮತ್ತು ಅನ್ನದಾನ ಏರ್ಪಡಿಸಲಾಗುತ್ತದೆ.
🚕: ಮಂಜೇರಿ, ಏರನಾಡ್, ಪುಲ್ಲಾರ.
🌀🌀🌀🌀🌀🌀🌀🌀
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)



No comments:
Post a Comment