*ಝಿಯಾರತ್ತ್ ಕೇಂದ್ರ*
👉🏻👉🏻 7⃣7⃣
➖➖➖➖➖➖➖
*ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ) ವಯಿಮುಕ್, ಬಾಲರಾಮಪುರಂ. ತಿರುವನಂತಪುರಂ.*
**********************
*اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ*
☪☪☪☪☪☪☪
✍ ಗಫೂರ್ ಬಾಯಾರ್
〰〰〰〰〰〰〰
ಅಂತ್ಯ ಪ್ರವಾದಿ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಅನುಯಾಯಿಗಳಾದ ಸ್ವಹಾಬಿವರ್ಯರು ವಿಶ್ವದಾದ್ಯಂತ ತೆರಳಿ ಅಲ್ಲಾಹನ ದೀನಿನ ಪ್ರಚಾರ ನಡೆಸಿದರು.
ಸ್ವಹಾಬಾಗಳ ನಂತರ ಅವರ ಉತ್ತರಾಧಿಕಾರಿಗಳಾದ ತಾಬಿಉಗಳು ದೀನೀ ಪ್ರಚಾರ ಕಾರ್ಯವನ್ನು ಕೈಗೆತ್ತಿಕೊಂಡರು. ಅನಂತರ ತಬಉತ್ತಾಬಿಊಗಳು ಅನಂತರ ಔಲಿಯಾಗಳು ಹೀಗೆ ದೀನೀ ಪ್ರಚಾರದ ಶೃಂಖಲೆ ಮುಂದುವರಿದಿರುವ ವಿಷಯ ನಮ್ಮೆಲ್ಲರಿಗೂ ತಿಳಿದ ಸಂಗತಿ.
ಹಾಗೆ ಅಲ್ಲಾಹನ ದೀನಿನ ಪ್ರಚಾರಾರ್ಥ ಯಾತ್ರಾ ಸಂಘದೊಂದಿಗೆ ಕೇರಳದ ಹಳೆಯ ತಿರುವಾಂಕೂರ್ (ಈಗಿನ ತಿರುವನಂತಪುರಂ)ಗೆ ಆಗಮಿಸಿದ ಮಹಾನರಾಗಿದ್ದಾರೆ ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ).
ಹಾಗೆ ಆಗಮಿಸಿದ ಮಹಾನರು ದೀನೀ ಪ್ರಬೋಧನೆಯ ಮೂಲಕ ಧಾರ್ಮಿಕವಾಗಿ ತಿಳಿವಳಿಕೆಲ್ಲದ ತಿರುವಾಂಕೂರಿನ ಜನತೆಗೆ ದೀನೀ ಪ್ರಭೋಧನೆ ನಡೆಸುತ್ತಾ ಬದುಕಿನ ಜಂಜಾಟದಲ್ಲಿ ನೊಂದ ಜನತೆಗೆ ಸಾಂತ್ವನ ನೀಡುವ ಆಧ್ಯಾತ್ಮಿಕತೆಯ ಅಭಯ ಕೇಂದ್ರವಾಗಿದ್ದರು.
ಜೀವಿತ ಕಾಲದಲ್ಲಿ ಹಳೆಯ ತಿರುವಾಂಕೂರಿನ ಜನತೆಯನ್ನು ಆಧ್ಯಾತ್ಮಿಕತೆಯ ಕಂಪಿನೊಂದಿಗೆ ಮುನ್ನಡೆಸಿದ್ದ ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ) ರವರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲವಾದರೂ ವಫಾತಿನ ನಂತರವೂ ಕರಾಮತ್‌ಗಳ ಮೂಲಕ ನೊಂದ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಅಭಯಹಸ್ತ ಚಾಚುವ ಆಶಾಕಿರಣವಾಗಿದ್ದಾರೆ.
ಹಳೆಯ ತಿರುವಾಂಕೂರಿನಲ್ಲಿ ಆಲದ ಮರವೊಂದರ ಬುಡದಲ್ಲಿ ವಿಶಾಲವಾದ ಕೊಠಡಿಯಂತೆ ಆವೃತವಾದ ಪೊಟರೆಯೊಳಗೆ ಮಹಾನರ ಮಖ್ಬರವಿದ್ದು, ಸಂತಾನ ಭಾಗ್ಯ ಲಭಿಸದ ಅನೇಕರು ಸಯ್ಯಿದರ ಮಖಾಮಿಗೆ ಆಗಮಿಸಿ ಝಿಯಾರತ್ ಮಾಡಿದ ನಂತರ ಸಂತಾನ ಸೌಭಾಗ್ಯ ಲಭಿಸಿದೆಯೆನ್ನುತ್ತಾರೆ ಹಳೆಯ ತಿರುವಾಂಕೂರಿನ ಜನತೆ. ಮಾತ್ರವಲ್ಲ ಆಧ್ಯಾತ್ಮಿಕ ಅನುಭೂತಿ ನೀಡುವ ಸಯ್ಯಿದರ ಮಖಾಮಿಗೆ ದಿನನಿತ್ಯ ನೂರಾರು ಜನ ಆಗಮಿಸಿ ಝಿಯಾರತ್ ನಡೆಸುವ ದೃಶ್ಯ ಮನಮೋಹಕವಾದದ್ದು.
ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ) ರವರು ಹಳೆಯ ತಿರುವಾಂಕೂರಿಗೆ ಆಗಮಿಸಿದ ಯಾತ್ರಾ ಸಂಘದಲ್ಲಿದ್ದ ಮಹಾನರ ಶಿಷ್ಯರೊಬ್ಬರ ಮಖ್ಬರವು ಸಯ್ಯಿದ್ ಮಹ್ಮೂದ್ ವಲಿಯುಲ್ಲಾಹಿ (ರ)ರವರ ಮಖಾಮಿನ ಮುಂಬಾಗದಲ್ಲಿದೆ.
ಪ್ರತಿ ವರ್ಷ ರಬೀವುಲ್ ಆಖಿರ್ ಹತ್ತರಿಂದ ಹನ್ನೆರಡರ ತನಕ ಇಲ್ಲಿ ಉರೂಸ್ ನಡೆಯುತ್ತದೆ.
*ಸೃಷ್ಟಿಕರ್ತನಾದ ಅಲ್ಲಾಹನು ಮಹಾನರ ಹಕ್ಕ್‌ಜಾಹ್ ಬರಕತ್‌ನಿಂದ ನಮ್ಮೆಲ್ಲರನ್ನೂ ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ ಆಮೀನ್.*
ದಾರಿ:
ತಿರುವನಂತಪುರದಿಂದ ಕನ್ಯಾಕುಮಾರಿಗೆ ಹೋಗುವ ಹೈವೇಯ ಪಕ್ಕದಲ್ಲಿ ಬಾಲರಾಮಪುರಂ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ.
〰〰〰〰〰〰〰〰
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)




No comments:
Post a Comment