Sunday, September 22, 2019

*ನಾಳೆ ನಡೆಯಲಿರುವ Connect ಕಾರ್ಯಕ್ರಮದಲ್ಲಿ ನನಗೆ ಕಡ್ಡಾಯವಾಗಿ ಭಾಗವಹಿಸಬೇಕು.!*

ಯಾಕೆಂದರೆ....

ನಾವು ದಿನಂಪ್ರತೀ  ಅದೆಷ್ಟೋ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವವರಾಗಿದ್ದೇವೆ. ಅವುಗಳಲ್ಲಿ ಹೆಚ್ಚಿನವುಗಳೆಲ್ಲವೂ ನಮ್ಮ ವೈಯುಕ್ತಿಕ ಕಾರ್ಯಕ್ರಮಗಳು.
ಇಂತಹ ನೂರಾರು ಕಾರ್ಯಕ್ರಮದಲ್ಲಿ ಭಾಗವಹಿಸಲು ನಮಗೆ ಆರೋಗ್ಯ, ಶಕ್ತಿ, ಸಂಪತ್ತು, ಸಮಯ  ಎಲ್ಲವನ್ನು ಕೊಟ್ಟವನೂ ಅಲ್ಲಾಹನಾಗಿದ್ದಾನೆ.  ಅವನು ಉಚಿತವಾಗಿ ಕರುಣಿಸಿದ ಈ ಎಲ್ಲಾ ಅನುಗ್ರಹಗಳನ್ನು ಬಳಸಿ, ನಾವು ನಮ್ಮ ಉದ್ದೇಶ ಆಸೆ ಆಕಾಂಕ್ಷೆಗಳನ್ನೆಲ್ಲಾ ನೆರವೇರಿಸುತ್ತಿದ್ದೇವೆ.
ಇದಕ್ಕೆ ಬದಲಾಗಿ, ಅಲ್ಲಾಹನಿಗೆ ಒಂದು ಕಡುವಿನಷ್ಟು ಕೃತಜ್ಞತೆ ಸಲ್ಲಿಸಲೂ ನಮ್ಮಿಂದ ಸಾದ್ಯವಾಗಿಲ್ಲ, ಸಾದ್ಯವಾಗುವುದೂ ಇಲ್ಲ.

ಉದಾಹರಣೆಗೆ ಹೇಳುವುದಾದರೆ, ಅಲ್ಲಾಹನು ಕರುಣಿಸಿದ ಯಾವುದಾದರೊಂದು  ಅಂಗಾಂಗಕ್ಕೆ ಕೇಡು ಸಂಭವಿಸಿದರೆ, ಕೇವಲ ಅದನ್ನು ಶುಶ್ರೂಷೆ ಮಾಡಿದ ಮಾತ್ರಕ್ಕೆ ಲಕ್ಷ ಲಕ್ಷ ರೂಪಾಯಿಗಳನ್ನು ನಾವು ಡಾಕ್ಟರ್ ಗಳಿಗೆ ಕರ್ಚು ಮಾಡಬೇಕು. ಆ ಲಕ್ಷ ಲಕ್ಷ ಸಂಪಾದಿಸಲು ನಾವು ಅದೆಷ್ಟೋ ವರ್ಷ ನಮ್ಮ ಅರೋಗ್ಯವನ್ನೆಲ್ಲಾ ಬಳಸಿ ಕೆಲಸ ಮಾಡಬೇಕಾಗುತ್ತದೆ. ಅಂದರೆ, ಒಂದು ಅಂಗಾಂಗದ ಒಂದು ಸಣ್ಣ ಕೇಡಿನ ಶುಶ್ರೂಷೆ ಮಾಡಿದ  ಡಾಕ್ಟರ್ ಗಾಗಿ ನಾವು ನಮ್ಮ ಅದೆಷ್ಟೋ  ದಿನಗಳನ್ನು ಕರ್ಚು ಮಾಡುತ್ತೇವೆ.

ಕೋಟಿಗೂ ನಿಲುಕದಂತಹ ನೂರಾರು ಅಂಗಾಂಗಗಳನ್ನು ಅಲ್ಲಾಹು ನಮಗೆ  ಉಚಿತವಾಗಿ ಕರುಣಿಸಿದ್ದಾನೆ.  ಅಲ್ಲಾಹನ ಈ ಅನುಗ್ರಹಗಳಿಗೆ ನಾವು  ಕೃತಜ್ಞತೆ ಸಲ್ಲಿಸುವುದು ಬೇಡವೇ.
ಅಲ್ಲಾಹನಿಗೆ ನಾವು ಮಾಡುವ ಕೃತಜ್ಞತೆ ಯಾಗಿದೆ,  ಅವನ ಧರ್ಮ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು.
ಆ ಜವಾಬ್ದಾರಿಯನ್ನು  ಬೇಕಾದ ರೀತಿಯಲ್ಲಿ ನೆರವೇರಿಸಲು ನಮ್ಮಿಂದ ಸಾದ್ಯವಾಗದಿರಬಹುದು. ಅದಕ್ಕಾಗಿ ನಾವು ಮಾಡಬೇಕಾದದ್ದಿಷ್ಟೇ. ಅಲ್ಲಾಹನ ಧರ್ಮ ಸಂರಕ್ಷಣೆಗಾಗಿ ಆಹೋರಾತ್ರಿ ಶ್ರಮಿಸುತ್ತಿರುವ ಉಲಮಾಗಳಿಗೆ, ಸಂಘಟನಾ ನಾಯಕರಿಗೆ ನಾವು ಸಹಕಾರಿಯಾಗಬೇಕು.  ಅವರ ಯೋಜನೆಗಳಿಗೆ ನಾವು ಶಕ್ತಿಯಾಗಬೇಕು. ಅವರು ಆಯೋಜಿಸುವ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಲು ಸಾಧ್ಯವಾದಷ್ಟು ಶ್ರಮಿಸಬೇಕು. ಅಲ್ಲಾಹನ ಧರ್ಮ ಸಂರಕ್ಷಣೆಗಾಗಿ ಇವಿಷ್ಟನ್ನಾದರೂ ನಾವು ಮಾಡಲೇಬೇಕು. ಈ ರೀತಿಯಾದರೂ ನಾವು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವವರಾಗಬೇಕು.

ಅಲ್ಲಾಹನ ಧರ್ಮ ಸಂರಕ್ಷಣೆಗಾಗಿ ಉಲಮಾಗಳು ಕಟ್ಟಿ ಬೆಳೆಸಿದ ಸಂಘಟನೆಗಾಗಿ   ಒಂದು ದಿನವನ್ನು ವ್ಯಯಿಸುವಂತಹ ಒಂದು ಉತ್ತಮ ಅವಕಾಶ ನಮ್ಮ ಪಾಲಿಗೆ ಬಂದೊದಗಿದೆ. ಅದುವೇ ನಾಳೆ ನಡೆಯಲಿರುವ *Connect-18* ಕಾರ್ಯಕ್ರಮ.
ಅಪರೂಪಕ್ಕೊಮ್ಮೆ ಸಿಗುವ ಇಂತಹ ಒಂದು ಅವಕಾಶಗಳನ್ನು,  ನಮಗೆ ಕೆಲಸವಿದೆ ಅಥವಾ ಇನ್ನೇನೋ ಇದೆ ಎಂದು ಹೇಳಿ ನಾವು ಕಳೆದುಕೊಳ್ಳಬಾರದು.
ನಾವು ಏನು ಕೆಲಸ ಮಾಡುವುದಿದ್ದರೂ, ಅದಕ್ಕೆ ಶಕ್ತಿ ಮತ್ತು ಆರೋಗ್ಯವನ್ನು ಕೊಟ್ಟವನು ಅಲ್ಲಾಹನಾಗಿದ್ದಾನೆ ಎಂಬ ಪರಿಜ್ಞಾನವಾದರೂ ನಮ್ಮಲ್ಲಿರಬೇಕು.
ಅಲ್ಲಾಹನು ಕೊಟ್ಟ ಆರೋಗ್ಯ ಶಕ್ತಿ, ಸಂಪತ್ತನ್ನೆಲ್ಲಾ ಬಳಸಿ,  ವರ್ಷದ ಮನ್ನೂರೈವತ್ತು ದಿನವನ್ನೂ ನಾವು ನಮ್ಮ ವೈಯುಕ್ತಿಕ ಕಾರ್ಯಗಳಿಗೆ ವ್ಯಯಿಸುವಾಗ, ಅದರಲ್ಲಿ ಒಂದೆರಡು ದಿನ ಅಲ್ಲಾಹನಿಗಾಗಿ, ಅವನ  ಕಾರ್ಯಗಳಿಗಾಗಿ ಮೀಸಲಿಡಲು ನಮ್ಮಿಂದ ಸಾಧ್ಯವಾಗುವುದಿಲ್ಲವಾದರೆ, ನಮ್ಮಂತಹ ಧಿಕ್ಕಾರಿಗಳು ಇನ್ಯಾರಿದ್ದಾರೆ ಈ ಭೂಮಿ ಮೇಲೆ.

ಕೆಲಸದ ಕಾರಣ ಹೇಳಿ
ಅಲ್ಲಾಹನಿಗಾಗಿ ಒಂದು ದಿನವನ್ನಾದರೂ ವ್ಯಯಿಸಲು ನಾವು ಹಿಂದೇಟು ಹಾಕಿದರೆ,  ನೂರಾರು ದಿನ ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು  ಸೃಷ್ಟಿಸಲು ಅಲ್ಲಾಹನಿಗೆ ಸಾದ್ಯವಿಲ್ಲವೇ.
ಅಲ್ಲಾಹನು ನಮಗೆ ಕರುಣಿಸಿದ ಯಾವುದಾದರೊಂದು ಅಂಗಾಂಗಕ್ಕೆ ಸ್ವಲ್ಪ ವೇನಾದರು ಕೇಡು ಸಂಭವಿಸಿದರೆ, ಅದಕ್ಕಾಗಿ ಅದೆಷ್ಟೋ ದಿನ ನಾವು ಹಾಸಿಗೆ ಹಿಡಿದು ಮಲಗಬೇಕಾಗುವುದಿಲ್ಲವೇ.
ಇದೆಲ್ಲವನ್ನೂ ತಡೆಯುವ ಶಕ್ತಿ, ಅಲ್ಲಾಹನಿಗಾಗಿ ನಾವು ಖರ್ಚು ಮಾಡುವ ಈ ಒಂದು ದಿನಕ್ಕೆ ಇದೆ ಎಂಬ ಸತ್ಯವನ್ನು ನಾವ್ಯಾರೂ ಮರೆಯಬಾರದು.

ಬನ್ನಿ ಗೆಳೆಯರೇ,
ನಾಳೆ ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಅಲ್ಲಾಹನಿಗಾಗಿ ಭಾಗವಹಿಸೋಣ,
ಅಲ್ಲಾಹು ಅನುಗ್ರಹಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment