Sunday, September 22, 2019

*ಎಲ್ಲಾ ರೀತಿಯ ಪ್ರವಾದಿ ﷺ  ನಿಂದಕರ ವಿರುದ್ಧವೂ ಹೋರಾಡೋಣ.*

ಯಾರೋ ಒಬ್ಬ ಬರೆದಿದ್ದಾನೆ,
*ಪ್ರವಾದಿ ﷺ ರ ಜನ್ಮ ದಿನಾಚರಣೆಯ ಪ್ರಯುಕ್ತ ರಸ್ತೆಯಲ್ಲಿ ಸಾವಿರಾರು ಮಂದಿಯನ್ನು ಸೇರಿಸಿ ಮೆರವಣಿಗೆ ಮಾಡುತ್ತಾರೆ. ಆದರೆ, ಪ್ರವಾದಿ ﷺ ರನ್ನು ನಿಂದನೆ ಮಾಡಿದವರ ವಿರುದ್ಧ ಪ್ರತಿಭಟನೆಗಾಗಿ ರಸ್ತೆ ಗಿಳಿಯಲು, ಮೆರವಣಿಗೆ ಮಾಡಲು ಯಾರೂ ಸಿದ್ದರಿಲ್ಲ* ಎಂದು.

ಪ್ರವಾದಿ ﷺ ರ ವಿರುದ್ಧ ಯಾರು  ಮಾತೆತ್ತಿದರೂ, ಖಂಡಿತಾ ಅಂತಹವರ ವಿರುದ್ಧ ಜಾತಿ ಧರ್ಮ ನೋಡದೆ ಪ್ರತಿಭಟನೆ, ಖಂಡನೆ ಮಾಡಬೇಕಾದದ್ದು ಪ್ರತಿಯೊಬ್ಬ ಸತ್ಯ ವಿಶ್ವಾಸಿಯ  ಬಾಧ್ಯತೆಯಾಗಿದೆ.
 ಮತ್ತೆ, ರಸ್ತೆ ಗಿಳಿದರೆ ಮಾತ್ರ *ಖಂಡನೆ* ಅಲ್ಲದಿದ್ದರೆ *ಖಂಡನೆ ಅಲ್ಲ*  ಎಂಬ ಲೇಖಕನ ವಾದದಲ್ಲಿ ಅರ್ಥವಿಲ್ಲ. *ಖಂಡನೆ* ಗಳಲ್ಲಿ ಹಲವು ರೂಪ ಇದೆ. 
ಅದರಲ್ಲಿ ಪ್ರಮುಖವಾದದ್ದು,  ಪ್ರವಾದಿ ﷺ ನಿಂದಕರ ವಿರುದ್ಧ ನಮ್ಮ ಅಂತರಾಳದಿಂದ ವಿರೋಧ ವ್ಯಕ್ತವಾಗಬೇಕು. ಅಂತರಾಳದಲ್ಲಿ ಪ್ರೀತಿ ಇಟ್ಟು, ಬಾಹ್ಯವಾಗಿ ಮಾತ್ರ ಹೋರಾಡುವ ಹೋರಾಟಕ್ಕೆ ಅರ್ಥವಿರುವುದಿಲ್ಲ. ಅದು ಕಪಟ ಪ್ರೇಮವಾಗಿದೆ.

*ನಮ್ಮ ನಡುವೆ ಅದೆಂತೆಂತಹ ಪ್ರವಾದಿ ﷺ ನಿಂದಕರಿದ್ದಾರೆಂದು ನೋಡಿ,* 👇🏽

👉🏾 ಒಬ್ಬ ಚಲಪಿ ಪ್ರವಾದಿ ﷺ ರನ್ನು ಹೇಳುತ್ತಾನೆ, ಪ್ರವಾದಿ ﷺ ರು *ಸಾಧಾರಣ* ಒಬ್ಬ ಮನುಷ್ಯ ಎಂದು.

👉🏾 ಮತ್ತೊಬ್ಬ ಚಲಪಿ ಪ್ರವಾದಿ ﷺ ರನ್ನು *ದಜ್ಜಾಲ್* ಎಂದು ಹಿಯಾಳಿಸುತ್ತಾನೆ.
(ನಹೂಝುಬಿಲ್ಲಾಹ್)

👉🏾  ಮತ್ತೊಬ್ಬ ಚಲಪಿ ಹೇಳುತ್ತಾನೆ, ಪ್ರವಾದಿ ﷺ ರ ತಂದೆ ತಾಯಿ *ಮುಶ್ರಿಕ್* ಆಗಿದ್ದಾರೆ, ಆದುದರಿಂದ ಅವರು ನರಕಕ್ಕೆ ಎಂದು.

👉🏾 ಇನ್ನೊಬ್ಬ ಚಲಪಿ ಪ್ರವಾದಿ  ﷺ ರನ್ನು *ಮಯಮಾಕ* ಎಂದು ಹಿಯಾಲಿಸುತ್ತಾನೆ.

👉🏾 ಮತ್ತೊಬ್ಬ ಚಲಪಿ ಭಾಷಣ ಮಾಡುತ್ತಾನೆ, ಸೌದಿಯ ಆಡಳಿತ ನಮ್ಮ ಕೈಗೆ ಸಿಕ್ಕಿದರೆ, ಎರಡನೇ ದಿನ ವಿಶ್ವ ಮುಸಲ್ಮಾನರ ಅಭಿಮಾನದ ಕೇಂದ್ರ ಮದೀನದ ಹಸಿರು ಖುಬ್ಬಾ ವನ್ನು ಹೊಡೆದು ಉರುಳಿಸುತ್ತೇವೆಂದು.

👉🏾 ಮತ್ತೊಬ್ಬ ಚಲಪಿ ಭಾಷಣ ಮಾಡುತ್ತಾನೆ, ಭಾರತದಲ್ಲಿ ಮುಸ್ಲಿಮರ ಶತ್ರುಗಳೆನಿಸಿಕೊಂಡಂತಹ ಬಿಜೆಪಿ ಯ ನಾಯಕರುಗಳಾದ ಅಡ್ವಾಣಿ, ಅಶೋಕ್ ಸಿಂಘಾಲ್, ವಾಜಪೇಯಿ ಇವರೆಲ್ಲರೂ ಪ್ರವಾದಿ ﷺ ರ ಕುಟುಂಬದವರಾಗಿದ್ದಾರೆ, ಇವರೆಲ್ಲರೂ ತಂಙಳ್ ಗಳಾಗಿದ್ದಾರೆ ಎಂದು. ‌

👉🏾 ಪ್ರವಾದಿ  ﷺ ರು ತಪ್ಪು ಮಾಡುವುದಿಲ್ಲ ಎಂದು ಅಲ್ಲಾಹನು ಖುರ್ಆನ್ ನಲ್ಲಿ ಹೇಳಿದ್ದಕ್ಕೆ ವಿರೋಧವಾಗಿ,  ಚಲಪಿ ಮಿತ್ರರ ಪತ್ರಿಕೆಯೊಂದರಲ್ಲಿ,  *ಪ್ರವಾದಿ ﷺ ರು ಒಂದು ಯುದ್ಧದಲ್ಲಿ ತೆಗೆದ ನಿರ್ಧಾರ ತಪ್ಪಾಗಿತ್ತು*  ಎಂದು ಬರೆಯಲಾಗಿತ್ತು.

☝🏽 ಈ ರೀತಿ ಪ್ರವಾದಿ ﷺ ರನ್ನು ಹೀನಾಯವಾಗಿ ನಿಂದಿಸುವ ನೂತನವಾದಿಗಳೊಂದಿಗೆ ಯಾಕೆ ಯಾರೂ ಹೋರಾಡಲು ಮುಂದೆ ಬರುತ್ತಿಲ್ಲ. ಇಂತಹ ಧಿಕ್ಕಾರಿಗಳೊಂದಿಗೆ ಹೋರಾಡುವ ಅನಿವಾರ್ಯತೆ ನಮಗಿಲ್ಲವೇ. ಇಂತಹವರ ಸಹವಾಸ, ಸ್ನೇಹ,  ಐಕ್ಯತೆ ಮಾಡುವವನ ಈಮಾನ್ ಪರಿಪೂರ್ಣವಾಗಲು ಸಾದ್ಯವಿದೆಯೇ.

ಒಬ್ಬ ವ್ಯಕ್ತಿಗೆ ಯಾರೋ ಹೊರಗಿನವರು ಹೊಡೆದರೆ ಅಥವಾ ನಿಂದಿಸಿದರೆ ಆ ವ್ಯಕ್ತಿ ಅದೆಷ್ಟು ನೊಂದುಕೊಳ್ಳುತ್ತಾರೋ, ಅದಕ್ಕಿಂತಲೂ ಹೆಚ್ಚು ನೊಂದುಕೊಳ್ಳುವುದು ತನ್ನದೇ ಸ್ವಂತ ಮಗ ಅಥವಾ ಸಹೋದರ ಹೊಡೆದಾಗ ಅಥವಾ ನಿಂದಿಸಿದಾಗ.
*ಅದೇರೀತಿಯಾಗಿದೆ, ಪ್ರವಾದಿ ﷺ ರನ್ನು ಮುಸ್ಲಿಮೇತರ ವ್ಯಕ್ತಿಗಳು ಅಪಹಾಸ್ಯ ಮಾಡುವುದಕ್ಕಿಂತಲೂ, ನಿಂದಿಸುವುದಕ್ಕಿಂತಲೂ ಹೆಚ್ಚು ಪ್ರವಾದಿ ﷺ ರು ನೊಂದುಕೊಳ್ಳುವುದು, ತನ್ನದೇ ಉಮ್ಮತ್ತಿ ಎಂದು ಕರೆಸಿಕೊಳ್ಳುವವರೇ ನಿಂದಿಸಿದಾಗ, ಧಿಕ್ಕರಿಸಿದಾಗ.*

ಪ್ರವಾದಿ ﷺರು,  ತನ್ನ ಮೇಲೆಯೇ ಕಲ್ಲೆಸೆದ,  ಕಸಕಡ್ಡಿಗಳನ್ನು ಎಸೆದ ಶತ್ರುಗಳ ಯೋಗಕ್ಷೇಮ ವಿಚಾರಿಸಲು ಹೋಗಿದ್ದಿದೆ. ಅವರ ಒಳಿತಿಗಾಗಿ ಪ್ರಾರ್ಥಿಸಿದ್ದಿದೆ. ಯಾಕೆಂದರೆ, ಅವರಿಗೆ ಪ್ರವಾದಿ ﷺ ರು ಯಾರೆಂದು ಗೊತ್ತಿರಲಿಲ್ಲ.
ಆದರೆ,  ತನ್ನ ಉಮ್ಮತ್ತಿ ಎಂದು ಹೇಳಿ ನಡೆಯುತ್ತಾ, ಮತ್ತೊಂದು ಕಡೆ ಆ ಪ್ರವಾದಿ  ﷺ ರು ತೋರಿಸಿಕೊಟ್ಟ ದಾರಿಯನ್ನು ಅಪವಿತ್ರಗೊಳಿಸುತ್ತಾ, ಪ್ರವಾದಿ  ﷺ ರ ಸುನ್ನತನ್ನು ವಿರೋಧಿಸಿ ನಡೆಯುವ ತನ್ನದೇ ಸಮುದಾಯದ ವಿರುದ್ಧ  ಪ್ರವಾದಿ ﷺ ರು ಕಠಿಣ ನಿಲುವನ್ನು ವ್ಯಕ್ತಪಡಿಸಿದ ಹಲವಾರು ಹದೀಸ್ ಗಳು ವರದಿಯಾಗಿದೆ. ಅಂತಹವರೊಂದಿಗೆ ಐಕ್ಯತೆ ಮಾಡಬಾರದು, ಅವರಿಗೆ ಸಲಾಂ ಹೇಳಬಾರದು, ಅವರೊಂದಿಗೆ ಪ್ರೀತಿ ಸ್ನೇಹ ವ್ಯಕ್ತಪಡಿಸಬಾರದೆಂದು ಇತ್ಯಾದಿ.

ಆದರೆ, ಇಂದು ಕೆಲವರು ನಾವು ಆ ಪ್ರವಾದಿ ﷺ ರ ಅನುಯಾಯಿಗಳು ಎಂದು ಹೇಳುತ್ತಾ, ಮತ್ತೊಂದು ಕಡೆ ಪ್ರವಾದಿ ﷺ ರ ಮನವನ್ನು ನೋಯಿಸಿದ (ಮೇಲೆ ಹೇಳಲಾದ ರೀತಿಯಲ್ಲಿ ನಿಂದಿಸಿದ) ಸಲಪಿ, ಜಮಾಹತ್ ಗಳೊಂದಿಗೆ ಐಕ್ಯ ಮಾಡುವ ಮೂಲಕ, ಪ್ರೀತಿ ಸ್ನೇಹ ಬೆಳೆಸುವ ಮೂಲಕ ಪ್ರವಾದಿ ﷺ ರಿಗೇ ಸಡ್ಡು ಹೊಡೆಯುತ್ತಿರುವುದು ಬಹಳ ಬೇಸರದ ಸಂಗತಿ.
*ಅತ್ಯಂತ ದೊಡ್ಡ ಪ್ರವಾದಿ ﷺ ನಿಂದಕರನ್ನು ತಮ್ಮ ಬತ್ತಲಿಕೆಯಲ್ಲಿ ಇಟ್ಟುಕೊಂಡು, ಹೊರಗಿನ ಶತ್ರುಗಳೊಂದಿಗೆ ಹೋರಾಡುವುದೆನ್ನುವುದು ನಾಟಕವಲ್ಲವೇ. ಅದು ಪ್ರವಾದಿ ﷺ ರ ಮೇಲಿನ ಕಪಟ ಪ್ರೇಮವಲ್ಲವೇ.*

ಪ್ರವಾದಿ ﷺ ರನ್ನು ನಿಂದಿಸುವ, ಸುನ್ನತನ್ನು ವಿರೋಧಿಸಿ ನಡೆಯುವ ಎಲ್ಲಾ ನೂತನವಾದಿಗಳೊಂದಿಗೆ  ಸಮನಾಂತರ ವೈರತ್ವ ಇಟ್ಟುಕೊಳ್ಳದ ಹೊರತು, ಐಕ್ಯತೆ ಮುರಿಯದ ಹೊರತು ಯಾರೂ ನೈಜ ಪ್ರವಾದಿ ﷺ ಪ್ರೇಮಿಯಾಗಲು ಖಂಡಿತಾ ಸಾದ್ಯವಿಲ್ಲ.
ಅಲ್ಲಾಹು ನಮ್ಮೆಲ್ಲರನ್ನು ಅವನ ನೈಜ ಪ್ರವಾದಿ ﷺ ಪ್ರೇಮಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment