Tuesday, September 24, 2019

*ಅಸೂಯೆ ಅಪಾಯಕಾರಿ*
🔰🔰🔰🔰🔰🔰🔰🔰
*********************
✍ _ಗಫೂರ್ ಬಾಯಾರ್_
➖➖➖➖➖➖➖➖

*#ಅಸೂಯೆಗೆ ಮದ್ದಿಲ್ಲ. ಉರಿಯುವ ಬೆಂಕಿಯು ಕಟ್ಟಿಗೆಯನ್ನು ಸುಟ್ಟು ಬೂದಿ ಮಾಡುವಂತೆ ಅಸೂಯೆಯು ಸತ್ಕರ್ಮಗಳನ್ನು ನಾಶಮಾಡುತ್ತದೆಂಬ ಸಂಗತಿ ಗೊತ್ತಿದ್ದೂ ಸಹ ತಿಳಿವಳಿಕೆ ಇರುವವರೇ ಇಂದು ಅಸೂಯೆಯ ದಾಸರಾಗಿ ಸಯ್ಯದ್ ಸಾದಾತುಗಳನ್ನು ಕುಹಕವಾಡುತ್ತಿರುವುದು ವಿಪರ್ಯಾಸ.*

ಸಯ್ಯದ್ ಕುಟುಂಬದ #ಬಾಯಾರ್ #ತಂಙಳರ ಮನೆಯನ್ನು ಕಂಡ ಕೆಲ ಅತೃಪ್ತ ಆತ್ಮಗಳಿಂತೂ ಅಸೂಯೆ ತಾಳಲಾರದೆ ಸೇೂಷಿಯಲ್ ಮೀಡಿಯಾಗಳ ಮೂಲಕ ವಿಷಕಾರುತ್ತಾ ತಮ್ಮ ತೀಟೆ ತೀರಿಕೊಳ್ಳುತ್ತಿರುವುದನ್ನು ಕಾಣುವಾಗ ಮನುಷ್ಯ ಮನಸ್ಸು ಅದೆಷ್ಟು ಮಲಿನವಾಗಿದೆಯೆಂಬುದರ ಅರಿವಾಗುತ್ತದೆ.

ಹೀಗೆ ಅಸೂಯೆಯಿಂದ ವಿಷಕಾರುತ್ತಾ ವಿಕೃತ ಆನಂದಪಡುತ್ತಿರುವ ಅಸೂಯೆಕೋರರ ಮನಸ್ಥಿತಿ ಹೇಗಿದೆಯೆಂದರೆ ಕಾರು, ಬಂಗಲೆ ಮತ್ತಿತರ ಐಷಾರಾಮಿ ಸುಖ ಸೌಕರ್ಯಗಳು ತಮಗೆ ಲಭಿಸಿದರೆ ಓಕೆ. ಆದರೆ ತಮ್ಮ ಹೊರತು ಇನ್ನಾರಿಗೂ ಅಲ್ಲಾಹನ ಅನುಗ್ರಹಗಳು ಲಭಿಸಬಾರದೆಂದು ಬಯಸುವ ಭಾವವಿದೆಯಲ್ಲ. ಅಂಥವರು ನಿಜವಾಗಿಯೂ ತಮ್ಮ ಮಾನಸಿಕ ಸ್ಥಿತಿಗತಿಗಳ ಬಗ್ಗೆ ಒಮ್ಮೆ ಅವಲೇೂಕನ ನಡೆಸಬೇಕು.

ಏಕೆಂದರೆ ಯಾರಿಗೆ ಏನು ಕೊಡಬೇಕೆಂದು ತೀರ್ಮಾನಿಸಿ ಕೊಡುವವನು ಅಲ್ಲಾಹನು. ಹಾಗಿರುವಾಗ ಅಲ್ಲಾಹನು ತನ್ನ ಔಧಾರ್ಯದಿಂದ ತನ್ನ ಸೃಷ್ಟಿಗೆ ಅನುಗ್ರಹವೊಂದನ್ನು ದಯಪಾಲಿಸಿದಾಗ ಕರುಬುತ್ತಾ ಕುಹಕವಾಡುವವರಿಗೆ ತಾವು ಕುಹಕವಾಡುತ್ತಿರುವುದು ಅಲ್ಲಾಹನ ತೀರ್ಮಾನವನ್ನು ಎಂಬ ಪರಿಜ್ಞಾನವೂ ಇಲ್ಲವಾಗಿರುವುದು ಖೇದಕರ.

ಐಹಿಕ ಸುಖಭೇೂಗಗಳ ದಾಸರಾಗಿ ಅಲ್ಲಾಹನನ್ನೇ ಮರೆತು ಬದುಕಬೇಡಿ ಎಂದು ಅಲ್ಲಾಹನು ಎಚ್ಚರಿಸಿದ್ದಾನೆಯೇ ವಿನಃ ಸರ್ವ ಸುಖ ಸೌಲಭ್ಯಗಳನ್ನೂ ತ್ಯಜಿಸಿ ವಿರಕ್ತಿಯಿಂದ ವಿರಾಗಿಯಾಗಿಯೇ ಬದುಕಬೇಕೆಂದು ಎಲ್ಲೂ ಹೇಳಿಲ್ಲ.

ಇಂದು ಬಾಯಾರ್ ತಂಙಳರ ಮನೆ ಮತ್ತು ಕಾರನ್ನು ನೇೂಡಿ ಉರಿಸಿಕೊಳ್ಳುತ್ತಿರುವವರು, ಶ್ರೀಮಂತರಾಗಿದ್ದೇ ವಿಲಾಯತ್ತಿನ ಪದವಿ ಅಲಂಕರಿಸಿದ ಮಹಾತ್ಮರೂ ಬಹಳಷ್ಟಿದ್ದಾರೆಂಬುದನ್ನು ಮನಗಾಣಬೇಕು.

ಕೊನೆಯದಾಗಿ ಹೇಳಬೇಕೆಂದರೆ ಇನ್ನೊಬ್ಬರ ಏಳಿಗೆಯನ್ನು ಸಹಿಸಲಾರದೆ ಅಸೂಯೆಯಿಂದ ಕರುಬುವ ಅತೃಪ್ತ ಮನಸ್ಸುಗಳು ಅಸೂಯೆಯನ್ನು ಕೈಬಿಟ್ಟು ಕಲ್ಮಷಗಳಿಂದ ರೇೂಗಿಷ್ಟವಾಗಿರುವ ತಮ್ಮ ಮನಸನ್ನು ತಿದ್ದಿಕೊಳ್ಳುವತ್ತ ಗಮನಹರಿಸಬೇಕು. ಇಲ್ಲದಿದ್ದರೆ ಮರದ ಹುಳು ಮರವನ್ನೇ ತಿಂದು ನಾಶಮಾಡುವಂತೆ ನಿಮ್ಮ ಅಸೂಯೆಯು ನಿಮ್ಮ ಸತ್ಕರ್ಮಗಳನ್ನೇ ನಾಶಮಾಡುತ್ತದೆ. ಮಾತ್ರವಲ್ಲ ಅಹ್ಲ್'ಬೈತಿನ ಹಸಿ ಮಾಂಸ ಹೆಚ್ಚು ತಿಂದರೆ ಕಲಿಮ ಹೇಳಲು ನಾಲಿಗೆಗೂ ಕಷ್ಟವಾದೀತು ಎಂಬ ಪರಿಜ್ಞಾನವಾದರೂ ಇರಲಿ.
💎💎💎💎💎💎💎💎

No comments:

Post a Comment