*SYS* ನ *ಇಸ್ವಾಬ ಟೀಂ*, *SSF* ನ *RIGHT Team* ಮತ್ತು *ಹಸನೈನಿ* ಸದಸ್ಯರು ನಿಜವಾಗಿಯೂ ಭಾಗ್ಯವಂತರು.!
ಯಾಕೆಂದರೆ,
ಇವರ ಇಂದಿನ ಡ್ಯೂಟಿ, ಪ್ರವಾದಿ ಮುಹಮ್ಮದ್ ﷺ ರ *ಮೀಲಾದ್ ರ‌್ಯಾಲಿ* ಯನ್ನು ಚಂದ ಮಾಡಿಕೊಡುವುದಾಗಿದೆ.!
ಇಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರಿನ *ಬಾವುಟ ಗುಡ್ಡೆ* ಯಿಂದ, *ನೆಹರೂ ಮೈದಾನ* ದ ವರಗೂ ನಮ್ಮ ಮುತ್ತು ಹಬೀಬ್ ﷺ ರ ಜನ್ಮದಿನವನ್ನು ಕೊಂಡಾಡುವ
*ಬೃಹತ್ ಹುಬ್ಬುರ್ರಸೂಲ್ ಮೀಲಾದ್ ರ‌್ಯಾಲಿ* ನಡೆಯಲಿದೆ.
ಇಂದಿನ ಕಾರ್ಯಕ್ರಮದ ಮೆರುಗೇ ಈ *ಬೃಹತ್ ರ‌್ಯಾಲಿ.*
ಅದೂ ಪ್ರವಾದಿ ﷺ ರ ಹೆಸರಲ್ಲಿ ನಡೆಯುತ್ತಿರುವ *ರ‌್ಯಾಲಿ.*
*ಜನಾಕರ್ಷಣೆಯಾದ ಈ ಬೃಹತ್ ರ‌್ಯಾಲಿಯನ್ನು ಚಂದ ಮಾಡಿ ಕೊಡುವವರೇ SYS ನ ಇಸ್ವಾಬ ಟೀಂ, SSF ನ ರೈಟೀಂ ಮತ್ತು ಹಸನೈನಿ ಸದಸ್ಯರು.*
ಅಲ್ಲಾಹನ ಹಬೀಬ್ ﷺ ರ *ಮೀಲಾದ್* ಕಾರ್ಯವನ್ನು ಚಂದ ಮಾಡಿಕೊಡುವುದಕ್ಕೆ ಬದಲಾಗಿ,
ಚಂದ ಮಾಡಿಕೊಡುವವರ ನಾಳೆಯ ಪರಲೋಕದಲ್ಲಿನ ಜೀವನವನ್ನು ಅಲ್ಲಾಹು ಚಂದ ಮಾಡಿಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ.
*ಅಂತಹ ಸೌಭಾಗ್ಯವಂತರಲ್ಲಿ ಅಲ್ಲಾಹು ನಮ್ಮನ್ನೆಲ್ಲರನ್ನೂ ಸೇರಿಸಲಿ, ಆಮೀನ್.*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment