ಪ್ರವಾದಿ ಮುಹಮ್ಮದ್ ﷺ ರನ್ನು ನಿಸ್ವಾರ್ಥವಾಗಿ ಪ್ರೀತಿಸುವ ಯಾವುದೇ ವ್ಯಕ್ತಿ, ನೂತನವಾದಿಗಳನ್ನು ಸೇರಿಸಿಯುಲ್ಲ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲಾರ.
ಯಾಕೆಂದರೆ, ಪ್ರವಾದಿ ﷺ ರ ಸುನ್ನತ್ ವಿರೋಧಿಗಳಾದ ನೂತನವಾದಿಗಳೊಂದಿಗೆ ಪ್ರೀತಿ, ಸ್ನೇಹ, ಸೌಹಾರ್ದ, ಸಹಕಾರ ಗಳನ್ನು ಮಾಡಬಾರದೆಂಬುದಾಗಿ ಖುರ್ಆನ್ ಮತ್ತು ಪ್ರವಾದಿ ﷺ ರ ಸಾಕಷ್ಟು ವಚನಗಳು ನಮಗೆ ಸ್ಪಷ್ಟ ತಾಕೀತು ಮಾಡುತ್ತದೆ.
ಯಾರೋ ಹೇಳಿದರಂತೆ, ನೂತನವಾದಿಗಳನ್ನು ಸೇರಿಸಿಯುಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸದವನು ಪ್ರವಾದಿ ﷺ ರ ನೈಜ ಪ್ರೇಮಿಯೇ ಅಲ್ಲ ಎಂದು.
ನೋಡಿ ಸಹೋದರರೇ,
ನಮಗೆ, ಪ್ರವಾದಿ ﷺ ರ ಪ್ರೇಮಿ ಹೌದೋ, ಅಲ್ಲವೋ ಎಂದು certificate ಕೊಡಬೇಕಾದವರು ಮನುಷ್ಯರಲ್ಲ. ಮನುಷ್ಯರ ಬಾಯಲ್ಲಿ "ಪ್ರವಾದಿ ﷺ ಪ್ರೇಮಿ" ಎಂದು ಹೇಳಿಸಿಕೊಳ್ಳಲು ಬೇಕಾಗಿ ನಾವು ಕಾರ್ಯಾಚರಿಸುವುದೂ ಇಲ್ಲ.
ಬದಲಾಗಿ, ನಮಗೆ "ಪ್ರವಾದಿ ﷺ ಪ್ರೇಮಿಗಳು" ಎಂದು certificate ಕೊಡಬೇಕಾದವರು ಅಲ್ಲಾಹು ಮತ್ತು ಅವನ ರಸೂಲ್ ﷺ ರಾಗಿದ್ದಾರೆ.
ಆದುದರಿಂದ, ನಾವು ಯಾರ ಕಣ್ಣಿಗೆ ಪ್ರವಾದಿ ﷺ ಪ್ರೇಮಿಗಳಲ್ಲ ಎಂದು ಕಂಡರೂ, ನಾವು ನಮ್ಮ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ
ಅಲ್ಲಾಹು ಮತ್ತು ಅವನ ಹಬೀಬ್, ಮುತ್ತು ಮುಹಮ್ಮದ್ ﷺ ರ ಕಣ್ಣಿಗೆ ಮಾತ್ರ ಧಿಕ್ಕಾರಿಗಳಾಗಿ ಕಾಣಬಾರದು.
ಅದಕ್ಕಾಗಿ, ಅಲ್ಲಾಹು ಮತ್ತು ಪ್ರವಾದಿ ಮುಹಮ್ಮದ್ ﷺ ರ ಮಾತನ್ನು ಧಿಕ್ಕರಿಸಿ, ಯಾರನ್ನೋ ತೃಪ್ತಿಪಡಿಸಲು ನೂತನವಾದಿಗಳೊಂದಿಗೆ ಸೇರಿಕೊಳ್ಳುವ ಪ್ರಶ್ನೆಯೇ ನಮ್ಮಲ್ಲಿಲ್ಲ.
*ಅಲ್ಲಾಹು ನಮ್ಮೆಲ್ಲರನ್ನು ನೈಜ ಪ್ರವಾದಿ ಮುಹಮ್ಮದ್ ﷺ ಪ್ರೇಮಿಗಳಲ್ಲಿ ಸೇರಿಸಲಿ, ಆಮೀನ್.*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment