Sunday, September 22, 2019

ಚಕ್ರವರ್ತಿ ಸೂಲಿಬೆಲೆ ಬದಲಾಗಿಲ್ಲವಂತೆ.!

ಅದರಲ್ಲೇನು ಆಶ್ಚರ್ಯ.!
ಚಕ್ರವರ್ತಿ ಸೂಲಿಬೆಲೆ SSF ಕಾರ್ಯಕ್ರಮಕ್ಕೆ ಬಂದದ್ದು ಕೇವಲ ಎರಡಕ್ಕೆ ಮಾತ್ರ. ಅಂದರೆ,
ಮುಸ್ಲಿಂ ಅಲ್ಲದ,  ಅಲ್ಲಾಹು ಮತ್ತು ಪ್ರವಾದಿ ﷺ ರ  ಮೇಲೆ ಕಿಂಚಿತ್ತೂ ವಿಶ್ವಾಸವಿಲ್ಲದ ಸೂಲಿಬೆಲೆ ಎನ್ನುವ ಅನ್ಯ ಧರ್ಮೀಯ ವ್ಯಕ್ತಿ, ಇಸ್ಲಾಮಿನ ಕೇವಲ ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಿದ ತಕ್ಷಣ ಬದಲಾಗಬೇಕೆಂದಾದರೆ,
ಇಸ್ಲಾಂ ಧರ್ಮದಲ್ಲೇ 30-40 ವರ್ಷಗಳ ಕಾಲ ಬದುಕಿ, ಅಲ್ಲಾಹು ಸೃಷ್ಟಿಕರ್ತ ನೆಂದೂ, ಪ್ರವಾದಿ ﷺ ಅವನ ರಸೂಲ್ ﷺ ಎಂದು ವಿಶ್ವಾಸವಿರಿಸಿ, ಖುರ್ಆನ್ ಅಲ್ಲಾಹನ ಗ್ರಂಥ ಎಂದೂ ಸ್ವೀಕರಿಸಿ, ಸ್ವರ್ಗ-ನರಕದ ಬಗ್ಗೆ ಗೊತ್ತಿದ್ದು, ಅಲ್ಲಾಹು ಕೊಟ್ಟ ಆರೋಗ್ಯ-ಅನುಗ್ರಹ ಗಳನ್ನೆಲ್ಲಾ ಬಳಸಿ, ಎಲ್ಲವನ್ನೂ ಮಾಡಿ,
ಅದೇ ಅಲ್ಲಾಹು ಮತ್ತು ಪ್ರವಾದಿ ﷺ ರ ಆಜ್ಞೆಯನ್ನೇ ಧಿಕ್ಕರಿಸಿ, ಉಲಮಾಗಳನ್ನು ತಂಙಳ್ ಗಳನ್ನು ನಿಂದಿಸುತ್ತಾ, ಅಹ್ಲುಸ್ಸುನ್ನತಿ ವಲ್ ಜಮಾಹತ್ ನ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರುತ್ತಾ, ನಡೆಯುವ ಇವರು ಇಷ್ಟು ವರ್ಷಗಳಾದರೂ ಬದಲಾಗಲಿಲ್ಲವಲ್ಲ.

ಮುಸ್ಲಿಂ ಆಗಿ, ಅಲ್ಲಾಹು ಮತ್ತು ಪ್ರವಾದಿ ﷺ ರನ್ನು ಅಂಗೀಕರಿಸಿ ನಡೆದೂ ಬದಲಾಗದ ಇವರಿಗೆ,
ಮುಸ್ಲಿಂ ಅಲ್ಲದ, ಒಂದೆರಡು ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಿದ್ದ ಚಕ್ರವರ್ತಿ ಸೂಲಿಬೆಲೆ ಯನ್ನು ಬದಲಾಗಿಲ್ಲ ಎಂದು ಟೀಕಿಸುವ ನೈತಿಕತೆ ಇದೆಯೇ?

No comments:

Post a Comment