*ಝಿಯಾರತ್ತ್ ಕೇಂದ್ರ*
👉🏻👉🏻👉🏻 7⃣4⃣
〰〰〰〰〰〰〰
*ಅಲ್ ಆಲಿಮುಲ್ ಅಲ್ಲಾಮ ಶೈಖುಲ್ ಆರಿಫಿನ್ ಕುಂಞಿ ಮರಕಾರ್ ಖಾದಿರಿ ಮುಸ್ಲಿಯಾರ್ (ರ)*
( ಅರಕಲ್ ಮೂಪ್ಪರ್ )
ಕುಮಾರನಲ್ಲೂರ್, ಒಟ್ಟಪ್ಪಾಲಂ ಪಾಲಕ್ಕಾಡ್.
🕌🕌🕌🕌🕌🕌🕌
✍ ಗಫೂರ್ ಬಾಯಾರ್
〰〰〰〰〰〰〰
ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪಾಲಮ್ ತಾಲೂಕಿನ ಕಪ್ಪೂರ್ ಪಂಚಾಯ್ತಿ ವ್ಯಾಪ್ತಿಗೊಳಪಟ್ಟ ಮಹಲ್ಲಾಗಿದೆ ಅರಕ್ಕಲ್ ಮಹಲ್.
ಸತ್ಯ ವಿಶ್ವಾಸಿಗಳನ್ನು ಕೈಬೀಸಿ ಕರೆಯುವ ಹೆಸರಾಂತ ಮಹಲ್'ಗಳಲ್ಲೊಂದಾಗಿರುವ ಅರಕ್ಕಲ್ ಮಹಲ್ಲಿಗೆ ಆಧ್ಯಾತ್ಮಿಕ ಸೌಂದರ್ಯದ ಮೆರಗು ನೀಡಿದವರು ಅಲ್ ಆಲಿಮುಲ್ ಅಲ್ಲಾಮಾ ಶೈಖುಲ್ ಆರಿಫೀನ್ ಕುಂಞಿ ಮರಕಾರ್ ಖಾದಿರಿ ಮುಸ್ಲಿಯಾರ್ (ರ).
ಅರಕ್ಕಲ್ ಮೂಪರ್ ಎಂದು ಅರಿಯಲ್ಪಡುತ್ತಿದ್ದ ಮಹಾನರು ಹೆಸರಾಂತ ವಿಧ್ವಾಂಸರೂ ಪ್ರಮುಖ ಸೂಫಿವರ್ಯರೂ ಆದ ಕಕ್ಕಿಡಿಪುರಂ ಅಬೂಬಕರ್ ಮುಸ್ಲಿಯಾರ್ (ರ) ಆಧ್ಯಾತ್ಮಿಕ ಗುರುವಾಗಿದ್ದರು.
ಆಧ್ಯಾತ್ಮಿಕ ಲೇೂಕದ ಕೀಲಿಕೈಯಂತಿದ್ದ ಮಹಾನರು ಪಡಿಞಾರಞಾಡಿ ಅರಕ್ಕಲ್ ಜುಮಾ ಮಸೀದಿಯಲ್ಲಿ ಖತೀಬಾಗಿದ್ದ ಸೂಫೀವರ್ಯ ಚುಂಗತ್ತ್ ಫರೀದ್ ಮುಸ್ಲಿಯಾರ್ (ಖ:ಸಿ) ಹಾಗೂ ಕೊಕೂರ್ ತೆಕ್ಕೆಕರ ಫಾತಿಮಾ ದಂಪತಿಗಳಿಗೆ ಹಿಜರಿ 1295ರಲ್ಲಿ ಜನಿಸಿದ ಮಗುವಿಗೆ "ಮುಲೈಕಾನ್" ಎಂದು ನಾಮಕರಣ ಮಾಡಿದರು.
ವಿಧ್ವಾಂಸರಾಗಿದ್ದ ತಂದೆಯ ಆಧ್ಯಾತ್ಮಿಕ ಕಾಳಜಿಯನ್ನು ಮೈಗೂಡಿಸಿಕೊಂಡು ಬೆಳೆದ ಮುಲೈಕಾನ್ ನಂತರ ಕುಂಞಿ ಮಲ್'ಕಾನ್ (ಕುಂಞಿ ಮರಕಾರ್) ಎಂಬ ಹೆಸರಿನಲ್ಲಿ ಪ್ರಸಿದ್ಧರಾಗಿ ಕೊನೆಗೆ "ಅರಕಲ್ ಮೂಪ್ಪರ್" ಎಂಬ ನಾಮದೊಂದಿಗೆ ಪ್ರಖ್ಯಾತರಾದರು.
ಗೌರವಾನ್ವಿತ ಗಣ್ಯರು ಎಂಬ ಪದಕ್ಕೆ ಮಲಯಾಳಂನಲ್ಲಿ ಮೂಪರ್ ಎನ್ನುತ್ತಾರೆ.
ಸೂಫಿವರ್ಯರಾಗಿದ್ದ ತಮ್ಮ ತಂದೆಯಿಂದಲೇ ಪ್ರಾಥಮಿಕ ವಿದ್ಯಾಭ್ಯಾಸದೊಂದಿಗೆ ಖುರ್ಆನ್ ಪಾರಾಯಣವನ್ನೂ ಅಭ್ಯಸಿಸಿದ ನಂತರ ಮಲಬಾರಿನ ಮಕ್ಕಾ ಎಂದೇ ಅರಿಯಲ್ಪಡುವ ಪೊನ್ನಾನಿ ದರ್ಸ್'ಗೆ ಸೇರಿ ಅಲ್ಲಿ ವೆಳುತ್ತೂರ್ ಕುಂಞಿತು ಮುಸ್ಲಿಯಾರ್ (ರ), ತಟ್ಟಂಗರ ಕುಟ್ಟಿಯಾಮ್ಮು ಮುಸ್ಲಿಯಾರ್ (ರ) ಮತ್ತು ಮುಫ್ತಿ ಅಬ್ದುರ್ರಹ್ಮಾನ್ ಎಂಬ ಕುಂಜಾಲ್ ಬಾವ ಮುಸ್ಲಿಯಾರ್ (ರ) ಮುಂತಾದ ಮಹಾತ್ಮರಿಂದ ವಿದ್ಯಾರ್ಜನೆ ಮಾಡಿ ಹಲವಾರು ವರ್ಷಗಳ ಕಾಲ ವ್ಯಾಸಂಗ ಮಾಡಿ ಸನದ್ (ಡಿಗ್ರಿ) ಪಡೆದರು.
ನಂತರ ಸೂಫಿಸಂನತ್ತ ಆಕರ್ಷಿತರಾದ ಮಹಾನರು ಖಾದಿರಿಯ್ಯ ಮತ್ತು ನಕ್ಷಬಂದಿ ತ್ವರೀಕತ್'ಗಳ ಗುರುವಾಗಿದ್ದರು.
ಯಹ್ಯಾ ಅಲ್ ಮಕ್ಕಿ (ರ) ಎಂಬ ಮಹಾತ್ಮರ ಶಿಷ್ಯರೂ, ವಿಧ್ವಾಂಸರೂ ಆಗಿದ್ದ ಪೊನ್ನಾನಿ ಪುತಿಯಕತ್ತ್ ಅಲ್ ಮುಫ್ತಿ ಮಖ್ದೂಮ್ ಮುಹಮ್ಮದ್ ಚೆರಿಯ ಬಾವ ಮುಸ್ಲಿಯಾರ್ (ರ) ರಿಂದ ಆಧ್ಯಾತ್ಮಿಕ ಮಾರ್ಗ ಸ್ವೀಕರಿಸಿ ಫತ್ವಾ ನೀಡುವ ಅರ್ಹತೆ ಪಡೆದರಲ್ಲದೆ ದರ್ಸ್ ಮುನ್ನಡೆಸುತ್ತಾ ಧಾರ್ಮಿಕ ಉನ್ನತಿಯೊಂದಿಗೆ ಆತ್ಮಜ್ಞಾನ ರಂಗದ ಆರಿಫುಗಳನ್ನು ಉನ್ನತರನ್ನಾಗಿಸುವ ಸಿದ್ದಿಯನ್ನೂ ಗಳಿಸಿದರು.
ಬಹುಮಾನ್ಯರಾದ ಓ. ಕೆ. ಉಸ್ತಾದ್ (ನ:ಮ) ಮತ್ತು ಆಖಿರ್ ಝೈನುದ್ದೀನ್ ಮಖ್ಡೂಮ್ (ರ) ರವರ ಪುತ್ರರಾದ ಕೊಂಗಣಮ್ ವೀಟ್ಟಿಲ್ ಇಬ್ರಾಹಿಂ ಕುಟ್ಟಿ ಮುಸ್ಲಿಯಾರ್ (ನ:ಮ), ಪುತಿಯಾಪ್ಪಿಳ ಅಬ್ದುರ್ರಹ್ಮಾನ್ ಮುಸ್ಲಿಯಾರ್ (ನ:ಮ) ಮುಂತಾದ ಸೂಫಿ ಸಂತರ ಆತ್ಮೀಯ ಸ್ನೇಹಿರಾಗಿದ್ದ ಅರಕ್ಕಲ್ ಮೂಪರ್ (ನ.ಮ)ರು, ಪೋರ್ಟ್ ಕೊಚ್ಚಿ ಕಲ್'ವತ್ತ್ ಜುಮಾ ಮಸೀದಿಯ ಅಂಗಣದಲ್ಲಿ ಇಂದು ಅಂತ್ಯ ವಿಶ್ರಮ ಪಡೆಯುತ್ತಿರುವ ಫರೀದ್ ಔಲಿಯಾ (ರ) ಮತ್ತು ಮಹಾನರಾದ ಆಲುವ ಅಬೂಬಕ್ಕರ್ ಮುಸ್ಲಿಯಾರ್ (ಖ.ಸಿ)ರಂತಹ ಮಹಾತ್ಮರನ್ನು ಸಂದರ್ಶಿಸಿ ಪ್ರಾರ್ಥಿಸಲು ಮನವಿ ಮಾಡುತ್ತಿದ್ದರು. ಅಷ್ಟೊಂದು ನಿಕಟವಾದ ಸ್ನೇಹ ಬಾಂಧವ್ಯ ಅವರದಾಗಿತ್ತು.
ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹೊಂದಿದ್ದ ಅರಕ್ಕಲ್ ಮೂಪರ್ (ಖ.ಸಿ) ರವರ ಮಕ್ಕಳ ಪೈಕಿ ಬಾಪುಟ್ಟಿ ಮುಸ್ಲಿಯಾರ್ ಮತ್ತು ಪರೀದ್ ಮುಸ್ಲಿಯಾರ್ ರವರು ಸಮಾಜದಲ್ಲಿ ಗುರುತಿಸಲ್ಪಟ್ಟ ವಿದ್ವಾಂಸರಾಗಿದ್ದಾರೆ.
1990ರಲ್ಲಿ ವಫಾತಾದ ಕಕ್ಕಿಡಿಪ್ಪುರಂ ಅಬೂಬಕ್ಕರ್ ವಲಿಯುಲ್ಲಾಹಿ (ರ), ವೆಳಿಯಂಗೋಡ್ ಖಾಝಿಯಾಗಿದ್ದ ಕುಂಞಿ ಮುಹಿಯದ್ದೀನ್ ಕುಟ್ಟಿ ಮುಸ್ಲಿಯಾರ್ (ಖ:ಸಿ), ಕಾರಕಾಡ್ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ), ಚುಂಗತ್ತ್ ವಲಿಯ ಕುಂಞಾಲಿ ಮುಸ್ಲಿಯಾರ್ (ಖ:ಸಿ), ಕಾಪ್ಪಾಡ್ ಬಾಪ್ಪು ಮುಸ್ಲಿಯಾರ್ (ಖ:ಸಿ), ಪಡಿನಂಜಾರಂಙಾಡಿ ಮಮ್ಮಿಕುಟ್ಟಿ ಮುಸ್ಲಿಯಾರ್ (ಖ:ಸಿ), ನಿಲಿಯಾಡ್ ಮಾಮು ಮುಸ್ಲಿಯಾರ್ (ಖ:ಸಿ), ಅರಕ್ಕಲ್ ಕುಂಞಿತು ಮುಸ್ಲಿಯಾರ್ (ಖ:ಸಿ), ಅಲ್ಲಾಮಾ ಮುಹಮ್ಮದ್ ಎಂಬ ಕುಂಞಿ ಬಾವ (ಖ:ಸಿ) ರಂತಹ ಅನೇಕ ಪ್ರಗಲ್ಬ ವಿದ್ವಾಂಸರು ಅರಕ್ಕಲ್ ಮೂಪರ್ (ಖ.ಸಿ)ರವರ ಪ್ರಮುಖ ಶಿಷ್ಯರಾಗಿದ್ದರು.
ವಿಲಾಯತ್ತಿನ ಮಹೋನ್ನತ ಸ್ಥಾನಕ್ಕೆ ತಲುಪಿದ್ದ ಮಹಾನರು ತೇೂರಿಕೆಯಾದೀತೇನೇೂ ಎಂಬ ಭಯದಿಂದ ತಮ್ಮ ಆಧ್ಯಾತ್ಮಿಕ ಸಿದ್ಧಿಯನ್ನು ರಹಸ್ಯವಾಗಿರಿಸಲು ಶಕ್ತಿಮೀರಿ ಶ್ರಮಿಸುತ್ತಿದ್ದರೂ ಸಹ ಇಮಾಂ ಗಝ್ಝಾಲಿ (ರ) ರವರಂತಿದ್ದ ಅನೇಕ ಮಹತ್ಮರುಗಳು ಮಹಾನರನ್ನು ಸಮೀಪಿಸಿ ಇಲ್'ಮುಲ್ ಕಲಾಮುಗಳನ್ನು ತಿಳಿಸುತ್ತಿದ್ದರು.
ಓ. ಕೆ. ಝೈನುದ್ದೀನ್ ಮುಸ್ಲಿಯಾರ್ (ನ.ಮ) ಮತ್ತು ಕಕ್ಕಿಡಿಪುರಂ ಅಬೂಬಕರ್ ಮುಸ್ಲಿಯಾರ್ (ಖ.ಸಿ)ರವರ ಆಧ್ಯಾತ್ಮಿಕ ಉನ್ನತಿಗೆ ದಾರಿ ದೀಪವಾಗಿದ್ದ ಮಹಾನರು ಎಲ್ಲಾ ಇಜಾಝತ್'ಗಳ ಆಧ್ಯಾತ್ಮಿಕ ಗುರುವಾಗಿದ್ದರು.
ಜೀವನಪರ್ಯಂತ ಸೂಕ್ಷ್ಮತೆ ಪಾಲಿಸುತ್ತಾ ಸದಾ ಇಬಾದತ್'ನಲ್ಲಿ ತಲ್ಲೀನರಾಗಿ ವಿಶ್ವಾಸಿ ಹೃದಯಿಗಳಿಗೆ ಸಾಂತ್ವಾನದ ಅಭಯ ಕೇಂದ್ರವಾಗಿದ್ದ ಆ ದಿವ್ಯ ತೇಜಸ್ಸು ಹಿಜರಿ 1369 ರಲ್ಲಿ ಅಂದರೆ ಕ್ರಿ.ಶ. 1949ರಲ್ಲಿ ವಫಾತಾದರು.
ಇಂದು ಅರಕ್ಕಲ್ ಮಹಲ್ಲಿನ ಅಂಗಣದಲ್ಲಿ ಗತ ಇತಿಹಾಸದ ವೈಭವದೊಂದಿಗೆ ತಲೆ ಎತ್ತಿ ನಿಂತಿರುವ ಮಖಾಮಿನಲ್ಲಿ ಅರಕ್ಕಲ್ ಮೂಪರ್ (ಖ.ಸಿ) ರವರು ಚಿರ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮಖಾಮಿನ ಪಕ್ಕದಲ್ಲೇ ಸುಮಾರು 800 ಕಿತಾಬುಗಳನ್ನು ಹೊಂದಿರುವ *"ಗನಿಮತ್ತು ಸ್ವಾಲಿಹಿನ್"* ಎಂಬ ಗ್ರಂಥಾಲಯವಿದ್ದು ಇಲ್ಮ್ ಕಲಿಯುವ ಆಸಕ್ತ ಮುತಅಲ್ಲಿಮರಿಗೆ ಅನುಕೂಲಕರವಾಗಿದೆ.
🚍 ದಾರಿ: ಕುಮಾರನಲ್ಲೂರ್, ಒಟ್ಟಪ್ಪಾಲಂ ಪಾಲಕ್ಕಾಡ್
➿➿➿➿➿➿➿
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)



No comments:
Post a Comment