Monday, September 23, 2019

ಝಿಯಾರತ್ತ್ ಕೇಂದ್ರ 64. ಪದಿ ಅಬ್ದುಲ್ ಖಾದಿರ್ ಮುಸ್ಲಿಯಾರ್ (ನ:ಮ ಓಚ್ಚಿರ)

*ಝಿಯಾರತ್ತ್ ಕೇಂದ್ರ​​​*
_ಸಮಸ್ತ ನಾಯಕರು = 12_
      ​6⃣4⃣
➖➖➖➖➖➖➖➖➖
*#ನೂತನವಾದಿಗಳ_ಸಿಂಹ_ಸ್ವಪ್ನ, "ಅಬುಲ್ ಫತ್'ಹ್" ಪದಿ
ಅಬ್ದುಲ್ ಖಾದಿರ್ ಮುಸ್ಲಿಯಾರ್ (ಖ:ಸಿ), ಕಟ್ಟಾನಂ, ಓಚ್ಚಿರ, ಕೊಲ್ಲಂ.*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************

ಸುನ್ನತ್ ಜಮಾಅತ್ತ್'ನ ಏಳಿಗೆಗಾಗಿ ಜೀವನ ಪರ್ಯಂತ ಶ್ರಮಿಸಿದ ಪ್ರಮುಖರೂ, ಅಗಾಧ ಪಾಂಡಿತ್ಯದ ವಿಧ್ವಾಂಸರೂ, ಸೂಫಿವರ್ಯರೂ, ನೂತನವಾಗಿಗಳ ವಿರುದ್ಧ ದಿಟ್ಟವಾಗಿ ಹೋರಾಡಿದ ನಾಯಕರೂ, ಸುನ್ನೀ ಸಮೂಹಕ್ಕೆ ಸಮರ್ಥವಾಗಿ ನಾಯಕ್ವ ನೀಡಿ ಸಮೂಹವನ್ನು ಒಗ್ಗಟ್ಟಿನಲ್ಲಿ ಮುನ್ನಡೆಸಿದ ಧೀರ ನಾಯಕರೂ ಅಗಿದ್ದಾರೆ 'ಪತಿ' ಅಬ್ದುಲ್ ಮುಸ್ಲಿಯಾರ್ (ಖ.ಸಿ).

ಪತಿ ಉಸ್ತಾದ್ (ನ.ಮ) ಎಂದೇ ಅರಿಯಲ್ಪಡುತ್ತಿದ್ದ ಮಹಾನರು 1919ರಲ್ಲಿ ಕಟ್ಟಾನಂ ಪ್ರದೇಶದ 'ಪತಿ'ಯಾರಕತ್ತ್ ಮನೆತನದ ಶಿಹಾಬುದ್ದೀನ್ ಸಾಹಿಬ್'ರವರ ಮಗನಾಗಿ ಜನಿಸಿದರು.

ಓಚ್ಚಿರ ಮಸೀದಿಯಲ್ಲಿ ವಯಕಾಡನ್ ಮುಹಮ್ಮದ್ ಮುಸ್ಲಿಯಾರ್ (ನ.ಮ) ರವರ ದರ್ಸ್'ನಲ್ಲಿ ಶಿಕ್ಷಣ ಪಡೆದ ಪತಿ ಅಬ್ದುಲ್ ಖಾದಿರ್ ಮುಸ್ಲಿಯಾರ್ (ನ.ಮ)ರವರ ಅಸಾಮಾನ್ಯ ಪಾಂಡಿತ್ಯವನ್ನು ಕಂಡ ವಯಕಾಡನ್ ಮುಹಮ್ಮದ್ ಮುಸ್ಲಿಯಾರರು (ಖ:ಸಿ) ತಮ್ಮ ಆ ಪ್ರಿಯ ಶಿಷ್ಯನಿಗೆ ತಮ್ಮ ಪುತ್ರಿಯನ್ನು ವಿವಾಹ ಮಾಡಿ ಕೊಟ್ಟರು.

ಉತ್ತಮ ವಾಗ್ಮಿಯೂ ಬರಹಗಾರರೂ ಆಗಿದ್ದ ಮಹಾನರು ವಹ್ಹಾಬಿಗಳನ್ನು ಬಿರುಗಾಳಿಯಂತೆ ಬೆನ್ನಟ್ಟಿ ಅವರ ಪೊಳ್ಳುತನವನ್ನು ಜನತೆಯ ಮುಂದೆ ತೆರೆದಿಡುತ್ತಿದ್ದರು.

ಅಂತೆಯೇ ಕೊಂಡೊಟ್ಟಿಯ ನೆಡಿಯಿರುಪ್ಪಿಲ್ ಎಂಬಲ್ಲಿ ವಹ್ಹಾಬಿಗಳ ದುರ್ವಾಖ್ಯಾನ ಮಿತಿ ಮೀರಿದ್ದರಿಂದ ಪರವಣ್ಣ ಮುಹಿಯುದ್ದೀನ್ ಮುಸ್ಲಿಯಾರ್ (ನ.ಮ) ರವರು ಪತಿ ಉಸ್ತಾದರಿಗೆ (ಖ:ಸಿ) ತಂತಿ ಸಂದೇಶ ಕಳುಹಿಸಿ ಆಹ್ವಾನಿಸಿದಾಗ, *1949ರ ಮಾರ್ಚ್ 30 ರಂದು ನೆಡಿಯಿರುಪ್ಪಿಲ್'ಗೆ ತೆರಳಿದ ಪತಿ ಉಸ್ತಾದರು (ಖ:ಸಿ) ಅಲವಿ ಮೌಲವಿ  ಎಂಬ ವಹ್ಹಾಬಿ ವ್ಯಕ್ತಿ ಮುಹಿಯುದ್ದೀನ್ ಮಾಲೆ ಶಿರ್ಕಾಗಿದೆ ಎಂದು ವಾದಿಸುತ್ತಿದ್ದುದನ್ನು ಖಂಡಿಸಿ ಇಸ್ಲಾಮಿನ ಚತುರ್'ಪ್ರಮಾಣಗಳನ್ನು ಮುಂದಿಟ್ಟು ಆಧಾರ ಸಮೇತ ದಿಟ್ಟತನದಿಂದ ಉತ್ತರಿಸಿದಾಗ ಕಂಗೆಟ್ಟ ಮೌಲವಿ, ಪತಿ ಉಸ್ತಾದರು (ಖ:ಸಿ) ಹೇಳುವ ರೀತಿಯಲ್ಲಿ ಮುಹಿಯುದ್ದೀನ್ ಮಾಲೆಯಲ್ಲಿಯಿದ್ದರೆ ನಮ್ಮಿಂದ ಯಾವ ತಕರಾರೂ ಇಲ್ಲವೆಂದು ಸಮ್ಮತಿಸಿ ಅಲ್ಲಿಂದ ಪಲಾಯನ ಮಾಡಿದರು.*

ತಮ್ಮ ಅಗಾಧ ಪಾಂಡಿತ್ಯದಿಂದ ವಹ್ಹಾಬಿಗಳ ದುರ್ವ್ಯಾಖ್ಯಾನಗಳನ್ನು ಬಯಲಿಗೆಳೆಯುತ್ತಾ ವಹ್ಹಾಬಿಗಳ ಪಾಲಿನ ಸಿಂಹಸ್ವಪ್ನವಾಗಿದ್ದ ಪತಿ ಉಸ್ತಾದರು (ಖ:ಸಿ) ಒಮ್ಮೆ ಕಣ್ಣೂರು ಭಾಗಕ್ಕೆ ಯಾತ್ರೆ ಹೇೂಗಿದ್ದಾಗ ದಾರಿ ಮಧ್ಯೆ ವಹ್ಹಾಬಿ ನೇತಾರ ಅಬ್ದುಲ್ ಸಲಾಂ ಮೌಲವಿಯ ಭಾಷಣ ಕೇಳಿ ಹತ್ತಿರ ಹೇೂದರು ಉಸ್ತಾದರನ್ನು ಕಂಡ ಕೂಡಲೇ ಕಾರ್ಯಕ್ರಮ ನಿಲ್ಲಿಸಲಾಗಿದೆಯೆಂದು ಘೇೂಷಿಸಿ ಮೌಲವಿ ಅಲ್ಲಿಂದ ಕಾಲ್ಕಿತ್ತಿದ್ದರು.

ವಹ್ಹಾಬಿಗಳ ಪೊಳ್ಳು ವಾದವನ್ನು ಕಂಡಾಗಲೆಲ್ಲ ದಿಟ್ಟತನದಿಂದ ಉತ್ತರಿಸಿ ಮೌಲವಿಗಳ ಸೊಲ್ಲಡಗಿಸುತ್ತಾ ಸುನ್ನತ್ ಜಮಾಅತ್ತಿಗೆ ಸಮರ್ಥ ನಾಯಕತ್ವ ನೀಡಿದ ಕಾರಣದಿಂದ ಮಹಾನರಿಗೆ ಸುನ್ನತ್ ಜಮಾಅತಿನ ಪಂಡಿತ ವಲಯವು *"ಅಬ್ದುಲ್ ಫತ್ಹ್"* ಎಂಬ ಗೌರವನಾಮ ನೀಡಿ ಸತ್ಕರಿಸಿತ್ತು.

ಒಮ್ಮೆ ತಿರುರಂಙಾಡಿಯ ನೂರುಲ್ ಹುದಾ ಸ್ಥಾಪನೆಯ ವಾರ್ಷಿಕ ಸಮ್ಮೇಳನದಲ್ಲಿ, ಅಂದಿನ ಪೌರ ಪ್ರಮುಖರಾದ ಖಾನ್ ಬಹಾದೂರ್ ಪಿ.ಎಂ. ಅಟ್ಟಕೋಯ ತಂಗಳ್, "ಧಾರ್ಮಿಕ ವಿದ್ಯೆಗಿಂತ ಮುಸ್ಲಿಮರಿಗೆ ಲೌಕಿಕ ವಿದ್ಯೆ ಮುಖ್ಯವೆಂದೂ, ಈ ಬಗ್ಗೆ ಇಮಾಂ ಗಝ್ಝಾಲಿ (ರ) ರವರು ತಮ್ಮ ಇಹ್ಯಾಉಲೂಮಿದ್ದೀನ್'ನಲ್ಲಿ ವಿವರಿಸಿದ್ದಾರೆಂದೂ ಅದಕ್ಕಾಗಿ ಫರೂಖ್ ಎಂಬ ಕಾಲೇಜು ಸ್ಥಾಪಿಸಬೇಕಾದ ಅಗತ್ಯವಿದೆ"ಯೆಂದು ಹೇಳಿದರು. ( ಲೌಕಿಕ ವಿದ್ಯೆಯ ಅಗತ್ಯತೆಯನ್ನು ಸುನ್ನಿಗಳು ಎಂದೂ ಎಲ್ಲೂ ಅಲ್ಲಗಳೆಯದಿದ್ದರೂ ಇಸ್ಲಾಮಿಕ್ ಪಾರಂಪರ್ಯಕ್ಕನುಗುಣವಾದ ಧಾರ್ಮಿಕ ಜ್ಞಾನವಿಲ್ಲದಿದ್ದರೆ ಭೌತಿಕ ವಿದ್ಯೆ ಗುಣಕ್ಕಿಂತಲೂ ದೋಷಕರವಾದೀತು )

ಪೌರ ಪ್ರಮುಖರಾದ ಖಾನ್ ಬಹಾದೂರ್'ರ ಮಾತುಗಳನ್ನು ಕೇಳಿದ ಸಭಿಕರು ಅವಾಕ್ಕಾದರು.
ಕಾರಣ ಆ ಕಾಲದಲ್ಲಿ ಬಹಾದೂರ್'ರಂತವರ ಮಾತಿಗೆ ಎದುರಾಡುವವರೇ ಇರಲಿಲ್ಲ.
ಆದರೆ ಪತಿ ಉಸ್ತಾದ್ (ನ:ಮ)ರಿಗೆ ಈ ಮಾತುಗಳನ್ನು ಕೇಳಿ ಸಹಿಸಲಾಗದೆ ತಕ್ಷಣ ಎದ್ದು ನಿಂತು ಹೇಳಿದರು.

*"ಕಾರ್ಯಕ್ರಮ ನಿಗದಿಪಡಿಸಿದಂತೆ ಈಗ ನಡೆಯಬೇಕಿದ್ದುದು ಅಧ್ಯಕ್ಷೀಯ ಭಾಷಣ. ಆದರೆ ಖಾನ್ ಬಹಾದೂರರ ಮಾತಿನಿಂದ ಸಮಾಜಕ್ಕೆ ತಪ್ಪು ಸಂದೇಶ ಹೇೂಗಬಹುದಾದ ಸಾಧ್ಯತೆಯಿರುವುದರಿಂದ ಕಣ್ಣಾರೆ ಕಂಡೂ ಅದನ್ನು ಖಂಡಿಸದಿರಲು ನನ್ನಿಂದ ಸಾಧ್ಯವಿಲ್ಲ."*
ಎನ್ನುತ್ತಾ ಮುಂದುವರಿದು ಮುಸ್ಲಿಂ ಜನ ಸಮೂಹಕ್ಕೆ ದೀನೀ ಇಲ್ಮಿನ ಅಗತ್ಯತೆ ಮತ್ತು ಅನಿವಾರ್ಯತೆಯ ಬಗ್ಗೆ ವಿವರವಾಗಿ ವಿವರಿಸುತ್ತಾ ಖಾನ್ ಬಹಾದೂರರ ಮಾತಿಗೆ ಖಡಕ್ಕಾದ ಉತ್ತರ ಕೊಟ್ಟರು. ಪತಿ ಉಸ್ತಾದ್ (ನ.ಮ) ರವರ ಪ್ರಭಾಷಣದಿಂದ ಇರಿಸು ಮುರಿಸಿಗೊಳಗಾದ ಖಾನ್'ರವರು,
ನಂತರ ಪತಿ ಉಸ್ತಾದರನ್ನು (ನ:ಮ) ಮಂಬರಂಗೆ ಕರೆಸಿ
ಕಠಿಣ ಶಬ್ಧಗಳಲ್ಲಿ ಮಹಾನರನ್ನು ಆಕ್ಷೇಪಿಸಿದರು.

ಎಲ್ಲವನ್ನೂ ಶ್ರದ್ಧೆಯಿಂದ ಕೇಳಿಸಿಕೊಂಡ ಮಹಾನರು ಬಹು ವಿನಯದಿಂದಲೇ.. *"ನಿಮ್ಮ ಉಪ್ಪಾಪರವರು ಪಾಲಿಸಿದ ದೀನನ್ನು ಕಲಿಸುದಾಗಿದೆ ನಮ್ಮಂತವರ ಕೆಲಸ.* *ಅದನ್ನು ತಡೆಯುವ ವಿಷಯ ಹಾಗಿರಲಿ, ಈ ನಿಟ್ಟಿನಲ್ಲಿ ನಾವು ಮುಂದಿಟ್ಟ ಒಂದು ಹೆಜ್ಜೆಯನ್ನೂ ಕೂಡ ಹಿಂದಿಡಲಾರೆವು. ಇದು ಮಂಬರಂದ ಉಪ್ಪಾಪನವರಿಂದ ಬಳುವಳಿಯಾಗಿ ನಮಗೆ ಲಭಿಸಿದ ಕರ್ತವ್ಯವಾಗಿದೆ ಎಂದು ಖಾರವಾಗಿ ಪ್ರತಿಕ್ರಿಸಿದ್ದಲ್ಲದೆ ನಿಮ್ಮ ಹಣ ಮತ್ತು ಅಧಿಕಾರ ಬಳಸಿ ನಿಮಗಿಷ್ಟ ಬಂದಂತೆ ನೀವು ಮುಂದುವರಿಯಬಹುದು ಎಂದರು.* ಪತಿ ಉಸ್ತಾದ್(ನ.ಮ)ರವರ ವಾಗ್ಝರಿ ಮತ್ತು ದಿಟ್ಟ ನಿರ್ಧಾರವನ್ನು ಕಂಡ ಬಹಾದೂರ್ ಖಾನ್,

*"ಮುಸ್ಲಿಯಾರರೇ..., ನಾನು ತಮಾಷೆಗೆ ಹಾಗಂದೆ ದಯವಿಟ್ಟು ಕ್ಷಮಿಸಿ" ಎನ್ನುತ್ತಾ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು.*

ನಂತರ ಉಸ್ತಾದರಿಗಾಗಿ ದೊಡ್ಡ ಸತ್ಕಾರ ಕೂಟವನ್ನೂ ಖಾನ್ ಬಹಾದೂರ್ ಏರ್ಪಡಿಸಿದ್ದರು. ಅಷ್ಟೇ ಅಲ್ಲ, ಪೊಲೀಸ್ ಠಾಣೆ ಹಾಗೂ ಕೋರ್ಟಿನಲ್ಲೂ ಸತ್ಯಸಂಧತೆಯಿಂದ ಸುನ್ನೀ ಆಶಯವನ್ನು ಬುದ್ಧಿಪರವಾಗಿಯೂ, ಪ್ರಾಮಾಣಿಕವಾಗಿಯೂ ಸಮರ್ಥಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಹೀಗೆ ಸುನ್ನತ್ ಜಮಾಅತಿನ ಆಶಯ ಆದರ್ಶಗಳಿಗೆ ಸಂಬಂಧಿಸಿದ ವಿಷಯದಲ್ಲಿ ಎಂದೂ ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಯಾವುದೇ ಆಮಿಷಕ್ಕೂ ಒಳಗಾಗದೆ ಸುನ್ನತ್ ಜಮಾಅತಿನ ತತ್ವ ಸಿದ್ಧಾಂತದಲ್ಲಿ ದೃಢವಾಗಿ ನಿಂತು ಸುನ್ನೀ ಸಮೂಹಕ್ಕೆ ದಿಟ್ಟ ನಾಯಕತ್ವ ನೀಡಿದ ಆ ಮಹಾನುಭಾವರು 1959 ಎಪ್ರಿಲ್ 30 ( 1378 ಶಅಬಾನ್ ) ಕ್ಕೆ ಗುರುವಾರ ವಫಾತಾದರು. ಶುಕ್ರವಾರ ಜುಮುಅದ ನಂತರ ಪತಿ ಉಸ್ತಾದ್ (ನ.ಮ)ರ ಗುರುವಾಗಿದ್ದ ವಾಯಕಾಡನ್ ಮುಹಮ್ಮದ್ ಮುಸ್ಲಿಯಾರ್ (ನ:ಮ)ರ ನೇತೃತ್ವದಲ್ಲಿ ಮಹಾನರ ಅಂತ್ಯಕ್ರಿಯೆ ನೆರೆವೇರಿಸಲಾಯಿತು.

ಓಚ್ಚಿರ ಮಸೀದಿಯ ಪಕ್ಕದಲ್ಲಿ ಮಹಾನರು ಅಂತ್ಯವಿಶ್ರಮ ಪಡೆಯುತ್ತಿದ್ದಾರೆ. ಅವರ ಮಕ್ಬರದ
ಪಕ್ಕದಲ್ಲೇ ಮಹಾನರ ಉಸ್ತಾದರಾಗಿದ್ದ ವಾಯಕಾಡನ್ ಮುಹಮ್ಮದ್ ಮುಸ್ಲಿಯಾರ್ (ನ:ಮ) ರವರ ಮಕ್ಬರವೂ ಇದೆ.

ದಾರಿ: ಓಚ್ಚಿರ, ಕೊಲ್ಲಂ ಜಿಲ್ಲೆ.
☄☄☄☄☄☄☄☄☄

No comments:

Post a Comment