*ಝಿಯಾರತ್ತ್ ಕೇಂದ್ರ*
👉 6⃣7⃣
*ಭಾಗ= 01*
➖➖➖➖➖➖➖➖➖
*ಹಯತ್ತುಲ್ ಔಲಿಯಾ ಸಯ್ಯದುನಾ ದಾವುದುಲ್ ಹಕೀಮ್ (ರ) ಮುತ್ತು ಪೇಟೆ, ತಂಜಾವೂರು ತಮಿಳುನಾಡು*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
***********************
ಭಾರತದ ನೆಲದಲ್ಲಿ ಸಯ್ಯದುನಾ ಲುಕ್ಮಾನುಲ್ ಹಕೀಂ (ರ)ರವರ ಪ್ರಮುಖ ಶಿಷ್ಯ
ತಮಿಳುನಾಡಿನ ತಂಜಾವೂರ್ ಜಿಲ್ಲೆಯ ಮುತ್ತುಪೇಟೆಯ ಬಗ್ಗೆ ಹೆಸರು ಕೇಳದವರು ವಿರಳ ಎನ್ನಬಹುದು.
ಮುತ್ತುಪೇಟೆಯ ಎಂದಾಕ್ಷಣ ತಟ್ಟನೆ ನೆನಪಿಗೆ ಬರುವ ಹೆಸರು ಅಲ್ಲಾಹನ ಇಷ್ಟದಾಸರಾದ ಸಯ್ಯದುನಾ ದಾವುದುಲ್ ಹಕೀಮ್ (ರ) ರವರದು.
ನಮ್ಮಲ್ಲಿ ಅನೇಕರು ಝಿಯಾರತ್'ಗೆಂದು ಮುತ್ತುಪೇಟೆಗೆ ತೆರಳುವುದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವಾದರೂ ಆ ಮಹಾನರ ಬಗ್ಗೆ ಅರಿತವರು ವಿರಳ ಎನಿಸುತ್ತದೆ.
ಸಯ್ಯದುನಾ ದಾವುದುಲ್ ಹಕೀಮ್ (ರ)ರವರ ಬಗೆ ಹೆಚ್ಚಿನ ವಿವರ ಲಭ್ಯವಿಲ್ಲವಾದರೂ ಈ ಇಡೀ ಲೇೂಕದ ಜನಸಂಖ್ಯೆ ಬಹು ವಿರಳವಾಗಿದ್ದ ಕಾಲಘಟ್ಟದಲ್ಲಿ ಅಂದರೆ ಅಲ್ಲಾಹನ ಅಂಬಿಯಾ ಮುರ್ಸಲೀನರಲ್ಲೊಬ್ಬರಾದ ಸಯ್ಯದುನಾ ಮೂಸ ನೆಬಿ (ಅ) ರ ಉಮ್ಮತ್ತ್ (ಅನುಯಾಯಿ) ಆಗಿದ್ದರು.
ತೌರಾತ್ ಗ್ರಂಥ ಕಂಠಪಾಠ ಮಾಡಿ ಹಾಫಿಲ್ ಆಗಿದ್ದ ಮಹಾನರು ಇಹಪರಗಳ ರಹಸ್ಯಗಳನ್ನೊಳಗೊಂಡ ಅಲ್ಲಾಹನ ಪರಿಶುದ್ಧ ವಚನವಾದ ಕುರ್ಆನಿನಲ್ಲಿ ಅದ್ಯಾಯವೊಂದರ ಮೂಲಕ ಸೃಷ್ಟಿಕರ್ತನಾದ ಅಲ್ಲಾಹನೇ ವಿವರಿಸಿದ ಮಹಾನರಾದ ಸಯ್ಯದುನಾ ಲುಕ್ಮಾನುಲ್ ಹಕೀಮ್ (ರ)ರವರ ಪ್ರಮುಖ ಶಿಷ್ಯರಾಗಿ ವೈದ್ಯಶಾಸ್ತ್ರದಲ್ಲಿ ಪ್ರಾವಿಣ್ಯತೆ ಗಳಿಸಿದವರಾಗಿದ್ದರು.
ನಂತರ ಸಯ್ಯದುನಾ ಲುಕ್ಮಾನುಲ್ ಹಕೀಮ್ (ರ)ರವರ ನಿರ್ದೇಶನದ ಮೇರೆಗೆ ಸುಮಾರು ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಆಗಮಿಸಿದ ಮಹಾನರಾಗಿದ್ದಾರೆ ಸಯ್ಯದುನಾ ದಾವುದುಲ್ ಹಕೀಮ್ (ರ) ಮುತ್ತುಪೇಟೆ.
ಜಗತ್ತಿನ ಪ್ರಪ್ರಥಮ ವೈದ್ಯರಾದ ಸಯ್ಯದುನಾ ಲುಕ್ಮಾನುಲ್ ಹಕೀಮ್ (ರ)ರವರು ಅಬ್'ಸೀನಿಯಾ (ಇಂದಿನ ಇಥಿಯೇೂಪಿಯಾ ದೇಶ) ದವರಾಗಿದ್ದುದರಿಂದ ಅವರ ಪ್ರಮುಖ ಶಿಷ್ಯರಾಗಿದ್ದ ಸಯ್ಯದುನಾ ದಾವುದುಲ್ ಹಕೀಂ (ರ)ರವರೂ ಇಥಿಯೇೂಪಿಯಾ ಮೂಲದವರಾಗಿರಬಹುದು.
ಇಂದಿನ ಮುತ್ತುಪೇಟೆ ಪಟ್ಟಣವು ಪುರಾತನ ಕಾಲದಲ್ಲಿ ಮುತ್ತುಪೆಟ್ಟ ಗ್ರಾಮವಾಗಿತ್ತು.
*ರೈತರೊಬ್ಬರು ಕೃಷಿಗಾಗಿ ನೆಲವನ್ನು ನೇಗಿಲಿನಿಂದ ಊಳುತ್ತಿರುವಾಗ ನೇಗಿಲಿಗೆ ಒಂದು ಕಲ್ಲು ತಾಗಿತು. ಆಗ ಆ ರೈತ ಆ ಕಲ್ಲನ್ನು ಅಲ್ಲಿಂದ ಕಿತ್ತು ಪಕ್ಕಕ್ಕೆ ಸರಿಸಿದಾಗ ಅದ್ಭುತವೆಂಬಂತೆ ಆ ಕಲ್ಲಿದ್ದ ಸ್ಥಳದಿಂದ ರಕ್ತ ಬರಲಾರಂಭಿಸಿತು.*
ಆಗ ಆ ರೈತ ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದೊಂದು ಪುರಾತನ ಖಬರಿನಂತೆ ಕಂಡಿತು. ತಕ್ಷಣ ಆ ರೈತನ ಕಣ್ಣೇ ಕಾಣದಂತಾಯಿತು. ಇದರಿಂದ ಗಾಬರಿಯಾದ ರೈತ ಅಲ್ಲೇ ಕುಳಿತು ಕಂಬನಿಗರೆಯುತ್ತಾ ತಾನಿನ್ನು ಈ ನೆಲದಲ್ಲಿ ಕೃಷಿ ಮಾಡದೆ ಗೌರವದಿಂದ ಈ ಸ್ಥಳವನ್ನು ಸಂರಕ್ಷಿಸುವುದಾಗಿ ಶಪಥ ಮಾಡುತ್ತಾ ತಡಕಾಡಿ ಕಿತ್ತಿದ್ದ ಆ ಮೀಝಾನ್ ಕಲ್ಲನ್ನು ತಂದು ಯಥಾ ಸ್ಥಾನದಲ್ಲಿಡುತ್ತಿದ್ದಂತೆ ಆ ರೈತನಿಗೆ ದೃಷ್ಟಿ ಮರಳಿ ಲಭಿಸಿತು. ಇದರಿಂದ ಆ ರೈತನಿಗೆ ಇದೊಂದು ಮಹಾತ್ಮರ ಖಬರೆನ್ನುವುದು ಖಚಿತವಾಯಿತು.
ಅಂದು ರಾತ್ರಿ ಮಲಗಿರುವಾಗ ಆ ರೈತನಿಗೊಂದು ಕನಸು ಬಿತ್ತು. ಕನಸಿನಲ್ಲಿ ಆ ರೈತನನ್ನು ಸಂದರ್ಶಿಸಿದ ಮಹಾತ್ಮರು, ತಾವು ಲುಕ್ಮಾನುಲ್ ಹಕೀಮ್ (ರ)ರವರ ಶಿಷ್ಯರಾಗಿದ್ದು ಮೂಸಾ ನೆಬಿ (ಅ)ರವರ ಸಮುದಾಯದವರೆಂದೂ ಇದು ಅಂತಿಮ ಪ್ರವಾದಿ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಕಾಲಘಟ್ಟವಾಗಿರುದರಿಂದ ತೌರಾತ್ ಮೂಲಕ ಮುಹಮ್ಮದ್ ನೆಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಬಗ್ಗೆ ತಿಳಿದಿರುವುದಾಗಿಯೂ ತಮ್ಮ ಖಬರಿನ ಸಮೀಪ ಮುಸ್ಲಿಮರು ವಾಸಿಸಲು ಅನುವು ಮಾಡಿಕೊಡಬೇಕೆಂದು ನಿರ್ದೇಶನ ನೀಡಿದರು.
ಈ ವಿಷಯ ಕಾಡ್ಗಿಚ್ಚಿನಂತೆ ಹರಡಿದ ಕಾರಣ ಸುತ್ತಮುತ್ತಲ ಜನತೆ ತಮ್ಮ ವಾಸಸ್ಥಳವನ್ನು ಅಲ್ಲಿಗೆ ಸ್ಥಳಾಂತರಿಸಿದ್ದರಿಂದ ಕೆಲವೇ ತಿಂಗಳಲ್ಲಿ ಅದೊಂದು ಪಟ್ಟಣವಾಗಿ ಬದಲಾಯಿತು.
ಸಯ್ಯದುನಾ ಲುಕ್ಮಾನುಲ್ ಹಕೀಮ್ (ರ)ರವರಿಗೆ ಅಸಂಖ್ಯ ಶಿಷ್ಯರಿದ್ದರು. ಅವರಲ್ಲಿ ಪ್ರಮುಖ ಶಿಷ್ಯರಾಗಿದ್ದ ಮಹಾನರು ಇಬ್ಬರು. ಮೊದಲ ಶಿಷ್ಯರೇ ಸಯ್ಯದುನಾ ದಾವುದುಲ್ ಹಕೀಂ (ರ) ಮುತ್ತುಪೇಟೆ. ಎರಡನೆ ಶಿಷ್ಯರ ಹೆಸರು ಸಯ್ಯದುನಾ ಮೂಸಲ್ ಹಕೀಂ (ರ) ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಹಕೀಂ ಎಂದರೆ ವೈದ್ಯ ಎಂದರ್ಥ. ಜೀವಿತ ಕಾಲದಲ್ಲಿ ಮಹಾನರು ವೈದ್ಯರಾಗಿದ್ದರು.
ಇಂದು ಭಾರತದಲ್ಲಿ ಜನಜನಿತವಾಗಿರುವ ಆಯುರ್ವೇದ ವೈದ್ಯ ಪದ್ದತಿಯನ್ನು ಭಾರತಕ್ಕೆ ಪರಿಚಯಿಸಿದ ಮಹಾನರೇ ಸಯ್ಯದುನಾ ದಾವುದುಲ್ ಹಕೀಮ್ (ರ) ಮುತ್ತಪೇಟೆ.
ಔಲಿಯಾಗಳೆಂದರೆ ಕಠಿಣ ಪರಿಶ್ರಮದಿಂದ ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಮಹಾತ್ಮರು.
*ಮುಂದುವರಿಯುವುದು*
💤💤💤💤💤💤💤💤💤
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment