Tuesday, September 24, 2019

ಝಿಯಾರತ್ತ್ ಕೇಂದ್ರ 67/02. ದಾವುದುಲ್ ಹಕ್ಕಿಂ (ರ) ಮುತ್ರುಪೇಟೆ

*ಝಿಯಾರತ್ತ್ ಕೇಂದ್ರ​​​*
      ​👉 6⃣7⃣
ಭಾಗ== 02
➖➖➖➖➖➖➖➖➖
*ಹಯತ್ತುಲ್ ಔಲಿಯ ಸಯ್ಯದುನಾ ದಾವುದುಲ್ ಹಕೀಮ್ (ರ) ಮುತ್ತು ಪೇಟೆ ತಂಜವೂರ್, ತಮಿಳುನಾಡು*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************
*ಮುಂದುವರಿದ ಭಾಗ-02*
-----------------------------

ಔಲಿಯಾಗಳೆಂದರೆ ಕಠಿಣ ಪರಿಶ್ರಮದಿಂದ ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಮಹಾತ್ಮರು.

ಔಲಿಯಾ ಎಂಬ ಪದವೇ ವಿಸ್ಮಯಗಳ ಆಗರ. ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಆ ಇಷ್ಟದಾಸರಿಗಾಗಿ ಔಲಿಯಾ ಪ್ರಪಂಚವೆಂಬ ವಿಸ್ಮಯ ಮತ್ತು ವೈಶಿಷ್ಟ್ಯತೆಗಳಿಂದ ಕೂಡಿದ ವಿಸ್ಮಯ ನಗರಿಯನ್ನೇ ಸೃಷ್ಟಿಸಿರುವುದಾಗಿ ಸಯ್ಯದುನಾ ಲುಕ್ಮಾನುಲ್ ಹಕೀಂ (ರ)ರವರ ಚರಿತ್ರೆಯಿಂದ ನಮಗೆ ವ್ಯಕ್ತವಾಗುತ್ತದೆ.

ಅಲ್ಲಾಹನ ಸಂತೃಪ್ತಿಗೆ ಪಾತ್ರರಾದ ಔಲಿಯಾಗಳ ವಿಸ್ಮಯಕರವಾದ ಲೇೂಕವನ್ನು ಪರಿಮಿತವಾದ ಅರ್ಥಗಳಲ್ಲಿ ಅಡಕವಾಗುವ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲವೆಂಬುದು ನನ್ನ ಭಾವನೆ. ಕಾರಣ ಸೀಮಿತವಾದ ಬುದ್ಧಿಶಕ್ತಿಯ ನಮ್ಮಂಥ ಸಾಧಾರಣ ಜನತೆಯ ಊಹೆಗೂ ನಿಲುಕದ ಸಂಗತಿ ಅದು.

ಲೌಕಿಕ ಮೇೂಹದಿಂದ ದೂರಾಗಿ ದೇಹೇಛ್ಛೆಗಳನ್ನು ನಿಯಂತ್ರಿಸುವುದರ ಮೂಲಕ ಸಾಕ್ಷಾತ್ ಇಬ್ಲೀಸ್'ನನ್ನೇ ಕಂಗಾಲಾಗಿಸಿ ಸದಾ ಇಬಾದತ್'ನಲ್ಲಿ ತೊಡಗಿ ಅಲ್ಲಾಹನ ಸಂತೃಪ್ತಿಗೆ ಪಾತ್ರರಾಗುವ ಮಹಾತ್ಮರಿಗೆ ಅಲ್ಲಾಹನು ತನ್ನ ಔಧಾರ್ಯದಿಂದ ನೀಡುವ ಉಡುಗೊರೆಯೇ ಕರಾಮತ್.

ಅಲ್ಲಾಹನು ದಯಪಾಲಿಸಿದ ಕರಾಮತ್ ಮೂಲಕ ಜನಸೇವೆ ಮಾಡುವುದು ಔಲಿಯಾಗಳ ದಿನಚರಿ. ಮುತ್ತುಪೇಟೆಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯದುನಾ ದಾವುದುಲ್ ಹಕೀಮ್ (ರ)ರವರ ಕರಾಮತ್ ಬಗ್ಗೆ ಬರೆಯಲು ಹೊರಟರೆ ಅದು ಮುಗಿಯುವ ಮಾತಲ್ಲ.

(ಆ ಪೈಕಿ ನನ್ನ ಗೆಳೆಯರೊಬ್ಬರ ಕೌಟುಂಬಿಕ ಬಂಧುವೊಬ್ಬರ ಬದುಕಿನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ವಿವರಿಸುತ್ತೇನೆ.

ವಿಟ್ಲ ಸಮೀಪದ ಕೊಡಂಗಾಯಿ ನಿವಾಸಿ ರಫೀಕ್ ಎಂಬ ವ್ಯಕ್ತಿಯೊಬ್ಬರಿಗೆ ಕೆಲವು ವರ್ಷಗಳ ಹಿಂದೆ ಅಲ್ಸರ್ ಇತ್ತು. ಚಿಕಿತ್ಸೆಗಾಗಿ ಆ ವ್ಯಕ್ತಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾದರು. ಆದರೆ ಕೆಲ ದಿನಗಳಲ್ಲಿ ಆ ವ್ಯಕ್ತಿಗೆ ಮತ್ತೆ ಹೊಟ್ಟೆ ನೇೂವು ಆರಂಭವಾಯಿತು. ಸ್ಕ್ಯಾನ್ ಮಾಡಿದ ವೈದ್ಯರು ಶಸ್ತ್ರ ಚಿಕಿತ್ಸೆ ಸರಿಯಾಗಿದೆ ಆದರೆ ಗ್ಯಾಸ್ಟ್ರಬಲ್ ತೊಂದರೆ ಇದೆ ಎಂದು ಹೇಳಿ ಔಷಧಿ ಕೊಟ್ಟು ಕಳುಹಿಸಿದ್ದರು. ಆದರೆ ಕೆಲವು ತಿಂಗಳ ನಂತರ ಮತ್ತೆ ಹಿಂದಿನಂತೆ ಹೊಟ್ಟೆನೇೂವು ಪ್ರಾರಂಭವಾಯಿತು. ನಂತರ ಹಲವಾರು ಕಡೆ ತೆರಳಿ (ಆಯುರ್ವೇದ ಔಷಧ ಸೇರಿದಂತೆ ಹಲವಾರು ಚಿಕಿತ್ಸೆ) ಮಾಡಿದರೂ ಸುಮಾರು ಒಂಬತ್ತು ವರ್ಷಗಳ ಕಾಲ ಯಾತನೆ ಅನುಭವಿಸಿದ್ದರು.

ನಂತರ ಪರಿಚಿತರೊಬ್ಬರೊಂದಿಗೆ  ನೇರವಾಗಿ ಮುತ್ತಪೇಟೆಗೆ ಹೇೂದಾಗ ಅಲ್ಲಿ ಜಿನ್ನ್ ಹಾಲಿರ್ ಆಗಿ ಹಿಂದಿನ ಆಪರೇಷನ್'ನಿಂದ ನಿಮ್ಮ ಅಲ್ಸರ್ ಸಂಪೂರ್ಣ ವಾಸಿಯಾಗಿಲ್ಲ ಎಂದು ತಿಳಿಸಿದಾಗ, ಸಯ್ಯದುನಾ ದಾವುದುಲ್ ಹಕೀಂ (ರ)ರನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಿ ಅಂದು ರಾತ್ರಿ ಅಲ್ಲೇ ತಂಗಿದರು.

ಅಂದು ರಾತ್ರಿ ಸಯ್ಯದುನಾ ದಾವುದುಲ್ ಹಕೀಂ (ರ) ರವರ ಕರಾಮತ್ ನಿಂದ (ಪವಾಡ) ಆಪರೇಷನ್ ಆಯಿತು. ನಂತರ ಸುಮಾರು ಹದಿನೇಳು ದಿನಗಳ ಕಾಲ ರಫೀಕ್'ರವರಿಗೆ ಹೊಟ್ಟೆ ನೇೂಯುತ್ತಿದ್ದು ನಂತರ ವಾಸಿಯಾಯಿತು. ಆದರೆ ಆಪರೇಷನ್ ಆದ ನಂತರದ ನೇೂವಿನಲ್ಲಿ ಹಿಂದಿನ ನೇೂವಿಗಿಂತ  ಬಹಳ ವ್ಯತ್ಯಾಸವಿತ್ತು.

ಅಷ್ಟೇ ಅಲ್ಲ,  ಊರಿಗೆ ಮರಳಿದ ನಂತರವೂ ರಫೀಕ್'ರವರ ತೇೂಳಿಗೆ ಆಗಾಗ ಚುಚ್ಚುಮದ್ದು ನೀಡುತ್ತಿರುವುದು ಅವರ ಗಮನಕ್ಕೆ ಬರುತ್ತಿತ್ತು ಎನ್ನುತ್ತಾರೆ ಕೊಡಂಗಾಯಿ ರಫೀಕ್.

ಮೊದಲು ಹೊಟ್ಟೆ ನೇೂವಿನಿಂದ ಒದ್ದಾಡುತ್ತಿದ್ದ ರಫೀಕ್'ರವರಿಗೆ ಅನಂತರ ಈ ತನಕ ಅಲ್ಲಾಹನ ದಯಾನುಗ್ರಹದಿಂದ ಹೊಟ್ಟೆನೇೂವೇ ಆಗಿಲ್ಲ ಮಾ ಷಾ ಅಲ್ಲಾಹ್... )

ಔಲಿಯಾ ಪ್ರಪಂಚವೆಂದರೆ ಹಾಗೆ ಆ ಜಗತ್ತೇ ವಿಸ್ಮಯಗಳ ಆಗರ.

ಹತ್ತೊಂಬತ್ತನೇ ಶತಮಾನದಲ್ಲಿ ಭಾರತದ ಮುಸ್ಲಿಂ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಸುನ್ನೀ ಜನಮಾನಸದಲ್ಲಿ ಜನಜನಿತರಾದ ಶೈಖುನಾ ಶಂಸುಲ್ ಉಲಮಾ ಈ.ಕೆ. ಅಬೂಬಕರ್ ಮುಸ್ಲಿಯಾರ್ (ಖ:ಸಿ)ರಿಗೆ ಮುತ್ತುಪೇಟೆಯ ವಲಿಯ್ಯಿ ದಾವುದುಲ್ ಹಕೀಮ್ (ರ)ರೊಂದಿಗೆ ಆಂತರಿಕವಾಗಿ ಬಹಳ ಹತ್ತಿರದ ಬಾಂಧವ್ಯವಿತ್ತೆಂದು ಶಂಸುಲ್ ಉಲಮಾ (ಖ:ಸಿ) ಉಸ್ತಾದರನ್ನು ಹತ್ತಿರದಿಂದ ಬಲ್ಲವರಾಗಿದ್ದ ಹಲವು ಸುನ್ನೀ ವಿಧ್ವಾಂಸರು ಉಲ್ಲೇಖಿಸಿದ್ದಾರೆ.

ಮೂಸ ನೆಬಿ (ಅ)ರವರ ಕಾಲಘಟ್ಟದ ಜನತೆ ಬಹಳ ಎತ್ತರದವರಾಗಿದ್ದುದರಿಂದ ಮುತ್ತುಪೇಟೆಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯದುನಾ ದಾವುದುಲ್ ಹಕೀಮ್ (ರ)ರವರ ಮಕ್ಬರವೂ ಬಹಳ ಉದ್ದವಿದೆ.

*ಪ್ರಪಂಚದ ಮೂಲೆಯಲ್ಲೆಲ್ಲೇೂ ಸಾವಿರಾರು ವರ್ಷಗಳ ಹಿಂದೆ ಹುಟ್ಟಿ ಬೆಳೆದು ಭಾರತೀಯರಾದ ನಮ್ಮ ನೆರವಿಗಾಗಿ ಭಾರತಕ್ಕೆ ಆಗಮಿಸಿ ಸೃಷ್ಟಿಕರ್ತನಾದ ಅಲ್ಲಾಹನು ದಯಪಾಲಿಸಿದ ಕರಾಮತ್ ಮೂಲಕ ಜನಸೇವೆ ಮಾಡುತ್ತಾ ನೊಂದ ಜನತೆಗೆ ಸಾಂತ್ವಾನ ನೀಡಿ ಕಣ್ಣೊರೆಸುತ್ತಾ ಅಲ್ಲಾಹನ ಸಂತೃಪ್ತಿಗೆ ಪಾತ್ರರಾದ ಹಯಾತುಲ್ ಔಲಿಯಾ ಸಯ್ಯದುನಾ ದಾವುದುಲ್ ಹಕೀಮ್ (ರ) ಮುತ್ತುಪೇಟೆಯವರ ಹೆಸರಿನಲ್ಲಿ ಪ್ರಿಯ ಓದುಗರೆಲ್ಲರೂ ಒಂದೊಂದು ಫಾತಿಹ ಓದಿ ಹದಿಯಾ ಮಾಡಬೇಕಾಗಿ ವಿನಂತಿ.*

ಸರ್ವಶಕ್ತನಾದ ಅಲ್ಲಾಹನು ಆ ಮಹಾತ್ಮರ ಹಕ್ಕ್'ಜಾಹ್ ಬರ್ಕತ್'ನಿಂದ ನಮ್ಮೆಲ್ಲರನ್ನೂ ಎಲ್ಲಾ ತರದ ಆಪತ್ತು ಮತ್ತು ಮುಸೀಬತ್ತುಗಳಿಂದ ರಕ್ಷಿಸುವುದರ ಜೊತೆಗೆ ನಮ್ಮ ಎಲ್ಲಾ ವ್ಯಾಪಾರ ವ್ಯವಹಾರಗಳಲ್ಲೂ ಖೈರ್ ಮತ್ತು ಬರ್ಕತ್ತನ್ನು ದಯಪಾಲಿಸಿ ಅನುಗ್ರಹಿಸುವುದರ ಜತೆಗೆ ಹಲಾಲಾದ ಮಾರ್ಗದಲ್ಲಿ ಜೀವಿಸುತ್ತಾ ನೂರ್ಕಾಲ ಸುಖವಾಗಿ ಬಾಳಿ ಬದುಕುವ ಸೌಭಾಗ್ಯಶಾಲಿಗಳ ಸಾಲಿನಲ್ಲಿ ನಮ್ಮೆಲ್ಲರನ್ನೂ ಸೇರಿಸಿ ಅನುಗ್ರಹಿಸಲಿ ಆಮೀನ್.

ಮುಗಿಯಿತು.
💢💢💢💢💢💢💢💢💢


No comments:

Post a Comment