*ಝಿಯಾರತ್ತ್ ಕೇಂದ್ರ*
👉🏻👉🏻 7⃣6⃣
➖➖➖➖➖➖➖
*ತಂಙಳ್ ಜಾರಂ ವೆಳಿಯಂಗೊಡ್*
*ಮಲಪ್ಪುರಂ*
*********************
*اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ*
☪☪☪☪☪☪☪
✍ ಗಫೂರ್ ಬಾಯಾರ್
**********************
ಇಹಲೋಕದಲ್ಲಿ ಸರಿಸಾಟಿಯಿಲ್ಲದ ಕುಟುಂಬವಾದ ಅಹ್ಲ್‌ಬೈತ್ ಕುಟುಂಬದ ಹಲವು ಸಯ್ಯಿದರು ಯಮಾನಿನ ಹಲರ್ ಮೌತ್‌ನಿಂದ ಭಾರತಕ್ಕೆ ಆಗಮಿಸಿ ದೀನೀ ದಅ್‌ವಾ ನಡೆಸಿದ್ದಲ್ಲದೆ ಭಾರತದ ಮಣ್ಣಿನಲ್ಲೇ ಚಿರವಿಶ್ರಾಂತಿ ಪಡೆಯುತ್ತಾ ತಮ್ಮ ಕಶ್ಫ್ ಕರಾಮತ್‌ಗಳ ಮೂಲಕ ನೊಂದ ಮನಸ್ಸುಗಳಿಗೆ ಸಾಂತ್ವಾನ ನೀಡುತ್ತಿದ್ದಾರೆ.
ಹಾಗೆ ಹಲರ್ ಮೌತ್‌ನಿಂದ ಆಗಮಿಸಿದ ಬಹುತೇಕ ಸಯ್ಯಿದರು ನಮ್ಮ ನೆರೆಯ ಕೇರಳಕ್ಕೆ ಆಗಮಿಸಿದ್ದಲ್ಲದೆ ಕುತುಬುಝ್ಝಮಾನರಾದ ಮಂಬುರಂ ಸಯ್ಯಿದ್ ಅಲವಿ ತಂಙಳ್ (ಖ.ಸಿ) ರಂತಹ ಮಹಾನರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದಲ್ಲದೆ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಸ್ವಾತಂತ್ರ್ಯ ಸಮರ ಸೇನಾನಿಗಳಿಗೆ ಸಮರ್ಥ ನಾಯಕತ್ವ ನೀಡುವ ಮೂಲಕ ದೇಶ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಮಹಾನರೂ ಬಹಳಷ್ಟಿದ್ದಾರೆ.
ಹೀಗೆ ಯಮನಿನ ಹಲರ್ ಮೌತ್‌ನಿಂದ ದೀನೀ ದಅ್‌ವ ನಡೆಸುವ ಸಲುವಾಗಿ ಭಾರತಕ್ಕಾಗಮಿಸಿದ ಸಯ್ಯಿದರುಗಳ ಪೈಕಿ ಶೈಖ್ ಅಹ್ಮದ್ ಬಿನ್ ಹಸನ್ (ರ) ಸಹ ಒಬ್ಬರು.
ಹಲರ್ ಮೌತ್‌ನಿಂದ ಸಮುದ್ರ ಮಾರ್ಗವಾಗಿ ಗುಜರಾತಿನ ಸೂರತ್‌ಗೆ ಬಂದಿಳಿದ ಮಹಾನರು ಅನಂತರ ಸೂರತ್‌ನಿಂದ ಕೇರಳದ ಮಲಪ್ಪುರಂ ಜಿಲ್ಲೆಯ ವೆಳಿಯಂಗೋಡಿಗೆ ತೆರಳಿ ದೀನಿ ದಅ‌್‌ವಾ ನಡೆಸಿದರು.
ಪ್ರವಾದಿ ಮುಹಮ್ಮದ್ ﷺِ ರವರ 32ನೇ ಪೌತ್ರರಾದ ಮಹಾನರು ಪ್ರಸಿದ್ದ ವಲಿಯೂ ಆಗಿದ್ದರು.
ಮಹಾನರ ಆಗಮನ ಮತ್ತು ವಫಾತಿನ ವರ್ಷದ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.
*ಹೆಸರಾಂತ ಸೂಫಿವರ್ಯರಾದ ವೆಳಿಯಂಗೋಡು ಉಮರ್ ಖಾಝಿ (ರ) ರವರ ಮಖ್ಬರದ ಹಿಂಬಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸುಮಾರು ಐವತ್ತರಷ್ಟು ಸಯ್ಯಿದರುಗಳ ಮಖ್ಬರದ ಸನಿಹದಲ್ಲೇ ಶೈಖ್ ಅಹ್ಮದ್ ಬಿನ್ ಹಸನ್ (ರ) ರವರು ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.*
ಈ ಮಖ್ಬರಗಳು *"ಸೂರತ್ ತಂಙಮ್ಮಾರುಡೆ ಮಖ್ಬರ"* ಎಂದು ಗುರುತಿಸಲ್ಪಡುತ್ತದೆ. ಸೂರತ್‌ನಿಂದ ಆಗಮಿಸಿದ ಸಯ್ಯಿದರುಗಳಾಗಿರುವುದರಿಂದ ಆ ಹೆಸರು ಬಂದಿದೆಯೆನ್ನುತ್ತಾರೆ ಸ್ಥಳೀಯರು.
ಇಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವವರೆಲ್ಲರೂ ಸಯ್ಯಿದರುಗಳೇ ಆಗಿರುವುದು ವಿಶೇಷ.
ಇಲ್ಲಿನ ಝಿಯಾರತ್'ಗೆ ತೆರಳುವವರು ಗಮನಿಸಬೇಕಾದ ಅಂಶವೆಂದರೆ, ಮಖಾಮಿಗೆ ಪ್ರವೇಶಿಸುವ ಮೊದಲು ಹೊರಗೆ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದರುಗಳ ಅನುಮತಿ ಪಡೆದ ನಂತರವೇ ಮಕಾಮಿನ ಒಳಗೆ ಪ್ರವೇಶಿಸಬೇಕು.
ಹಲವಾರು ಕಶ್ಫ್ ಕರಾಮತ್‌ಗಳ ಮೂಲಕ ಪ್ರಸಿದ್ಧಿ ಪಡೆದಿರುವ ಈ ಮಖಾಮಿನೊಳಗೆ ಪ್ರವೇಶಿಸುವ ಮುನ್ನ ಸಂದರ್ಶಕರು ಹೊರಗೆ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದರುಗಳ ಅನುಮತಿ ಪಡೆಯಬೇಕೆಂಬ ನಿಯಮವು ಇಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದರುಗಳಿಗೆ ಪರಸ್ಪರರೊಂದಿಗಿರುವ ಗೌರವಾದರಗಳ ಕಾರಣದಿಂದ ಈ ಔಲಿಯಾಗಳೇ ತಮ್ಮ ಕರಾಮತ್ ಮೂಲಕ ವಿಧಿಸಿದ ನಿಯಮವಾಗಿದೆ.
ದಾರಿ:: ಪೊನ್ನಾನಿಯಿಂದ ಚಾವಕಾಡ್ ದಾರಿಯಲ್ಲಾಗಿದೆ ವೆಳಿಯಂಗೋಡ್.
♻♻♻♻♻♻♻♻
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)



No comments:
Post a Comment