*"ಪ್ರವಾದಿ ಮುಹಮ್ಮದ್ ﷺ ರಿಗಿಂತಲೂ ಉನ್ನತ ವ್ಯಕ್ತಿ ಎಪಿ ಉಸ್ತಾದ್" ಎಂದು ಒಬ್ಬ ನಾಸ್ತಿಕವಾದಿ ಹೇಳಿದ್ದಾನಂತೆ..!*
ಈ ವಿಷಯವನ್ನು ಭಾಷಣ ಮಾಡಿದ ಉಸ್ತಾದರ ಹೆಸರು *ನಝೀರ್ ಸಖಾಫಿ*.
ಇವರು ಎಪಿ ವಿಭಾಗದಿಂದ ಹೊರಬಿದ್ದು (SK ಗೆ ಸೇರಿ) ಹಲವಾರು ವರ್ಷಗಳೇ ಕಳೆದಿದೆ. ಹೊರಬಿದ್ದ ನಂತರ ಇವರ ಹೆಚ್ಚಿನ ಭಾಷಣಗಳೇ ಇಂತಹವುಗಳು.
ಎಪಿ ಉಸ್ತಾದರ ವಿರುದ್ಧ ಅಧಾರ ರಹಿತವಾದ ಹಸಿಹಸಿ ಸುಳ್ಳು ಗಳನ್ನು ಹೇಳಿ ಜನರ ನಡುವೆ ವಸ್ವಾಸ್ ಸೃಷ್ಟಿಸುವುದು. ಹೊರಬಿದ್ದ ನಂತರ ಹೆಚ್ಚಿನವರಲ್ಲಿ ಇಂತಹ ಭಾಷಣಗಳು ಸ್ವಾಭಾವಿಕ. ಬಹುಶಃ ತಮ್ಮ ನೆಲೆ ಗಟ್ಟಿಗೊಳಿಸುವ ತಂತ್ರವಾಗಿರಲೂಬಹುದು.
ಇರಲಿ ಇನ್ನು ವಿಷಯಕ್ಕೆ ಬರೋಣ,
ಈ ಉಸ್ತಾದ್ ಇಲ್ಲಿ ಹೇಳುವ ವಿಷಯ ಕೇರಳ ಯಾತ್ರೆ ಸಂದರ್ಭದ್ದು. ಕೇರಳ ಯಾತ್ರೆ ನಡೆದು ಆರು ವರ್ಷಗಳೇ ಕಳೆದಿದೆ.
ಕೇರಳ ಯಾತ್ರೆ ಸಂದರ್ಭದಲ್ಲಿ ಓರ್ವ ನಾಸ್ತಿಕವಾದಿ ಎಪಿ ಉಸ್ತಾದರ ಕುರಿತು ಹೇಳಿದನಂತೆ, *"ನಾನು ಎಪಿ ಉಸ್ತಾದ್ ಮತ್ತು ಪ್ರವಾದಿ ಮುಹಮ್ಮದ್ ﷺ ರ ನಡುವೆ ತುಲನೆ ಮಾಡಿ ನೋಡಿದೆ. ಇದರಲ್ಲಿ ನನಗೆ ಕಚಿತವಾದ ವಿಷಯವೇನೆಂದರೆ, ಪ್ರವಾದಿ ಮುಹಮ್ಮದ್ ﷺ ರಿಗಿಂತಲೂ ಉನ್ನತರಾದ ವ್ಯಕ್ತಿ ಎಪಿ ಉಸ್ತಾದ್ ಎಂಬುದು".*
ನಾಸ್ತಿಕವಾದಿಯೊಬ್ಬ ಈ ರೀತಿ ಹೇಳಿದ್ದಾನೆಂದು ಫಿತ್ನಾ ಉಸ್ತಾದರೊಬ್ಬರು ಭಾಷಣ ಮಾಡಿ ನಾಲ್ಕೈದು ವರ್ಷಗಳೇ ಸಂದವು. ಅಂದಿನಿಂದ ಇಂದಿನವರೆಗೂ, ಇದನ್ನು ಅಭಿಮಾನದಿಂದ ಪ್ರಚಾರ ಮಾಡುವವರೊಂದಿಗೆ, ಆ ನಾಸ್ತಿಕವಾದಿ ಎಪಿ ಉಸ್ತಾದರ ಕುರಿತು ಆ ರೀತಿ ಹೇಳಿದುದರ ಕ್ಲಿಪ್ ತೋರಿಸಬಹುದಾ ಎಂದು ಕೇಳುತ್ತಾ ಬಂದಿದ್ದೇವೆ. ಇಷ್ಟು ವರ್ಷಗಳಾದರೂ ಅಂತಹ ಒಂದು ಭಾಷಣದ ತುಣುಕನ್ನು ತೋರಿಸಲು ಇವರಿಗೆ ಇದುವರೆಗೂ ಸಾದ್ಯವಾಗಿಲ್ಲ.
ಹೆಚ್ಚೇಕೆ, ಆ ರೀತಿ ಹಸಿಹಸಿ ಸುಳ್ಳುಗಳನ್ನು ಭಾಷಣ ಮಾಡುವ ಸ್ವತಃ ಉಸ್ತಾದರೇ, ಅದರ ಕ್ಲಿಪ್ ಹಾಕಿ ತೋರಿಸುವ ಸಾಹಸವನ್ನು ಕೂಡಾ ಮಾಡುವುದಿಲ್ಲ. ಇಂದಿನ ಕಾಲದಲ್ಲಿ ಪ್ರಭಾಷಣಕಾರರು ಪ್ರತಿಯೊಂದನ್ನೂ ಕ್ಲಿಪ್ ಹಾಕಿ ತೋರಿಸುವಾಗ, ಈ ಉಸ್ತಾದರಿಗೇಕೆ ಆ ಕ್ಲಿಪ್ ಹಾಕಿ ತೋರಿಸಬಾರದಿತ್ತು.!
*ಇಂದಿನ ಕಾಲದಲ್ಲಿ ಪ್ರತಿಯೊಂದು ಕಾರ್ಯಕ್ರಮವನ್ನೂ ಲೈವ್ ಕೊಡಲಾಗುತ್ತದೆ. ಲೈವ್ ಕೊಟ್ಟರೂ, ಕೊಡದಿದ್ದರೂ ಕಾರ್ಯಕ್ರಮದ ಕ್ಲಿಪ್ ಕ್ಷಣಮಾತ್ರದಲ್ಲಿ ವಿಶ್ವವ್ಯಾಪಿ ಹರಡಿಬಿಡುತ್ತದೆ. ಅಷ್ಟಕ್ಕೆ ತಂತ್ರಜ್ಞಾನ ಮುಂದುವರೆದಿದೆ. ಅದೂ ಅಲ್ಲದೆ, ಯಾವಾಗ ಬೇಕಾದರೂ ಅದನ್ನು ಯೂಟ್ಯೂಬ್ ನಲ್ಲಿ ನೋಡಬಹುದು. ಅಷ್ಟಾದರೂ ಈ ಒಂದು ವಿವಾದದ ಕ್ಲಿಪ್ ಅನ್ನು ಎಪಿ ಉಸ್ತಾದರ ವಿರೋಧಿಗಳಿಗೆ ತೋರಿಸಲು ಸಾಧ್ಯವಾಗುವುದಿಲ್ಲ ಎಂದಾದರೆ, ಇದರಲ್ಲಿ ಎಷ್ಟು ಸತ್ಯವಿದೆ ಎಷ್ಟು ಮಿತ್ಯವಿದೆ ಎಂಬುದನ್ನು ಇದರಲ್ಲೇ ಅರ್ಥೈಸಬಹುದು.*
ಸುಳ್ಳು ಹೇಳಿ ಅಪಪ್ರಚಾರ ಮಾಡಿ ಉಸ್ತಾದರ ಸ್ಥಾನ ಮಾನಕ್ಕೆ ಕೊರತೆ ಸೃಷ್ಟಿಸಬಹುದೆಂದು ಯಾರಾದರೂ ಭಾವಿಸಿದ್ದರೆ, ಖಂಡಿತಾ ಅದು ಈ ಭೂಮಿ ಮೇಲೆ ಅಂತ್ಯದಿನದವರೆಗೂ ನಡೆಯಲು ಹೋಗುವುದಿಲ್ಲ ಎಂದು ಹೇಳುತ್ತಾ,
ಇಂತಹ ಹಸಿಹಸಿ ಸುಳ್ಳು ಗಳ ಮೆಸೇಜ್ ಗಳನ್ನು frwrd ಮಾಡುವಾಗ,
*ಸುಳ್ಳು ಹೇಳುವವನ ಮೇಲೆ ಅಲ್ಲಾಹನ ಶಾಪವಿದೆ* ಎಂಬ ಖುರ್ಆನ್ ಸೂಕ್ತವನ್ನು ನೆನಪಿಸಿಕೊಳ್ಳಿ ಎಂದು ತಿಳಿಹೇಳುತ್ತಾ ಮುಗಿಸುತ್ತಿದ್ದೇನೆ.
ಅಲ್ಲಾಹು ನಮ್ಮೆಲ್ಲರನ್ನು ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment