Sunday, September 22, 2019

ಸುನ್ನೀ ಐಕ್ಯತೆಗಾಗಿ ಒಬ್ಬರು ಸಖಾಫಿ ಮಾಡುವ ಪರಿಶ್ರಮ ನೋಡಿ....   Skssf ಹೆಸರು ಕೇಳುವಾಗ ಬೂತ ಮೈಮೇಲೆ ಬಂದಂತೆ ಮಾಡಿದ ಈ ಸಖಾಫಿ ಐಕ್ಯತೆಯ, ಪರವೇ ವಿರುದ್ದವೇ ?

☝🏽 ಇಂತಹ ಟೈಟಲ್ ನಲ್ಲಿ ವೀಡಿಯೋ ಒಂದು ವೈರಲ್ ಆಗುತ್ತಿದೆ. ಅಷ್ಟಕ್ಕೂ,  ವೇದಿಕೆಗೆ ಸಂಬಂಧಪಡದ ಸಂಘಟನೆಯೊಂದರ ಕಾರ್ಯಕ್ರಮದ ಪ್ರಚಾರವನ್ನು ಉಸ್ತಾದರೊಬ್ಬರು ತಡೆದದ್ದು ಐಕ್ಯತೆಗೆ ವಿರುದ್ಧವೇ?

ಚೇಲಾರಿ ಸಮಸ್ತ ಅದ್ಯಕ್ಷರಾದ ಬಹುಮಾನ್ಯ *ಸೈಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್* ರವರ ಭಾಷಣದ ಲಿಂಕ್ ಒಂದನ್ನು ಇಲ್ಲಿ ಕೊಟ್ಟಿದ್ದೇನೆ. ಅದರ  1:04:00 ದಿಂದ 1:05: 50 ನಿಮಿಷದ ವರೆಗಿನ ಭಾಷಣವನ್ನು ಕೇಳಿನೋಡಿ.
https://youtu.be/uvgv66-DgTI.

*ಬಹುಮಾನ್ಯ ಜಿಫ್ರಿ ತಂಙಳ್ ರವರು ಹೇಳುತ್ತಾರೆ: ಸಮಸ್ತ ಮತ್ತು ಅದರ ಅಧೀನದಲ್ಲಿರುವ ಯಾವುದೇ ಸಂಘಟನೆಯ, ಉಪ ಸಂಘಟನೆಯ ವೇದಿಕೆಯಲ್ಲಿ ಇನ್ನೊಂದು ವಿಭಾಗದ ಉಲಮಾಗಳ ಗುಣ ವಿಶೇಷತೆ ಬಗ್ಗೆ ಹೇಳಬೇಕಾಗಿಲ್ಲ.  ಅವರಲ್ಲಿ ಒಳ್ಳೆಯ, ಸೂಕ್ಷ್ಮತೆ ಇರುವ ಉಲಮಾಗಳು ಇರಬಹುದು, ಅದು ಹಾಗೆ ಇರಲಿ. ನಾವು ಅವರ ಬಗ್ಗೆ  ಕೆಟ್ಟದಾಗಿ ಹೇಳುವುದು ಬೇಡ. ಅದೇ ಸಮಯದಲ್ಲಿ, ಅವರನ್ನು ನಮ್ಮ ವೇದಿಕೆಯಲ್ಲಿ ಗುಣಗಾನ ಮಾಡಬೇಕಾಗಿಯೂ ಇಲ್ಲ. ನಮಗೆ ನಮ್ಮವರ ಗುಣಗಾನ ಮಾಡಲೇ ಬೇಕಾದಷ್ಟಿದೆಯಲ್ವ.‌ ಅದಿಲ್ಲದಿದ್ದರೆ ತಾನೇ ನಮಗೆ ಇನ್ನೊಂದು ಸಂಘಟನೆಯವರ ಗುಣಗಾನವನ್ನು ಸಾಲವಾಗಿ ಪಡೆಯಬೇಕಾದಂತಹ ಅವಶ್ಯಕತೆ ಬರುವುದು.  ಅಂತಹ ಒಂದು ಅವಸ್ಥೆ ಇಲ್ಲಿನ ಸುತ್ತಮುತ್ತಲಿನಲ್ಲಿ (ಸಮಸ್ತದ ವೇದಿಕೆಯಲ್ಲಿ) ಇದೆ ಎಂದು ನಾನು ಕೇಳಿದೆ. ಅದನ್ನು ಇಂದಿಗೇ ಕೊನೆಗೊಳಿಸಬೇಕು. ಅದು ಒಳ್ಳೆಯ ಕಾರ್ಯವಲ್ಲ ಎಂದು ನಾನು ಈ ಸಮಯದಲ್ಲಿ ಹೇಳಲು ಬಯಸುತ್ತೇನೆ. ಅದು ಶಂಸುಲ್ ಉಲಮಾರಿಗೆ ಇಷ್ಟವಿರದ ಸಂಗತಿಯಾಗಿದೆ* : ಎಂಬುದಾಗಿ  *ಬಹುಮಾನ್ಯ ಸೈಯ್ಯಿದ್ ಜಿಫ್ರಿ ತಂಙಳ್* ಹೇಳುತ್ತಾರೆ.
ಅಂದರೆ, ಒಂದು ಸಂಘಟನೆಯ ವೇದಿಕೆಯಲ್ಲಿ ಇನ್ನೊಂದು ವಿಭಾಗದವರ ಬಗ್ಗೆ ಹೇಳಬಾರದು ಎಂದಾಗಿದೆ ಜಿಫ್ರಿ ತಂಙಳ್ ರವರ ಅಭಿಪ್ರಾಯ. ಜಿಫ್ರಿ ತಂಙಳ್ ರವರ ಈ ಅಭಿಪ್ರಾಯದಲ್ಲಿ ನಮಗೂ ಸಹಮತ ಇದೆ. ಅದನ್ನು ತಪ್ಪು ಎಂದು ನಾವು ಹೇಳುವುದಿಲ್ಲ.

*ಜಿಫ್ರಿ ತಂಙಳ್ ರವರು, ಸುನ್ನೀ ಐಕ್ಯತೆಗಾಗಿ ನಿಸ್ವಾರ್ಥವಾಗಿ ಶ್ರಮಿಸುತ್ತಿರುವ ಓರ್ವ ಉನ್ನತ ನಾಯಕರು ತಾನೇ. ತಮ್ಮ ಕಾರ್ಯಕ್ರಮದ ವೇದಿಕೆಯಲ್ಲಿ SKSSF ಕಾರ್ಯಕ್ರಮದ ಪ್ರಚಾರವನ್ನು ತಡೆದ ಉಸ್ತಾದರ ನಡೆ ಐಕ್ಯತೆಗೆ ವಿರುದ್ಧ ಎಂದು ಹೇಳುವುದಾದರೆ, ತಮ್ಮ ವೇದಿಕೆಯಲ್ಲಿ ಇನ್ನೊಂದು ವಿಭಾಗದ ಬಗ್ಗೆ ಹೇಳಬಾರದು ಎಂದು ಅಂತಹದೇ ಆಜ್ಞೆ ಹೊರಡಿಸಿದ ಜಿಫ್ರಿ ತಂಙಳ್ ರವರ ನಡೆ ಕೂಡಾ ಐಕ್ಯತೆಗೆ ವಿರುದ್ಧ ಎಂದು ಹೇಳಬೇಕಾದೀತು ಅಲ್ವ.*
*ಜಿಫ್ರಿ ತಂಙಳ್* ರವರಿಗೆ ಅನ್ವಯವಾಗುವಂತಹ ನಿಯಮ, ಇತರ ಸಂಘಟನೆಯವರಿಗೂ ಅನ್ವಯವಾಗುತ್ತದೆ ಎಂಬುದು ಸಖಾಫಿ? ಉಸ್ತಾದರನ್ನು ಟೀಕಿಸುವ ಮಾನ್ಯ SKSSF ಕಾರ್ಯಕರ್ತರು ತಿಳಿದುಕೊಳ್ಳಬೇಕು.

ಒಂದು ಸಂಘಟನೆಗೆ ಸಂಬಂಧಿಸಿದ ವೇದಿಕೆಯಲ್ಲಿ ಇನ್ನೊಂದು ಸಂಘಟನೆಯ  ಕಾರ್ಯಕ್ರಮದ ಪ್ರಚಾರವನ್ನು ಮಾಡಲು ಪ್ರಯತ್ನಿಸಿದವರ ಕಾರ್ಯವನ್ನು ಪ್ರಪ್ರಥಮವಾಗಿ  ವಿರೋಧಿಸಬೇಕಾಗಿದೆ. ಐಕ್ಯತೆಗಾಗಿ ವೇದಿಕೆಗೆ ಆಹ್ವಾನಿಸಿದರೆ, ಅದರಲ್ಲಿ ತಮ್ಮ ಸಂಘಟನೆಯ ಪ್ರಚಾರವನ್ನು ಮಾಡಿ ಇರುವ ಐಕ್ಯತೆಗೆ ಕೊಳ್ಳಿ ಇಡುವ ಇಂತಹವರ ಪ್ರಯತ್ನ ಖಂಡನೀಯ.  ಒಂದುವೇಳೆ, ಒಂದು ಸಂಘಟನೆಯ ವೇದಿಕೆಯಲ್ಲಿ ಇನ್ನೊಂದು ಸಂಘಟನೆಯ ಕಾರ್ಯಕ್ರಮದ ಪ್ರಚಾರವನ್ನು ಮಾಡುವುದು ಕೂಡಾ ಐಕ್ಯತೆಯಲ್ಲಿ ಸೇರುವುದಾದರೆ, ಅಂತಹ ಒಂದು ಉತ್ತಮ ಕಾರ್ಯಕ್ಕೆ ಇಲ್ಲಿನ SKSSF ಕಾರ್ಯಕರ್ತರು  (ಸಖಾಫಿ ಉಸ್ತಾದರ ನಡೆಯನ್ನು ವಿರೋಧಿಸಿದವರು)  ತಮ್ಮ ಕಾರ್ಯಕ್ರಮದ ವೇದಿಕೆಯಲ್ಲಿ SSF ನ ಕಾರ್ಯಕ್ರಮವನ್ನು ಪ್ರಚಾರ ಮಾಡುವ ಮೂಲಕ ಮುನ್ನುಡಿ ಬರೆಯಲಿ. ಆ ಮೂಲಕ ಎಲ್ಲೆಡೆಯೂ ಐಕ್ಯತೆ ರಾರಾಜಿಸಲಿ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment