* #ಝಿಯಾರತ್ತ್_ಕೇಂದ್ರ*
👉👉 8⃣1⃣
➖➖➖➖➖➖➖
*ವಲಿಯುಲ್ಲಾಹಿ ಜಮಾಲುಲ್ ಔಲಿಯ ಅಂದ್ರಪ್ಪಾಪ್ಪ (ಖ:ಸಿ)*
*ವಲಿಯಾಕಂಡಿಪ್ಪಿಡಿಕ, ಪಾನೂರ್, ಕಣ್ಣೂರ್ ಜಿಲ್ಲೆ*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
**********************
1984ನೇ ಇಸ್ವಿ ಅಕ್ಟೋಬರ್ 31ನೇ ತಾರೀಕು ಬೆಳಿಗ್ಗೆ ಹತ್ತು ಗಂಟೆಯ ಸಮಯ. ಪೊನ್ನಾನಿಯ ಎಂ. ಈ. ಎಸ್. ಕಾಲೇಜಿನ ಮುಖ್ಯದ್ವಾರ. ಆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಎಂದಿನಂತೆ ಓಡಾಡುತ್ತಿದ್ದರು....
ಆಗ ಆ ಕಾಲೇಜಿನ ಮುಂಭಾಗದ ಕಾಂಪೌಂಡಿನಲ್ಲಿ ವಯೋವೃದ್ಧರೊಬ್ಬರು ವಯೋಸಹಜವಾಗಿ ನಡುಗುವ ಕೈಗಳಿಂದ ಇದ್ದಲಿನಲ್ಲಿ ಅದೇನನ್ನೋ ಬರೆಯುತ್ತಿದ್ದರು. ಮೊದಮೊದಲು ಯಾರೂ ಅಷ್ಟಾಗಿ ಅದನ್ನು ಗಮನಿಸಲಿಲ್ಲವಾದರೂ ನಂತರ ಆ ಬರವಣಿಗೆಯನ್ನು ಓದಿದವರ ಪೈಕಿ ಕೆಲವರು ಆ ವೃದ್ಧರನ್ನು ಮಾನಸಿಕ ಅಸ್ವಸ್ಥರೆಂದು ಭಾವಿಸಿ ಅನುಕಂಪ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಪಹಾಸ್ಯ ಮಾಡಿ ನಗಲಾರಂಭಿಸಿದರು.
ಅಷ್ಟಕ್ಕೂ ಆ ವೃದ್ಧರು ಮಲಯಾಳಂನಲ್ಲಿ ಬರೆದಿದ್ದ ಆ ಬರಹ ಹೀಗಿತ್ತು. ಇಂದಿರಾಗಾಂಧಿ *"ವೆಡಿಯೇಟ್ಟು ಮೆರಿಚ್ಚು."* ಅಂದರೆ ಇಂದಿರಾಗಾಂಧಿಯವರು ಗುಂಡಿಗೆ ಬಲಿಯಾದರು.
ಉಕ್ಕಿನ ಮಹಿಳೆ ಎಂದೇ ಪ್ರಸಿದ್ಧಿ ಪಡೆದಿದ್ದ ಝೆಡ್ ಪ್ಲಸ್ ಭದ್ರತೆಯಿರುವ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಯವರು ಹಂತಕನ ಗುಂಡಿಗೆ ಬಲಿಯಾದರೆಂದರೆ ಅಂದು ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ.
ಕಾರಣ ಆ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಾಗಲೀ ದೃಶ್ಯಮಾಧ್ಯಮಗಳಾಗಲಿ ಅಥವಾ ಮುದ್ರಣ ಮಾಧ್ಯಮವಾಗಲಿ ಇಂದಿನಷ್ಟು ಇರಲಿಲ್ಲ. ಇದ್ದದ್ದು ದೂರದರ್ಶನ ಆಕಾಶವಾಣಿ ಮತ್ತು ಕೆಲವು ಮುದ್ರಣ ಮಾಧ್ಯಮಗಳು ಮಾತ್ರ. ಹಾಗಾಗಿ ರಾಷ್ಟ್ರೀಯ ವಾರ್ತೆಗಳು ಅಂದು ಬಿತ್ತರವಾಗುತ್ತಿದ್ದದ್ದು ದಿನಕ್ಕೆ ಮೂರು ಬಾರಿ ಮಾತ್ರ.
ಲಭ್ಯವಿದ್ದ ಮಾಧ್ಯಮಗಳು ದಿನಕ್ಕೆ ಮೂರು ಬಾರಿ ವಾರ್ತೆಯನ್ನು ಬಿತ್ತರಿಸುತ್ತಿತ್ತು ಹಾಗಾಗಿ ಯಾವುದೇ ರಾಷ್ಟ್ರೀಯ ಸುದ್ದಿಗಳು ತಕ್ಷಣಕ್ಕೆ ತಿಳಿಯಲು ಸಾಧ್ಯವೇ ಇರಲಿಲ್ಲ.
"ಅಂದು ಮದ್ಯಾಹ್ನ ಹನ್ನೆರಡರ ವಾರ್ತೆಗಳನ್ನು ಕೇಳಿ ಇಡೀ ದೇಶವೇ ದಂಗಾಯಿತು. ಕಾರಣ ದೇಶದ ಪ್ರದಾನಿ ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಅಂಗರಕ್ಷಕರಿಂದಲೇ ಗುಂಡಿನ ದಾಳಿಗೀಡಾಗಿ ಹತರಾಗಿದ್ದರು."
ಕೇರಳದ ಎಂ.ಈ.ಎಸ್ ಕಾಲೇಜಿನ ಕಾಂಪೌಂಡಿನ ಮೇಲೆ ಆ ವೃದ್ಧರು ಬರೆದಿದ್ದ ವಾಕ್ಯಗಳನ್ನು ಓದಿದವರಿಗೆ ಆಗ ಮನವರಿಕೆಯಾಯಿತು ಆ ವಾಕ್ಯಗಳನ್ನು ಬರೆದ ವ್ಯಕ್ತಿ ಸಾಮಾನ್ಯರಲ್ಲ. ಅಲ್ಲಿ ದೂರದ ದೆಹಲಿಯಲ್ಲಿ ಗುಂಡಿನ ದಾಳಿ ನಡೆಯುತ್ತಿದ್ದರೆ ಅದು ಕೇರಳದಲ್ಲಿರುವ ವೃದ್ದರೊಬ್ಬರಿಗೆ ತಿಳಿಯಲು ಸಾಧ್ಯವಾಗಿದೆಯೆಂದರೆ ಕರಾಮತ್ತಿನ ಪದವಿಗೇರಿದವರಿಗಲ್ಲದೆ ಮತ್ಯಾರಿಗೂ ಇಂತಹ ವಿಷಯಗಳು ತಿಳಿಯಲು ಸಾಧ್ಯವೇ ಇಲ್ಲ ಎಂಬ ಸತ್ಯ ಅವರೆಲ್ಲರಿಗೂ ಮನವರಿಕೆಯಾಯಿತು.
ಕೇರಳದಲ್ಲಿದ್ದರೂ ದೂರದ ದೆಹಲಿಯಲ್ಲಿ ಗುಂಡಿನ ದಾಳಿ ನಡೆದಿದ್ದನ್ನು ಕಣ್ಣಾರೆ ಕಂಡವರಂತೆ ಗೇೂಡೆ ಬರಹದ ಮೂಲಕ ತಿಳಿಸಿ ಜನಸಾಮಾನ್ಯರನ್ನು ಆಶ್ಚರ್ಯಚಕಿತರನ್ನಾಗಿಸಿದ ಆ ವಯೇೂವೃದ್ಧರೇ *ವಲಿಯುಲ್ಲಾಹಿ ಜಮಾಲುಲ್ ಔಲಿಯಾ ಆರಿಫ್ ಬಿಲ್ಲಾಹಿ ಅಂದ್ರಪ್ಪಾಪ (ಖ.ಸಿ)ರವರು.*
ಎತ್ತ ಹೇೂಗುವಾಗಲೂ ಇದ್ದಿಲಿನ ತುಂಡೊಂದನ್ನು ಸದಾ ಕೈಯಲ್ಲಿಟ್ಚುಕೊಳ್ಳುತ್ತಿದ್ದ ಆ ಮಹಾನರು ಹಲವಾರು ಸಂಗತಿಗಳನ್ನು ಗೇೂಡೆ ಬರಹದ ಮೂಲಕ ಬರೆದು ಜನಸಾಮಾನ್ಯರಿಗೆ ತರುವ ಪ್ರಯತ್ನ ಮಾಡುತ್ತಿದ್ದರು.
ಅವಿಶ್ರಾಂತವಾದ ಇಲಾಹಿ ಸ್ಮರಣೆಯ ಮೂಲಕ ಅಲ್ಲಾಹನಿಂದ ವಿಲಾಯತಿನ ಪದವಿ ಪಡೆದಿದ್ದರೂ ಯಾರೊಬ್ಬರ ಅರಿವಿಗೂ ಬಾರದೆ ಎಲೆಮರೆಯ ಕಾಯಿಯಂತೆ ಜೀವಿಸುತ್ತಿದ್ದ ವಲಿಯುಲ್ಲಾಹಿ ಅಂದ್ರುಪ್ಪಾಪ (ರ)ರವರ ಕರಾಮತ್ತಿನ ಅರಿವಾದ ನಂತರ ಜಾತಿ ಮತ ಬೇಧವಿಲ್ಲದೆ ಜನಸಾಮಾನ್ಯರೆಲ್ಲರೂ ಅವರನ್ನು ಸಮೀಪಿಸಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲಾರಂಭಿಸಿದರು.
ಅಂದ್ರುಪ್ಪಾಪ (ರ) ಎಂದೇ ಗುರುತಿಸಲ್ಪಡುವ ಆ ಮಹಾನರು ತಲಶ್ಶೇರಿ ಸಮೀಪದ ಚೊಕ್ಲಿ ಎಂಬಲ್ಲಿ ಖಲಂದರ್ ಮುಸ್ಲಿಯಾರ್ (ಖ:ಸಿ) ರವರ ಪುತ್ರರಾಗಿ ಜನಿಸಿದರು.
ತಮ್ಮ ಮಹಲ್ಲಿನ ಮದರಸದಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಗಳಿಸಿದ ನಂತರ ಪೆರುಂಗತ್ತೂರ್ ಪಳ್ಳಿ ದರ್ಸಿನಲ್ಲಿ ವ್ಯಾಸಂಗವನ್ನು ಮುಂದುವರಿಸಿದರು.
ತಮ್ಮ ಹದಿನೈದನೇ ವಯಸ್ಸಿನಲ್ಲಿ ಮಲಬಾರಿನ ಮಕ್ಕಾ ಎಂದೇ ಪ್ರಸಿದ್ಧಿ ಪಡೆದಿರುವ ಪೊನ್ನಾನಿಯಲ್ಲಿ ಪಯ್ಯನಾಡ್ ಮಮ್ಮದ್ ಮುಸ್ಲಿಯಾರ್ (ನ:ಮ), ಆಲುವಾಯಿ ಅಬೂಬಕರ್ ಮುಸ್ಲಿಯಾರ್ (ನ:ಮ), ವಾಯಕಾಡ್ ಮುಹಮ್ಮದ್ ಮುಸ್ಲಿಯಾರ್ (ನ:ಮ) ರಂತಹ ಮಹಾತ್ಮರ ಶಿಷ್ಯರಾಗಿ ಉನ್ನತ ವಿದ್ಯಾಭ್ಯಾಸ ಗಳಿಸಿದರು.
ಸದ್ಗುಣ ಸಂಪನ್ನತೆಯ ಪ್ರತೀಕದಂತಿದ್ದ ಅಂದ್ರುಪ್ವಾಪ (ರ)ರವರು ಸೂಕ್ಷ್ಮತೆಯಿಂದ ಕಳಂಕರಹಿತವಾದ ಜೀವನ ಸಾಗಿಸುತ್ತಾ ಅಲ್ಲಾಹನ ಸಂಪ್ರೀತಿ ಗಳಿಸುವಲ್ಲಿ ಯಶಸ್ವಿಯಾದರು.
ಆದ್ಯಾತ್ಮಿಕ ಲೇೂಕದ ಮಹಾತ್ಮರನ್ನು ಹಾಗೂ ಅವರ ನೇತೃತ್ವದ ಸಂಸ್ಥೆಗಳನ್ನು ಬಹಳ ಗೌರವಾದರಗಳಿಂದ ಕಾಣುತ್ತಿದ್ದ ಅಂದ್ರುಪ್ಪಾಪ (ರ) ರವರು ತಿರುವೆಗಪ್ಪುರಂ ಮಮ್ಮದ್ ಮುಸ್ಲಿಯಾರ್ ಶಾದುಲಿ (ರ), ವಡಕರ ಮಮ್ಮದಾಜಿ ತಂಙಳ್ (ರ), ಸಯ್ಯಿದ್ ಹಿಬತ್ತುಲ್ಲಾಹಿ ಬುಖಾರಿ ಚಾವಕ್ಕಾಡ್ (ರ), ಕಕ್ಕಿಡಿಪುರಂ ಅಬೂಬಕರ್ ಮುಸ್ಲಿಯಾರ್ (ರ), ಅಂಬಿಕುನ್ನು ಬೀರಾನ್ ಔಲಿಯಾ (ರ), ಕಾಳತ್ತೇೂಡ್ ಕಮ್ಮು ಕುಟ್ಟಿ ಮುಸ್ಲಿಯಾರ್ (ರ), ಪೊನ್ಮಾನಿಕುಡಂ ಉಣ್ಣಿನ್ ಮುಸ್ಲಿಯಾರ್ (ರ), ಪಕೀರ್ ಹಾಜಿ ಕರೂಪಡಣ (ರ) ಕಾರಕ್ಕಾಡ್ ಮಾನು ಮುಸ್ಲಿಯಾರ್ (ರ), ಸಿ. ಎಂ. ವಲಿಯುಲ್ಲಾಹಿ (ರ) ಮುಂತಾದ ಮಹಾತ್ಮರೊಂದಿಗೆ ಆದ್ಯಾತ್ಮಿಕ ಗೆಳೆತನ ಬೆಳೆಸಿದರು.
ಸದಾ ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಅಂದ್ರುಪ್ಪಾಪ (ರ)ರವರು ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಮಹಾತ್ಮರುಗಳ ಮಕ್ಬರ ಝಿಯಾರತ್ ಮಾಡುವುದರಲ್ಲಿ ಬಹಳ ಆಸಕ್ತಿ ವಹಿಸುತ್ತಿದ್ದರು.
ಚಿಕ್ಕಂದಿನಿಂದ ಧಾರ್ಮಿಕ ವಿಷಯಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಅಂದ್ರುಪ್ಪಾಪ (ರ)ರವರು ಧಾರ್ಮಿಕ ಪಠಣಕ್ಕಾಗಿ ತಮ್ಮ ಎಂಟನೇ ವಯಸ್ಸಿನಲ್ಲಿ ಮನೆ ಬಿಟ್ಟು ತೆರಳಿದವರು ಮನೆಗೆ ಹಿಂದಿರುಗಿರುವುದು ತಮ್ಮ ಸಹೇೂದರಿಯ ನಿಖಾಹಿನ ಸಮಯದಲ್ಲಾಗಿತ್ತು. ಕೆಲ ಸಯಯದ ಬಳಿಕ ಪುನಃ ಮನೆ ಬಿಟ್ಚು ತೆರಳಿದ ಅವರನ್ನು ಅವರ ಬಂಧು ಬಾಂಧವರ ಒತ್ತಾಯದ ಮೇರೆಗೆ 1996ಕ್ಕೆ ಮನೆಗೆ ಹಿಂದಿರುಗಿದರು. ಆಗ ಅವರು ವೃದ್ಧಾಪ್ಯ ತಲುಪಿದ್ದರು.
ಅಷ್ಟರಲ್ಲಾಗಲೇ ಅಂದ್ರುಪ್ಪಾಪ (ರ)ರವರು ಆಧ್ಯಾತ್ಮಿಕ ಲೇೂಕದಲ್ಲಿ ಗುರುತಿಸಿಕೊಂಡು ನೊಂದ ಜನಸಾಮಾನ್ಯರಿಗೆ ಸಾಂತ್ವಾನ ಅಭಯ ಕೇಂದ್ರವಾಗಿ ಕೇರಳದ ಮುಸ್ಲಿಂ ಜನಮಾನಸದಲ್ಲಿ ಮನೆ ಮಾತಾಗಿದ್ದರು.
ದೀನಿ ವಿದ್ಯೆ ಕಲಿಯುವ ಮುತಅಲ್ಲಿಮರುಗಳನ್ನು ಬಹುವಾಗಿ ಪ್ರೀತಿಸುತ್ತಿದ್ದ ಮಹಾನರು ಮುತಅಲ್ಲಿಮರನ್ನು ಎಲ್ಲೇ ಕಂಡರೂ ಆತ್ಮೀಯತೆಯಿಂದ ಮಾತನಾಡಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.
ಅಂದ್ರುಪ್ಪಾಪ (ರ)ರವರು ಕೇರಳದಾದ್ಯಂತ ಮನೆಮಾತಾದ ನಂತರ ಅವರ ಭೇಟಿಗಾಗಿ ಜನ ಜಾತ್ರೆಯಂತೆ ನೆರೆಯುತ್ತಿದ್ದರು. ಜನರ ಸಂದರ್ಶನದ ಕಾರಣದಿಂದ ಇಲಾಹಿ ಸ್ಮರಣೆಗೆ ತೊಡಕುಂಟಾದಾಗ ಮಾನಸಿಕವಾಗಿ ಬಹಳ ನೊಂದು ಕೊಳ್ಳುತ್ತಿದ್ದರು.
ಆಧ್ಯಾತ್ಮಿಕ ಲೇೂಕದ ಅಪೂರ್ವ ತೇಜಸ್ಸಿನಂತೆ ಕಂಗೊಳಿಸುತ್ತಿದ್ದ ಅಂದ್ರುಪ್ಪಾಪ (ರ)ರವರು 2000ನೇ ಇಸ್ವಿ ನನ್ನ ಪಾಲಿಗೆ ಒಳ್ಳೆಯ ಸಮಯವಾಗಿದೆ. ನನ್ನೆಲ್ಲಾ ಸಮಸ್ಯೆಗಳಿಗೂ ಆ ವರ್ಷ ಪರಿಹಾರ ಲಭಿಸಲಿದೆ ಎನ್ನುತ್ತಿದ್ದರು.
ಅಂದ್ರುಪ್ಪಾಪ (ರ)ರವರ ಈ ಮಾತುಗಳು ಅವರ ವಫಾತಿನ ಸೂಚನೆಯಾಗಿತ್ತು. ಅಂತೆಯೇ 2000 ನೇ ಇಸ್ವಿ ಫೆಬ್ರವರಿ 27 ರಂದು ಆ ಮಹಾತ್ಮರು ಇಹಲೇೂಕಕ್ಕೆ ವಿದಾಯ ಹೇಳಿದರು.
ಕಣ್ಣೂರು ಜಿಲ್ಲೆಯ ಪಾನೂರು ಸಮೀಪದ ಚೊಕ್ಲಿ ಪೂಕೊಂ ವಲಿಯಾಂಡಿಪ್ಪಿಡಿಕ ಎಂಬ ಸ್ಥಳದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಅಂದ್ರುಪ್ಪಾಪ (ರ)ರವರ ಮಕ್ಬರ ಪ್ರಮುಖ ಝಿಯಾರತ್ ಕೇಂದ್ರಗಳಲ್ಲೊಂದಾಗಿದೆ.
⚠⚠⚠⚠⚠⚠⚠⚠⚠
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment