*SSF ಸದಸ್ಯತ್ವ ಅಭಿಯಾನ 2018 ನವೆಂಬರ್ 01-15*
🇸🇱🇸🇱🇸🇱🇸🇱🇸🇱🇸🇱🇸🇱🇸🇱
✍ ಗಫೂರ್ ಬಾಯಾರ್
♻♻♻♻♻♻♻♻
ಮರ್ಹೂಂ ಶಫೀಕ್ ಪೆರಿಂಬಲಂ ಎಂಬ ಸುನ್ನಿ ಕಾರ್ಯಕರ್ತ ಇಹಲೋಕಕ್ಕೆ ವಿದಾಯ ಹೇಳಿ ಏಳು ವರ್ಷಗಳು ಗತಿಸಿದರೂ ಪ್ರತಿ ಶುಕ್ರವಾರ ಸುಬ್'ಹಿ ನಮಾಜಿನ ನಂತರ ಆತನ ಖಬರಿನ ಬಳಿ ನಿಂತು ಫಾತಿಹಾ ಸೂರತ್ ಪಾರಾಯಣ ಮಾಡಿ ಎರಡು ಕೈಗಳನ್ನೂ ಎತ್ತಿ ಆತನ ಪರಲೋಕ ವಿಜಯಕ್ಕಾಗಿ ಅಲ್ಲಾಹನಲ್ಲಿ ಮೊರೆಯಿಡುವ ವಿಶ್ವಾಸಿಗಳ ಜನಜಂಗುಳಿ ಇಂದಿಗೂ ಮುಂದುವರೆದಿದೆ.
ಹಾಗೆಯೇ ಇರ್ಷಾದ್ ಮತ್ತು ಸ್ವಾಬಿರ್ ಎಂಬ ಸುನ್ನಿ ಕಾರ್ಯಕರ್ತರು ವಿಧಿವಶರಾದ ಕೆಲವೇ ಗಂಟೆಗಳ ಅಂತರದಲ್ಲಿ ಇವರುಗಳ ಹೆಸರಿನಲ್ಲಿ ಹದಿಯಾ ಆದ ತಹ್ಲೀಲ್ ಮತ್ತು ಖತ್ಮುಲ್ ಕುರ್ಆನಿನ ಲೆಕ್ಕ ನೋಡಿದಾಗ ರೋಮಾಂಚಿತರಾಗದ ವಿಶ್ವಾಸಿಗಳೇ ಇಲ್ಲವೇನೋ....
ಅಂತೆಯೇ
ಮರ್ಹೂಂ ಒ ಖಾಲಿದ್....
ವೆಳ್ಳಿಲ ಫೈಝಿ ಉಸ್ತಾದ್....
ಯೂಸುಫ್ ಸಖಾಫಿ....
ಶಫೀಕ್ ಪೆರಿಂಬಲಂ..
ಝುಬೈರ್ ಫಾಳಿಲಿ..
ಇರ್ಷಾದ್....
ಸ್ವಾಬಿರ್....
ಶದಬ್ ಪೊಸೋಟ್....
ರಫೀಕ್ ಸಖಾಫಿ ಚೆರಿಯಪರಂಬ್....
ಅರ್ಫಾನ್ ಕರ್ವೆಲ್....
ಫಾರಿಸ್ ಮಜೀರ್ ಪಲ್ಲ....
ಮುಹ್ಸಿನ್ ಕೆ. ಸಿ. ನಗರ....
ಹೀಗೆ ಹೆಸರುಗಳನ್ನು ಪಟ್ಟಿ ಮಾಡಿ ವಿವರಿಸುತ್ತಾ ಹೋದರೆ ವಿವರಿಸಲು ಪುಟಗಳೂ ಸಾಲದು ಮತ್ತು ಅವರ ಸೌಭಾಗ್ಯಗಳನ್ನು ಬಣ್ಣಿಸಲು ಪದಗಳೂ ಸಾಲದು.
ಮರ್ಹೂಂ ಓ. ಖಾಲಿದ್'ರವರ ಕಾರ್ಯವೈಖರಿಯನ್ನಂತೂ ಮನಸಾರೆ ಮೆಚ್ಚಿದ ಪ್ರಮುಖ ಸೂಫಿವರ್ಯರಾದ ಶೈಖುನಾ ಎಂ.ಎ. ಉಸ್ತಾದರೇ (ನ:ಮ) ಓ. ಖಾಲಿದ್ ತಮಗೂ ಮಾದರಿ ಎಂದಿರುವ ನುಡಿಮುತ್ತುಗಳು ಗಮನಾರ್ಹ.
ಇದನ್ನೆಲ್ಲ ಕೇಳುವಾಗ ಇವರಿಗೆಲ್ಲ ಆ ಸೌಭಾಗ್ಯ ಲಭಿಸಿದ್ದಾದರೂ ಹೇಗೆ? ಆ ಬಗ್ಗೆ ತಿಳಿದಿದ್ದರೆ ತಾನೂ ಸಹ ಆ ಹಾದಿಯಲ್ಲಿ ಮುನ್ನಡೆಯಬಹುದಿತ್ತು ಎಂದು ವಿಶ್ವಾಸಿಯ ಮನ ಆಶಿಸದಿರದು.
ನಿಜ ಹೇಳಬೇಕೆಂದರೆ, ಇಹಲೋಕಕ್ಕೆ ವಿದಾಯ ಹೇಳಿದ ಗಂಟೆಗಳ ಅಂತರದಲ್ಲಿ ಲಕ್ಷಾಂತರ ತಹ್ಲೀಲ್ ಮತ್ತು ಸಾವಿರಾರು ಖತಮುಲ್ ಕುರ್ಆನ್‌ಗಳ ಹದಿಯಾಕ್ಕೆ ಭಾಜನರಾದ ಇವರ್ಯಾರೂ ಹೆಸರಾಂತ ಮನೆತನದವರಾಗಲಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ ಪ್ರಸಿದ್ಧ ವ್ಯಕ್ತಿಗಳಾಗಲೀ ಅಥವಾ ಉನ್ನತ ರಾಜಕೀಯ ಸ್ಥಾನಮಾನ ಗಳಿಸಿದ ಗಣ್ಯ ವ್ಯಕ್ತಿಗಳಾಗಲಿ ಆಗಿರಲಿಲ್ಲ. ಮಾತ್ರವಲ್ಲ ಯಾವ ಪ್ರಸಿದ್ಧಿ, ಪುರಸ್ಕಾರಗಳಿಂದಲೂ ಇಂತಹ ಸೌಭಾಗ್ಯವನ್ನು ಪಡೆಯಲು ಸಾಧ್ಯವೂ ಇಲ್ಲ ಎನ್ನುವುದು ಬೇರೆ ವಿಷಯ.
ಆದರೆ ಸಾವಿರಾರು ಜನ ಇವರುಗಳ ಅಂತ್ಯ ಕರ್ಮಗಳಲ್ಲಿ ಪಾಲ್ಗೊಂಡು ಜನಾಝ ನಮಾಝ್ ನಿರ್ವಹಿಸಿ ಇವರುಗಳ ಪರಲೋಕ ವಿಜಯಕ್ಕಾಗಿ ಅಲ್ಲಾಹನಲ್ಲಿ ಮೊರೆಯಿಡಲು ಕಾರಣ ಇವರು ತಮ್ಮ ಜೀವನದಲ್ಲಿ ಮಹತ್ತರವಾದ ಒಂದು ದೀನಿ ಸಂಘಟನೆಯ ಸದಸ್ಯತ್ವ ಸ್ವೀಕರಿಸಿದ್ದರು. ಅದುವೇ ಎಸ್ ಎಸ್ ಎಫ್ ಅಥವಾ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ನ ಸದಸ್ಯತ್ವ.
ಹೌದು *ಎಸ್ ಎಸ್ ಎಫ್* ಎಂದರೆ ಅಲ್ಲಾಹನ ದೀನಿನ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಆಲೀಂಗಳೆಂಬ ದೀನೀ ವಿದ್ವಾಂಸರ ನೇತೃತ್ವದಲ್ಲಿ ಸುನ್ನತ್ ಜಮಾಅತಿನ ಆಶಯ ಆದರ್ಶಗಳಿಗೆ ಪೂರಕವಾಗಿ ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ.
ತನ್ನ ಸಂಘಟನೆಯ ಕಾರ್ಯಕರ್ತನೊಬ್ಬ ಮರಣ ಹೊಂದಿದಾಗ ಸಂಘಟನೆಯ ನೇತೃತ್ವ ವಹಿಸಿದ ಆಲಿಂಗಳು ಖತಮುಲ್ ಕುರ್‌ಆನ್ ಮತ್ತು ತಹ್ಲೀಲ್ ಸಮರ್ಪಿಸಲು ಕರೆ ನೀಡಿದ ತಕ್ಷಣ ತಹ್ಲೀಲ್ ಮತ್ತು ಖತಮುಲ್ ಕುರ್-ಆನಿನ ಪ್ರವಾಹವೇ ಆ ಕಾರ್ಯಕರ್ತನ ನೆರವಿಗಾಗಿ ಆತನ ಖಬರಿಗೆ ಧಾವಿಸುತ್ತದೆ.
*ಒಟ್ಟಿನಲ್ಲಿ ದೀನೀ ಪಂಡಿತರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯಾದ ಎಸ್‌ಎಸ್‌ಎಫ್‌ನ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ನವೆಂಬರ್ ಹದಿನೈದಕ್ಕೆ ಕೊನೆಯ ದಿನಾಂಕವಾಗಿರುತ್ತದೆ. ಹಾಗಾಗಿ ದೀನೀ ಪ್ರೇಮಿಗಳು ಈ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಸದಸ್ಯತ್ವ ಸ್ವೀಕರಿಸುವುದರೊಂದಿಗೆ ಸಂಘಟನೆಯನ್ನು ಬಲಪಡಿಸಲು ಕೈ ಜೋಡಿಸಬೇಕಾಗಿ ಮನವಿ.*
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
♻♻♻♻♻♻♻♻♻
No comments:
Post a Comment