*ಝಿಯಾರತ್ತ್ ಕೇಂದ್ರ*
👉🏻👉🏻 7⃣9⃣
➖➖➖➖➖➖➖
*ಕಲ್ಲಡಿ ಮಸ್ತಾನ್ ವಲಿಯ್ಯುಲ್ಲಾಹಿ (ಖ:ಸಿ)*
*ಬಿಮಾಪಳ್ಳಿ ತಿರುವನಂತಪುರಂ*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ _ಗಫೂರ್ ಬಾಯಾರ್_
**********************
ಕೇರಳದ ಹೆಸರಾಂತ ಝಿಯಾರತ್ ಕೇಂದ್ರಗಳಲ್ಲೊಂದಾದ ತಿರುವನಂತಪುರಂ ಸಮೀಪದ ಬಿಮಾ ಪಳ್ಳಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದ್ ಶುಹದಾ ಮಾಹಿನ್ ಅಬೂಬಕರ್ (ರ)ರವರು ಶಹೀದಾದ ಸ್ಥಳದಲ್ಲಿರುವ (ಮರುನ್ನು ಕಿಣರ್) "ಔಷಧಿಯ ಬಾವಿ" ಸಮೀಪ ಕಲ್ಲಡಿ ಮಸ್ತಾನ್ ಉಪ್ಪಾಪ (ರ)ಎಂಬ ಮಹಾನರು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ಮೂಲತಃ ತಮಿಳುನಾಡಿನವರಾದ ಮಸ್ತಾನ್ ಉಪ್ಪಾಪ (ರ)ರವರು ಇಂದಿನಂತೆ ಯಾತ್ರಾ ಸೌಕರ್ಯವಿಲ್ಲದ ಆ ಕಾಲದಲ್ಲಿ ಬಿಮಾಪಳ್ಳಿಯ ಝಿಯಾರತ್ ನಿಮಿತ್ತ ಹಳ್ಳ ಕೊಳ್ಳಗಳನ್ನು ದಾಟಿ ಬೆಟ್ಟ ಗುಡ್ಡಗಳ ದುರ್ಗಮ ಹಾದಿಯಲ್ಲಿ ಬಿಮಾ ಪಳ್ಳಿಗೆ ತಲುಪಿದರು.
ಹಾಗೆ ಬಿಮಾ ಪಳ್ಳಿಗೆ ತಲುಪಿದ ಮಸ್ತಾನ್ ಉಪ್ಪಾಪ (ರ) ರವರಿಗೆ ಬಿಮಾ ಪಳ್ಳಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸಯ್ಯಿದ್ ಶುಹದಾ ಮಾಹಿನ್ ಅಬೂಬಕರ್ (ರ) ರವರು ಕನಸಿನಲ್ಲಿ ನೀಡಿದ ಸಲಹೆಯ ಮೇರೆಗೆ ಬಿಮಾ ಪಳ್ಳಿಯಲ್ಲೇ ವಾಸ್ತವ್ಯ ಹೂಡಿದರು.
ಸದಾ ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಮಸ್ತಾನ್ ಉಪ್ಪಾಪ (ರ)ರವರು ಇಹಲೇೂಕದ ಪರಿವಿಲ್ಲದ "ಮಜ್‌ದೂಬಾ" ಆಗಿದ್ದರು. (ಅನ್ನಾಹಾರ, ವಸ್ತ್ರ, ಕಾಲ, ಸ್ಥಳ ಇದ್ಯಾವುದರ ಪರಿವೂ ಇಲ್ಲದೆ ಸಂಪೂರ್ಣವಾಗಿ ಅಲ್ಲಾಹನ ಸ್ಮರಣೆಯಲ್ಲಿ ತೊಡಗಿಸಿಕೊಳ್ಳುವ ಸ್ಥಿತಿಗೆ ಮಜ್‌ದೂಬಾ ಎನ್ನುತ್ತಾರೆ. ಕಾರಣ ಅಂಥವರು ನೋಡುವವರ ಕಣ್ಣಿಗೆ ಮಾನಸಿಕ ಸ್ಥಿಮಿತ ಕಳೆದು ಕೊಂಡವರಂತೆ ಕಾಣಬಹುದು)
ಹಾಗೆ ಐಹಿಕ ಲೇೂಕದ ಪರಿವಿಲ್ಲದೆ ಸದಾ ಇಲಾಹಿ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದ ಮಹಾನರನ್ನು ಕಂಡ ಹಲವರು ಅವರನ್ನು ಮಾನಸಿಕ ಅಸ್ವಸ್ಥರಾಗಿರಬಹುದೆಂದು ಭಾವಿಸಿದ್ದರು. ಮಾತ್ರವಲ್ಲ ಕೆಲವರು ಕೀಟಲೆಯನ್ನೂ ಮಾಡುತ್ತಿದ್ದರು. ಆದರೆ ಇಲಾಹಿ ಸ್ಮರಣೆಯನ್ನೇ ಉಸಿರಾಗಿಸಿಕೊಂಡಿದ್ದ ಮಹಾನರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಮಹಾನರು ಒಮ್ಮೆ ವಲಿಯುಲ್ಲಾಹಿ ಕಣಿಯಾಪುರಂ ಅಬ್ದುರ್ರಝಾಕ್ (ರ) ರವರ ಮಹತ್ವವನ್ನು ವಿವರಿಸಿದರು. ಕಣಿಯಾಪುರಂ ಅಬ್ದುರ್ರಝಾಕ್ (ರ)ರವರ ಮಹತ್ವದ ಬಗ್ಗೆ ಅಲ್ಪ ಸ್ವಲ್ಪ ಅರಿತಿದ್ದ ಜನಸಾಮಾನ್ಯರಿಗೆ ಈ ವಿವರಣೆಯ ನಂತರ ಮಸ್ತಾನ್ ಉಪ್ಪಾಪ (ರ) ರವರು ವಿಲಾಯತ್ತಿನ ಪದವಿಗೇರಿದ ಸಾತ್ವಿಕರಾಗಿದ್ದಾರೆಂಬುದು ಜನತೆಗೆ ಮನವರಿಕೆಯಾಯಿತು.
ಅನಂತರ ಮಹಾನರನ್ನು ಜನ ಜಾತಿ ಮತ ಭೇದವಿಲ್ಲದೆ ತುಂಬು ಗೌರವದಿಂದ ಆಧರಿಸಲಾರಂಭಿಸಿದರು. ಹಾಗೂ ತಮ್ಮ ಕಷ್ಟ-ಕಾರ್ಪಣ್ಯ, ನೇೂವು ಮತ್ತು ಸಂಕಟಗಳಿಗೆ ಮಹಾನರ ಬಳಿ ಆಗಮಿಸಲಾರಂಭಿಸಿದರು.
ವಿಲಾಯತ್ತಿನ ಉನ್ನತ ಪದವಿಗೇರಿದ್ದ ಮಹಾನರು ಹಲವಾರು ಕರಾಮತ್ತುಗಳನ್ನು ಕಾಣಿಸಿದ್ದಾರೆ.
ಮಹಾನರ ಬರ್ಕತ್'ನಿಂದ ಅಲ್ಲಾಹನು ನಮ್ಮೆಲ್ಲರಿಗೂ ಆಫಿಯತ್ ನಿಂದೊಡಗೂಡಿದ ದೀರ್ಘಾಯಸ್ಸನ್ನು ಕರುಣಿಸಿ ಅನುಗ್ರಹಿಸಲಿ ಆಮೀನ್.
🆘🆘🆘🆘🆘🆘🆘
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment