*ನಮ್ಮ ಬೇಡಿಕೆಗಳನ್ನು ಅಲ್ಲಾಹನು ಈಡೇರಿಸಬೇಕಾದರೆ, ಅಲ್ಲಾಹನ ಬೇಡಿಕೆಗಳನ್ನು ನಾವು ಕೂಡಾ ಈಡೇರಿಸಬೇಕು.!*
ಅಲ್ಲಾಹನ ಮುಂದೆ ಸಮರ್ಪಿಸಬೇಕಾದಂತಹ ಹಲವಾರು ಬೇಡಿಕೆಗಳು ನಮ್ಮ ಮುಂದೆ ಇದೆ.
ಆರೋಗ್ಯ, ದೀರ್ಘಾಯುಷ್ಯ, ಸಂಪತ್ತು, ಸುಖ-ಸಂತೋಷ ಇನ್ನೂ ಹಲವಾರು.
ಇವುಗಳಲ್ಲಿ ಪ್ರಮುಖವಾದುದು *ಪರಲೋಕ ವಿಜಯ* ವಾಗಿದೆ.
ಅಲ್ಲಾಹನು ಈ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಬೇಕಾದರೆ, ಅಲ್ಲಾಹನ ಬೇಡಿಕೆಯನ್ನು ನಾವು ಕೂಡಾ ಈಡೇರಿಸಬೇಕಾದದ್ದು ಅವಶ್ಯಕವಾಗಿದೆ.
ಅಂತಹ ಒಂದು ಸುವರ್ಣಾವಕಾಶ ಇಂದು ನಮ್ಮ ಪಾಲಿಗೆ ಬಂದೊದಗಿದೆ.
ಅದುವೇ ಇಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ *Connect-2018, ಸಾಮುದಾಯಿಕ ಸಮ್ಮಿಳನ* ಕಾರ್ಯಕ್ರಮ.
*ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವ ಮೂಲಕವಾಗಿದೆ ನಾವು ಅಲ್ಲಾಹನ ಬೇಡಿಕೆಯನ್ನು ಈಡೇರಿಸಬೇಕಾದುದು.*
ಅಹ್ಲುಸ್ಸುನ್ನತಿ ವಲ್ ಜಮಾಹತಿನ ನೈಜ ಸಿದ್ದಾಂತದ ಸಂರಕ್ಷಣೆಯು ಅಲ್ಲಾಹನ ಬೇಡಿಕೆಯಾಗಿದೆ.
ಅದರ ಪ್ರಮುಖ ಭಾಗವಾಗಿದೆ *ಸುನ್ನತ್ ಜಮಾಹತ್* ಕಾರ್ಯಕ್ರಮಗಳು.
ಸುನ್ನತ್ ಜಮಾಹತ್ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಲು ನಾವು ಶ್ರಮಿಸುವುದು, ಅಲ್ಲಾಹನ ಬೇಡಿಕೆಯನ್ನು ಈಡೇರಿಸಲು ಶ್ರಮಿಸುವುದಕ್ಕೆ ಸಮ.
ಆದುದರಿಂದ, ಇಂದು ಮಂಗಳೂರಿನಲ್ಲಿ ನಡೆಯಲಿರುವ *Connect:18, ಸಾಮುದಾಯಿಕ ಸಮ್ಮಿಳನ* ಕಾರ್ಯಕ್ರಮದಲ್ಲಿ ಭಾಗವಹಿಸೋಣ, ಯಶಸ್ವಿಗೊಳಿಸೋಣ, ಅಲ್ಲಾಹು ಅನುಗ್ರಹಿಸಲಿ, ಆಮೀನ್.
*ಇದಕ್ಕೆ ಪ್ರತಿಫಲವಾಗಿ ಅಲ್ಲಾಹು ನಮಗೆಲ್ಲರಿಗೂ ಸ್ವರ್ಗವನ್ನು ದಯಪಾಲಿಸಲಿ, ಆಮೀನ್.*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ*
No comments:
Post a Comment