*#ಝಿಯಾರತ್ತ್ #ಕೇಂದ್ರ*
6⃣9⃣
➖➖➖➖➖➖➖➖➖
*ಮುಹ್ಯಿದ್ದೀನ್ ರಾತಿಬ್'ನ ಕರ್ತೃ ಸಯ್ಯಿದ್ ಇಬ್'ರಾಹೀಂ ಸಕ್ರಾನ್ ಅಲ್ ಬುಖಾರಿ (ರ) ಕಣ್ಣೂರು ಸಿಟಿ. ಕಣ್ಣೂರು*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
***********************
ಅಲ್ಲಾಹನ ಏಕತ್ವವನ್ನು ವಿಶ್ವಾಸೀ ಹೃದಯಗಳು ದೃಢೀಕರಿಸಿ ಬದುಕಿನುದ್ದಕ್ಕೂ ಅವನ ದಿವ್ಯ ಸ್ಮರಣೆಯೊಂದಿಗೆ ಕಾಯಾ ವಾಚಾ ಮನಸಾ ಇಬಾದತ್ ನಡೆಸುತ್ತಾ ಇಹಪರ ವಿಜಯದ ಹಾದಿ ಸುಗಮವಾಗಿಸುವ ಸಂಸ್ಕರಣೇೂಪಾದಿಗಳಲ್ಲೊಂದಾಗಿದೆ *ಮುಹ್ಯಿದ್ದೀನ್ ರಾತಿಬ್.*
ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ)ರವರ ಆಧ್ಯಾತ್ಮಿಕ ಸಂಸ್ಕರಣ ಪರಂಪರೆಯಿಂದ ಪ್ರೇರಿತರಾದ ಶೈಖ್ ಜೀಲಾನಿ (ರ)ರವರ ಅನುಯಾಯಿಗಳು ಶೈಖ್'ರವರ ನಾಮದೇಯದಲ್ಲಿ ಅವರ ಬದುಕಿನಿಂದ ಕ್ರೂಡೀಕರಿಸಿದ ಅದ್ಸ್'ಕಾರ್ ಹಾಗೂ ಖುರ್'ಆನ್ ಮತ್ತು ಸುನ್ನತ್ತಿನ ದ್ಸಿಕ್ರ್ ಅಡಕವಾದ ತೌಹೀದಿನ ವ್ಯಾಖ್ಯಾನ ಮತ್ತು ತತ್ವಗಳನ್ನೊಳಗೊಂಡ ಸ್ವಲಾತ್ ಆಗಿದೆ "ಮುಹ್ಯಿದ್ದೀನ್ ರಾತಿಬ್"
ಸೃಷ್ಟಿಕರ್ತನಾದ ಅಲ್ಲಾಹನ ವಿಶೇಷತೆಗಳನ್ನೂ ಮತ್ತು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ರಿಸಾಲತ್ತಿನ ವೈಶಿಷ್ಟ್ಯತೆಗಳ ಜೊತೆಗೆ ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ)ರವರ ಹೃದಯವನ್ನು ಆಧ್ಯಾತ್ಮಿಕವಾಗಿ ಸಂಸ್ಕರಿಸಿದ ಆ ಸಂಸ್ಕರಣಾ ಪ್ರಕ್ರಿಯೆಗಳ ಮಹತ್ವವನ್ನು ಎತ್ತಿ ಹೇಳುವ ಪದ್ಯಗಳೂ ಇದರಲ್ಲಿ ಒಳಗೊಂಡಿದ್ದು ತಸವ್ವುಫ್ ಮತ್ತು ಇಲ್ಮು ತಝ್ಕಿಯದಲ್ಲಿ ಒಲವುಳ್ಳವರಿಗೆ ಇದೊಂದು ಅಮೂಲ್ಯ ನಿಧಿಯಾಗಿದೆ.
ಇಷ್ಟೊಂದು ಮಹತ್ವಪೂರ್ಣವಾದ ಮುಹ್ಯಿದ್ದೀನ್ ರಾತಿಬ್'ಅನ್ನು ಕ್ರೂಡೀಕರಿಸಿ ಸುನ್ನೀ ಸಮುದಾಯಕ್ಕೆ ಸಮರ್ಪಿಸಿದವರು *ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್'ನ ಸಯ್ಯಿದ್ ಅಹ್ಮದುಲ್ ಬುಖಾರಿ (ರ) ಮತ್ತು ಝೈನಬಾ (ರ) ದಂಪತಿಗಳ ಪುತ್ರರಾದ ಇಬ್'ರಾಹೀಂ ಸಕ್ರಾನ್ ಅಲ್ ಬುಖಾರಿ (ರ) ರವರಾಗಿದ್ದಾರೆ.*
ಈ ಮುಹ್ಯಿದ್ದೀನ್ ರಾತಿಬನ್ನು ಇಬ್'ರಾಹೀಂ ಸಕ್ರಾನ್ (ರ) ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸಿದ್ದಾರಾದರೂ ಇದು ಬುಖಾರಿ ರಾತಿಬ್ ಎಂದೂ, ಮಸ್ತಾನ್ ರಾತಿಬ್ ಎಂದೂ, ವಲಿಯ ಮುಹ್ಯಿದ್ದೀನ್ ರಾತಿಬ್ ಎಂದೂ ಅರಿಯಲ್ಪಡುತ್ತಿದೆ.
ಕಾರಣ ಈ ರಾತೀಬನ್ನು ನಂತರ ಸಯ್ಯದ್ ಹಿಬತ್ತುಲ್ಲಾಹಿ (ರ) ತಂಙಳರ ತಂದೆಯವರಾದ ವಲಿಯ ಕೇೂಯಮ್ಮ(ರ) ತಂಙಳ್'ರವರು ಅದನ್ನು ಮತ್ತಷ್ಟು ಚುಟುಕಾಗಿ ನಿರೂಪಿಸಿದ್ದಾರೆ.
ಎಳೆಯ ವಯಸ್ಸಿನಲ್ಲಿ ಕಲಿಕೆಯಲ್ಲಿ ಬಹಳ ಹಿಂದಿದ್ದ ಸಕ್ರಾನ್ (ರ) ರವರನ್ನು ಒಮ್ಮೆ ಅವರ ತಾಯಿಯ ತಂದೆಯವರಾದ ಸಯ್ಯಿದ್ ಮೌಲಲ್ ಬುಖಾರಿ (ರ)ರವರು ಕನಸಿನಲ್ಲಿ ಸಂದರ್ಶಿಸಿ ಪ್ರಾರ್ಥಿಸಿದ ನಂತರ ಕಲಿಕೆಯಲ್ಲಿ ಉನ್ನತಿ ಗಳಿಸಿದರಲ್ಲದೆ ಆಧ್ಯಾತ್ಮಿಕವಾಗಿ ಉನ್ನತ ಸ್ಥಾನಕ್ಕೇರಿ ಪಂಡಿತ ವಲಯದಲ್ಲಿ ಸಕ್ರಾನ್ ಎಂದೇ ಗುರುತಿಸಿಕೊಳ್ಳಲಾರಂಭಿಸಿದರು.
ಸಕ್ರಾನ್ ಅಥವಾ ಮಸ್ತಾನ್ ಎಂದರೆ, ಆಧ್ಯಾತ್ಮಿಕ ಸಾಧನೆಯ ಮೂಲಕ ಆಂತರಂಗಿಕವಾಗಿ ಅಲ್ಲಾಹನಿಗೆ ನಿಕಟವಾಗುವ ಸೂಫಿಗಳ ಸ್ಥಾನಕ್ಕೇರಿದವರು ಎಂದರ್ಥ.
ಪುದಿಯಂಙಾಡಿ ಎಂಬಲ್ಲಿಯ ಕೊಟ್ಟತ್ತರ ಅಬ್ದುಲ್ ಅಝೀಝ್ ಎಂಬುವವರ ಮಗಳನ್ನು ವಿವಾಹವಾಗಿದ್ದ ಸಯ್ಯಿದರಿಗೆ ಸಯ್ಯಿದ್ ಮುಹಮ್ಮದ್ (ಖ.ಸಿ), ಸಯ್ಯಿದ್ ಪಖ್ರುದ್ದೀನ್ (ಖ.ಸಿ) ಮತ್ತು ಸಯ್ಯಿದ್ ಅಹ್ಮದ್ (ಖ.ಸಿ) ಎಂಬ ಮೂರು ಮಕ್ಕಳು ಜನಿಸಿದ್ದು ಫಖ್ರುದ್ದೀನ್ (ಖ.ಸಿ) ಎಂಬ ಪುತ್ರರಂತೂ ಕೇರಳದ ಇಮಾಂ ಗಝ್ಝಾಲಿ ಎಂದೇ ಪ್ರಖ್ಯಾತರಾದ ಸೂಫಿವರ್ಯರಾಗಿದ್ದರು. ಈ ಮಹಾನರು ಪಾಡೂರ್ ವಳಪ್ಪಿಲ್ ಎಂಬಲ್ಲಿ ಇರುವ ಮಸೀದಿಯ ಸಮೀಪ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇಬ್'ರಾಹಿಂ ಸಕ್ರಾನ್ (ರ) ರವರು ತಮ್ಮ ಅಣ್ಣನ ಮರಣಾನಂತರ ಅಣ್ಣನ ಪತ್ನಿಯನ್ನು ಮರುವಿವಾಹವಾಗಿ ಕಣ್ಣೂರಿನಲ್ಲಿ ವಾಸವಾಗಿದ್ದರು. ಹಿಜರಿ 1256 ರ ಜಮಾದಿಲ್ ಆಖಿರ್ 29 ರಂದು ಇಹಲೇೂಕಕ್ಕೆ ವಿದಾಯ ಹೇಳಿದ ಮಹಾನರು ಕಣ್ಣೂರು ಸಿಟಿ ಹತ್ತಿರ ತಮ್ಮ ತಾಯಿಯ ತಂದೆಯರಾದ ಮೌಲಲ್ ಬುಖಾರಿ (ರ)ರವರ ಮಖಾಮಿನ ಪಕ್ಕದಲ್ಲೇ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ದಾರಿ: 🚘 ಕಣ್ಣೂರು ಸಿಟಿ ಕಣ್ಣೂರು
✍ ಗಫೂರ್ ಬಾಯಾರ್
🌀🌀🌀🌀🌀🌀🌀🌀🌀
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment