Sunday, September 22, 2019

*ಬುದ್ಧಿವಂತಿಕೆಯಲ್ಲಿ ಈ ಕೇರಳಿಗರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದರ ಸಣ್ಣ ಉದಾಹರಣೆಯಾಗಿದೆ ಈ ಕೆಳಗೆ ಕೊಟ್ಟ ವೀಡಿಯೋ..!*

ಸಾಧಾರಣ,  ನಮ್ಮ ಸಂಘಟನೆಯ ಕಾರ್ಯಕ್ರಮವೇನಾದರು ಇದ್ದರೆ, ಅದರ ಪ್ರಚಾರಾರ್ಥ ನಾವು ಪೋಷ್ಟರ್, ಫ್ಲೆಕ್ಸ್, ಅನೌಂಸ್ ರಚಿಸುವುದು ಸ್ವಾಭಾವಿಕ. ಮತ್ತು ಅದನ್ನು ಪ್ರತಿಯೊಂದು ಗ್ರೂಪ್ ಗಳಿಗೂ ನಾವೇ ಶೇರ್ ಮಾಡಿ ಅದನ್ನು ಪ್ರಚಾರ ಪಡಿಸಬೇಕು. ವಿರೋಧಿಗಳಂತೂ ಅದನ್ನು ಕಣ್ಣೆತ್ತಿಯೂ ನೋಡಲಾರರು. ಪ್ರಚಾರದ ಮಾತಂತೂ ಆಕಾಶಕ್ಕೆ ಏಣಿ ಇಟ್ಟಂತೆ ಅಸಾಧ್ಯವಾದ ಮಾತು.

ಇಂತಹ ಸಂದರ್ಭದಲ್ಲಿ, ತಮ್ಮ ಕಾರ್ಯಕ್ರಮದ ಪ್ರಚಾರವನ್ನು ವಿರೋಧಿಗಳಿಂದಲೇ ಮಾಡಿಸಿದರೆ?
ಹೌದು,  ಅಂತಹ ಒಂದು ಚಾಣಕ್ಯತನವನ್ನು ಮೆರೆದವರಾಗಿದ್ದಾರೆ ಕೇರಳ ರಾಜ್ಯದ SSF ನವರು. ಇವರ ಬುದ್ಧಿವಂತಿಕೆಗೆ ಸೆಲ್ಯೂಟ್ ಹೊಡೆಯಲೇ ಬೇಕು.

ಇಲ್ಲಿ ಕೊಟ್ಟ ವೀಡಿಯೋ, *ಕೇರಳದ ನೀಲಗಿರೀಸ್* ನಲ್ಲಿ *Feb: 8,9,10* ಎಂಬೀ ದಿನಗಳಲ್ಲಿ ನಡೆಯಲಿರುವ *SSF PROFSUMMIT-19, Professional students conference* ಕಾರ್ಯಕ್ರಮದ ಪ್ರಚಾರ ರೀತಿಯಾಗಿದೆ. 
ಇದನ್ನು ಪ್ರಚಾರ ಪಡಿಸುವ ಗುತ್ತಿಗೆಯಂತೂ ನಮ್ಮ ವಿರೋಧಿಗಳೇ ಪಡೆದುಕೊಂಡಿದ್ದಾರೆ ಎಂದೇ ಹೇಳಬಹುದು. ಯಾಕೆಂದರೆ, ಯಾವ ಗ್ರೂಪ್ ನಲ್ಲಿ ನೋಡಿದರೂ ಇದೇ ವೀಡಿಯೋ ದ ಕಾರುಬಾರು. ಅಂದಹಾಗೆ ಅದನ್ನು ವ್ಯಾಪಕವಾಗಿ ಶೇರ್ ಮಾಡುತ್ತಿರುವವರು ಕೂಡಾ ನಮ್ಮ ವಿರೋಧಿಗಳೇ.!

ಸಾಧಾರಣವಾಗಿ ನಮ್ಮ ಕಾರ್ಯಕ್ರಮದ ಪ್ರಚಾರವನ್ನು ನಾವು ಮಾತ್ರ ಮಾಡುತ್ತೇವೆ. ಇನ್ನುಳಿದ 72 ವಿಭಾಗವೂ ಅದನ್ನು ವಿರೋಧಿಸುತ್ತದೆ. ಆದರೆ, ಈ ಕೇರಳ SSF ನವರ ಬುದ್ದಿವಂತಿಕೆಯಿಂದ  72 ವಿಭಾಗ ನಮ್ಮ ವಿರೋಧಿಗಳಿಂದಲೇ ಇದರ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ನಾನಂತೂ ಈ ಕಾರ್ಯಕ್ರಮದ ಮಾಹಿತಿ ಪಡೆದುಕೊಂಡದ್ದೇ ನಮ್ಮ ವಿರೋಧಿಗಳ ಶೇರ್ ನಿಂದ.

ಕೇರಳ SSF ನವರ ಈ ಬುದ್ದಿವಂತಿಕೆಯನ್ನು ನೋಡುವಾಗ, ಮೂಸ ನಬಿ (ಅ) ರವರ ಚರಿತ್ರೆ ನೆನಪಿಗೆ ಬರುತ್ತದೆ.
ತನ್ನನ್ನು ವಧಿಸಲು ಮೂಸ (ಅ) ಎಂಬ ಪ್ರವಾದಿ ಹುಟ್ಟಿ ಬರಲಿದ್ದಾರೆ ಎಂದು ಫಿರ್'ಔನ್ ನಿಗೆ ಗೊತ್ತಿದ್ದೂ,  ಅದೇ ಮೂಸ (ಅ) ರವರನ್ನು ತನ್ನ ಆಶ್ರಯದಲ್ಲೇ ಬೆಳೆಯುವಂತೆ ಅಲ್ಲಾಹು ಮಾಡುತ್ತಾನೆ.
ಅದೇರೀತಿ, SSF ಎಂಬ ಸಾತ್ವಿಕ ಉಲಮಾಗಳ ನೇತೃತ್ವದ ಸಂಘಟನೆ,  ಇಲ್ಲಿರುವ ಎಲ್ಲಾ ನೂತನವಾದಿ, ಫಿತ್ನ ವಾದಿ ಸಂಘಟನೆಗಳಿಗೆ ಬೆದರಿಕೆಯಾಗಿ ಬೆಳೆದು ಬರುತ್ತಿರುವ ಮಾಹಿತಿ  ಗೊತ್ತಿದ್ದೂ, ಅದೇ ಸಂಘಟನೆಯ ಕಾರ್ಯಕ್ರಮವನ್ನು, ತನ್ನ  ವಿರೋಧಿಗಳ ಕೈಯಿಂದಲೇ ಪ್ರಚಾರ ಪಡಿಸುವ ಮೂಲಕ, SSF ನ್ನು ಅಲ್ಲಾಹು ಇನ್ನಷ್ಟು ಬಲಪಡಿಸುತ್ತಿದ್ದಾನೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಬೇಕಾಗಿಲ್ಲ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment