Sunday, September 22, 2019

ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಸಿಲುಕಿ, ತಲೆ ಮರೆಸಿಕೊಂಡಿರುವ ವ್ಯಕ್ತಿಯ ಹೆಸರೇ *ಝಾಕಿರ್ ನಾಯಿಕ್*. !

*ಊಹಿಸಿ ನೋಡಿ..*
ಈ ಸ್ಥಾನದಲ್ಲಿ ಯಾವುದಾದರೂ   ಸುನ್ನೀ ಉಲಮಾಗಳ, ತಂಙಳ್ ಗಳ ಹೆಸರೇನಾದರು ಇದ್ದಿದ್ದರೆ, ಇಂದು ನಮ್ಮ ಸೋಶಿಯಲ್ ಮೀಡಿಯಾದ ಅವಸ್ಥೆ ಏನಾಗಿರುತ್ತಿತ್ತು.
ಉಲಮಾಗಳ, ತಂಙಳ್ ಗಳ ವಿರುದ್ಧ ಕೆಟ್ಟ ಕೆಟ್ಟ ಪದಗಳು  ಬಳಕೆಯಾಗುತ್ತಿತ್ತು. ಯಾವ ರೀತಿಯಲ್ಲೆಲ್ಲಾ ಸಾದ್ಯವಿದೆಯೋ ಆ ರೀತಿಯಲ್ಲೆಲ್ಲಾ ನಿಂದಿಸಲು ನಮ್ಮ ಸಮುದಾಯ ಪೈಪೋಟಿ ನಡೆಸುತ್ತಿತ್ತು. ಸ್ವಯಂ ಘೋಷಿತ *ಸಮುದಾಯ ಸೇವಕ* ರಿಗಂತೂ ಹಬ್ಬವೇ ಹಬ್ಬ ವಾಗುತ್ತಿತ್ತು.
ಆದರೆ, ಈ ಅಕ್ರಮ ವಹಿವಾಟಿನ ವ್ಯಕ್ತಿ *ಝಾಕಿರ್ ನಾಯಿಕ್*  ಆದ ಕಾರಣ, ಇವನ ವಿರುದ್ಧ ಬರೆಯಲು, ಟೀಕಿಸಲು ಈ *ಸಮುದಾಯ* ದವರ ಕೈ- ನಾಲಗೆ ಚಲಿಸುತ್ತಿಲ್ಲ. 
ಕಾರಣ, ಬರೆದರೆ *ಸಮುದಾಯ ಭಿನ್ನತೆ* ಯ ಭಯಯಂತೆ..!

ಚೇಗನ್ನೂರು ಎಂಬ ವ್ಯಕ್ತಿ ಕಾಣೆಯಾದಾಗ, ಅದನ್ನು ಎಪಿ ಉಸ್ತಾದರ ತಲೆಗೆ ಕಟ್ಟುವ ಪ್ರಯತ್ನ ಮಾಡಿ,  ಉಸ್ತಾದರ ಮೇಲೆ ಕೇಸು ದಾಖಲಿಸಿದ್ದರು ಈ ಚಲಪಿಗಳು. 
ತಮ್ಮ ನೂತನವಾದ ಪ್ರಚಾರ ಉಸ್ತಾದರ ಮುಂದೆ ನಡೆಯುವುದಿಲ್ಲ ಎಂದು ಕಂಡಾಗ, ಸಾಮಾಜಿಕ ತಾಣದಲ್ಲಿ ನಿರಂತರ ಎಪಿ ಉಸ್ತಾದರನ್ನು, ಉಸ್ತಾದ್ ನೇತೃತ್ವದ ಉಲಮಾಗಳು ಮತ್ತು ತಂಙಳ್ ಗಳನ್ನು ತೇಜೋವಧೆ ಮಾಡುತ್ತಿದ್ದರು ಈ ಚಲಪಿಗಳು.
*ಝಾಕಿರ್ ನಾಯಿಕ್* ವಿಷಯದಲ್ಲಿ ಇದೆಲ್ಲವೂ ಇದೀಗ ಇವರಿಗೆ ತಿರುಗು ಬಾಣವಾಗಿ ಪರಿಣಮಿಸಿದಾಗ,  ಇವರ ಅಳಲು ಏನೆಂದರೆ, ಒಬ್ಬ ಮುಸ್ಲಿಂ ವಿದ್ವಾಂಸನ ಮೇಲೆ ಮುಸ್ಲಿಮರಾದ ನಾವೇ ಅಪಪ್ರಚಾರ ಮಾಡಬಾರದಂತೆ..!

ಆಹಾ, ಹೇಗಿದೆ ಈ ಚಲಪಿಗಳ ಮೊಸಲೆ ಕಣ್ಣೀರು.
ಮೊದಲು ಇವರ ದಡ್ಡ ನಾಯಕ ಮತ್ತು ಆತನ ಅನುಯಾಯಿಗಳು ಭಾರತದ ಕೋಟ್ಯಂತರ ಸುನ್ನೀ ಮುಸ್ಲಿಮರನ್ನು ಮುಸ್ಲಿಂ ಎಂದು ಒಪ್ಪಿಕೊಳ್ಳಲಿ.
ನಂತರ ಈತನನ್ನು ನಾವೂ ಮುಸ್ಲಿಂ ಎಂದು ಪರಿಗಣಿಸುವ. ಸುನ್ನೀ ಉಲಮಾಗಳು ಮತ್ತು ತಂಙಳ್ ಗಳನ್ನು ಟೀಕಿಸುವಾಗ ಇಲ್ಲದ ಕನಿಕರ, ಸಮುದಾಯ ಪ್ರೇಮ ಇವಾಗ ಎಲ್ಲಿಂದ ಬಂತು ಚಲಪಿಗಳೇ.
ಸುನ್ನೀ ಉಲಮಾಗಳ ಮತ್ತು ತಂಙಳ್ ಗಳ ವಿರುದ್ಧ ಇಂತಹದ್ದೇ ಆರೋಪಗಳನ್ನು ನೀವು ಮಾಡಿದಾಗ, ಅದು ಮುಸ್ಲಿಂ ವಿದ್ವಾಂಸರ ಮೇಲೆ ಮಾಡುವ ಆರೋಪ ಅಂತ ಯಾಕೆ ನಿಮಗೆ ಅನಿಸಲಿಲ್ಲ.

ಒಂದುವೇಳೆ,  ನಮ್ಮ ಉಲಮಾಗಳ, ತಂಙಳ್ ಗಳ ಮೇಲೆ ಏನಾದರು ಆರೋಪಗಳು ಬಂದಿದ್ದರೆ, ಅದು ನೀವುಗಳು ಮತ್ತು ನಿಮ್ಮ ಚೇಲಾಗಲು ಸೃಷ್ಟಿಸಿದ್ದು ಮಾತ್ರ. ಆದರೆ, ನಿಮ್ಮ ದಡ್ಡ ನಾಯಕ *ಝಾಕಿರ್ ನಾಯಿಕ್* ಮೇಲೆ  ಆರೋಪ ಮಾಡಿರುವವರು ನಾವಲ್ಲ, ಇಲ್ಲಿನ ಕಾನೂನು. 
*ಝಾಕಿರ್ ನಾಯಿಕ್* ಮೇಲೆ ಆರೋಪ ಬಂದಾಗ, ಅದು ಮೊತ್ತ ಮುಸ್ಲಿಂ ಸಮುದಾಯದ ಸಮಸ್ಯೆ ಅಂತ ಬಿಂಬಿಸಬೇಡಿ. ಭಾರತದಲ್ಲಿ ಚಲಪಿಗಳ ಸಂಖ್ಯೆ ಶೇಕಡಾ ಹತ್ತಕ್ಕಿಂತಲೂ ಕಡಿಮೆ. ಅಂದರೆ, ಇಲ್ಲಿನ 90%  ಮುಸ್ಲಿಮರೂ ಸುನ್ನಿಗಳು. ಅವರ್ಯಾರೂ *ಝಾಕಿರ್ ನಾಯಿಕ್* ನನ್ನು ತಮ್ಮ ನಾಯಕನನ್ನಾಗಿ ಅಂಗೀಕರಿಸಲಾರರು.  *ಝಾಕಿರ್ ನಾಯಿಕ್* ಪ್ರಕಾರ ಇಲ್ಲಿನ 90% ಇರುವ ಸುನ್ನಿಗಳೂ ಮುಸ್ಲಿಮರಲ್ಲ.!
ಮುಸ್ಲಿಮರಲ್ಲದ ಸುನ್ನಿಗಳ ಬೆಂಬಲ ಈತನಿಗೆ ಯಾಕೆ ಬೇಕು.?

*ಮತ್ತೆ ಇವನಿಂದ ಸಾವಿರಾರು ಮಂದಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರಂತೆ.!*
ಇದು ಒಂದು ದೊಡ್ಡ ಪ್ರಹಸನ ಎಂದು ಈತನನ್ನು ಹತ್ತಿರದಿಂದ ಬಲ್ಲವರೇ ಹೇಳುತ್ತಾರೆ. 
ಅದಲ್ಲದಿದ್ದರೂ, ಒಬ್ಬ ವ್ಯಕ್ತಿಯ ಒಳ್ಳೆಯ ಕಾರ್ಯಗಳು ಆತನನ್ನು ಅಂಗೀಕರಿಸಲು ಮಾನದಂಡವಾಗುವುದಿಲ್ಲ. ಹಾಗೆ ಆಗುವುದಿದ್ದರೆ, ಇಬ್ಲೀಸ್ ಈಗಲೂ ಮುಸ್ಲಿಮರ ಗುರುವಾಗಿ ಇರಬೇಕಿತ್ತು. ಯಾಕೆಂದರೆ, ಇಬ್ಲೀಸ್ ಗಿಂತಲೂ ಮಿಗಿಲಾಗಿ ಆರಾಧನೆ ಮಾಡಿದವರು ಈ ಭೂಮಿ ಮೇಲೆ ಇನ್ಯಾರೂ ಇರಲು ಸಾಧ್ಯವಿಲ್ಲ. ಆದರೂ, ಸುನ್ನಿಗಳು ಇಬ್ಲೀಸ್ ನನ್ನು ತಮ್ಮ ಗುರುವಾಗಿಯೋ, ದೊಡ್ಡ ಆರಾಧಕನನ್ನಾಗಿಯೋ ಪರಿಗಣಿಸಲಾರರು.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment