*SSF....*
ನಿಮ್ಮ ಯೌವ್ವನವನ್ನು ಧರ್ಮದ ಹಾದಿಯಲ್ಲಿ ವಿನಿಯೋಗಿಸಲು ನೇತೃತ್ವ ನೀಡುವ ಸಲುವಾಗಿ ಎಸ್ ಎಸ್ ಎಫ್ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ
〰〰〰〰〰〰〰
✍ ಗಫೂರ್ ಬಾಯಾರ್
▪▪▪▪▪▪▪
*ಎಸ್ ಎಸ್ ಫ್*
ಮದ್ಯ, ಮದಿರೆ, ಮಾನಿನಿಯರ ಮೋಹಕ್ಕೊಳಗಾಗದೆ ದೀನೀ ಪ್ರಜ್ಞೆಯೊಂದಿಗೆ ಇಸ್ಲಾಮ್ ತೋರಿದ ಹಾದಿಯಲ್ಲಿ ನಿಮ್ಮನ್ನು ಮುನ್ನಡೆಸಲಿಕ್ಕಾಗಿ,
*ಎಸ್ಸೆಸ್ಸೆಫ್*
ಭಯೋತ್ಪಾದನೆ, ಮತೀಯ ಕಲಹ, ಹಾಗೂ ಅಧರ್ಮದ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲು,
*$$F*
ಜಾತಿ ಧರ್ಮ ನೋಡದೆ ಮನುಷ್ಯರನ್ನು ಮನುಷ್ಯರಂತೆ ಪ್ರೀತಿಸುವ ಅತ್ಯುತ್ತಮ ನಾಗರಿಕರನ್ನಾಗಿಸಲು,
*SSF*
ಕುರ್ಆನ್ ಮತ್ತು ಹದೀಸ್ ಗಳ ಆಧಾರದಲ್ಲಿ ದೇಶವನ್ನು ಪ್ರೀತಿಸುತ್ತಾ ಸಾಮಾಜಿಕ ಕಳಕಳಿ ಇರುವ ಭಾರತೀಯ ಪೌರನನ್ನಾಗಿಸಲು,
*ಎಸ್ ಎಸ್ ಫ್*
ಸ್ವಾರ್ಥ ರಾಜಕೀಯದ ಭಾಗವಾಗದೆ ಸ್ವತಂತ್ರ ಚಿಂತನೆಯುಳ್ಳ ಪರಿಪೂರ್ಣ ಮನುಷ್ಯನನ್ನಾಗಿಸಲು
*ಎಸ್ಸೆಸ್ಸೆಫ್*
ಧರ್ಮದ ಆಶಯ ಆದರ್ಶಗಳನ್ನು ಗಾಳಿಗೆ ತೂರುವ ನೂತನವಾದಿ ಆಶಯಗಳನ್ನು, ಅಹ್ಲ್ ಸುನ್ನತ್ ವಲ್ ಜಮಾಅತ್ ನ ಆಶಯ ಆದರ್ಶಗಳ ಮೂಲಕ ಹಿಮ್ಮೆಟ್ಟಿಸುವ ಇಸ್ಲಾಮಿನ ವಕ್ತಾರರನ್ನಾಗಿಸಲು,
*SSF*
ಆಕ್ರಮಣಕಾರಿ ಯಾದ ಹಾದಿಗಳನ್ನು ಉಪೇಕ್ಷಿಸಿ, ಅನಾಚಾರಗಳ ವಿರುದ್ಧ ಶಾಂತಿಯುತವಾಗಿ ಸಮರ ಸಾರುತ್ತಾ ಸಮುದಾಯವನ್ನು ಸತ್ಯದ ಮಾರ್ಗದಲ್ಲಿ ಮುನ್ನಡೆಸಲು..
*$SF*
ಹೊತ್ತು ಹೆತ್ತು ಸಾಕಿ ಸಲಹಿದ ಮಾತಾಪಿತರಿಗೆ ಉಪಕಾರಪ್ರದವಾದ ಮಕ್ಕಳನ್ನಾಗಿಸಲು....
*SSF*
ಧಾರ್ಮಿಕ ಪಂಡಿತರ ನಿರ್ದೇಶಾನುಸಾರವಾಗಿ, ಅವರ ಉಪದೇಶಗಳನ್ನು ಬದುಕಿನಲ್ಲಿ ಅಳವಡಿಸಿ ಮರಣದವರೆಗೂ ಅವರ ಹಿಂಬಾಲಕರಾಗಿ ನಿಲ್ಲಲು,
*ಎಸ್ ಎಸ್ ಫ್*
ಧರ್ಮಪರವಾದ ನೀತಿ ನಿಯಮಗಳನ್ನು ಅನುಸರಿಸುತ್ತಾ ರಾಷ್ಟ್ರಕ್ಕೂ, ಸಮೂಹಕ್ಕೂ, ನಾಡಿಗೂ, ಹಾಗೂ ಕುಟುಂಬಕ್ಕೂ ಉಪಕಾರವಂತರಾಗಲು,
*SSF*
ಇಹಲೋಕದ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನೂ ಮರಣಾ ನಂತರದ ಜೀವನದ ವಿಜಯಕ್ಕೆ ಹಾದಿಯನ್ನಾಗಿಸಲು.
*SSF*
ನಿಮ್ಮನ್ನು ಕೈಬೀಸಿ ಕರೆಯುತ್ತಿದೆ...
🇸🇱🇸🇱🇸🇱🇸🇱🇸🇱🇸🇱🇸🇱
No comments:
Post a Comment