Sunday, September 22, 2019

*SDPI ಒಂದು ರಾಜಕೀಯ ಪಕ್ಷ ಎಂದು ಸಮರ್ಥಿಸುವವರಿಗೆ, ಅಥಾವುಲ್ಲ ರವರ ಜೋಕಟ್ಟೆ ಭಾಷಣ ಪಾಠವಾಗಲಿ.*

SSF ಸಂಘಟನೆಯ ಪ್ರಮುಖ ನಿರ್ಧಾರವಾಗಿದೆ ಸಂಘಟನೆಗೆ ರಾಜಕೀಯ ಇಲ್ಲ ಎಂಬುದು. ‌ಮತ್ತು ರಾಜಕೀಯದಲ್ಲಿ ಇರುವವರು ಸಂಘಟನೆಗೆ ಬೇಡ ಎಂಬುದು ಕೂಡಾ.‌ 
ರಾಜಕೀಯ ಸಂಭಂಧದ ವಿಷಯದಲ್ಲಿ SSF ಎಲ್ಲಾ ಪಕ್ಷಗಳೊಂದಿಗೂ ಸಮಾನಾಂತರ ನಿಲುವನ್ನು ಕಾಯ್ದುಕೊಂಡು ಬಂದಿದೆ. ಯಾರೊಂದಿಗೂ ಅತಿಯಾದ ಸ್ನೇಹವೋ, ವಿದ್ವೇಷವೋ ಸಂಘಟನೆಗೆ ಇರುವುದಿಲ್ಲ.

ಇಂತಹ ಸಂದರ್ಭದಲ್ಲಿ ನಮ್ಮ ನಡುವೆ ಉದ್ಭವಿಸುವ ಒಂದು ಪ್ರಮುಖ ಚರ್ಚೆಯಾಗಿದೆ SDPI ಕೂಡಾ ರಾಜಕೀಯ ಪಕ್ಷವಲ್ಲವೇ ಎಂಬುದು. ಇದಕ್ಕೆ ‌ಹೌದು ಎಂಬುದೇ ಸಾಧಾರಣ ಉತ್ತರ. 

*SDPI ಯನ್ನು ರಾಜಕೀಯ ಪಕ್ಷವಾಗಿ ಪರಿಗಣಿಸಬೇಕೇ?*
ಇತರ ಪಕ್ಷಗಳಂತೆ SDPI ಯನ್ನು ಕೂಡಾ ಒಂದು ರಾಜಕೀಯ ಪಕ್ಷವಾಗಿ ಪರಿಗಣಿಸಬೇಕೇ ಬೇಡವೇ ಎಂಬ ವಿಷಯದಲ್ಲಿ ನಮ್ಮ ಕಾರ್ಯಕರ್ತರ ನಡುವೆ ಬಹಳ ಗೊಂದಲ ಗಳಿವೆ.
ಆ ಗೊಂದಲಗಳಿಗೆಲ್ಲಾ ಪ್ರಮುಖ ಕಾರಣ, SDPI ಎಂಬುದು ಪಿಎಫ್ಐ ಎಂಬ ನೂತನವಾದಿ ಸಂಘಟನೆಯ ಅಧೀನದಲ್ಲಿರುವುದು.
SDPI ಅಲ್ಲದ ಇತರ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮುಂತಾದ ರಾಜಕೀಯ ಪಕ್ಷಗಳು ಸ್ವತಂತ್ರ ಪಕ್ಷಗಳಾಗಿವೆ. ಅದು ಯಾವುದೇ ಒಂದು ಮತೀಯ ಸಂಘಟನೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿಲ್ಲ.
 ಆದರೆ,  SDPI ಆ ರೀತಿ ಅಲ್ಲ.  ಅದು PFI ಎಂಬ ಸುನ್ನತ್ ಜಮಾಹತ್ ವಿರೋಧಿ ಸಂಘಟನೆಯ ಅಧೀನ ಪಕ್ಷವಾಗಿದೆ. ಅದರ ಹೆಚ್ಚಿನ ಎಲ್ಲಾ ನಿಯಂತ್ರಣ PFI ಯ ಹಸ್ತ ಭದ್ರವಾಗಿದೆ. ಅದೂಅಲ್ಲದೆ,  SDPI ಯಲ್ಲಿರುವ ಮುಸ್ಲಿಂ ಅಭ್ಯರ್ಥಿಗಳ ಮೆಂಟಲಿಟಿ ಕೂಡಾ PFI ಯೇ ಆಗಿದೆ ಎಂಬುದು ಹಗಲಿನಷ್ಟೇ ಸತ್ಯ. ಇದಕ್ಕೆ ಅಥಾವುಲ್ಲ ರ ಜೋಕಟ್ಟೆ ಪ್ರಭಾಷಣವೇ ಒಂದು ಸ್ಪಷ್ಟ ಉದಾಹರಣೆ.

ಜೋಕಟ್ಟೆ ಯ SSF ಕಾರ್ಯಕರ್ತರು, ಅಥಾವುಲ್ಲ ರವರನ್ನು ತಮ್ಮ ಊರಿನ ಓರ್ವ  ಗಣ್ಯ ವ್ಯಕ್ತಿ ಎಂಬ ನೆಲೆಯಲ್ಲಿ ಪ್ರೀತಿ ಪೂರ್ವಕ ಆಹ್ವಾನಿಸಿದ್ದರು.
ಅದಲ್ಲದೆ, ಅವರು SDPI ಯ ನಾಯಕ ಎಂಬ ಅರ್ಥದಲ್ಲಿ ಕರೆದಿರಲು ಸಾದ್ಯವಿಲ್ಲ ಎಂದು ಅವರ ಹೆಸರಿನಲ್ಲಿ SDPI ಯ ಹೆಸರನ್ನು mention ಮಾಡದಿರುವುದರಿಂದ ಅರ್ಥಮಾಡಿಕೊಳ್ಳಬಹುದು.
ಆದರೆ, ಜೋಕಟ್ಟೆ SSF ನವರ ಪ್ರೀತಿಯನ್ನು ಉಳಿಸಿಕೊಳ್ಳಲು ಅಥಾವುಲ್ಲ ರವರಿಂದ ಸಾಧ್ಯವಾಗಿಲ್ಲ ಎಂಬುದು ಅವರ ಭಾಷಣದಿಂದ ಅರಿಯಲು ಸಾದ್ಯವಾಯಿತು.  ಎಷ್ಟಾದರೂ ಅವರು ಪಿಎಫ್ಐ ಮನಸ್ಥಿತಿಯವರು ತಾನೇ.
ಅಲ್ಲೂ ಅವರು ಸೈಲೆಂಟಾಗಿ ತನ್ನ ನರಿ ಬುದ್ಧಿಯನ್ನು ತೋರಿಸಿಯೇ ಬಿಟ್ಟರು.

ಇಲ್ಲದಿದ್ದರೆ, ಅಥಾವುಲ್ಲ ರವರಿಗೆ ಗೊತ್ತು ತಾನೇ.  ತಮ್ಮ ಐಕ್ಯತೆಯ ವಾದ ಅದು SSF ವಿರುದ್ಧ ಎಂದು. ತಮ್ಮನ್ನು ಪ್ರೀತಿ ಪೂರ್ವಕ ಆಹ್ವಾನಿಸಿದ ಒಂದು ಸಭೆಯಲ್ಲಿ, ಆಹ್ವಾನಿಸಿದವರ ಸಿದ್ಧಾಂತಕ್ಕೆ ವಿರೋಧವಾಗಿ ಭಾಷಣ ಮಾಡಬೇಕಾದರೆ, ಇವರೆಂತಹ ಕ್ರಿಮಿನಲ್ ಮೈಂಡ್ ನವರಾಗಿರಬೇಕು. ಆ ರೀತಿ ಭಾಷಣ ಮಾಡಿದ್ದು ಮಾತ್ರವಲ್ಲ, ಅದನ್ನು ತನ್ನ FB ಪೋಷ್ಟ್ ನಲ್ಲಿ ಹಾಕಿ, ತನ್ನ ಕಾರ್ಯಕರ್ತರಿಗೆ, SSF ನವರನ್ನು ಸಾಮಾಜಿಕ ತಾಣದಲ್ಲಿ ಅಣಕಿಸಲು ವೇದಿಕೆ ಸೃಷ್ಟಿಸಿ ಕೂಡಾ ಕೊಟ್ಟರು.

ಒಂದು ವಿಷಯ ನಾವಿಲ್ಲಿ ಅರ್ಥಮಾಡಿಕೊಳ್ಳಬೇಕು. ಅಥಾವುಲ್ಲ ರವರು ಮಾಡಿದ ಐಕ್ಯತೆಯ ಭಾಷಣ ಅಸಲಿಯತ್ತಾಗಿದ್ದರೆ, ಇದೇ ರೀತಿಯ ಭಾಷಣವನ್ನು ಇವರು ಸಲಪಿ ವೇದಿಕೆಯಲ್ಲಿ ಮಾಡಲು ಸಿದ್ದರಿದ್ದಾರೆಯೇ?
ಸುನ್ನಿಗಳ ವೇದಿಕೆಯಲ್ಲಿ ಸುನ್ನೀ ಸಿದ್ಧಾಂತಕ್ಕೆ ವಿರೋಧವಾಗಿ ಭಾಷಣ ಮಾಡಿದಂತೆ,
ಚಲಪಿಗಳ ವೇದಿಕೆಯಲ್ಲಿ, *ನಾವು ಪರಸ್ಪರ ಸೈದ್ದಾಂತಿಕ ಭಿನ್ನತೆಯನ್ನು ಬದಿಗಿಟ್ಟು ಒಂದಾಗಬೇಕು. ಈದ್ ಮಿಲಾದ್, ಮೌಲಿದ್ ಕಾರ್ಯಕ್ರಮ ಒಂದಾಗಿ ಮಾಡಬೇಕು* ಎಂದು ಹೇಳಲು ಇವರಿಗೆ ಧೈರ್ಯ ವಿದೆಯಾ.
ಇಲ್ಲ, ಖಂಡಿತಾ ಆ ರೀತಿ ಇವರು ಚಲಪಿಗಳ ವೇದಿಕೆಯಲ್ಲಿ ಭಾಷಣ ಮಾಡಲಾರರು.
ಇವರ *ಐಕ್ಯತೆ* ಯ ಮುಖವಾಡ ಒಂದು ನಾಟಕ ಮಾತ್ರ.   ಇವರ ಪ್ರಮುಖ ಉದ್ದೇಶ ಸುನ್ನೀ ಸಿದ್ಧಾಂತವನ್ನು ಒಡೆಯುವುದು. ‌ಇನ್ನಾದರೂ ನಮ್ಮ ನಾಯಕರು ಮತ್ತು ಕಾರ್ಯಕರ್ತರು ಎಚ್ಚೆತ್ತುಕೊಳ್ಳಲಿ.

*ಪಿಎಫ್ಐ ಯ ಹುಟ್ಟು ಯಾಕಾಯಿತು? ಇವರು ರಾಜಕೀಯ ಪಕ್ಷ ಕಟ್ಟಲು ಕಾರಣವೇನು?*
ನೂತನವಾದ ಇಲ್ಲಿ ಬೆಳೆಯುವುದಿಲ್ಲ ಎಂದು ಅರಿತ ಅದರ ನಾಯಕರು ಮಾಡಿದ ಮೊದಲ ಕೆಲಸ, ಸಮುದಾಯದ ಹೆಸರಲ್ಲಿ ಪಿಎಫ್ಐ ಎಂಬ ಸಂಘಟನೆಯನ್ನು ಕಟ್ಟಿದ್ದು. ಆ ಮೂಲಕ ಮುಗ್ಧ ಸುನ್ನಿಗಳನ್ನು ತಮ್ಮತ್ತ ಸೆಳೆದು, ತಂತ್ರ ಮೂಲಕ ಅವರ ತಲೆಗೆ ನೂತನವಾದವನ್ನು ತುರುಕಿಸಿದರು.
ಇದನ್ನರಿತ ನಮ್ಮ ಉಲಮಾಗಳು,  ಪಿಎಫ್ಐ ಯನ್ನು ನೂತನವಾದದ ಕಾರಣದಿಂದ  ದೂರ ಮಾಡಿದಾಗ, ರಾಜಕೀಯದ ಹೆಸರಲ್ಲಿ ಸುನ್ನಿಗಳ ವೇದಿಕೆಗೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ.
ರಾಜಕೀಯ ವೇಷದಲ್ಲಿ ಸುನ್ನೀ  ವೇದಿಕೆಯೊಳಗೆ ನುಸುಳಿ, ತಂತ್ರ ಮೂಲಕ ಪಿಎಫ್ಐ ಸಿದ್ಧಾಂತವನ್ನು ಸುನ್ನಿಗಳ ವೇದಿಕೆಯಲ್ಲಿ ವಾಂತಿ ಮಾಡುತ್ತಿದ್ದಾರೆ.‌ ಮೊನ್ನೆ ಜೋಕಟ್ಟೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದದ್ದು ಅದೇ.‌

ಇದರಿಂದ ನಮ್ಮ ಕಾರ್ಯಕರ್ತರ ಮಧ್ಯೆ ವೈಮನಸ್ಸು ಹೆಚ್ಚಾಗುತ್ತಿದೆಯೇ ಹೊರತು, ಪಿಎಫ್ಐ ಗೇನೂ ನಷ್ಟವಾಗುವುದಿಲ್ಲ. ಅವರು ನಮ್ಮ ವೇದಿಕೆ ಮೂಲಕ ಲಾಭ ಪಡೆಯುತ್ತಿದ್ದಾರೆ. ನಾವಾದರೆ, ಪರಸ್ಪರ ನಮ್ಮ ನಮ್ಮೊಳಗೆ ಚರ್ಚಿಸಿ ಅಂತರವನ್ನು ಸೃಷ್ಟಿಸುತ್ತಿದ್ದೇವೆ.

ಆದುದರಿಂದ,
*ನಾಯಕರೇ, ಈ ಬಗ್ಗೆ ಒಂದು ಒಳ್ಳೆಯ ಸೂಕ್ತ ನಿರ್ಧಾರವನ್ನು ತಾವು ತೆಗೆದುಕೊಳ್ಳಲೇ ಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯೊಳಗೇ ಎರಡು ಮನಸ್ಥಿತಿಯವರು ನಿರ್ಮಾಣವಾಗಿ ಏನೇನೋ ಆಗಬಹುದು.*

No comments:

Post a Comment