*ಝಿಯಾರತ್ತ್ ಕೇಂದ್ರ*
➖➖➖➖➖➖➖➖
👉 6⃣8⃣
*********************
*ಎಲೆಮರೆಯ ಕಾಯಿ ಶೈಖುನಾ ಶೈಖುಲ್ ಮಶಾಯಿಖ್ ಮುಹಮ್ಮದ್ ಕುಂಞಿ ಅಲ್ ಖಾದಿರಿ ಎಂಬ ಸಿ.ಪಿ. ಮಂಜನಾಡಿ ಉಸ್ತಾದ್ (ನ:ಮ) ಕಡಪುರಂ. (Old Beach) ಕಾಞಂಗಾಡ್ ಕಾಸರಗೋಡು*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
***********************
ಸುಮಾರು ಎಂಬತ್ತು ವರ್ಷಗಳ ಕಾಲ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಇಸ್ಲಾಮಿಕ್ ಆಧ್ಯಾತ್ಮಿಕ ರಂಗದಲ್ಲಿ ರಾರಾಜಿಸುತ್ತಾ ಅಹ್ಲ್ ಸುನ್ನತ್ ವಲ್ ಜಮಾಅತಿಗೆ ದಿಟ್ಟ ನೇತೃತ್ವ ನೀಡುವುದರೊಂದಿಗೆ ಸುನ್ನೀ ಸಮುದಾಯಕ್ಕೆ ಅಸಂಖ್ಯ ವಿಧ್ವಾಂಸರನ್ನು ಸಮರ್ಪಿಸಿ ಮರೆಯಾದ ಪ್ರಮುಖ ಸೂಫಿವರ್ಯರಾಗಿದ್ದಾರೆ *ಶೈಖುನಾ ಸಿ. ಪಿ. ಮುಹಮ್ಮದ್ ಕುಂಞಿ ಮುಸ್ಲಿಯಾರ್ ಅಥವಾ ಮಂಜನಾಡಿ ಉಸ್ತಾದ್ (ನ.ಮ).*
ಸುನ್ನತ್ ಜಮಾಅತಿನ ಏಳಿಗೆ ಮತ್ತು ಅಭಿವೃದ್ಧಿಗೆ ಬದುಕನ್ನೇ ಮುಡಿಪಾಗಿಟ್ಟು ಜೀವನ ಪರ್ಯಂತ ಇಸ್ಲಾಮಿಕ್ ದೀನೀ ಪ್ರಚಾರ ಮತ್ತು ಪ್ರಬೇೂಧನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಮಹಾನರು ದೇರಳಕಟ್ಟೆ ಸಮೀಪದ ಮಂಜನಾಡಿಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಾ *ಮಂಜನಾಡಿ ಉಸ್ತಾದ್* ಎಂದೇ ಖ್ಯಾತರಾಗಿದ್ದರು.
ತಮ್ಮ ಮಗಳ ಪತಿಯೂ ಸಮಸ್ತ ಕೇಂದ್ರ ಮುಶಾವರದ ಸದಸ್ಯರೂ ಆದ *ಆಶಿಕುರ್ರಸೂಲ್ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಮುಸ್ಲಿಯಾರ್'* ರಿಗೆ ದೇರಳಕಟ್ಟೆ ಸಮೀಪದ ಮಂಜನಾಡಿಯಲ್ಲಿ *ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್* ಎಂಬ ಮಹತ್ತರವಾದ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಲು ಸ್ಪೂರ್ತಿ ತುಂಬಿ ಪ್ರೇೂತ್ಸಾಹ ನೀಡಿದ ಮಹಾನರಾಗಿದ್ದಾರೆ ಬಹುಮಾನ್ಯರಾದ ಮಂಜನಾಡಿ ಉಸ್ತಾದರು, (ಖ:ಸಿ)
*ಪುಂಜಾವಿ ಮಾಮು ಮತ್ತು ಆಯಿಷಾ ದಂಪತಿಗಳ ಮಗನಾಗಿ ಪಯೆ ಕಡಪ್ಪುರಂನ ಪುಂಜಾವಿ ಎಂಬಲ್ಲಿ ಜನಿಸಿದ ಉಸ್ತಾದರು, ಪುಂಜಾವಿ, ಮಂಜೇಶ್ವರ, ನೀಲೇಶ್ವರಂ, ತುರುತ್ತಿ, ಮಾಟ್ಟೂಲ್, ಪರಪ್ಪನಂಙಾಡಿ, ಮುಂತಾದ ಸ್ಥಳಗಳಲ್ಲಿ ದರ್ಸ್ ವಿದ್ಯಾರ್ಜನೆ ಮಾಡಿದ ನಂತರ, ಪಯೇ ಕಡಪ್ಪುರಂ, ಆರಂಙಾಡಿ, ಮಂಜನಾಡಿಯ ಜಮಾಅತ್ ಮಸೀದಿ, ಮತ್ತು ಅಲ್ ಮದೀನಾ ಮುಂತಾದೆಡೆ ಸೇವೆಯಲ್ಲಿ ನಿರತರಾಗಿದ್ದ ಮಹಾನರಿಗೆ, ಮರ್ಹೂಂ ಯೂಸುಫ್ ಹಾಜಿ ಉಸ್ತಾದ್ (ನ:ಮ), ಆಲಂಬಾಡಿ ಉಸ್ತಾದ್ (ನ:ಮ), ಕಾಸರಗೋಡು ಖಾಝಿ ಟಿ. ಕೆ. ಎಂ. ಬಾವ ಮುಸ್ಲಿಯಾರ್, ಮಚ್ಚಂಬಾಡಿ ಅಬ್ದುಲ್ ಹಮೀದ್ ಮುಸ್ಲಿಯಾರ್ (ಝೈನುಲ್ ಉಲಮಾ ) ಮರ್ಹೂಂ ಸುರಿಬೈಲ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ (ನ:ಮ), ಸಿ. ಪಿ. ಕುಂಙಬ್ದುಲ್ಲ ಮುಸ್ಲಿಯಾರ್'ರಂತಹ ವಿಧ್ವಾಂಸರು ಶಿಷ್ಯರಾಗಿದ್ದಾರೆ.*
ತಾಜುಲ್ ಉಲಮಾ ಉಳ್ಳಾಲ ತಂಗಳ್ (ಖ:ಸಿ) ಮತ್ತು ಶಂಸುಲ್ ಉಲಮಾ ಈ. ಕೆ. ಉಸ್ತಾದ್ (ಖ:ಸಿ) ರಂತಹ ಮಹಾನರೊಂದಿಗೆ ಬಹು ಹತ್ತಿರದ ಆಧ್ಯಾತ್ಮಿಕ ಬಾಂಧವ್ಯ ಹೊಂದಿದ್ದ ಮಹಾನುಭಾವರ ಮಕ್ಕಳು ಮತ್ತು ಅಳಿಯಂದಿರೆಲ್ಲರೂ ಪದವಿ ಗಳಿಸಿದ ವಿಧ್ವಾಂಸರಾಗಿದ್ದಾರೆ.
ಪ್ರತಿ ರಬೀವುಲ್ ಆಖಿರ್'ನಲ್ಲಿ ಉಸ್ತಾದರ ಮನೆಯಲ್ಲಿ ನಡೆಯುವ ರಾತೀಬ್ ನೇರ್ಚೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನ ಭಾಗವಹಿಸುತ್ತಾರೆ. ಇದು ನಿರಂತರವಾಗಿ ನಲವತ್ತೈದು ವರ್ಷಗಳಿಂದ ನಡೆಯುತ್ತಿದೆ.
ತಮ್ಮ ವಿಶ್ರಮ ಕಾಲದಲ್ಲೂ ಸಹ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್'ನಲ್ಲಿ ಎಲ್ಲಾ ಬುಧವಾರ ತಸವ್ವುಫ್ ಗ್ರಂಥವಾದ ಇಹ್ಯಾಉಲೂಮುದ್ದೀನ್ ತರಗತಿ ನಡೆಸುತ್ತಿದ್ದರು.
ಕರ್ನಾಟಕದಲ್ಲಿ ಮದ್ರಸಗಳನ್ನು ಸ್ಥಾಪಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಮಹಾನರು ಕಾಸರಗೇೂಡಿನ ಜಾಮಿಅ ಸಅದಿಯ್ಯ ಅರಬಿಯ್ಯ, ಪುತ್ತಿಗೆ ಮುಹಿಮ್ಮಾತ್ತ್ ಮೊದಲಾದ ಸಂಸ್ಥೆಗಳ ಮಾರ್ಗದರ್ಶಕರೂ, ನಿರ್ದೇಶಕರೂ ಆಗಿದ್ದರು.
ಆಶಿಕುರ್ರಸೂಲ್ ಎಂದು ಖ್ಯಾತರಾಗಿದ್ದ ಮದೀನದ ಶೈಖ್ ಮುಹಮ್ಮದ್ ಶದ್ದಾದ್ ತಂಙಳರ (ರ) ಆಧ್ಯಾತ್ಮಿಕ ಮಿತ್ರರಾಗಿದ್ದರು.
ಞಾನಂಡಾಡಿ ಶೈಖ್ (ಖ:ಸಿ)ರಿಂದ ಪ್ರಥಮವಾಗಿ ಖಾದಿರಿಯ್ಯ ತ್ವರೀಖತ್ತ್ ಸ್ವೀಕರಿಸಿದ್ದ ಮರ್ಹೂಂ ಮಂಜನಾಡಿ ಉಸ್ತಾದ್ (ಖ:ಸಿ) ರವರು ಉತ್ತಮ ಭಾಷಣಕಾರರೂ ಆಗಿದ್ದು , ಅಸಂಖ್ಯ ವೇದಿಕೆಗಳಿಗೆ ನೇತೃತ್ವ ನೀಡುತ್ತಾ ವಿವಿಧ ಆಧ್ಯಾತ್ಮಿಕ ಗುರುಗಳಿಂದ ತ್ವರೀಖತ್ತ್ ಸ್ವೀಕರಿಸಿದ್ದರು.
ಅಂತೆಯೇ ದಲಾಇಲುಲ್ ಖೈರಾತ್ತ್'ನ ಇಜಾಸತ್ತ್ ನೀಡುತ್ತಿದ್ದರು.
ಶೈಖ್ ಮುಹಮ್ಮದ್ ಅಲ್ ಫಾತಿಹ್ ಖರೀಬುಲ್ಲಾಹಿ (ರ) ಎಂಬ ಮಹಾನರೊಬ್ಬರು ಮದೀನಾದಲ್ಲಿ ವಾಸಿಸುತ್ತಿದ್ದರು. ಸದಾ ತಲೆ ತಗ್ಗಿಸಿರುತ್ತಿದ್ದ ಆ ಮಹಾನರ ವಿಶೇಷತೆಯೆಂದರೆ ಜೀವನದಲ್ಲೊಮ್ಮೆಯೂ ಅವರು ತಲೆ ಎತ್ತಿ ಮೇಲೆ ನೇೂಡಿದವರಲ್ಲ. ಕಾರಣ ಅಷ್ಟರ ಮಟ್ಟಿಗೆ ಅಲ್ಲಾಹನನ್ನು ಭಯಪಟ್ಟು ಬದುಕುತ್ತಿದ್ದ ಶೈಖ್ ಮುಹಮ್ಮದ್ ಅಲ್ ಫಾತಿಹ್ ಖರೀಬುಲ್ಲಾಹಿ (ರ)ರನ್ನು ಭೇಟಿಯಾದ ಮಂಜನಾಡಿ ಉಸ್ತಾದರು (ನ:ಮ) *ಸಮ್ಮಾನಿಯ್ಯ* ಎಂಬ ತ್ವರೀಕತ್ತನ್ನು ಅವರಿಂದ ಸ್ವೀಕರಿಸಿದ್ದರು.
*ಅಲ್ ಖುತುಬ್ ಮುಹಮ್ಮದ್ ಬಿನ್ ಅಬ್ದುಲ್ ಕರೀಂ ಸಮ್ಮಾನಿ (ರ) ರವರ ಹೆಸರನ್ನೊಳಗೊಂಡು ಐದು ಪ್ರಮುಖ ತ್ವರೀಕತ್'ಗಳು ಒಂದೆಡೆ ಜೇೂಡಿಸಲ್ಪಟ್ಟಿರುವುದು ಈ ಸಮ್ಮಾನಿಯ್ಯ ತ್ವರೀಕತ್ತಿನ ವಿಶೇಷತೆ.*
ಹೀಗೆ ಎಲೆಮರೆಯ ಕಾಯಿಯಂತೆ ದೀನೀ ಸೇವೆಗಾಗಿ ಬದುಕನ್ನೇ ಮುಡಿಪಾಗಿರಿಸಿದ್ದ ಶೈಖುನಾ ಮಂಜನಾಡಿ ಉಸ್ತಾದರ (ಖ:ಸಿ) ಜೀವಿತ ಕಾಲದಲ್ಲಿ ಹಲವಾರು ಕರಾಮತ್'ಗಳು ನಡೆದಿರುವ ಬಗ್ಗೆ ಉಸ್ತಾದರ ಶಿಷ್ಯರು ಮತ್ತು ಉಸ್ತಾದರನ್ನು ಹತ್ತಿರದಿಂದ ಬಲ್ಲವರು ವಿವರಿಸುತ್ತಾರೆ.
ಇರಾಖ್, ಯು.ಎ.ಈ, ಸೌದಿ ಅರೇಬಿಯಾ ಮುಂತಾದ ವಿದೇಶ ರಾಷ್ಟ್ರಗಳನ್ನು ಸಂದರ್ಶಿಸಿರುವ ಮಹಾನರು ಅಜ್ಮೀರ್ ಶರೀಫ್'ನ ನಿತ್ಯ ಸಂದರ್ಶಕರಾಗಿದ್ದರು.
2012ರ ಜನವರಿ ಏಳರಂದು ತಮ್ಮ ಶಿಷ್ಯರೊಡನೆ "ಕಡಲಿನಿಂದ ಸ್ವಲ್ಪ ನೀರು ತನ್ನಿ ನನಗದರ ಅವಶ್ಯಕತೆಯಿದೆ" ಎಂದಾಗ, ಉಸ್ತಾದರ ಕೇೂರಿಕೆಯಂತೆ ಶಿಷ್ಯರು ಕಡಲ ತೀರಕ್ಕೆ ತೆರಳಿ ನೀರು ತರುವಷ್ಟರಲ್ಲಿ ಉಸ್ತಾದರು ವಫಾತಾಗಿದ್ದರು. (ಕಡಲಿನ ನೀರು ಜನಾಝ ಸ್ನಾನಕ್ಕೆ ಉತ್ತಮ.)
ಹಾಗೆ ತಮ್ಮ ತೊಂಬತ್ತೊಂಬತ್ತನೇ ವಯಸ್ಸಿನಲ್ಲಿ ಕಾಸರಗೊಡು ಜಿಲ್ಲೆಯ ಕಾಞಂಗಾಡ್ ಸಮೀಪದ ಪಯೇ ಕಡಪುರಂನಲ್ಲಿರುವ ತಮ್ಮ ಸ್ವಗೃಹದಲ್ಲಿ ಇಹಲೇೂಕಕ್ಕೆ ವಿದಾಯ ಹೇಳಿದರು. ಕಾಞಂಗಾಡ್ Old Beach ಜುಮಾ ಮಸೀದಿಯ ಸಮೀಪದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಾರೆ.
*ಅಲ್ಲಾಹನ ದೀನಿನ ಸೇವೆಗಾಗಿ ಬದುಕನ್ನೇ ಮುಡಿಪಾಗಿರಿಸಿದ್ದ ಶೈಖುನಾ ಮಂಜನಾಡಿ ಉಸ್ತಾದ್ (ನ.ಮ)ರ ಹಕ್ಕ್'ಜಾಹ್ ಬರ್ಕತ್'ನಿಂದ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರನ್ನೂ ಎಲ್ಲಾ ತರದ ಆಪತ್ತು ಮತ್ತು ಮುಸೀಬತ್ತುಗಳಿಂದಲೂ ಸಂಪೂರ್ಣ ಸಂರಕ್ಷಣೆ ನೀಡುವುದರೊಂದಿಗೆ ನಮ್ಮೆಲ್ಲರನ್ನೂ ಇಹಪರ ವಿಜಯಿಗಳನ್ನಾಗಿಸಲಿ ಆಮೀನ್.*
ದಾರಿ: Old Beach ಜುಮಾ ಮಸೀದಿ ಕಾಞಂಗಾಡ್ ಕಾಸರಗೋಡು.
💎💎💎💎💎💎💎💎
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment